Wednesday, June 17, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Sports

ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

SpeciallU by SpeciallU
June 17, 2026
in Sports
Reading Time: 1 min read
0 0
0
ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

ವೈಭವ್‌ ಸೂರ್ಯವಂಶಿ, 15 ವರ್ಷದ ಹುಡುಗನೇ ಇರಬಹುದು, ಆಟ ಹಾಗಿಲ್ಲ. ಮೈದಾನದಲ್ಲಿ ಸಿಂಹದಂತೆ ಘರ್ಜಿಸುವ ವೈಭವ್‌, ಮೈದಾನದ ಹೊರಗೆ ಹಿರಿಯ ಆಟಗಾರರ ಎದುರು ತಲೆತಗ್ಗಿಸಿ ನಿಲ್ಲುವ ಹುಡುಗ. ಸಚಿನ್‌, ಗಾವಾಸ್ಕರ್‌, ಹರ್ಷಭೋಗ್ಲೆ, ಧೋನಿ, ಸಂಜಯ್‌ ಬಂಗಾರ್‌, ರವಿಶಾಸ್ತ್ರಿ.. ಅಂತಹ ಹಿರಿಯ ಆಟಗಾರರು ಕಂಡ ತಕ್ಷಣ ಕಾಲಿಗೆ ಬಿದ್ದು ನಮಸ್ಕರಿಸುವ ವೈಭವ್‌, ಅದೊಂದು ವರ್ತನೆಗೆ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಅಂತಹ ವೈಭವ್‌ ಶ್ರೀಲಂಕಾ ಎ ತಂಡದ ಎದುರು ಆಡುವಾಗ ಆಟಗಾರರ ಜೊತೆ ರೊಚ್ಚಿಗೆದ್ದು ಜಗಳಕ್ಕೆ ಹೋಗಿದ್ದಾರೆಂದರೆ ಏನು ಕಾರಣ ಇರಬಹುದು ಎಂಬ ಗೊಂದಲವಂತೂ ಇತ್ತು. ಶ್ರೀಲಂಕಾದ ಆಟಗಾರ ಬಳಸಿದ ಪದ, ಬೈಗುಳ ಏನು ಎಂಬ ಕುತೂಹಲವೂ ಇತ್ತು.  ಅದು ಈಗ ಬಹಿರಂಗವಾಗಿದೆ.

ಶ್ರೀಲಂಕಾ ಆಟಗಾರ ವಿಷೇನ್ ಹಲಂಬಗೆ ‘ಮನೆಗೆ ಹೋಗು, ಇದು ಐಪಿಎಲ್ ಅಲ್ಲ’ ಎಂದು ಹೇಳಿದ್ದಾರಂತೆ. ಇದು ಕ್ರಿಕ್‌ ಬಜ್‌ ಮಾಡಿರುವ ರಿಪೋರ್ಟ್.‌ ದನ್ನು ಕೇಳಿದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ವಿಷೇನ್ ಹಲಂಬಗೆ ಅವರು ಈ ಹಿಂದೆಯೂ ವೈಭವ್‌ ಅವರನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದ್ದರಂತೆ. ಜೂನ್ 9 ರಂದು ನಡೆದಿದ್ದ ಪಂದ್ಯದಲ್ಲೂ ವೈಭವ್​ಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರಂತೆ. ವೈಭವ್​ನನ್ನು ಪದೇ ಪದೇ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದ ವಿಷೇನ್ ಹಲಂಬಗೆ, ಸೋಮವಾರ ನಡೆದ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮಾಡುವಾಗಲೂ ಅದನ್ನು ಮುಂದುವರಿಸಿದ್ದರು ಎಂದು ವರದಿಯಾಗಿದೆ.

Related posts

ವೈಭವ್‌ ಸೂರ್ಯವಂಶಿ ನರ್ವಸ್‌ 90 : ತೆಂಡೂಲ್ಕರ್‌ಗೂ ಹೀಗೇ ಆಗ್ತಿತ್ತು..!

ವೈಭವ್‌ ಸೂರ್ಯವಂಶಿ ಆಟಕ್ಕೆ ಶರಣಾದ ಕ್ರಿಕೆಟ್‌ ದೇವರು ಸಚಿನ್‌

ಸೂಪರ್ ಓವರ್​ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಲು ಬಂದಾಗಲೂ ತನ್ನ ನೀಚತನವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ವೈಭವ್​ಗೆ “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಟೀಕಿಸಿದ್ದಾರೆ.  ಸೂಪರ್ ಓವರ್ ಮುಗಿದ ನಂತರ ವಿಷೇನ್ ಹಲಂಬಗೆ, ವೈಭವ್ ಸೂರ್ಯವಂಶಿ ಜೊತೆಗೆ ಕಾಲ್ಕೆರೆದು ಮತ್ತೆ ಜಗಳಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಅವರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಈ ಜಗಳಕ್ಕೆ ತಾರಕಕ್ಕೇರುತ್ತಿರುವುದನ್ನು ನೋಡಿದ ಇತರ ಆಟಗಾರರು ಇಬ್ಬರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಶಿಕ್ಷೆಯಿಂದ ಬಚಾವ್‌ : ಪಂದ್ಯದಲ್ಲಿ ಭಾರತದ ವೈಭವ್‌ ಸೂರ್ಯವಂಶಿ (Vaibhav Sooryavanshi), ಶ್ರೀಲಂಕಾ ಎ ತಂಡದ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದು, ದೊಡ್ಡ ವಿವಾದವಾದ ಕಾರಣ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾರಣ, ನಿಯಮ ಉಲ್ಲಂಘಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ವೈಭವ್​ಗೆ ಡಿಮೆರಿಟ್ ಅಂಕಗಳೊಂದಿಗೆ ಪಂದ್ಯದಿಂದ ನಿಷೇಧಿಸುವ ಶಿಕ್ಷೆ ವಿಧಿಸುವ ಆತಂಕವೂ ಇತ್ತು. ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ, ವೈಭವ್​ಗೆ ಆ ರೀತಿಯ ಯಾವುದೇ ಶಿಕ್ಷೆಯನ್ನು ವಿಧಿಸಲಾಗುತ್ತಿಲ್ಲ.

