ಒಂದು ತಿಂಗಳಿಗೆ ಜಸ್ಟ್ 225 ರೂಪ. ಆ 225 ರೂ.ನಲ್ಲಿ 75 ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್. ಇಂತಾದ್ದೊಂದು ಆಫರ್ ಬಿಟ್ಟಿದೆ BSNL. ವಿಶೇಷ ಏನು ಗೊತ್ತೇ.. ಇಷ್ಟೊಂದು ಕಡಿಮೆ ಬೆಲೆಗೆ (₹225) ದಿನಕ್ಕೆ 2.5 ಜಿಬಿ ಡೇಟಾ ನೀಡುವ ಯಾವುದೇ ಪ್ಲಾನ್ ಜಿಯೋ (Jio) ಅಥವಾ ಏರ್‌ಟೆಲ್ (Airtel) ನಂತಹ ಖಾಸಗಿ ನೆಟ್‌ವರ್ಕ್‌ಗಳಲ್ಲಿ ಲಭ್ಯವಿಲ್ಲ. ಕಂಪ್ಯಾರಿಸನ್ ನೀವೇ ನೋಡಿಕೊಳ್ಳಿ.
ಜಿಯೋ, ಏರ್‌ಟೆಲ್ ಸೇರಿದಂತೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗೆ BSNL ಇದೀಗ ಸ್ಪರ್ಧೆ ನೀಡುತ್ತಿದೆ. ದೇಶದೆಲ್ಲೆಡೆ ಸಂಪರ್ಕ ಕಲ್ಪಿಸುವ ಮೂಲಕ ದೂರಸಂಪರ್ಕದಲ್ಲಿ ಕ್ರಾಂತಿ ಮಾಡಿದೆ. ಪ್ರತಿಸ್ಪರ್ಧಿಗಳಿಗಿಂತ ಅತೀ ಕಡಿಮೆ ಬೆಲೆಯಲ್ಲಿ BSNL ರೀಚಾರ್ಜ್ ಪ್ಲಾನ್ ನೀಡುವ ಮೂಲಕ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇದರಂತೆ 225 ರೂಪಾಯಿಗೆ ಬಿಎಸ್ಎನ್ಎಲ್ ಘೋಷಣೆ ಮಾಡಿದೆ. 30 ದಿನದ ವ್ಯಾಲಿಟಿಡಿಗೆ ಖಾಸಗಿ ಟೆಲಿಕಾಂಗಳಿಗಿಂತ ಅಕೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಪ್ರತಿ ದಿನ 2.5 ಜಿಬಿ ಹೈಸ್ಪೀಡ್ ಡೇಟಾ ಸೌಲಭ್ಯ, ಅನ್‌ಲಿಮಿಟೆಡ್ ಕರೆ ಸೌಲಭ್ಯ, ಜೊತೆಗೆ ಪ್ರತಿ ದಿನ 100 ಉಚಿತ ಎಸ್ಎಂಎಸ್ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳು BSNL ರೀಚಾರ್ಜ್ ಪ್ಲಾನ್ ನೀಡುತ್ತಿದೆ.
ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ರೀಚಾರ್ಜ್ ದರಗಳನ್ನು ಹೆಚ್ಚಿಸಿರುವುದರಿಂದ, ಇದೇ ರೀತಿಯ ಡೇಟಾ ಮತ್ತು ಕರೆಗಳ ಸೌಲಭ್ಯವನ್ನು ಪಡೆಯಲು ನೀವು ಕನಿಷ್ಠ ₹349 ರಿಂದ ₹400 ಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇತರ ಪ್ರಮುಖ ನೆಟ್‌ವರ್ಕ್‌ಗಳಲ್ಲಿ ದಿನಕ್ಕೆ 2 ಜಿಬಿ ಅಥವಾ 2.5 ಜಿಬಿ ಡೇಟಾ ನೀಡುವ ಅತಿ ಹತ್ತಿರದ ಮಾಸಿಕ ಪ್ಲಾನ್‌ಗಳ ವಿವರಗಳು ಹೀಗಿವೆ.
