ಸಾಮುದ್ರಿಕ ಶಾಸ್ತ್ರ. ಮನುಷ್ಯನ ದೇಹದ ಅಂಗಾಂಗಗಳ ಲಕ್ಷಣಗಳನ್ನು ಆಧರಿಸಿ ಅವರ ಗುಣಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಊಹಿಸುವ ಒಂದು ಪ್ರಾಚೀನ ಭಾರತೀಯ ಜ್ಞಾನ ಪದ್ಧತಿ. ಇದಕ್ಕೆ ‘Physiognomy’ ಅಥವಾ ‘Body Reading’ ಎಂದು ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಒಂದು ಉಪಭಾಗವಾಗಿರುವ ಈ ಶಾಸ್ತ್ರ ಶತಶತಮಾನಗಳ ಇತಿಹಾಸವೂ ಇದೆ. ಇಲ್ಲಿ ಮೂಗಿನ ಆಕಾರ ಹಾಗೂ ಅದರ ಮೂಲಕ ತಿಳಿಯುವ ವ್ಯಕ್ತಿತ್ವದ ಬಗ್ಗೆ ವಿವರಣೆ ಇದೆ. ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂಗಿನ ಆಕಾರದ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಊಹಿಸಬಹುದು.
ಮೂಗಿನ ಆಕಾರಗಳು ಮತ್ತು ಗುಣಲಕ್ಷಣಗಳು ಹೀಗಿವೆ
ನೇರವಾದ ಮೂಗು (Straight Nose) ಇದ್ದರೆ..
ಇವರು ತುಂಬಾ ತೀಕ್ಷ್ಣ ಬುದ್ಧಿವಂತರು ಮತ್ತು ಪ್ರಾಯೋಗಿಕವಾಗಿ ಯೋಚಿಸುವವರು. ಭಾವನೆಗಳಿಗಿಂತ ಬುದ್ಧಿವಂತಿಕೆಗೆ ಹೆಚ್ಚು ಆದ್ಯತೆ ನೀಡುತ್ತಾರೆ ಹಾಗೂ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಕಲೆ ಇವರಿಗೆ ಗೊತ್ತಿರುತ್ತದೆ.
ದಪ್ಪ ಅಥವಾ ಮಾಂಸಲವಾದ ಮೂಗು (Fleshy/Big Nose) ಇದ್ದರೆ
ಇವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ ಮತ್ತು ಯಾರ ಹಂಗಿಗೂ ಒಳಗಾಗುವುದಿಲ್ಲ. ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಯಶಸ್ಸು ಮತ್ತು ಹಣ ಗಳಿಸುತ್ತಾರೆ. ತುಂಬಾ ಉದಾರ ಮನಸ್ಸಿನವರಾಗಿದ್ದು, ಇತರರಿಗೆ ಸಹಾಯ ಮಾಡಲು ಬಯಸುತ್ತಾರೆ.
ಗಿಳಿಯ ಕೊಕ್ಕಿನಂತಹ ಮೂಗು (Aquiline/Roman Nose) ಇದ್ದರೆ..
ಇವರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಸವಾಲುಗಳನ್ನು ಎದುರಿಸುವುದೆಂದರೆ ಇವರಿಗೆ ತುಂಬಾ ಇಷ್ಟ. ತಮ್ಮದೇ ಆದ ಹಾದಿಯಲ್ಲಿ ನಡೆಯಲು ಬಯಸುತ್ತಾರೆ ಮತ್ತು ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
ಚೂಪಾದ ಮೂಗು (Sharp Nose) ಇದ್ದರೆ
ಇವರು ಹುಟ್ಟಿನಿಂದಲೇ ಹೊಸ ವಿಷಯಗಳನ್ನು ಕಲಿಯುವ ಕುತೂಹಲಿಗಳು. ನಿರಂತರ ಅಭ್ಯಾಸ ಮಾಡುವವರು ಹಾಗೂ ಇವರಿಗೆ ಮಾತನಾಡುವ ಕಲೆ ಚೆನ್ನಾಗಿ ಒಲಿದಿರುತ್ತದೆ. ಹೀಗಾಗಿ ಇತರರನ್ನು ಬೇಗನೆ ಆಕರ್ಷಿಸುತ್ತಾರೆ. ಸದಾ ಕ್ರಿಯಾಶೀಲರಾಗಿರುತ್ತಾರೆ.
