ಪ್ರತಿಭಟನೆ ಎಂದ ಮೇಲೆ ರಾಜಕೀಯವಾಗಿ ಪರ-ವಿರೋಧ ಘೋಷಣೆ, ನರೇಷನ್ ಸಾಮಾನ್ಯ. ನೀಟ್ ವಿರೋಧಿ ಹೋರಾಟದಲ್ಲಿ ಕೆಲವು ತಪ್ಪುಗಳು ನಡೆದ ಕಾರಣಕ್ಕೆ ಅದು ನಿರೀಕ್ಷಿತ ಗುರಿ ತಲುಪಲಿಲ್ಲ. ಈ ತಪ್ಪುಗಳು ನಡೆಯದಿದ್ದರೆ ಅಣ್ಣಾ ಹಜಾರೆ ರೇಂಜ್‌ಗೆ ಯಶಸ್ವಿಯಾಗಬಹುದಾಗಿದ್ದ ಹೋರಾಟವನ್ನು ಹೋರಾಟದಲ್ಲಿ ನಿಂತವರೇ ಹಾಳುಗೆಡವಿಬಿಟ್ಟರು. ಅವರು ಮಾಡಿದ ಪ್ರಮಾದಗಳನ್ನು ದೊಡ್ಡದಾಗಿ ಪಟ್ಟಿ ಮಾಡಬಹುದು. ಇಲ್ಲಿ ಕೆಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿದ ಕಾರಣಗಳೂ ಇದ್ದರೆ ಕೊಡಿ.
ಹೋರಾಟಕ್ಕೆ ಬಂದವರು ಕ್ಲೀನ್ ಅಲ್ಲ :
ಹೋರಾಟದಲ್ಲಿ ಜೊತೆಗೂಡಿದದವರು ಶುದ್ಧ ಹಸ್ತರಲ್ಲ. ಪ್ರತಿಯೊಬ್ಬರ ಮೇಲೂ ಆರೋಪಗಳಿವೆ. ವಿಶೇಷವಾಗಿ ಪ್ರಕಾಶ್ ರಾಜ್, ಅರುಂಧತಿ ರಾಯ್, ಶಬಾನಾ ಅಜ್ಮಿ, ಅಲಿಯಾ ಭಟ್, ಕರೀನಾ ಕಪೂರ್, ಸೋನು ಸೂದ್.. ಇವರು ಈಗಾಗಲೇ ಬಿಜೆಪಿ ಹಾಗೂ ಹಿಂದುತ್ವ ವಿರೋಧಿ ಗುಂಪುಗಳಲ್ಲಿ ಗುರುತಿಸಿಕೊಂಡಿರುವವರು. ರಾಜಕೀಯ ನಾಯಕರೂ ಅಷ್ಟೇ, ಬಿಜೆಪಿ ಹಾಗೂ ಹಿಂದುತ್ವ ವಿರೋಧಿ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿಕೊಂಡಿರುವವರು.
ಅನಗತ್ಯ ಧರ್ಮ ನಿಂದನೆ :
ಪ್ರತಿಭಟನಾ ಸ್ಥಳಕ್ಕೆ ಬಂದ ಕುಮಾಲ್ ಕಮ್ರಾ ನಂತಹ ಕೆಲವರು ಅನಗತ್ಯವಾಗಿ ಶ್ರೀರಾಮ-ಸೀತೆಯನ್ನೂ ಎಳೆದು ತಂದರು. ಜೊತೆಗೆ ಅಲ್ಲಾನ ಹೆಸರನ್ನೂ ತಂದರು. ಇದರಿಂದಾಗಿ ಹೋರಾಟಗಾರರ ಮೂಲ ಉದ್ದೇಶವನ್ನೇ ಹಳಿ ತಪ್ಪಿಸಿತು..
ಆರ್ಟಿಕಲ್ 370 ಪುನಃ ಸ್ಥಾಪನೆ ಸದ್ದು :
ಮುಂಬೈ ಮತ್ತು ದೆಹಲಿಯ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಕೆಲವು ಗುಂಪುಗಳು ಸಾಮಾನ್ಯ ಶಿಕ್ಷಣದ ಬೇಡಿಕೆಗಿಂತ ಭಿನ್ನವಾಗಿ ‘ಆಜಾದಿ’ ಘೋಷಣೆಗಳನ್ನು ಕೂಗಿದ್ದು ತೀವ್ರ ವಿವಾದಕ್ಕೆ ಕಾರಣವಾಯಿತು. ಹೋರಾಟದ ಮೂಲ ಉದ್ದೇಶ ನೀಟ್ ಅಲ್ಲ, ಭಾರತ ವಿರೋಧಿ ಕೃತ್ಯ ಎಂದು ಅನುಮಾನ ಮೂಡುವುದಕ್ಕೆ ಕಾರಣವಾಯ್ತು.
