ವಾಟ್ಸಪ್ (Whats app) ಇರುವುದು ಒಳ್ಳೆ ಕೆಲಸಕ್ಕೆ. ಕಮ್ಯುನಿಕೇಷನ್ನಿಗೆ. ಆದರೆ, ಈ ವಾಟ್ಸಪ್ ಈಗ ಸುಳ್ಳು ಸುದ್ದಿ ಹರಡುವುದಕ್ಕೆ ವ್ಯಾಪಕವಾಗಿ ಬಳಕೆಯಾಗ್ತಿದೆ. ಇತ್ತೀಚೆಗೆ (Whats app) ವಾಟ್ಸಪ್ಪಿನಲ್ಲಿ ಒಂದು ಮೆಸೇಜ್ ಹರಿದಾಡುತ್ತಿದೆ. ನೀವು ಕಳುಹಿಸುವ ಪ್ರತಿಯೊಂದು ವ್ಯಾಟ್ಸ್ಆ್ಯಪ್ ಸಂದೇಶವನ್ನು ಕೇಂದ್ರ ಸರ್ಕಾರ ಮಾನಿಟರ್ ಮಾಡುತ್ತದೆ. ಆಡಿಯೋ-ವಿಡಿಯೋ ಕಾಲ್ ರೆಕಾರ್ಡ್ ಮಾಡಲಾಗುತ್ತಿದೆ. ಒಂದು ಟಿಕ್ ಇದ್ದರೆ ಮಸೇಜ್ ಸೆಂಡ್ ಆಗಿದೆ ಎಂದು ಆರ್ಥ. ಅದೇ 3 ರೆಡ್ ಟಿಕ್ ಇದ್ದರೆ ನಿಮ್ಮ ವಿರುದ್ದ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದರ್ಥ ಎಂಬ ಸಂದೇಶ ಹರಿದಾಡುತ್ತಿದೆ. ಇಂತಹ (Fake News) ಸುಳ್ ಸುದ್ದಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರವನ್ನ, ಮೋದಿಯನ್ನು ಬೈಯ್ಯುವ ಟೀಕಿಸುವ ಜನ್ಮ ಜಾಲಾಡುವ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಈ ಸುದ್ದಿ ಸುಳ್ಳು. (Fact Check) ಈ ರೀತಿಯ ಯಾವುದೇ ನಿಯವನ್ನು ಸರ್ಕಾರವಾಗಲಿ, ವ್ಯಾಟ್ಸ್ ಆ್ಯಪ್ ಆಗಲಿ ಜಾರಿ ಮಾಡಿಲ್ಲ. ಯಾವುದೇ ನಿಯಮಗಳು ಜಾರಿಯಾಗಿಲ್ಲ. ಸರ್ಕಾರ ಯಾವುದೇ ಮಾಹಿತಿಗಳನ್ನು ಸಂದೇಶಗಳನ್ನು ಮಾನಿಟರ್ ಮಾಡುತ್ತಿಲ್ಲ. ಜೊತೆಗೆ ಆಡಿಯೋ, ವಿಡಿಯೋ ಕಾಲ್ ರೆಕಾರ್ಡ್ ಮಾಡುತ್ತಿಲ್ಲ. ಈ ರೀತಿಯ ಯಾವುದೇ ನೀತಿಗಳು ಭಾರತದಲ್ಲಿ ಜಾರಿಯಾಗಿಲ್ಲ.
ಇಷ್ಟಕ್ಕೂ ಹರಿದಾಡುತ್ತಿರುವ ನಕಲಿ ವಾಟ್ಸಪ್ ಮೆಸೇಜಿನಲ್ಲೇನಿದೆ..?
ನೂತನ ಸಂವಹನ ನೀತಿ ವ್ಯಾಟ್ಸ್ಆ್ಯಪ್ ಹಾಗೂ ವ್ಯಾಟ್ಸ್ಆ್ಯಪ್ ಕಾಲ್(ಆಡಿಯೋ, ವಿಡಿಯೋ)ನಾಳೆಯಿಂದ ಜಾರಿಯಾಗಲಿದೆ. (ಈ ಮೇಸೇಜ್‍ನ್ನು ಯಾವಾಗ ನೋಡಿದರೂ, ಯಾವತ್ತು ನಾಳೆಯಿಂದಲೇ ಜಾರಿಯಾಗುತ್ತೆ ಅನ್ನೋದು ಕಾಮಿಡಿ) ಇದರ ಪ್ರಕಾರ..
