Monday, July 13, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಆಲ್ಕೋಹಾಲ್‌ ಮಿಶ್ರಿತ ಔಷಧಿಗಳಿಗೆ ಡಾಕ್ಟರ್‌ ಪ್ರಿಸ್ಕಿಪ್ಷನ್‌ ಕಡ್ಡಾಯ : ಯಾವ ಯಾವ ಮೆಡಿಸಿನ್‌ ಗೊತ್ತಾ..?

SpeciallU by SpeciallU
July 13, 2026
in News
Reading Time: 1 min read
0 0
0
ಆಲ್ಕೋಹಾಲ್‌ ಮಿಶ್ರಿತ ಔಷಧಿಗಳಿಗೆ ಡಾಕ್ಟರ್‌ ಪ್ರಿಸ್ಕಿಪ್ಷನ್‌ ಕಡ್ಡಾಯ : ಯಾವ ಯಾವ ಮೆಡಿಸಿನ್‌ ಗೊತ್ತಾ..?

‘ಔಷಧಗಳ ನಿಯಮ 1945’ಕ್ಕೆ ತಿದ್ದುಪಡಿಯಡಿ ಶೇ.12ಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ ಹೊಂದಿರುವ, 30 ಮಿಲಿಗಿಂತ ದೊಡ್ಡದಾದ ದ್ರವರೂಪದ ಔಷಧಗಳ (ಸಿರಪ್, ಟಾನಿಕ್) ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಇವುಗಳನ್ನು ‘ಶೆಡ್ಯೂಲ್ ಎಚ್ 1’ ವರ್ಗಕ್ಕೆ ಸೇರಿಸಲಾಗಿದೆ. ಹಾಗಾಗಿ, ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಇವು ದೊರೆಯುವುದಿಲ್ಲ.ನೇರವಾಗಿ ಮೆಡಿಕಲ್‌ ಸ್ಟೋರ್ಸ್‌ ಮಾಲೀಕರು ಕೊಡುವಂತೆಯೂ ಇಲ್ಲ. ಅಲ್ಲದೆ ಫಾರ್ಮಾಸಿಸ್ಟ್‌ಗಳು ಇವುಗಳ ಮಾರಾಟದ ದಾಖಲೆಯನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ಇಡುವುದು ಕಡ್ಡಾಯವಾಗಿದೆ. ಇದಕ್ಕೆ ಕಾರಣಗಳು ಒಂದು ಕಡೆ. ಇದರ ಪರಿಣಾಮ ಕೇವಲ ಆಲೋಪತಿ ಮೇಲೆ ಅಲ್ಲ, ಆಯುರ್ವೇದಿಕ್‌, ಹೋಮಿಯೋಪತಿ ಔಷಧಿಗಳಿಗೂ ಅನ್ವಯ ಆಗಲಿದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ, ಶೇಕಡಾ 12 ಕ್ಕಿಂತ ಹೆಚ್ಚು ಆಲ್ಕೋಹಾಲ್ ಅಂಶವಿರುವ ದ್ರವ ರೂಪದ ಔಷಧಿಗಳನ್ನು (30 ಮಿಲಿಗಿಂತ ಹೆಚ್ಚಿನ ಬಾಟಲಿಗಳು) ಕೊಳ್ಳಲು ಈಗ ವೈದ್ಯರ ಕಡ್ಡಾಯ ಪ್ರಿಸ್ಕ್ರಿಪ್ಷನ್ (Schedule H1 ನಿಯಮ) ಕಡ್ಡಾಯ.

