Monday, June 15, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ವಿಜಯೇಂದ್ರ V/S ರೆಬಲ್ಸ್‌ : ಹೈಕಮಾಂಡ್‌ ಬಂದು ಹೋದ ಮೇಲೆ ಹೆಚ್ಚಾದ ಬಿಕ್ಕಟ್ಟು..!

SpeciallU by SpeciallU
June 15, 2026
in Politics
0 0
0
ವಿಜಯೇಂದ್ರ V/S ರೆಬಲ್ಸ್‌ : ಹೈಕಮಾಂಡ್‌ ಬಂದು ಹೋದ ಮೇಲೆ ಹೆಚ್ಚಾದ ಬಿಕ್ಕಟ್ಟು..!

ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಇರುವ  ಒಂದು ಬಣದ ನಾಯಕರು ಸಮರ ಸಾರಿರುವುದು ಗುಟ್ಟೇನೂ ಅಲ್ಲ. ಇದನ್ನು ಹೈಕಮಾಂಡ್‌ ನೋಡಿಯೂ ನೋಡದಂತೆ.. ಕಂಡರೂ ಕಾಣದಂತೆ ಜಾಣ ಆಟ ತೋರಿಸ್ತಾ ಇರೋದು ಹೊಸದಲ್ಲ.‌ ದಕ್ಷಿಣದ ರಾಜ್ಯಗಳ ವಿಷಯದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ಎಷ್ಟು ವೀಕ್‌ ಎನ್ನುವುದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಈ ಬಾರಿಯೂ ಅಷ್ಟೇ.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಬಂದು ಹೋಗಿ ಎರಡು ವಾರಗಳು ಕಳೆದರೂ ಯಾವುದೇ ಪರಿಹಾರ ಸಿಕ್ಕಂತೆ ಇಲ್ಲ. ಬದಲಿಗೆ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದೆ.

ಬಿಜೆಪಿಯ ಪಡಸಾಲೆಯಲ್ಲಿ ಈಗ ಅವರು ಬದಲಾಗ್ತಾರೆ.. ಇವರು ಬದಲಾಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆಯೇ ಹೊರತು, ಸಂಘಟನೆ, ಹೋರಾಟಗಳ ಕುರಿತು ಯಾವ ಚರ್ಚೆಯೂ ಆಗುತ್ತಿಲ್ಲ. ಅಧ್ಯಕ್ಷರು ಬದಲಾಗ್ತಾರೆ.. ಎಂದು ಅಶೋಕ್‌ ಬಣ ಹೇಳುತ್ತಿದ್ದರೆ, ವಿರೋಧ ಪಕ್ಷದ ನಾಯಕರು ಬದಲಾಗ್ತಾರೆ ಎನ್ನುವುದು ವಿಜಯೇಂದ್ರ ಟೀಂನವರು ಹರಡುತ್ತಿರುವ ಸುದ್ದಿ. ಬಿಜೆಪಿ ನಾಯಕರು ಎಂದಿನಂತೆ ʻಮೀಡಿಯಾ ಟೈಗರ್‌ʼಗಳಾಗಿದ್ದಾರೆ. ಅಂದರೆ ಟಿವಿ ಚಾನೆಲ್ಲುಗಳ ಮೈಕು ಕಂಡಾಗ.. ವರದಿಗಾರರು ಪ್ರಶ್ನೆ ಕೇಳಿದಾಗ.. ಮಾತನಾಡುವ ಹೋರಾಟ.

Related posts

ಕರ್ನಾಟಕಕ್ಕೆ ಕೇಂದ್ರದ ಅನುದಾನ : ನಿರ್ಮಲಾ ಸೀತಾರಾಮನ್‌ ಲೆಕ್ಕ  ನೋಡಿದ್ರೆ ನಗು ಬರೋದು ಗ್ಯಾರಂಟಿ..!

ಬಾಗಲಕೋಟೆ ರೈತ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ಏಕೆ..?

ಈ ಮಧ್ಯೆ ಪ್ರಲ್ಹಾದ್‌ ಜೋಶಿಯವರು ಇದ್ದಕ್ಕಿದ್ದಂತೆ ಆಕ್ಟಿವ್‌ ಆಗಿದ್ದಾರೆ. ಕರ್ನಾಟಕದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ರಾಜ್ಯಸಭೆ ಚುನಾವಣೆಯಲ್ಲಿ ಪ್ರೊ.ಎಂ ನಾಗರಾಜ್‌ ಎಂಬುವವರ ಆಯ್ಕೆಯೇ ಇದಕ್ಕೆ ಸಾಕ್ಷಿ. ರಾಜ್ಯ ಬಿಜೆಪಿಯ ಸೀನಿಯರ್‌ ನಾಯಕರುಗಳಲ್ಲಿಯೂ ಬಹುತೇಕರಿಗೆ ಈ ವ್ಯಕ್ತಿಯ ಪರಿಚಯ ಇರಲಿಲ್ಲ. ಆದರೆ ಅದು ಪ್ರಲ್ಹಾದ್‌ ಜೋಶಿಯವರಿಗೆ ಇತ್ತು. ಸಂಘ ಪರಿವಾರದ ಹಿನ್ನೆಲೆ ಇರುವ ನಾಯಕ.

