ಬೆಂಗಳೂರು ವ್ಯಾಪ್ತಿಯ ತ್ರಿತಾರಾ(3 Star Hotels) ಹಾಗೂ ಪಂಚತಾರಾ ಹೋಟೆಲ್(Five star) ಮೇಲೆ ಆಹಾರ ಇಲಾಖೆ ಅಧಿಕಾರಿಗಳ ರೇಡ್ ಕಂಟಿನ್ಯೂ ಆಗಿದೆ. ಬಹುತೇಕ ಸ್ಟಾರ್ ಹೋಟೆಲ್‌ಗಳಲ್ಲಿ ಕೊಳೆತು ಹೋಗಿರುವ ಮಾಂಸ, ತರಕಾರಿ ಬಳಸುತ್ತಿರುವುದು ಪತ್ತೆಯಾಗಿದೆ. ಅದೀಗ ಯುಬಿ ಸಿಟಿ, ಬ್ರಿಗೇಡ್ ರೋಡ್ ಸ್ಟಾರ್ ಹೋಟೆಲ್ಲುಗಳಿಗೂ ವಿಸ್ತರಣೆ ಆಗಿದೆ. ವಿಶೇಷ ಎಂದರೆ ಮೊದಲು ರೇಡ್ ಆದ ಹೋಟೆಲ್ಲುಗಳಲ್ಲಿಗಳಿಗಿಂತ ಈ ಹೋಟೆಲ್ಲುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ. ಇಲ್ಲಿ ಒಂದು ವರ್ಷ ಹಳೆಯ ಮಾಂಸವನ್ನ ಯೂಸ್ ಮಾಡ್ತಿದ್ರಂತೆ.
ಯುಬಿ ಸಿಟಿಯಲ್ಲಿರುವ ವಿವಿಧ ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ಆಹಾರ ತಪಾಸಣೆ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಬಳಕೆಗೆ ಯೋಗ್ಯವಲ್ಲದ 132 ಕೆ.ಜಿ ಮಾಂಸ, ತರಕಾರಿ, ಹಣ್ಣು, ಒಣ ಹಣ್ಣು ಹಾಗೂ15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ನಾಶಪಡಿಸಿದ್ದಾರೆ. ಹೊಟೇಲ್ ಸ್ಕೈನಲ್ಲಿ ಬಳಕೆಗೆ ಯೋಗ್ಯವಲ್ಲದ 45 ಕೆ.ಜಿ ಕೊಳೆತ ಚಿಕನ್, ಬೀಫ್, 6 ಕೆ.ಜಿ ಕಟ್ಲೆಟ್, 15 ಲೀಟರ್ ಬಳಸಿದ ಅಡುಗೆಯನ್ನು ಜಪ್ತಿ ಮಾಡಿ ನಾಶ ಮಾಡಲಾಗಿದೆ.
ರಾಯಲ್ ಚೈನ್ ಹೊಟೇಲ್‌ನಲ್ಲಿ ಯೋಗ್ಯವಲ್ಲದ 50 ಕೆ.ಜಿ ಬಾತುಕೋಳಿ ಮಾಂಸ, 5 ಕೆ.ಜಿ ಮೀನು ಇಟ್ಟಿದ್ದರು. ಮದ್ರಾಸ್ ಕಿಚನ್‌ನಲ್ಲಿ 5 ಕೆ.ಜಿ ಹಸಿರು ಬಟಾಣಿ, ಟೆಸ್ಕಾನ್ ಹೊಟೇಲ್‌ನಲ್ಲಿ 5 ಕೆ.ಜಿ ಮಶ್ರೂಮ್, ಶೆನ್ಚೇಜ್ ಹೊಟೇಲ್‌ನಲ್ಲಿ 3 ಕೆ.ಜಿ ಮೀನು, 7 ಕೆ.ಜಿ ಕೇಕ್, ಆಲೂಗಡ್ಡೆ ಮತ್ತು ಟಾಕೋಸ್ ನಾಶ ಮಾಡಲಾಗಿದೆ. ಇದೆಲ್ಲವೂ ಬಳಕೆಗೆ ಯೋಗ್ಯವಲ್ಲದಿದ್ದರೂ ಹೊಟೇಲ್‌ನಲ್ಲಿ ಸ್ಟಾಕ್ ಇರಿಸಲಾಗಿತ್ತು. ಅಂದಹಾಗೆ ಇದೆಲ್ಲವೂ ಆರೋಗ್ಯ ಇಲಾಖೆಯೇ ನೀಡಿರುವ ಮಾಹಿತಿ.