- ಎಲ್ಲಾ ಕರೆಗಳು ರೆಕಾರ್ಡ್ ಆಗಲಿದೆ
- ರೆಕಾರ್ಡ್ ಆಗಿರುವ ಎಲ್ಲಾ ಕರೆಗಳು ಸೇವ್ ಆಗಲಿದೆ
- ವ್ಯಾಟ್ಸ್ ಆ್ಯಪ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಸರ್ಕಾರ ಮೇಲ್ವಿಚಾರಣೆ ಮಾಡಲಿದೆ
- ನಿಮ್ಮ ಡಿವೈಸನ್ನು ಸಚಿವರ ಸಿಸ್ಟಮ್ ಜೊತೆ ಕನೆಕ್ಟ್ ಮಾಡಲಾಗುತ್ತದೆ
5 ಯಾರಿಗಾದರೂ ಸಂದೇಶ ಕಳಹಿಸುವ ಮುನ್ನ ಎಚ್ಚರಿಕೆಯಿಂದ ಇರಿ
6 ಮಕ್ಕಳು, ಸಹೋದರರು, ಗೆಳಯರು, ಆಪ್ತರು, ಸಂಬಂಧಿಕರು ಸೇರಿದಂತೆ ಆಪ್ತರ ಕುರಿತು ಎಚ್ಚರಿಕೆ ವಹಿಸಿ
7 ಸರ್ಕಾರದ ವಿರುದ್ಧ, ಪ್ರಧಾನಿ ವಿರುದ್ಧ, ಸದ್ಯದ ರಾಜಕೀಯ ಸ್ಥಿತಿಗತಿ, ಸದ್ಯದ ಪರಿಸ್ಥಿತಿ ಕುರಿತು ಯಾವುದೇ ಸಂದೇಶ ಕಳುಹಿಸಬೇಡಿ
8 ರಾಜಕೀಯ ವಿರುದ್ಧ, ಧಾರ್ಮಿಕತೆ ಕುರಿತು ಕೆಟ್ಟ ಸಂದೇಶ ಕಳುಹಿಸುವುದು ಅಪರಾಧ ಎಂದು ಪರಗಣಿಸಲಾಗುತ್ತದೆ. ಈ ನಡೆಗೆ ವಾರೆಂಟ್ ಇಲ್ಲದೆ ಬಂಧನವಾಗಲಿದೆ.
9 ಪೊಲೀಸರಿಂದ ಒಂದು ನೋಟಿಫಿಕೇಶನ್ ಬರಲಿದೆ. ಬಳಿಕ ಸೈಬರ್ ಕ್ರೈಮ್ ಈ ಪ್ರರಕರಣದ ತನಿಖೆ ನಡೆಸಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
10 ಎಲ್ಲಾ ಗ್ರೂಪ್ ಸದಸ್ಯರು ಸೇರಿದಂತೆ ವ್ಯಾಟ್ಸ್ಆ್ಯಪ್ ಬಳಕೆದಾರರು ಈ ಸಂದೇಶದ ಕುರಿತು ಗಮನವಿಡಿ
11 ಸಂದೇಶ ಕಳುಹಿಸುವಾಗ ಎಚ್ಚರಿಕೆ ವಹಿಸಿ, ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಜಾಗೃತೆಯಾಗಿರಿ
ಅಷ್ಟೇ ಅಲ್ಲ, ವಾಟ್ಸಪ್ ಗ್ರೂಪಿನ ಅಡ್ಮಿನ್ನುಗಳಿಗೂ ಎಚ್ಚರಿಕೆ ಇದೆ. ಜೊತೆಗೆ..
- ಒಂದು ಟಿಕ್( ✓ ) = ಸಂದೇಶ ಸೆಂಡ್ ಮಾಡಲಾಗಿದೆ ಎಂದು ಅರ್ಥ
- ಎರಡು ಟಿಕ್ ( ✓✓ ) = ಕಳುಹಿಸಿದ ಸಂದೇಶ ತಲುಪಿದೆ ಎಂದರ್ಥ
- ಎರಡು ಬ್ಲೂ ಟಿಕ್ ( ✓✓) = ಸಂದೇಶವನ್ನು ಓದಿದ್ದಾರೆ ಎಂದರ್ಥ
4 ಮೂರು ಬ್ಲೂ ಟಿಕ್(✓✓✓ )= ಸರ್ಕಾರ ನಿಮ್ಮ ಸಂದೇಶದ ಕುರಿತು ಗಮನಹರಿಸಿದ ಎಂದರ್ಥ
5 ಎರಡು ಬ್ಲೂಟಿಕ್( ✓✓ ) ಒಂದು ರೆಡ್ ಟಿಕ್(✓) = ಸರ್ಕಾರ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಲಿದೆ ಎಂದರ್ಥ
- ಒಂದು ಬ್ಲೂ ಟಿಕ್ (✓ ) ಎರಡು ರೆಡ್ ಟಿಕ್( ✓✓) = ಸರ್ಕಾರ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎಂದರ್ಥ
7 ಮೂರು ರೆಡ್ ಟಿಕ್( ✓✓✓) = ಸರ್ಕಾರ ನಿಮ್ಮ ವಿರುದ್ದ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸಿದೆ ಎಂದರ್ಥ
ಇಂತಹ ಯಾವುದೇ ಕಾನೂನು ಇಲ್ಲ. ಬಂದಿಲ್ಲ. ಹಾಗಾದರೆ ಯಾರೂ ನಿಮ್ಮ ವಾಟ್ಸಪ್ ನೋಡುವುದಿಲ್ಲ. ಹ್ಯಾಕ್ ಮಾಡುವವರು ನೋಡುತ್ತಾರೆ. ಅವರಿಗೆ ಉಪಯೋಗವಾಗುವುದಕ್ಕೆ. ಇನ್ನು ನೀವು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರೆ ಆಗ ಪೊಲೀಸರು ನಿಗಾ ವಹಿಸುತ್ತಾರೆ. ಆದರೆ, ಅದಕ್ಕೆ ಕೋರ್ಟ್ ಅಪ್ಪಣೆ ಕೊಡಬೇಕು. ಅದು ಅಷ್ಟು ಸುಲಭವಲ್ಲ. ಫ್ಯಾಕ್ಟ್ ಚೆಕ್‍ನಲ್ಲಿ ಗೊತ್ತಾದ ಪ್ರಕಾರ ಈ ಸುದ್ದಿ ಸಂಪೂರ್ಣ ಸುಳ್ಳು.