ಇನ್ನು ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಅಷ್ಟೇ, ಬಿಜೆಪಿ ರಾಜ್ಯ ಘಟಕ ಹೇಳಿದ್ದ ಹೆಸರಿಗೆ ಹೈಕಮಾಂಡ್‌ ಓಕೆ ಎಂದಿಲ್ಲ. ಆದರೆ ಸ್ವಲ್ಪ ಜಾಣತನ ತೋರಿಸಿದೆ. ಒಂದು ಸೀಟನ್ನು ವಿಜಯೇಂದ್ರ ಬಣಕ್ಕೂ, ಇನ್ನೊಂದು ಸೀಟನ್ನು ಪ್ರಲ್ಹಾದ್‌ ಜೋಶಿಯವರಿಗೂ ನೀಡಲಾಗಿದೆ. ರಘು ಕೌಟಿಲ್ಯ, ವಿಜಯೇಂದ್ರ ಕ್ಯಾಂಡಿಡೇಟ್‌ ಆದರೆ, ಲಿಂಗರಾಜ್‌ ಪಾಟೀಲ್‌, ಪ್ರಲ್ಹಾದ್‌ ಜೋಷಿ ಅವರ ಕ್ಯಾಂಡಿಡೇಟು.

ವಿಶೇಷ ಎಂದರೆ ವಿ ಸೋಮಣ್ಣ ಅವರ ಹೆಸರನ್ನು ಇತ್ತೀಚೆಗೆ ಹೈಕಮಾಂಡ್‌ ಹೇಳುತ್ತಿಲ್ಲ. ಹೀಗಾಗಿಯೇ ತಮ್ಮ ಹೆಸರನ್ನು ಮರೆತಿರುವ ಹೈಕಮಾಂಡ್‌ ನಾಯಕರಿಗೆ ನೆನಪಿಸಲು ಎಂದೇ ಸೋಮಣ್ಣ ರಾಜ್ಯ ಪ್ರವಾಸ ಹೆಚ್ಚಾಗಿದೆ.

ಅಂದಹಾಗೆ ಪ್ರಲ್ಹಾದ್‌ ಜೋಶಿಯವರಿಗೆ ಕರ್ನಾಟಕದ ಸಿಎಂ ಆಗುವ ಕನಸು ಹೊಸದೇನಲ್ಲ. 2023ರಲ್ಲಿಯೇ ಜೋಶಿ ಅವರ ಹೆಸರು ಕೇಳಿ ಬರುತ್ತಿತ್ತು. ಅದಕ್ಕೆ ಕಲ್ಲು ಹಾಕಿದ ಖ್ಯಾತಿ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. ಈಗ ಅವರ ಪಕ್ಷವೇ ಬಿಜೆಪಿ ಮೈತ್ರಿಯಲ್ಲಿದೆ. ಹೀಗಿರುವಾಗ ಜೋಶಿಯವರ ರೊಟ್ಟಿಯೇ ತುಪ್ಪದ ಜಾಡಿಯಲ್ಲಿ ಬಿದ್ದಂತೆ ಕಾಣುತ್ತಿದೆ. ಎಲ್ಲವೂ ಕಾಲದ ಮಹಿಮೆ. ಅಂದಹಾಗೆ ವಿಜಯೇಂದ್ರ ಅವರಿಗೆ ಅಡ್ಡಿಯಾಗುತ್ತಿರುವುದು ಅವರ ವಯಸ್ಸು. ಅಷ್ಟೇ ಹೊರತು ರೆಬಲ್ಸ್‌ಗಳ ಶಕ್ತಿ ಪ್ರದರ್ಶನ ಅಲ್ಲ.

Tags: #ಬಿಜೆಪಿ #ರಾಜ್ಯಾದ್ಯಕ್ಷ #ವಿಜಯೇಂದ್ರ #ಪ್ರಲ್ಹಾದ್‌ಜೋಶಿ #ಸೋಮಣ್ಣ #ಹೈಕಮಾಂಡ್ #ನಿತಿನ್‌ನಬಿನ್‌ #BJP #Rajyadyaksha #Vijayendra #PralhadJoshi #Somanna #HighCommand #Nitinnabin
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಕರ್ನಾಟಕಕ್ಕೆ ಕೇಂದ್ರದ ಅನುದಾನ : ನಿರ್ಮಲಾ ಸೀತಾರಾಮನ್‌ ಲೆಕ್ಕ  ನೋಡಿದ್ರೆ ನಗು ಬರೋದು ಗ್ಯಾರಂಟಿ..!
  • ವಿಜಯೇಂದ್ರ V/S ರೆಬಲ್ಸ್‌ : ಹೈಕಮಾಂಡ್‌ ಬಂದು ಹೋದ ಮೇಲೆ ಹೆಚ್ಚಾದ ಬಿಕ್ಕಟ್ಟು..!
  • ಬಾಗಲಕೋಟೆ ರೈತ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ಏಕೆ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಕರ್ನಾಟಕಕ್ಕೆ ಕೇಂದ್ರದ ಅನುದಾನ : ನಿರ್ಮಲಾ ಸೀತಾರಾಮನ್‌ ಲೆಕ್ಕ  ನೋಡಿದ್ರೆ ನಗು ಬರೋದು ಗ್ಯಾರಂಟಿ..!

ಕರ್ನಾಟಕಕ್ಕೆ ಕೇಂದ್ರದ ಅನುದಾನ : ನಿರ್ಮಲಾ ಸೀತಾರಾಮನ್‌ ಲೆಕ್ಕ  ನೋಡಿದ್ರೆ ನಗು ಬರೋದು ಗ್ಯಾರಂಟಿ..!

June 15, 2026
ವಿಜಯೇಂದ್ರ V/S ರೆಬಲ್ಸ್‌ : ಹೈಕಮಾಂಡ್‌ ಬಂದು ಹೋದ ಮೇಲೆ ಹೆಚ್ಚಾದ ಬಿಕ್ಕಟ್ಟು..!

ವಿಜಯೇಂದ್ರ V/S ರೆಬಲ್ಸ್‌ : ಹೈಕಮಾಂಡ್‌ ಬಂದು ಹೋದ ಮೇಲೆ ಹೆಚ್ಚಾದ ಬಿಕ್ಕಟ್ಟು..!

June 15, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.