ರಾಜದಾನಿ ಬೆಂಗಳೂರು ಭಾಗದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಜ್ಯದಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವುದು ಬೆಂಗಳೂರಿನಲ್ಲೇ. ಈ ಬೆಂಗಳೂರಿನ ಅಷ್ಟೂ ಕ್ಷೇತ್ರಗಳಿಗೆ 2 ಸಾವಿರ ಕೋಟಿ ಅನುದಾನ ಹಂಚಿಕೆಯಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಭರ್ಜರಿ ಅನುದಾನ ಸಿಕ್ಕಿದ್ದರೆ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಸಿಕ್ಕ ಅನುದಾನದ ಅರ್ಧ ಮೊತ್ತವೂ ಸಿಕ್ಕಿಲ್ಲ. ಅದಕ್ಕಿಂತಲೂ ವಿಚಿತ್ರ ಎಂದರೆ ವ್ಯಾಪ್ತಿಯಲ್ಲಿ ದೊಡ್ಡದಾಗಿರುವ ಕ್ಷೇತ್ರಗಳಿಗೂ ಅನುದಾನ ಇಲ್ಲ. ಅತೀ ಹೆಚ್ಚು ತೆರಿಗೆ ನೀಡುವ ಕ್ಷೇತ್ರಗಳಿಗೂ ಅನುದಾನ ಹೆಚ್ಚಾಗಿಲ್ಲ.
ಹೆಚ್ಚು ಅನುದಾನ ಪಡೆದ `ಕೈ’ ಕ್ಷೇತ್ರಗಳು
ಶಾಂತಿನಗರ – 100 ಕೋಟಿ ರೂ.
ಬ್ಯಾಟರಾಯನಪುರ – 100 ಕೋಟಿ ರೂ.
ಶಿವಾಜಿನಗರ – 100 ಕೋಟಿ ರೂ.
ಚಾಮರಾಜಪೇಟೆ – 100 ಕೋಟಿ ರೂ.
ಗೋವಿಂದರಾಜನಗರ – 100 ಕೋಟಿ ರೂ.
ವಿಜಯನಗರ – 100 ಕೋಟಿ ರೂ.
ಸರ್ವಜ್ಞ ನಗರ – 100 ಕೋಟಿ ರೂ.
ಪುಲಕೇಶಿನಗರ – 100 ಕೋಟಿ ರೂ.
ಹೆಬ್ಬಾಳ – 100 ಕೋಟಿ ರೂ.
ಬಿಟಿಎಂ ಲೇಔಟ್ – 100 ಕೋಟಿ ರೂ.
ಕಡಿಮೆ ಅನುದಾನ ಪಡೆದ `ಕೈ’ ಕ್ಷೇತ್ರಗಳು
ಸಿ.ವಿ ರಾಮನ್ ನಗರ – 40 ಕೋಟಿ ರೂ.
ಆನೇಕಲ್ – 45 ಕೋಟಿ ರೂ.
ಗಾಂಧಿನಗರ – 73 ಕೋಟಿ ರೂ.
ಕಡಿಮೆ ಅನುದಾನ ಪಡೆದ ಬಿಜೆಪಿ ಕ್ಷೇತ್ರಗಳು
ಚಿಕ್ಕಪೇಟೆ – 40 ಕೋಟಿ ರೂ.
ಮಹಾಲಕ್ಷ್ಮಿ – ಲೇಔಟ್ 40 ಕೋಟಿ ರೂ.
ಮಲ್ಲೇಶ್ವರಂ – 40 ಕೋಟಿ ರೂ.
ರಾಜಾಜಿನಗರ – 40 ಕೋಟಿ ರೂ.
ಬಸವನಗುಡಿ – 40 ಕೋಟಿ ರೂ.
ಜಯನಗರ – 40 ಕೋಟಿ ರೂ.