ಜಿಯೋ ಪ್ಲಾನ್ :
ಜಿಯೋದಲ್ಲಿ ₹225 ಕ್ಕೆ ಯಾವುದೇ ಪ್ಲಾನ್ ಇಲ್ಲ. ದಿನಕ್ಕೆ ಹೆಚ್ಚಿನ ಡೇಟಾ ಬೇಕಿದ್ದರೆ ಈ ಕೆಳಗಿನ ಪ್ಲಾನ್‌ಗಳನ್ನು ಆರಿಸಿಕೊಳ್ಳಬಹುದು. ಜಿಯೋದಲ್ಲಿ 349 ರೂ. ಪ್ಲಾನ್ ಇದೆ. ಇದೇ ಅತ್ಯಂತ ಕಡಿಮೆ. ಇದು ಜಿಯೋನ ಅತ್ಯಂತ ಜನಪ್ರಿಯ ಮಾಸಿಕ ಪ್ಲಾನ್ ಆಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2 ಜಿಬಿ (2GB) ಡೇಟಾ, ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ನೀಡುತ್ತದೆ. (ನಿಮ್ಮ ಪ್ರದೇಶದಲ್ಲಿ ಜಿಯೋ 5G ನೆಟ್‌ವರ್ಕ್ ಇದ್ದರೆ ಅನ್‌ಲಿಮಿಟೆಡ್ 5G ಡೇಟಾ ಸಿಗುತ್ತದೆ) ಇನ್ನು ದಿನಕ್ಕೆ 2.5 ಜಿಬಿ ಡೇಟಾ ಬೇಕು ಎಂದರೆ 399 ರೂ. ಪ್ಲಾನ್ ಇದೆ. ಅದೂ ಕೂಡಾ 28 ದಿನದ ಪ್ಲಾನ್.
ಭಾರ್ತಿ ಏರ್ ಟೆಲ್ ಪ್ಲಾನ್ :
ಏರ್‌ಟೆಲ್‌ನಲ್ಲೂ ಸಹ ₹200 ಆಸುಪಾಸಿನಲ್ಲಿ ಕೇವಲ 1 ಜಿಬಿ ಡೇಟಾ ಪ್ಲಾನ್‌ಗಳು ಮಾತ್ರ ಲಭ್ಯವಿವೆ. ₹279 ಪ್ಲಾನ್: ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ 2 ಜಿಬಿ (2GB) ಡೇಟಾ, ಅನ್‌ಲಿಮಿಟೆಡ್ ಕರೆ ಮತ್ತು ಉಚಿತ 5G ಡೇಟಾ ಸಿಗುತ್ತದೆ. 409 ರೂ. ಪ್ಲಾನ್ ತೆಗೆದುಕೊಂಡರೆ ಆಗ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5 ಜಿಬಿ (2.5GB) ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯ ದೊರೆಯುತ್ತದೆ.
ಬಿಎಸ್‌ಎನ್‌ಎಲ್ ₹228 ಕ್ಕೆ 2.5 ಜಿಬಿ ಡೇಟಾ ನೀಡಿದರೆ, ಜಿಯೋ/ಏರ್‌ಟೆಲ್‌ನಲ್ಲಿ ಅದಕ್ಕೆ ಸಮನಾದ ಡೇಟಾ ಪಡೆಯಲು ₹399 ರಿಂದ ₹409 ನೀಡಬೇಕು. ವ್ಯಾಲಿಡಿಟಿಯೂ ಅಷ್ಟೇ, ಬಿಎಸ್‌ಎನ್‌ಎಲ್ ಪೂರ್ತಿ 30 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಆದರೆ ಖಾಸಗಿ ಕಂಪನಿಗಳು ಕೇವಲ 28 ದಿನಗಳ ವ್ಯಾಲಿಡಿಟಿ ನೀಡುತ್ತವೆ.
ಸಮಸ್ಯೆ ಏನು..?
ಬಿಎಸ್‌ಎನ್‌ಎಲ್ ಬೆಲೆಯಲ್ಲಿ ತುಂಬಾ ಅಗ್ಗವಾಗಿದ್ದರೂ, ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ದೇಶಾದ್ಯಂತ ಅತ್ಯುತ್ತಮ 4G ಮತ್ತು 5G ನೆಟ್‌ವರ್ಕ್ ವೇಗವನ್ನು ನೀಡುತ್ತವೆ. ಬಿಎಸ್‌ಎನ್‌ಎಲ್ 4G ಸೇವೆ ಇನ್ನು ಹಲವು ಕಡೆಗಳಲ್ಲಿ ಹಂತ-ಹಂತವಾಗಿ ರೋಲ್-ಔಟ್ ಆಗುತ್ತಿದೆ



