ಬೈಕ್ ಖರೀದಿ ಮಾಡುವವರು ಮೊದಲು ನೋಡುವುದು ಅದರ ಮೈಲೇಜ್. ಹೈ-ಎಂಡ್ ಬೈಕ್ ಖರೀದಿ ಮಾಡುವವರಷ್ಟೇ ಅದರ ಲುಕ್ಕು, ಸಿಸಿ, ಸ್ಪೀಡು, ಪಿಕಪ್, ಸೌಂಡು.. ಎಲ್ಲವನ್ನೂ ನೋಡ್ತಾರೆ. ಇದು ಅಂತಹವರಿಗೆ ಅಲ್ಲ. ಭರ್ಜರಿ ಮೈಲೇಜ್ ಇರುವ ಹಾಗೂ ಝೀರೋ ಮೈಂಟೇನೆನ್ಸ್ ಇರುವ ಬೈಕುಗಳ ವಿಷಯಕ್ಕೆ ಅಲ್ಲಿ ಇವತ್ತಿಗೂ ನಂ.1 ಸ್ಥಾನದಲ್ಲಿರುವುದು ಹೀರೋ. ಹೀರೋ ಮೋಟೋಕಾರ್ಪ್. ಅದರಲ್ಲೂ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹೀರೊ ಸ್ಪ್ಲೆಂಡರ್ ಮತ್ತು ಎಚ್‌ಎಫ್ ಡಿಲಕ್ಸ್ ಬೈಕ್‌ಗಳು ಭರ್ಜರಿ ಮಾರಾಟವಾಗುತ್ತಿವೆ. ಇವುಗಳ ವಿಶೇಷತೆಯೇ ಸ್ಪೆಷಲ್.
ಪ್ರಿಲ್ ತಿಂಗಳ ಮಾರಾಟದ ವರದಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಹೀರೊ ಸ್ಪ್ಲೆಂಡರ್ ನಂ.1. ಹೀರೊದ ಮತ್ತೊಂದು ಬಜೆಟ್ ಬೈಕ್ ಆದ ‘ಎಚ್‌ಎಫ್ ಡಿಲಕ್ಸ್’ ಕೂಡಾ ಪೈಪೋಟಿ ನೀಡುತ್ತಿದೆ.
ಹೀರೊ ಸ್ಪ್ಲೆಂಡರ್‌ನ ಒಟ್ಟು 3,09,131 ಯೂನಿಟ್‌ಗಳು ಮಾರಾಟವಾಗಿದ್ದು, ಇದು ವಾರ್ಷಿಕವಾಗಿ ಶೇಕಡಾ 56.21 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ. ಇದು ಕೇವಲ ಒಂದೇ ತಿಂಗಳಿನ ಲೆಕ್ಕ. ಹೀರೊ ಎಚ್‌ಎಫ್ ಡಿಲಕ್ಸ್ ಬೈಕ್‌ನ ಒಟ್ಟು 91,977 ಯೂನಿಟ್‌ಗಳು ಮಾರಾಟವಾಗಿದ್ದು, ಇದು ಬರೋಬ್ಬರಿ ಶೇಕಡಾ 120.86 ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ.
ಹೀರೊ ಸ್ಪ್ಲೆಂಡರ್ ಪ್ಲಸ್ (Hero Splendor Plus)
ಈ ಬೈಕ್ ಬೆಲೆ 96 ಸಾವಿರದಿಂದ ಶುರುವಾಗುತ್ತದೆ. ಬೇರೆಯ ಬೈಕ್‌ಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿಯೇ ಭಾರತದ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಕಮ್ಯೂಟರ್ ಬೈಕ್ ಆಗಿದೆ. ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ (Low Maintenance) ಮತ್ತು ದೀರ್ಘಕಾಲಿಕ ಬಾಳಿಕೆಗೆ ಹೆಸರುವಾಸಿ ಈ ಬೈಕ್.
ಹೀರೊ ಸ್ಪ್ಲೆಂಡರ್ ಪ್ಲಸ್ ಸ್ಪೆಷಾಲಿಟಿಗಳು (Specifications)
ಎಂಜಿನ್: 97.2 cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯುಯೆಲ್ ಇಂಜೆಕ್ಷನ್ (FI) ಎಂಜಿನ್.
Power: 8.02 PS @ 8000 rpm.
Torque: 8.05 Nm @ 6000 rpm.
ಗೇರ್ ಬಾಕ್ಸ್: 4-ಸ್ಪೀಡ್ ಮ್ಯಾನುಯಲ್.