ಮಾಂಸವನ್ನು ಎಷ್ಟು ದಿನ ಫ್ರೀಜ್ ಮಾಡಬಹುದು..?
ಮೀನುಗಳನ್ನು ಗರಿಷ್ಟ ಒಂದು ತಿಂಗಳು ಸ್ಟಾಕ್ ಇಡಬಹುದು. ಕೋಳಿ ಮತ್ತು ಮೀನು ಮಾಂಸವನ್ನು 1 ರಿಂದ 2 ದಿನಗಳ ಒಳಗೆ ಬಳಸಬಹುದು. ಮೇಕೆ ಮತ್ತು ತುಂಡು ಮಾಂಸವನ್ನು ಮಾಮಾಲಿ ಫ್ರಿಡ್ಜ್‌ನಲ್ಲಿಟ್ಟು 3 ರಿಂದ 5 ದಿನಗಳು ಬಳಸಬಹುದು. ಡೀಪ್ ಫ್ರೀಜರ್‌ನಲ್ಲಿ ಶೇಖರಣೆ ಮಾಡಿದರೆ ಹಸಿ ತುಂಡು ಮಾಂಸವನ್ನು, ಕೋಳಿ ಮಾಂಸ ಎಲ್ಲವನ್ನೂ ಫ್ರೀಜರ್‌ನಲ್ಲಿ ನಿರಂತರವಾಗಿ 0°F (-18°C) ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿಟ್ಟು ಬಳಸಬಹುದು. ಆರೋಗ್ಯಕ್ಕೆ ಅಪಾಯಕಾರಿಯಲ್ಲ ಮತ್ತು ಅದು ಎಂದಿಗೂ ಕೆಡುವುದಿಲ್ಲ. ಆದರೆ, ಮಾಂಸವನ್ನು ವರ್ಷಗಟ್ಟಲೆ ಇಟ್ಟರೆ ಆರೋಗ್ಯಕ್ಕೆ ಹಾನಿಯಾಗದಿದ್ದರೂ, ಅದರ ರುಚಿ, ಬಣ್ಣ ಮತ್ತು ಗುಣಮಟ್ಟ ಹಾಳಾಗುತ್ತದೆ. ಮಾಂಸವನ್ನು ಸರಿಯಾಗಿ ಗಾಳಿಯಾಡದಂತೆ ಪ್ಯಾಕ್ ಮಾಡದಿದ್ದರೆ, ಅದರ ಮೇಲಿನ ತೇವಾಂಶ ಒಣಗಿ ಮಂಜುಗಡ್ಡೆಯ ಹರಳುಗಳು ಮೂಡುತ್ತವೆ. ಇದರಿಂದ ಮಾಂಸವು ರಬ್ಬರ್‌ನಂತೆ ಗಟ್ಟಿಯಾಗುತ್ತದೆ ಮತ್ತು ಬೇಯಿಸಿದಾಗ ರುಚಿ ಇರುವುದಿಲ್ಲ. ತುಂಬಾ ದಿನ ಇಟ್ಟಾಗ ಮಾಂಸದಲ್ಲಿನ ಕೊಬ್ಬಿನಂಶ ಆಕ್ಸಿಡೀಕರಣಗೊಂಡು (Oxidation) ಕೆಟ್ಟ ವಾಸನೆ ಬರಬಹುದು. ಒಮ್ಮೆ ಫ್ರೀಜರ್‌ನಿಂದ ತೆಗೆದು ಕರಗಿಸಿದ ಮಾಂಸವನ್ನು ಮತ್ತೆ ಫ್ರೀಜರ್‌ನಲ್ಲಿ ಇಡಬಾರದು. ಇದರಿಂದ ವಿಷಾಹಾರ (Food Poisoning) ಆಗುವ ಅಪಾಯವಿರುತ್ತದೆ.