ಸಂಸತ್‌ಗೆ ನುಗ್ಗಲು ಪ್ರಚೋದನೆ :
ಸಂಸತ್ತಿಗೆ ನುಗ್ಗಿ ಎಂಬಂತಹ ಹೇಳಿಕೆಗಳು ಸಾಮಾನ್ಯ ಜನವರಿಗೆ ಹೋರಾಟಗಾರರ ಮೇಲೆ ಅವಿಶ್ವಾಸ ಹುಟ್ಟುಹಾಕಿದವು. ಈ ಹಿಂದೆ ರೈತ ಕಾಯ್ದೆ, ನಾಗರಿಕತ್ವ ವಿರೋಧಿ ಸೇರಿದ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದವರೇ ಈ ಹೋರಾಟದಲ್ಲೂ ಇದ್ದರು. ಜೊತೆಗೆ ಸಂಸತ್ತಿಗೆ ನುಗ್ಗಿ ಎಂಬ ವಾದವನ್ನು ಒಪ್ಪಲು ತಟಸ್ಥರಂತೂ ಸಿದ್ದರಿರಲಿಲ್ಲ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಕೇವಲ ಶಿಕ್ಷಣ ಸಚಿವಾಲಯದ ಎದುರು ಪ್ರತಿಭಟಿಸದೆ, ನೇರವಾಗಿ ಪ್ರಧಾನಿ ಮೋದಿ ನಿವಾಸಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದರು.
ಶಿಕ್ಷಣ ವ್ಯವಸ್ಥೆಯನ್ನು RSS ಮುಕ್ತ ಮಾಡುವ ಕೂಗು :
“ಕಳೆದ ಕೆಲವು ವರ್ಷಗಳಲ್ಲಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವೈಸ್-ಚಾನ್ಸಲರ್ ಹುದ್ದೆಗಳಿಗೆ ಅರ್ಹತೆಯ ಆಧಾರದ ಮೇಲಲ್ಲದೆ, ಕೇವಲ ಆರ್‌ಎಸ್‌ಎಸ್ (RSS) ಮತ್ತು ಹಿಂದುತ್ವ ಸಿದ್ಧಾಂತಕ್ಕೆ ಹತ್ತಿರವಿರುವವರನ್ನು ನೇಮಕ ಮಾಡಲಾಗಿದೆ. ಈ ಸಂಘಟನಾತ್ಮಕ ಕಬಳಿಕೆಯೇ ಇಂದಿನ ಪೇಪರ್ ಲೀಕ್‌ಗೆ ಕಾರಣ” ಎಂದು ವಿರೋಧ ಪಕ್ಷಗಳು ನೇರವಾಗಿ ಹಿಂದುತ್ವ ಸಿದ್ಧಾಂತದ ಮೂಲವನ್ನು ಆಕ್ಷೇಪಿಸಿದವು.
ಭಾಷಾ ಮತ್ತು ಪ್ರಾದೇಶಿಕ ವಿಭಜನೆಯ ಕೂಗು :
ತಮಿಳುನಾಡಿನಲ್ಲಿ ನೀಟ್ ವಿರೋಧಿ ಪ್ರತಿಭಟನೆಯ ಜೊತೆಗೆ ಹಿಂದಿ ಬೋರ್ಡುಗಳಿಗೆ ಮಸಿ ಬಳಿಯುವ, ಕೇಂದ್ರ ಸರ್ಕಾರವನ್ನೇ ವಿರೋಧಿಸುವ ಕೆಲಸ ನಡೆಯಿತು. ಇದು ಕೇವಲ ಪರೀಕ್ಷೆಯ ಆಕ್ರೋಶವಾಗಿ ಉಳಿಯದೆ, ಕೇಂದ್ರದ ವಿರುದ್ಧದ ಪ್ರಾದೇಶಿಕ ಅಸ್ಮಿತೆಯ ಹೋರಾಟವಾಗಿ ಮಾರ್ಪಟ್ಟಿತು.
ಪ್ರತಿಭಟನೆ ದಿಕ್ಕು ತಪ್ಪಿದ್ದು ಹಾಗೆ..



