ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆದ್ರೆ, ನಿಮಗೆ ಸಿಗುವ ಯಾವುದೇ ಗ್ಯಾರಂಟಿ ಸಿಗುವುದಿಲ್ಲ. ಗ್ಯಾರಂಟಿಗಳು ಕ್ಯಾನ್ಸಲ್ ಆಗುತ್ತವೆ. ಇದು ಸಿಎಂ ಡಿಕೆ ಶಿವಕುಮಾರ್ ನೀಡುತ್ತಿರುವ ಎಚ್ಚರಿಕೆ. SIRನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸೀರಿಯಸ್ ಆಗಿ ಪರಿಗಣಿಸಿದೆ. ಆದರೆ ಸುಪ್ರೀಂಕೋರ್ಟ್‌ಗೇ ಹೋದರೂ ಲಾಭವಿಲ್ಲ, ಇದು ಚುನಾವಣಾ ಆಯೋಗದ ಪರಮಾಧಿಕಾರ ಎನ್ನುವದು ಗೊತ್ತು. ಇಷ್ಟಕ್ಕೂ ಡಿಲೀಟ್ ಆಗುತ್ತಿರುವುದು ಎರಡು ಕಡೆ ವೋಟ್ ಇರುವವರದ್ದು, ಮತಪಟ್ಟವರದ್ದು.. ನಕಲಿ ಮತದಾರರದ್ದು, ಮೃತಪಟ್ಟವರದ್ದು.. ಇತ್ಯಾದಿಗಳದ್ದು ತಾನೇ. ಹೀಗಿದ್ದರೂ ಡಿಕೆ ಶಿವಕುಮಾರ್ ಅವರು ಈ ರೀತಿ ಪದೇ ಪದೇ ಹೇಳುತ್ತಿರುವುದು ಏಕೆ ಎಂದರೆ.. ಅದರ ಹಿಂದೆ ಎರಡು ತಂತ್ರಗಳಿವೆ.
ಅವರು ಅತ್ಯಂತ ಗಂಭೀರವಾದ ಎಚ್ಚರಿಕೆಗಳನ್ನು ನೀಡಿದ್ದಾರೆ. ಚುನಾವಣಾ ಆಯೋಗವು ಹಮ್ಮಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಬಡವರು ಮತ್ತು ವಲಸಿಗರ ಮತಗಳು ಕೈಬಿಟ್ಟು ಹೋಗುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಆ ಮೂಲಕ ಒಂದು ವರ್ಗದ ಮತದಾರರು ಎಸ್‌ಐಆರ್ ವಿರುದ್ಧ ನಿಲ್ಲಬೇಕು ಎನ್ನುವುದು ಅವರ ಅಪೇಕ್ಷೆ ಇರಬಹುದು. ಆದರೆ ಹೇಳುವುದಕ್ಕೆ ಆಗುವುದಿಲ್ಲ. ಅದು ಕಾನೂನು ಪ್ರಕಾರ ತಪ್ಪಾಗುತ್ತದೆ. ಹೀಗಾಗಿ ವೋಟರ್ ಐಡಿ ಕ್ಯಾನ್ಸಲ್ ಆದರೆ ಗ್ಯಾರಂಟಿ ಸ್ಕೀಂ ಸಿಗುವುದಿಲ್ಲ ಎಂದರೆ, ಅದು ಕಾನೂನು ಪ್ರಕಾರ ತಪ್ಪಾಗುವುದಿಲ್ಲ. ಅದು ಜಾಗೃತಿ ಆಗುತ್ತದೆ.
ಲಾಭ ನಂ.1 : ಅಕಸ್ಮಾತ್ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಯ್ತು ಎಂದಿಟ್ಟುಕೊಳ್ಳಿ, ಜನರ ಆಕ್ರೋಶ ತಿರುಗುವುದು ಕೇಂದ್ರದ ಮೇಲೆಯೇ ಹೊರತು, ರಾಜ್ಯ ಸರ್ಕಾರದ ಮೇಲೆ ಅಲ್ಲ.
ಲಾಭ ನಂ.2 : ಇನ್ನು ಎರಡನೆ ಲಾಭ ಏನೆಂದು ನೋಡಿದರೆ.. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಯ್ತು, ಆಗ ಎರಡು ಕಡೆ ವೋಟರ್ ಐಡಿ ತೋರಿಸಿ, ಎರಡೂ ಕಡೆ ಗ್ಯಾರಂಟಿ ಲಾಭ ಪಡೆಯುತ್ತಿದ್ದವರೂ ಕ್ಯಾನ್ಸಲ್ ಆಗುತ್ತಾರೆ. ಆಗ ಪ್ರಯತ್ನವೇ ಇಲ್ಲದೆ ಗ್ಯಾರಂಟಿಗೆ ಖರ್ಚಾಗುತ್ತಿದ್ದ ಹಣ ಉಳಿತಾಯವಾಗುತ್ತದೆ. ಒಂದಿಷ್ಟು ಹಣ ಉಳಿದರೂ, ಇತರೆ ಕೆಲಸಗಳಿಗೆ ಬಳಸಬಹುದು. ಅಂದರೆ ಪ್ರಯತ್ನವೇ ಇಲ್ಲದೆ ಗ್ಯಾರಂಟಿ ಸ್ಕೀಂ ಹಣವನ್ನು ಒಂದಿಷ್ಟು ಉಳಿಸಬಹುದು. ಅಷ್ಟೇ ಅಲ್ಲ, ಅಲ್ಲಿ ಗೊಂದಲವಾದರೆ ಆಗಲೂ ಜನ ಆಕ್ರೋಶಗೊಳ್ಳುವುದು ಕೇಂದ್ರದ ವಿರುದ್ಧವೇ ಹೊರತು, ರಾಜ್ಯ ಸರ್ಕಾರದ ಮೇಲೆ ಅಲ್ಲ.
ಯಾವ ದೃಷ್ಟಿಯಿಂದ ನೋಡಿದರೂ, SIRನಿಂದ ರಾಜ್ಯ ಸರ್ಕಾರಕ್ಕೆ ಹಾನಿಯಿಲ್ಲ. ಆದರೆ, ತಪ್ಪುಗಳಿಲ್ಲದಂತೆ ಎಸ್‌ಐಆರ್ ಪ್ರಕ್ರಿಯೆ ನಡೆಯಬೇಕು. ಅಷ್ಟೇ.
ಯಾರಾದರೂ ವೋಟರ್ ಐಡಿ ಪಟ್ಟಿಯಿಂದ ತಮ್ಮ ಹೆಸರನ್ನು ಕಳೆದುಕೊಂಡರೆ, ಅವರು ಕೇವಲ ಮತದಾನದ ಹಕ್ಕನ್ನು ಮಾತ್ರವಲ್ಲದೆ, ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗಬಹುದು. ಪ್ರತಿಯೊಬ್ಬ ನಾಗರಿಕರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಾಗೃತರಾಗಿರಬೇಕು. ಇದರ ಜೊತೆಯಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬೂತ್ ಮಟ್ಟದ ಏಜೆಂಟ್‌ಗಳನ್ನು (BLA) ನೇಮಿಸಿ, ಅಧಿಕಾರಿಗಳ ಮನೆ-ಮನೆ ಸಮೀಕ್ಷೆಯ ವೇಳೆ ಜತೆಯಲ್ಲಿದ್ದು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.



