ದೇವಾದಿದೇವ ಮಹಾದೇವ ಶಿವನನ್ನು ಎರಡು ರೂಪದಲ್ಲಿ ಪೂಜಿಸಲಾಗುತ್ತದೆ. ಒಂದು ವಿಗ್ರಹ ರೂಪದಲ್ಲಿ ಹಾಗೂ ಇನ್ನೊಂದು ರೂಪವನ್ನು ಲಿಂಗದ ರೂಪದಲ್ಲಿ. ಧರ್ಮಗ್ರಂಥಗಳ ಪ್ರಕಾರ ಶಿವಲಿಂಗದ ರೂಪದಲ್ಲಿ ಆರಾಧಿಸಲ್ಪಡುವುದು ಶಿವ ಮಾತ್ರ. ಬೇರೆ ಯಾವ ದೇವರನ್ನೂ ಲಿಂಗದ ರೂಪದಲ್ಲಿ ಪೂಜೆ ಮಾಡುವುದಿಲ್ಲ. ಅಂತಹ ಶಿವನ ವಿಗ್ರಹ ಮುರಿದಿದ್ದರೆ ಮುರಿದ ಶಿವ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಮರದ ಕೆಳಗೆ ಇಡುವ ಪದ್ಧತಿಯೂ ಇದೆ. ಮುರಿದ, ಭಗ್ನಗೊಂಡ ಶಿವಲಿಂಗಕ್ಕೆ ಪೂಜೆ ಮಾಡಿದರೆ ತಪ್ಪೇನೂ ಇಲ್ಲ. ಆದರೆ.. ಅದು ಕರಡಿಗೆಯಲ್ಲಿ ಶಿವಲಿಂಗಕ್ಕೆ ಅನ್ವಯವವಾಗುವುದಿಲ್ಲ.
ಕರಡಿಗೆಯಲ್ಲಿರುವ ಇಷ್ಟಲಿಂಗವು (ಶಿವಲಿಂಗ) ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳಿಂದ (ಭಸ್ಮ, ಮಣ್ಣು ಇತ್ಯಾದಿ) ತಯಾರಾಗಿರುತ್ತದೆ. ಅದಕ್ಕೆ ಯಾವುದೇ ಬಿರುಕು ಅಥವಾ ಹಾನಿಯಾಗದಂತೆ ರಕ್ಷಿಸಬೇಕು. ಕರಡಿಗೆಯನ್ನು ಅತಿಯಾದ ಶಾಖ ಅಥವಾ ಬಿಸಿಲಿನ ವಾತಾವರಣದಲ್ಲಿ ಇಡಬಾರದು. ಇದು ಇಷ್ಟಲಿಂಗದ ತೇವಾಂಶವನ್ನು ಹೀರಿಕೊಂಡು ಬಿರುಕು ಬಿಡುವಂತೆ ಮಾಡುತ್ತದೆ.
ಲಿಂಗಾಯತ ಸಂಪ್ರದಾಯದ ಪ್ರಕಾರ, ಇಷ್ಟಲಿಂಗಕ್ಕೆ ಆಗಾಗ ಹಸುವಿನ ತುಪ್ಪ, ಗಂಧದ ಎಣ್ಣೆ ಅಥವಾ ವಿಭೂತಿಯನ್ನು ಹಚ್ಚುವುದರಿಂದ ಅದು ಒಣಗಿ ಬಿರುಕು ಬಿಡುವುದು ತಪ್ಪುತ್ತದೆ. ಪೂಜೆ ಮಾಡುವಾಗ ಹೊರತುಪಡಿಸಿ, ಇಷ್ಟಲಿಂಗವನ್ನು ಪದೇ ಪದೇ ಕೈಯಿಂದ ಮುಟ್ಟುವುದನ್ನು ಅಥವಾ ಉಜ್ಜುವುದನ್ನು ತಪ್ಪಿಸಬೇಕು. ಕರಡಿಗೆಯನ್ನು ಯಾವಾಗಲೂ ಸ್ವಚ್ಛವಾದ, ಒಣಗಿದ ಮತ್ತು ಗಾಳಿಯಾಡದ ಸ್ಥಳದಲ್ಲಿ ಸುರಕ್ಷಿತವಾಗಿಡಬೇಕು. ಕರಡಿಗೆಯ ಒಳಭಾಗದಲ್ಲಿ ಧೂಳು ಅಥವಾ ತೇವಾಂಶ ಶೇಖರವಾಗದಂತೆ ಆಗಾಗ ಮೃದುವಾದ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಬೇಕು.