ಮೈಲೇಜ್: ಕಂಪನಿ ಹೇಳಿಕೆಯ ಪ್ರಕಾರ 70 ರಿಂದ 80 kmpl (ಬಳಕೆದಾರರ ಅನುಭವದ ಪ್ರಕಾರ 60-65 kmpl ಮೈಲೇಜ್). ಸಿಗುತ್ತದೆ. ಇದು ಕಡಿಮೆ ಏನಲ್ಲ.
ಇಂಧನ ಟ್ಯಾಂಕ್ ಸಾಮರ್ಥ್ಯ: 9.8 ಲೀಟರ್.
ಬ್ರೇಕ್‌ಗಳು: ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳು (ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ – IBS ನೊಂದಿಗೆ).
ಟೈರ್‌ಗಳು: 18-ಇಂಚಿನ ಅಲಾಯ್ ವೀಲ್ಸ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳು. ಅಲ್ಲದೆ ಈ ಟ್ರಾಫಿಕ್‌ನಲ್ಲಿ ಬೈಕ್ ನಿಂತಾಗ ಪೆಟ್ರೋಲ್ ಉಳಿಸಲು ಎಂಜಿನ್ ಅನ್ನು ಸ್ವಯಂಚಾಲಿತವಾಗಿ ಆಫ್ ಮಾಡುವ ‘i3S ತಂತ್ರಜ್ಞಾನ’ ಹೊಂದಿದೆ. ಕೇವಲ 112 ಕೆಜಿ ತೂಕವಿದೆ. ಹೀಗಾಗಿಯೇ ಈ ಬೈಕ್ ಇವತ್ತಿಗೂ ಹಾರ್ಟ್ ಫೇವರಿಟ್.
ಹೀರೊ ಎಚ್‌ಎಫ್ ಡಿಲಕ್ಸ್
ಬೆಂಗಳೂರಿನಲ್ಲಿ ಇದರ ಆರಂಭಿಕ ಆನ್-ರೋಡ್ ಬೆಲೆ ಸುಮಾರು ₹ 73,745 ರಿಂದ ಪ್ರಾರಂಭವಾಗಿ, ಟಾಪ್ ಮಾಡೆಲ್‌ಗೆ ₹ 83,840 ವರೆಗೆ ಇರುತ್ತದೆ
ಎಂಜಿನ್: 97.2 cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯುಯೆಲ್ ಇಂಜೆಕ್ಷನ್ (FI) ಎಂಜಿನ್ (ಇದು ಸ್ಪ್ಲೆಂಡರ್ ಪ್ಲಸ್ ಎಂಜಿನ್ ತಂತ್ರಜ್ಞಾನವನ್ನೇ ಹೊಂದಿದೆ).
Power : 8.02 PS @ 8000 rpm.
Torque: 8.05 Nm @ 6000 rpm.
ಮೈಲೇಜ್: ಕಂಪನಿ ಹೇಳಿಕೆಯ ಪ್ರಕಾರ 70 kmpl ವರೆಗೆ ಮೈಲೇಜ್ ನೀಡುತ್ತದೆ. ನೈಜ ರಸ್ತೆ ಪರಿಸ್ಥಿತಿಯಲ್ಲಿ ಇದು ಸುಮಾರು 60-65 kmpl ಮೈಲೇಜ್ ನೀಡುತ್ತದೆ.
ಇಂಧನ ಟ್ಯಾಂಕ್: 9.6 ಲೀಟರ್ ಸಾಮರ್ಥ್ಯದ ಮೆಟಲ್ ಟ್ಯಾಂಕ್.
ತೂಕ ಮತ್ತು ಎತ್ತರ: ಇದರ ತೂಕ ಕೇವಲ 112 ಕೆಜಿ ಮತ್ತು ಸೀಟಿನ ಎತ್ತರ 805 ಎಂಎಂ ಇರುವುದರಿಂದ ಸರಾಸರಿ ಎತ್ತರವಿರುವವರಿಗೂ ಸುಲಭವಾಗಿ ಹ್ಯಾಂಡಲ್ ಮಾಡಬಹುದು.
ಬ್ರೇಕಿಂಗ್ ಸಿಸ್ಟಮ್: ಮುಂಭಾಗ ಮತ್ತು ಹಿಂಭಾಗದಲ್ಲಿ 130mm ಡ್ರಮ್ ಬ್ರೇಕ್‌ಗಳಿದ್ದು, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (IBS) ಸುರಕ್ಷತೆಯನ್ನು ಒದಗಿಸುತ್ತದೆ
ಎರಡೂ ಬೈಕುಗಳಲ್ಲಿ ಒಂದೇ ರೀತಿಯ 97.2cc ಎಂಜಿನ್ ಬಳಸಿರುವುದರಿಂದ ಪರ್ಫಾರ್ಮೆನ್ಸ್ ಮತ್ತು ಮೈಲೇಜ್‌ನಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ.