ಇದರ ಪ್ರಕಾರ ನೋಡುತ್ತಾ ಹೋದರೆ..
ಆಯುರ್ವೇದ ಔಷಧಿಗಳು (ಆಸವ ಮತ್ತು ಅರಿಷ್ಟ)
ಆಯುರ್ವೇದದಲ್ಲಿ ನೈಸರ್ಗಿಕ ಹುದುಗುವಿಕೆ (Fermentation) ಪ್ರಕ್ರಿಯೆಯ ಮೂಲಕ ಆಲ್ಕೋಹಾಲ್ ತಾನಾಗಿಯೇ ಉತ್ಪತ್ತಿಯಾಗುತ್ತದೆ (Self-generated alcohol). ಇವುಗಳಲ್ಲಿ ಸಾಮಾನ್ಯವಾಗಿ ಶೇಕಡಾ 5 ರಿಂದ 12 ರಷ್ಟು ಆಲ್ಕೋಹಾಲ್ ಇರುತ್ತದೆ.
ದಶಮೂಲಾರಿಷ್ಟ (Dashamoolarishta): ಪ್ರಸವದ ನಂತರ ಮಹಿಳೆಯರ ಆರೋಗ್ಯ ಸುಧಾರಣೆಗೆ, ದೈಹಿಕ ದೌರ್ಬಲ್ಯ ನಿವಾರಣೆಗೆ ಮತ್ತು ಆಯಾಸ ಕಡಿಮೆ ಮಾಡಲು ನೀಡಲಾಗುತ್ತದೆ.
ಅಶೋಕಾರಿಷ್ಟ (Ashokarishta): ಮಹಿಳೆಯರ ಮುಟ್ಟಿನ ಸಮಸ್ಯೆಗಳು, ಅತಿಯಾದ ರಕ್ತಸ್ರಾವ ಮತ್ತು ಗರ್ಭಾಶಯದ ಆರೋಗ್ಯಕ್ಕೆ ಬಳಸಲಾಗುತ್ತದೆ.
ಅಶ್ವಗಂಧಾರಿಷ್ಟ (Ashwagandharishta): ಮಾನಸಿಕ ಒತ್ತಡ, ಆತಂಕ (Anxiety), ನರಗಳ ದೌರ್ಬಲ್ಯ ಮತ್ತು ನಿದ್ರಾಹೀನತೆಗೆ ರಾಮಬಾಣ
ಕುಮಾರ್‍ಯಾಸವ (Kumaryasava): ಅಲೋವೆರಾ ಆಧಾರಿತ ಔಷಧಿಯಾಗಿದ್ದು, ಲಿವರ್ ಸಮಸ್ಯೆಗಳು, ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ರಕ್ತಹೀನತೆ (Anemia) ನಿವಾರಣೆಗೆ ಕೊಡಲಾಗುತ್ತದೆ.
ಖದಿರಾರಿಷ್ಟ (Khadirarishta): ದೀರ್ಘಕಾಲದ ಚರ್ಮದ ಕಾಯಿಲೆಗಳು (Skin allergies, ಸೋರಿಯಾಸಿಸ್) ಮತ್ತು ರಕ್ತದ ಶುದ್ಧೀಕರಣಕ್ಕೆ ನೀಡಲಾಗುತ್ತದೆ

Related posts

ದೆವ್ವದ ಕನಸುಗಳು ಕೊಡುವ ಸಂದೇಶ ಏನು..?

ಕರಾವಳಿ ಕಾಂಟ್ರವರ್ಸಿ :  ಪ್ರಜ್ವಲ್‌ ದೇವರಾಜ್‌ ಪರ ಬಂದ ಸ್ಟಾರ್ಸ್‌. ನಿರ್ಮಾಪಕರು ಒಂಟಿನಾ..?

ಹೋಮಿಯೋಪತಿ ಔಷಧಿಗಳು (ಮದರ್ ಟಿಂಕ್ಚರ್)
ಹೋಮಿಯೋಪತಿಯಲ್ಲಿ ಗಿಡಮೂಲಿಕೆಗಳ ರಸವನ್ನು ಆಲ್ಕೋಹಾಲ್ ಜೊತೆಗೆ ಬೆರೆಸಿ ‘ಮದರ್ ಟಿಂಕ್ಚರ್’ (Mother Tincture) ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಆಲ್ಕೋಹಾಲ್ ಪ್ರಮಾಣ ಶೇಕಡಾ 40 ರಿಂದ 70 ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಇರಬಹುದು.
ಅಜಾಡಿರಕ್ತಾ ಇಂಡಿಕಾ (Azadirachta Indica – ಬೇವು): ಚರ್ಮದ ಸೋಂಕುಗಳು, ಮೊಡವೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು.
ಬರ್ಬೆರಿಸ್ ಅಕ್ವಿಫೋಲಿಯಮ್ (Berberis Aquifolium): ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಚರ್ಮದ ಕಾಂತಿ ಹೆಚ್ಚಿಸಲು.
ಕ್ರಟೇಗಸ್ (Crataegus): ಹೃದಯದ ಆರೋಗ್ಯ ಸುಧಾರಿಸಲು ಮತ್ತು ರಕ್ತದೊತ್ತಡವನ್ನು (Blood Pressure) ನಿಯಂತ್ರಣದಲ್ಲಿಡಲು.
ಆರ್ನಿಕಾ ಮದರ್ ಟಿಂಕ್ಚರ್ (Arnica MT): ಪೆಟ್ಟು ಬಿದ್ದಾಗ ಆಗುವ ನೋವು, ಬಾವು ಮತ್ತು ಕೂದಲು ಉದುರುವಿಕೆ ತಡೆಯಲು ಹೊರಗಿನಿಂದ ಹಚ್ಚಲು ಹಾಗೂ ಕುಡಿಯಲು ಬಳಸುತ್ತಾರೆ.

