ಸುಂದರ ಯುವತಿಯರು ಯುವಕರಿಗೆ ಬಲೆ ಬೀಸುವುದು, ತೋರಿಸಬಾರದ ಆಸೆ ತೋರಿಸುವುದು, ಯಾಮಾರಿದ ಹುಡುಗರನ್ನು ಬ್ಲಾಕ್ ಮೇಲ್ ಮಾಡಿ ದುಡ್ಡು ದೋಚುವುದು ಹೊಸದೇನಲ್ಲ. ಆದರೆ ಬೆಂಗಳೂರಿನಲ್ಲಿ ಯಂಗ್ ಕ್ರಿಕೆಟರ್ ಒಬ್ಬರು ಸುಂದರಿಯ ಸೌಂದರ್ಯ ನೋಡಿ ಬೇಸ್ತು ಬಿದ್ದು ಬೆತ್ತಲಾಗಿ ದುಡ್ಡು ಕಳೆದುಕೊಂಡು ಮಾನವನ್ನು ಕೂಡಾ ಹರಾಜು ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಿಸಿಸಿಐ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಗಾಗಿ ಬೆಂಗಳೂರಿಗೆ ಬಂದಿದ್ದ ಕ್ರಿಕೆಟರ್, ಮಹಾರಾಷ್ಟ್ರ ಮೂಲದವರು. ಬ್ಲಾಕ್ ಮೇಲ್ ಮಾಡಿದ ಯುವತಿಯ ಹೆಸರು, ಆಕೆ ಬಳಸಿದ್ದ ವಾಟ್ಸಪ್ ನಂಬರ್ ಕೂಡಾ ಪೊಲೀಸ್ ದಾಖಲೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಅವುಗಳನ್ನು ಬಹಿರಂಗಪಡಿಸಿದ್ಧಾರೆ.
ಮಹಾರಾಷ್ಟ್ರದ ಯಂಗ್ ಕ್ರಿಕೆಟರ್ ಒಬ್ಬರು ಬೆಂಗಳೂರಿಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡುತ್ತಿದ್ದಾಗ ಡೇಟಿಂಗ್ ಆ್ಯಪ್ ಮೂಲಕ ಯುವತಿಯೊಬ್ಬಳ ಪರಿಚಯವಾಗಿದೆ. ಪಂದ್ಯಾವಳಿಗಾಗಿ ಬೆಂಗಳೂರಿಗೆ ಬಂದಿದ್ದ ಆಟಗಾರ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾಗ ಘಟನೆ ನಡೆದಿದೆ. ‘ಹಿಂಜ್’ (Hinge) ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆ, ವಾಟ್ಸಾಪ್‌ಗೆ ಕರೆ ಬದಲಾಯಿಸಿ ವಿಡಿಯೋ ಕಾಲ್‌ನಲ್ಲಿ ಪ್ರಚೋದಿಸಿದ್ದಾಳೆ. ಒಂದೆರಡು ಪೋಲಿ ಮೆಸೇಜ್ ಹಾಕಿ ಕ್ರಿಕೆಟರ್ʻನನ್ನು ಉದ್ರೇಕಗೊಳಿಸಿದ್ದಾಳೆ. ನಂತರ ಕ್ರಿಕೆಟ್ ಆಟಗಾರನನ್ನು ವಾಟ್ಸಪ್ ಕಾಲ್‌ಗೆ ಬರುವಂತೆ ಪ್ರಚೋದಿಸಿದ್ದಾಳೆ. ಆಸೆ ಬಿದ್ದ ಹುಡುಗ ಸಡನ್ ಆಗಿ ವಾಟ್ಸಪ್ ಕಾಲ್ ಮಾಡಿದ್ದಾನೆ. ಅದೂ ವಿಡಿಯೋ ಕಾಲ್ ಮೂಲಕ ಕಾಂಟ್ಯಾಕ್ಟ್ ಆಗಿದ್ದಾನೆ.
ಮಾತನಾಡುತ್ತಾ ಆಡುತ್ತಾ.. ಯುವತಿ ಒಂದೊಂದೇ ಬಟ್ಟೆಗಳನ್ನು ಬಿಚ್ಚುತ್ತಾ ಹೋಗಿದ್ಧಾಳೆ. ರೊಮ್ಯಾಂಟಿಕ್ ಮೂಡಿನಲ್ಲಿದ್ದ ಕ್ರಿಕೆಟರ್ ಕೂಡಾ ತನ್ನ ಒಂದೊಂದೇ ಬಟ್ಟೆ ಬಿಚ್ಚಿದ್ದಾನೆ. ಅವಳೂ ಬೆತ್ತಲಾಗಿದ್ಧಾಳೆ. ಅವಳನ್ನು ನೋಡಿ ಇವನೂ ಬೆತ್ತಲಾಗಿದ್ಧಾನೆ. ವಿಡಿಯೋ ಕಾಲ್‌ನಲ್ಲಿಯೇ ಉದ್ರೇಕಗೊಳಿಸಿದ್ದಾಳೆ. ಆದರೆ ಪ್ರಾಬ್ಲಂ ಶುರುವಾಗಿರುವುದು ಆಮೇಲೆ. ಜುಲೈ 17 ರಂದು ಕಣ್ಣೂರಿನ ಬಳಿ ಪಂಚತಾರಾ ಹೊಟೇಲ್ನಲ್ಲಿ ಇರುವಾಗ ಈ ಘಟನೆ ನಡೆದಿದೆ.
