ಗಾಢ ನಿದ್ರೆಯಲ್ಲಿರುತ್ತೀರಿ. ದೆವ್ವವೊಂದು ಬೆನ್ನು ಹತ್ತಿ ಬರುತ್ತದೆ. ಅಟ್ಟಿಸಿಕೊಂಡು ಬರುತ್ತದೆ. ಸತ್ತ ಹಿರಿಯರು ದೆವ್ವವಾಗಿ ಕಾಣಿಸಿಕೊಳ್ತಿರ್ತಾರೆ. ನಿಮ್ಮ ದೇಹಕ್ಕೆ ದೆವ್ವ ಹಿಡಿದಂತೆ ಫೀಲ್ ಆಗುತ್ತದೆ. ದೆವ್ವದ ಜೊತೆ ಮಾತನಾಡುವ ಕನಸು ಬೀಳುತ್ತದೆ. ದೆವ್ವ ನಿಮ್ಮ ಮೇಲೆ ದಾಳಿ ಮಾಡುವಂತೆ ಕನಸು, ದೆವ್ವ ಬಿಳಿ ಬಟ್ಟೆ ಧರಿಸಿರುವಂತೆ ಕನಸು ಬೀಳುತ್ತದೆ. ದೆವ್ವವನ್ನು ನೋಡಿ ನೀವು ನಗುವುದು ಅಥವಾ ಹೆದರದೆ ಇರುವ ಕನಸೂ ಬೀಳುತ್ತದೆ. ಆದರೆ.. ಈ ದೆವ್ವದ ಕನಸುಗಳ ಹಿಂದೆ ಒಂದು ಸಂದೇಶವೂ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ನಿಮಗೆ ದೆವ್ವದ ಭಯ ಇರುವುದಿಲ್ಲ.
ದೆವ್ವ ಬೆನ್ನಟ್ಟುವಂತೆ ಕನಸು ಬೀಳುತ್ತಿದ್ದರೆ..
ನಿಮ್ಮ ನಿಜ ಜೀವನದ ಜವಾಬ್ದಾರಿಗಳು, ಸಮಸ್ಯೆಗಳು ಅಥವಾ ಕಠಿಣ ಪರಿಸ್ಥಿತಿಗಳಿಂದ ನೀವು ಓಡಿಹೋಗಲು ಪ್ರಯತ್ನಿಸುತ್ತಿದ್ದೀರಿ ಎಂದು ಅರ್ಥ. ಸಮಸ್ಯೆಗಳನ್ನು ಎದುರಿಸಲು ಧೈರ್ಯ ಮಾಡಿ ಎಂದು ನಿಮ್ಮ ಸುಪ್ತ ಮನಸ್ಸು ಸಂದೇಶ ನೀಡುತ್ತಿದೆ.
ಸತ್ತ ಹಿರಿಯರು ದೆವ್ವವಾಗಿ ಬರುತ್ತಿದ್ದರೆ..
ಅವರ ಮೇಲಿನ ಅತಿಯಾದ ಪ್ರೀತಿ ಅಥವಾ ಅವರ ಅಗಲಿಕೆಯ ದುಃಖ ಇನ್ನು ನಿಮ್ಮ ಮನಸ್ಸಿನಿಂದ ಹೋಗಿಲ್ಲ ಎಂದರ್ಥ. ಕೆಲವೊಮ್ಮೆ ಅವರು ನಿಮಗೆ ಬರಲಿರುವ ಕಷ್ಟಗಳ ಬಗ್ಗೆ ಎಚ್ಚರಿಕೆ ನೀಡಲು ಅಥವಾ ಆಶೀರ್ವದಿಸಲು ಬರುತ್ತಾರೆ ಎಂದು ನಂಬಲಾಗುತ್ತದೆ.
ನಿಮ್ಮ ದೇಹಕ್ಕೆ ದೆವ್ವ ಹಿಡಿದ ಅನುಭವವಾದರೆ..
ಜೀವನದ ನಿಯಂತ್ರಣ ನಿಮ್ಮ ಕೈ ತಪ್ಪುತ್ತಿದೆ ಅಥವಾ ಬೇರೆಯವರು ನಿಮ್ಮನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ ಎಂಬ ಸಂದೇಶ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳೋದಕ್ಕೆ ಇದು ಒಳ್ಳೆಯ ಸಮಯ.
ದೆವ್ವದೊಂದಿಗೆ ಮಾತನಾಡುತ್ತಿದ್ದರೆ..
ಯಾರೋ ನಿಮ್ಮನ್ನು ವಂಚಿಸಲು ಅಥವಾ ನಿಮ್ಮ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಅರಿವು ನಿಮ್ಮ ಸುಪ್ತ ಮನಸ್ಸಿಗೆ ಆಗಿದೆ. ಹೊಸ ಸ್ನೇಹಿತರು ಅಥವಾ ಅಪರಿಚಿತರನ್ನು ನಂಬುವಾಗ ಮತ್ತು ರಹಸ್ಯಗಳನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ.