ಅಲೋಪತಿ (ಇಂಗ್ಲಿಷ್) ಔಷಧಿಗಳು
ಕೆಲವು ಕೆಮ್ಮಿನ ಸಿರಪ್‌ಗಳು (Cough Syrups) ಮತ್ತು ದ್ರವ ರೂಪದ ಟಾನಿಕ್‌ಗಳಲ್ಲಿ ಆಲ್ಕೋಹಾಲ್ ಅನ್ನು ರಾಸಾಯನಿಕಗಳನ್ನು ಕರಗಿಸಲು ಬಳಸಲಾಗುತ್ತದೆ.

ಕೆಮ್ಮು ಮತ್ತು ನೆಗಡಿಯ ಸಿರಪ್‌ಗಳು: ಹಳೆಯ ಕಾಲದ ಕೆಲವು ಕಫ ನಿವಾರಕ ಸಿರಪ್‌ಗಳಲ್ಲಿ ಉದಾಹರಣೆಗೆ ಕೊಡಿನ್ ಅಥವಾ ಆಂಟಿಹಿಸ್ಟಮೈನ್ ಹೊಂದಿರುವ ಸಿರಪ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಇರುತ್ತಿತ್ತು. ಇವು ತೀವ್ರವಾದ ಒಣ ಕೆಮ್ಮು ಮತ್ತು ಗಂಟಲು ನೋವಿಗೆ ಪರಿಹಾರ ನೀಡುತ್ತವೆ. ಪ್ರಸ್ತುತ ಇವುಗಳ ಬಳಕೆ ತುಂಬಾ ಕಡಿಮೆಯಾಗಿದೆ.

ಅಂದಹಾಗೆ ಆಲ್ಕೋಹಾಲ್‌ ಮಿಶ್ರಿತ ಮೆಡಿಸಿನ್‌ ತೆಗೆದುಕೊಳ್ಳುವವರಿಗೆ ಕೆಲವು ಎಚ್ಚರಿಕೆಗಳಿವೆ.
ಆಲ್ಕೋಹಾಲ್ ಅಂಶವಿರುವ ಔಷಧಿಗಳನ್ನು ಸ್ವಯಂ ಚಿಕಿತ್ಸೆ (Self-medication) ಮಾಡಿಕೊಳ್ಳಬಾರದು. ವೈದ್ಯರ ಸಲಹೆ, ಸೂಚನೆ ಪಾಲಿಸಲೇಬೇಕು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಸಣ್ಣ ಮಕ್ಕಳಂತೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಯಕೃತ್ತಿನ ಸಮಸ್ಯೆ ಇರುವವರು ಮುಟ್ಟಲೇ ಬಾರದು.

Tags: #ಆಲ್ಕೋಹಾಲ್‌ #ಔಷಧಿ #ಪ್ರಿಸ್ಕಿಪ್ಷನ್‌ #Alcohol #Medicine #Prescription
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ದೆವ್ವದ ಕನಸುಗಳು ಕೊಡುವ ಸಂದೇಶ ಏನು..?
  •  ಫೇಸ್‌ ಬುಕ್‌ ಫೋಟೋದಿಂದ ತಗ್ಲಾಕ್ಕೊಂಡ ಜಮೀರ್‌ ಅಹ್ಮದ್..!‌
  • ಕೈತುಂಬಾ ಸಿನಿಮಾ ಶಿವಣ್ಣ ಕೈಲಿ ಮಾತ್ರ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ದೆವ್ವದ ಕನಸುಗಳು ಕೊಡುವ ಸಂದೇಶ ಏನು..?

ದೆವ್ವದ ಕನಸುಗಳು ಕೊಡುವ ಸಂದೇಶ ಏನು..?

July 13, 2026
 ಫೇಸ್‌ ಬುಕ್‌ ಫೋಟೋದಿಂದ ತಗ್ಲಾಕ್ಕೊಂಡ ಜಮೀರ್‌ ಅಹ್ಮದ್..!‌

 ಫೇಸ್‌ ಬುಕ್‌ ಫೋಟೋದಿಂದ ತಗ್ಲಾಕ್ಕೊಂಡ ಜಮೀರ್‌ ಅಹ್ಮದ್..!‌

July 13, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.