ಸಣ್ಣ ಅಥವಾ ಗುಂಡಿ ಮೂಗು (Button Nose) ಹೊಂದಿರುವವರು
ಇವರು ಕಲ್ಪನಾ ಲೋಕದಲ್ಲಿ ವಿಹರಿಸಲು ಇಷ್ಟಪಡುವ ಸೃಜನಶೀಲ ವ್ಯಕ್ತಿಗಳು. ಸ್ವಭಾವದಲ್ಲಿ ಕರುಣಾಮಯಿಗಳು. ಸೌಮ್ಯ ಮತ್ತು ದಯೆಯಿಂದ ಕೂಡಿರುವ ವ್ಯಕಿತ್ವದವರು. ಜೀವನವನ್ನು ಸಕಾರಾತ್ಮಕವಾಗಿ ನೋಡುತ್ತಾರೆ. ಥಿಂಕ್ ಪಾಸಿಟಿವ್ ಎನ್ನುವವರು.
ಮೇಲಕ್ಕೆ ಎತ್ತಿದಂತಿರುವ ಮೂಗು (Turned-up / Celestial Nose) ಇದ್ದವರು
ಇವರು ಸದಾ ಸಕಾರಾತ್ಮಕವಾಗಿ (Positive) ಯೋಚಿಸುವ ಸ್ವಭಾವದವರು ಹಾಗೂ ದಯೆ, ಪ್ರೀತಿ ಹೆಚ್ಚು ಇರುವವರು. ಹೊತ್ತ ಜವಾಬ್ದಾರಿಗಳನ್ನು ನಿಭಾಯಿಸುವವರು.
ಗರುಡ ಮೂಗು (Hawk Nose / Curved Nose) ಇದ್ದರೆ..
ಮೂಗಿನ ಮಧ್ಯಭಾಗ ಉಬ್ಬಿ, ತುದಿ ಕೊಂಚ ಕೆಳಕ್ಕೆ ಬಾಗಿರುವವರು ಸ್ವತಂತ್ರ ವಿಚಾರಧಾರೆ ಹೊಂದಿದ್ದು, ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ.
ಸಣ್ಣದಾದ ಮತ್ತು ಉದ್ದನೆಯ ಮೂಗು (Long Nose) ಇದ್ದವರು
ರಾಜ್ ಕುಮಾರ್ ಎನ್ನಬಹುದು. ಇವರು ಉತ್ತಮ ಆಡಳಿತಗಾರರು ಮತ್ತು ವ್ಯಾಪಾರ ಬುದ್ಧಿ ಉಳ್ಳವರು. ಶಿಸ್ತುಬದ್ಧ ಜೀವನ ನಡೆಸುವವರು. ಸಮಯ ಪ್ರಜ್ಞೆ ಇರುವಂತಹವರು.
ಗಂಟು ಮೂಗು (Bumpy / Crooked Nose) ಇದ್ದವರು
ಮೂಗಿನ ಮೇಲ್ಭಾಗದಲ್ಲಿ ಸಣ್ಣದಾದ ಮೂಳೆಯ ಗಂಟಿನಂತಹ ಆಕಾರವಿರುತ್ತದೆ. ಇವರು ತುಂಬಾ ಧೈರ್ಯವಂತರು ಮತ್ತು ಕಠಿಣ ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸುತ್ತಾರೆ. ಒಮ್ಮೆ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಿರುತ್ತಾರೆ, ಆದರೆ ಕೆಲವೊಮ್ಮೆ ಹಠಮಾರಿಗಳು.
ವೈಜ್ಞಾನಿಕವಾಗಿ ಮತ್ತು ಆಧುನಿಕ ಮನೋವಿಜ್ಞಾನದ ಪ್ರಕಾರ, ಮೂಗಿನ ಆಕಾರಕ್ಕೂ ವ್ಯಕ್ತಿಯ ಗುಣಸ್ವಭಾವಕ್ಕೂ ಯಾವುದೇ ನೇರ ಸಂಬಂಧವಿರುವುದಿಲ್ಲ. ವ್ಯಕ್ತಿತ್ವವು ಅವರ ಬೆಳೆದ ವಾತಾವರಣ, ಶಿಕ್ಷಣ, ಸಂಸ್ಕೃತಿ ಮತ್ತು ವೈಯಕ್ತಿಕ ಅನುಭವಗಳ ಮೇಲೆ ರೂಪಿತವಾಗುತ್ತದೆ. ಆದ್ದರಿಂದ, ಇದನ್ನು ಕೇವಲ ಒಂದು ಆಸಕ್ತಿದಾಯಕ ನಂಬಿಕೆ ಅಥವಾ ಜ್ಞಾನದ ಭಾಗವಾಗಿ ಮಾತ್ರ ನೋಡಬಹುದು ಎಂಬ ಅಭಿಪ್ರಾಯವೂ ಇದೆ.