ದೆವ್ವ ಅಟ್ಯಾಕ್ ಮಾಡುವ ಅನುಭವವಾದರೆ..
ದೆವ್ವ ನಿಮ್ಮ ಕುತ್ತಿಗೆ ಹಿಸುಕುವುದು ಅಥವಾ ನಿಮ್ಮನ್ನು ಕೊಲ್ಲಲು ಬರುವಂತೆ ಕನಸು ಬಿದ್ದರೆ, ನೀವು ತೀವ್ರವಾದ ಮಾನಸಿಕ ಒತ್ತಡ (Depression/Anxiety) ಎದುರಿಸುತ್ತಿದ್ದೀರಿ ಎಂದರ್ಥ. ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡಿ.
ಬಿಳಿ ಬಟ್ಟೆ ಧರಿಸಿದ ದೆವ್ವ ಅಥವಾ ನೆರಳು ಕಂಡರೆ, ಭವಿಷ್ಯದಲ್ಲಿ ಹಠಾತ್ ಧನ ನಷ್ಟ ಅಥವಾ ಆರೋಗ್ಯ ಕೈಕೊಡುವ ಮುನ್ಸೂಚನೆ.
ದೆವ್ವವನ್ನು ನೋಡಿ ನೀವು ನಗುವುದು ಅಥವಾ ಹೆದರದೆ ಇರುವ ಕನಸು ಬಿದ್ದರೆ, ನೀವು ಶೀಘ್ರದಲ್ಲೇ ನಿಮ್ಮ ಶತ್ರುಗಳ ಮೇಲೆ ಅಥವಾ ನಿಮ್ಮ ಕಷ್ಟಗಳ ಮೇಲೆ ವಿಜಯ ಸಾಧಿಸಲಿದ್ದೀರಿ ಎಂದರ್ಥ. ಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಬರಲಿವೆ ಎಂಬುದರ ಸಕಾರಾತ್ಮಕ ಸಂಕೇತವಿದು.
ದೆವ್ವ ಅಥವಾ ಪ್ರೇತಾತ್ಮಗಳ ಕನಸುಗಳು ಬೀಳುವುದು ನಿಮ್ಮ ಮಾನಸಿಕ ಒತ್ತಡ, ಗುಪ್ತ ಭಯಗಳು ಮತ್ತು ಭವಿಷ್ಯದ ಎಚ್ಚರಿಕೆಗಳನ್ನು ಸೂಚಿಸುತ್ತದೆ. ಸ್ವಪ್ನ ಶಾಸ್ತ್ರ (ಸ್ವಪ್ನ ವಿಜ್ಞಾನ) ಮತ್ತು ಆಧುನಿಕ ಮನಃಶಾಸ್ತ್ರದ ಪ್ರಕಾರ, ಇಂತಹ ಕನಸುಗಳು ನಮಗೆ ಕೆಲವು ಪ್ರಮುಖ ಸಂದೇಶಗಳನ್ನು ನೀಡುತ್ತವೆ. ಮಾನಸಿಕ ಒತ್ತಡ ಮತ್ತು ಅಡಗಿರುವ ಭಯವೇ ಎಲ್ಲದಕ್ಕೂ ಕಾರಣ. ನಿಮ್ಮ ಮನಸ್ಸಿನಲ್ಲಿರುವ ಆತಂಕಗಳು ಮತ್ತು ಕೌಟುಂಬಿಕ ಅಥವಾ ಉದ್ಯೋಗದ ಸಮಸ್ಯೆಗಳನ್ನು ಎದುರಿಸಲಾಗದಿದ್ದಾಗ ಇಂತಹ ಕನಸುಗಳು ಬೀಳುತ್ತವೆ. ಕನಸಿನಲ್ಲಿ ದೆವ್ವದ ಮುಂದೆ ನೀವು ಅಸಹಾಯಕರಾಗಿ ಅಥವಾ ದುರ್ಬಲರಾಗಿ ಕಂಡರೆ, ನಿಮ್ಮ ದೇಹ ಮತ್ತು ಮನಸ್ಸು ತೀವ್ರವಾಗಿ ಬಳಲಿದೆ ಎಂದರ್ಥ. ಇಂತಹ ಕನಸುಗಳು ಪದೇ ಪದೇ ಬೀಳುತ್ತಿದ್ದರೆ, ಮಲಗುವ ಮುನ್ನ ಧ್ಯಾನ ಮಾಡುವುದು, ಸಕಾರಾತ್ಮಕ ಪುಸ್ತಕಗಳನ್ನು ಓದುವುದು ಮತ್ತು ಆಪ್ತರೊಂದಿಗೆ ನಿಮ್ಮ ಮನಸ್ಸಿನ ಆತಂಕಗಳನ್ನು ಹಂಚಿಕೊಳ್ಳುವುದು ಒಳ್ಳೆಯದು