ಭಾರತ ಎ ತಂಡದ ನಾಯಕರಾಗಿರುವ ತಿಲಕ್‌ ವರ್ಮಾ ಇಡೀ ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ. ತಂಡದ ಮ್ಯಾನೇಜ್‌ ಮೆಂಟ್‌ ಜೊತೆ ಸುದೀರ್ಘ ಮೀಟಿಂಗ್‌ ಮಾಡಿದ್ದು, ನಂತರ ಮ್ಯಾಚ್‌ ರೆಫರಿಗೂ ಕಾರಣವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಅಸಲಿಗೆ ಈ ಜಗಳಕ್ಕೆ ಪ್ರಮುಖ ಕಾರಣ, ಲಂಕಾ ಆಟಗಾರರ ಅತಿರೇಕತನ. ಪಂದ್ಯ ಪ್ರಾರಂಭವಾದಾಗಿನಿಂದಲೂ ಶ್ರೀಲಂಕಾ ಎ ಆಟಗಾರರು ವೈಭವ್ ಸೂರ್ಯವಂಶಿ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದರು. ಜೊತೆಗೆ ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಸಮಯದಲ್ಲಿ ವೈಭವ್​ಗೆ ಆಟಗಾರನನ್ನು ತಳ್ಳುವ ಉದ್ದೇಶವಿರಲಿಲ್ಲ. ಆದರೆ ಶ್ರೀಲಂಕಾ ತಂಡದ ಆಟಗಾರ, ತನ್ನ ಬಳಿ ಬರುತ್ತಿರುವುದನ್ನು ನೋಡಿದ ವೈಭವ್, ಅವನನ್ನು ದೂರದಲ್ಲೇ ನಿಂತು ಮಾತನಾಡುವಂತೆ ಹೇಳುತ್ತ ಹಿಂದಕ್ಕೆ ತಳ್ಳಿದನು ಎಂಬುದನ್ನು ತಿಲಕ್, ರೆಫರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಘಟನೆಯ ಬಳಿಕ ಶ್ರೀಲಂಕಾದ ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡಿದ್ದು, ಐಪಿಎಲ್‌ನಲ್ಲಿ ಸೂರ್ಯವಂಶಿ ಅವರೊಂದಿಗೆ ಆಡಿದ ಆಟಗಾರರು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದರಂತೆ.

ಭಾರತೀಯ ತಂಡಕ್ಕೆ ಔಪಚಾರಿಕ ಕ್ಷಮೆಯಾಚಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಶ್ರೀಲಂಕಾ ಮ್ಯಾನೇಜ್‌ಮೆಂಟ್‌ ಯೋಚಿಸುತ್ತಿದೆ. ವೈಭವ್ ಸೂರ್ಯವಂಶಿ ವಿರುದ್ಧ ಯಾವುದೇ ನಿಷೇಧ ಅಥವಾ ಶಿಸ್ತು ಕ್ರಮದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಯುವ ಭಾರತೀಯ ಆಟಗಾರನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದ ಶ್ರೀಲಂಕಾದ ಆಟಗಾರನಿಗೆ ರೆಫರಿ ಕಠಿಣ ಛೀಮಾರಿ ಹಾಕಿದ್ದಾರೆ.

Tags: #ವೈಭವ್ ಸೂರ್ಯವಂಶಿ #ಶ್ರೀಲಂಕಾ #ಜಗಳ #ವಿಷೇನ್ ಹಲಂಬ #VaibhavSuryavanshi #SriLanka #Fight #VishenHalamba
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?
  • ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?
  • ಸಿಎಂ ಡಿಕೆ, ಹೆಚ್‌ಡಿಕೆ ಮಧ್ಯೆ ಬಿಡದಿ ಟೌನ್‌ ಶಿಪ್‌ ಗುದ್ದಾಟ : ರೈತರ ಪರ ನಿಲ್ಲೋದು ನಾಟಕನಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

ವೈಭವ್‌ ಸೂರ್ಯವಂಶಿ ರೊಚ್ಚಿಗೇಳುವುದಕ್ಕೆ ಕಾರಣವಾದ ಬೈಗುಳ ಏನು..?

June 17, 2026
ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

ಗಿಲ್ಲಿ ನಟ ಹೀರೋ : ಪ್ಯಾನ್‌ ಕರ್ನಾಟಕ ಸಿನಿಮಾದಲ್ಲಿ ʻಟವೆಲ್‌ ವ್ಯಾಪಾರʼ ಏಕೆ..?

June 17, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.