ಅಂದಹಾಗೆ ಈಗ ಸಿಕ್ಕಿರುವ ಸ್ಟಾರ್ ಹೋಟೆಲ್ಲುಗಳ ಲೆಕ್ಕ ನೋಡಿದರೆ ಆ ಯಾವ ಹೋಟೆಲ್ಲುಗಳೂ ಡೀಪ್ ಫ್ರೀಜರ್‌ನ್ನು ಪಾಲನೆ ಮಾಡ್ತಿಲ್ಲ. ಏಕೆಂದರೆ ಹೋಟೆಲ್ಲುಗಳಲ್ಲಿ ಫ್ರೀಜರ್ ಓಪನ್ ಮಾಡಬೇಕು. ಮಾಂಸ ತೆಗೆಯಬೇಕು. ಮುಚ್ಚಬೇಕು. ಮಾಂಸವನ್ನು ಇಡುವಾಗ ಗಾಳಿಯಾಡದ ಜಿಪ್‌ಲಾಕ್ ಕವರ್ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಬಿಗಿಯಾಗಿ ಸುತ್ತಿ ಇಡಬೇಕು. ಅಂತಹುದು ಸಾಧ್ಯವೇ ಆಗಿಲ್ಲ. ಸ್ಟಾರ್ ಹೋಟೆಲ್ಲುಗಳಲ್ಲಿ ಫ್ರೆಶ್ ಮಾಂಸ, ತರಕಾರಿಯನ್ನು ಬಳಸುವುದೇ ಇಲ್ಲ.
ಸಿಕ್ಕಿಬಿದ್ದ ಸ್ಟಾರ್ ಹೋಟೆಲ್ಲುಗಳು : ದಿ ಲಲಿತ್ ಅಶೋಕ್ ಹೋಟೆಲ್, ಶಾಂಗ್ರಿ-ಲಾ ಹೋಟೆಲ್, ತಾಜ್ ವಿವಾಂತ- ವೈಟ್‌ಫೀಲ್ಡ್, ಯಶವಂತಪುರದ ತಾಜ್ ಹೋಟೆಲ್, ಏಟ್ರಿಯಾ ಹೋಟೆಲ್, ಹೊಟೇಲ್ ಸ್ಕೈ, ರಾಯಲ್ ಚೈನ್ ಹೊಟೇಲ್, ಟೆಸ್ಕಾನ್ ಹೊಟೇಲ್, ಶೆನ್ಚೇಜ್ ಹೊಟೇಲ್, ರಾಡಿಸನ್ ಬ್ಲೂ, ಫೋರ್ ಸೀಸನ್ಸ್ ಹೋಟೆಲ್ .. ಸದ್ಯಕ್ಕೆ ಸಿಕ್ಕಿರುವುದು ಇಷ್ಟು ಮಾತ್ರ.
ಸ್ಟಾರ್ ಹೋಟೆಲ್ಗಳಿ ಸ್ಥಿತಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದೇವೆ. ಇನ್ನು ತಿನ್ನೋದು ಬಿಡೋದು ಜನರಿಗೆ ಬಿಟ್ಟ ವಿಚಾರ ಎಂದಿದ್ದಾರೆ ಆರೋಗ್ಯ ಸಚಿವ ಯುಟಿ ಖಾದರ್.