ಯುವ ಕ್ರಿಕೆಟಿಗ ನಗ್ನವಾಗಿರುವ ವಿಡಿಯೋವನ್ನ ಸ್ಕ್ರಿನ್ ಶಾಟ್ ಮೂಲಕ ವಿಡಿಯೋ ಸೆರೆ ಹಿಡಿದು ಕೆಲ ಹೊತ್ತಿನ ಬಳಿಕ ಆರೋಪಿತೆ ಕರೆ ಮಾಡಿದ್ದಾಳೆ. ಮಾನಹಾನಿ ಮಾಡುವುದಾಗಿ ಬೆದರಿಸಿದ ಯುವತಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಗಲಿಬಿಲಿಗೊಂಡ ಆಟಗಾರ ಆನ್ಲೈನ್ ಮೂಲಕ 1500 ರೂಪಾಯಿ ಶೇರ್ ಮಾಡಿದ್ದಾನೆ. ಹುಡುಗ ಕ್ರಿಕೆಟರ್ ಎಂದು ಗೊತ್ತಾಗುತ್ತಿದ್ದಂತೆಯೇ ಹುಡುಗಿ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟಿದ್ದಾಳೆ.
ಆಟಗಾರನಿಗೆ ಕರೆ ಮಾಡಲು ಬಳಸಲಾಗಿದ್ದ 8426051159 ವಾಟ್ಸಾಪ್ ಸಂಖ್ಯೆ ಮತ್ತು ‘ರಶಿಕಾ’ ಎಂಬ ಹೆಸರಿನ ಡೇಟಿಂಗ್ ಆ್ಯಪ್ ಪ್ರೊಫೈಲ್‌ನ ಐಪಿ (IP) ವಿಳಾಸವನ್ನು ಪತ್ತೆಹಚ್ಚಲಾಗುತ್ತಿದೆ. ಬಲಿಪಶು ಆರಂಭದಲ್ಲಿ ಪಾವತಿಸಿದ್ದ ₹1,500 ಹಣ ಯಾವ ಬ್ಯಾಂಕ್ ಖಾತೆ ಅಥವಾ ಯುಪಿಐ (UPI) ಐಡಿಗೆ ಜಮೆಯಾಗಿದೆ ಎಂಬುದರ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆಟಗಾರನ ಫೋನ್‌ನಲ್ಲಿದ್ದ ಚಾಟ್‌ಗಳು ಮತ್ತು ವಿಡಿಯೋ ಕಾಲ್‌ನ ಲಾಗ್‌ಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಲಾಗಿದೆ.
ಆರಂಭದಲ್ಲಿ ಹೆದರಿ ಹಣ ಪಾವತಿಸಿದ್ದ ಆಟಗಾರ, ತಕ್ಷಣ ಎಚ್ಚೆತ್ತುಕೊಂಡು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆಟಗಾರರಿಗೆ ಇಂತಹ ಜಾಲಗಳ ಬಗ್ಗೆ ಬಿಸಿಸಿಐ (BCCI) ಈಗಾಗಲೇ ಎಚ್ಚರಿಕೆ ನೀಡಿತ್ತು. ಪೊಲೀಸರು ಈ ಕ್ರಿಕೆಟರ್ ಯಾರೆಂಬ ಹೆಸರನ್ನು ಬಹಿರಂಗಪಡಿಸಿಲ್ಲ. ಸೈಬರ್ ಅಪರಾಧ ಮತ್ತು ಇಂತಹ ಲೈಂಗಿಕ ಕಿರುಕುಳ (Sextortion) ಪ್ರಕರಣಗಳಲ್ಲಿ ಬಲಿಪಶುಗಳಾದವರ ಗೌಪ್ಯತೆ ಕಾಯ್ದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಸಮಾಜದಲ್ಲಿ ಆಟಗಾರನ ಮಾನಹಾನಿಯಾಗದಂತೆ ತಡೆಯಲು ಪೊಲೀಸರು ಅವರ ಹೆಸರನ್ನು ರಹಸ್ಯವಾಗಿಟ್ಟಿದ್ದಾರೆ. ಪ್ರಸ್ತುತ ಲಭ್ಯವಿರುವ ಅಧಿಕೃತ ಮಾಹಿತಿ ಪ್ರಕಾರ, ಅವರು ಮಹಾರಾಷ್ಟ್ರ ಮೂಲದ 20 ವರ್ಷದ ಯುವ ಕ್ರಿಕೆಟಿಗ ಎಂಬುದು ಮಾತ್ರ ತಿಳಿದುಬಂದಿದೆ.