ಇಷ್ಟಿದ್ದರೂ ಆಗಾಗ್ಗೆ ಶಿವಲಿಂಗ ಬಿರುಕು ಬಿಡುವುದು, ಭಗ್ನವಾಗುವುದು ಆಗುತ್ತದೆ. ಅದಕ್ಕೆ ಭಿನ್ನಗೊಳ್ಳುವುದು ಎಂದೂ ಕರೆಯುತ್ತಾರೆ. ವಿಶೇಷ ಎಂದರೆ ಈ ಭಿನ್ನಗೊಂಡ ಶಿವಲಿಂಗುವನ್ನು ಪೂಜೆ ಮಾಡುವುದು ಸರಿಯೋ ತಪ್ಪೋ.. ಎಂಬ ಬಗ್ಗೆಯೇ ಭಿನ್ನಾಭಿಪ್ರಾಯಗಳಿವೆ. ಏಕೆಂದರೆ ಧರ್ಮಶಾಸ್ತ್ರದಲ್ಲಿ ತಂತ್ರ ಪೂಜೆಯೂ ಇದೆ. ಅದು ನೆಗೆಟಿವ್ ಪೂಜಾ ಪದ್ಧತಿಯಂತೂ ಅಲ್ಲ. ಆ ಪೂಜಾ ವಿಧಾನದಲ್ಲಿ ಭಗ್ನಗೊಂಡ ಶಿವಲಿಂಗಕ್ಕೆ ಶಕ್ತಿ ಇನ್ನೂ ಹೆಚ್ಚು. ವಲಿಂಗ ಎಷ್ಟೇ ಮುರಿದರೂ ಕೂಡ ಅದನ್ನು ಪವಿತ್ರವೆಂದು ಹಾಗೂ ಪೂಜನೀಯವೆಂದು ಪರಿಗಣಿಸಲಾಗುತ್ತದೆ. ಶಿವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಶಿವಲಿಂಗವನ್ನು ಯಾವುದೇ ದಿಕ್ಕುಗಳಲ್ಲಿ ಬೇಕಾದರೂ ಇಟ್ಟು ಪೂಜಿಸಬಹುದೆಂದು ಧರ್ಮಗ್ರಂಥಗಳು ಹೇಳುತ್ತದೆ. ಆದರೆ ಶಿವಲಿಂಗವನ್ನು ಪೂಜಿಸುವ ವ್ಯಕ್ತಿಯು ಉತ್ತರದತ್ತ ಮುಖಮಾಡಿ ಪೂಜಿಸಿದರೆ ಉತ್ತಮವೆಂದು ಹೇಳಲಾಗುತ್ತದೆ.
ಭಾರತದಲ್ಲಿನ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಮುರಿದ ಶಿವಲಿಂಗವನ್ನು ಪೂಜಿಸಲಾಗುತ್ತದೆ.
ಭಗ್ನಗೊಂಡ ಶಿವಲಿಂಗವನ್ನು ಪಾದರಸ ಅಥವಾ ಚದುರಸ ಬಿಟ್ಟು ಕೂಡಿಸುವುದು ತಪ್ಪೇನಲ್ಲ. ಬಹುತೇಕ ಮಠಗಳಲ್ಲಿ ಹೀಗೆ ನಡೆಯುತ್ತದೆ. ಶಿವಲಿಂಗ ಭಿನ್ನವಾಗುವುದು ಕೆಟ್ಟದ್ದಂತೂ ಅಲ್ಲ. ಅದೊಂದು ಪ್ರಕ್ರಿಯೆ. ಅಷ್ಟೇ. ಪಾದರಸ ಶಿವಲಿಂಗ ಪೂಜೆಗೆ ಯಾವುದೇ ವಿಧಿವಿಧಾನಗಳಲ್ಲಿ ಅಥವಾ ಮಂತ್ರಗಳಲ್ಲಿ ವಿಶೇಷ ಮಾರ್ಪಾಡುಗಳಿಲ್ಲ. ಕೇವಲ ಶ್ರದ್ಧೆಯಿಂದ ನೀರಿನ ಅಭಿಷೇಕವನ್ನು ಮಾಡುವುದರಿಂದಲೇ ಶುಭ ಫಲಗಳು ದೊರೆಯುತ್ತವೆ.