ಇವುಗಳಲ್ಲಿ ಮಹದೇವಪುರ ಕ್ಷೇತ್ರಕ್ಕೆ ಅನುದಾನ 10 ಕೋಟಿಗಿಂತ ಕಡಿಮೆ ಸಿಕ್ಕಿದೆ. ಆದರೆ ಮಹದೇವಪುರ ಕ್ಷೇತ್ರ ಬೆಂಗಳೂರಿನಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ಕ್ಷೇತ್ರ. ಬೆಂಗಳೂರಿನ ಒಟ್ಟಾರೆ ಟ್ಯಾಕ್ಸ್ ಸಂಗ್ರಹದ 26% ಟ್ಯಾಕ್ಸ್ ಸಂಗ್ರಹವಾಗುತ್ತದೆ.
2ನೇ ಸ್ಥಾನದಲ್ಲಿರುವುದು ಬ್ಯಾಟರಾಯನಪುರ. ಶೇ.9ರಷ್ಟು ತೆರಿಗೆ ನೀಡುವ ಕ್ಷೇತ್ರ. ಅಲ್ಲಿಗೆ ಕೃಷ್ಣ ಭೈರೇಗೌಡರು ಶಾಸಕರಾಗಿರುವ ಕಾರಣ 100 ಕೋಟಿ ಸಿಕ್ಕಿದೆ. ಚಾಮರಾಜಪೇಟೆ, ಚಿಕ್ಕಪೇಟೆ, ಶಿವಾಜಿನಗರ ಕ್ಷೇತ್ರಗಳಲ್ಲಿರುವುದು ಕಾಂಗ್ರೆಸ್ ಶಾಸಕರು. ಇಲ್ಲಿಗೂ ಅನುದಾನ ತಲಾ 100 ಕೋಟಿ ಬಂದಿದೆ.
ಆದರೆ ಗಾತ್ರದಲ್ಲಿ ಬೃಹತ್ ಆಗಿರುವ ಮಹದೇವಪುರ, ರಾಜರಾಜೇಶ್ವರಿ ನಗರ, ಸಿವಿ ರಾಮನ್ ನಗರ, ಆನೇಕಲ್ ಮೊದಲಾದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಕ್ಕಿಲ್ಲ.
ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 2,000 ಕೋಟಿ ರೂ. ಮೊತ್ತದ ಅನುದಾನ (Grant) ಹಂಚಿಕೆ ಮಾಡಿ ಕರ್ನಾಟಕ ಸರ್ಕಾರ(Karnataka Government) ಆದೇಶಿಸಿದೆ. ಈ ಪೈಕಿ ರಸ್ತೆ, ಚರಂಡಿ ಮತ್ತು ಪಾದಾಚಾರಿ ಮಾರ್ಗಗಳಿಗೆ 1,631 ಕೋಟಿ ರೂ. ನಾಗರಿಕ ಮೂಲಸೌಕರ್ಯ ಮತ್ತು ವಿಶೇಷ ಯೋಜನೆಗಳಿಗೆ 369 ಕೋಟಿ ರೂ. ಉಳಿದ 369 ಕೋಟಿ ಮೊತ್ತವನ್ನು ಉದ್ಯಾನಗಳು, ಸಮುದಾಯ ಭವನಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಕ್ರೀಡಾ ಮೂಲಸೌಕರ್ಯ, ಮಾರುಕಟ್ಟೆಗಳು, ಕೆರೆಗಳ ಅಭಿವೃದ್ಧಿ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳಿಗೆ ನೀಡಲಾಗಿದೆ.
ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಾದ ಚಾಮರಾಜಪೇಟೆ, ಶಿವಾಜಿನಗರ, ಗಾಂಧಿನಗರ, ಬಿಟಿಎಂ ಲೇಔಟ್ ಮತ್ತು ಕೃಷ್ಣ ಬೈರೇಗೌಡರ ಬೈಟರಾಯನಪುರ ಕ್ಷೇತ್ರಗಳಿಗೆ ತಲಾ ₹೧೦೦ ಕೋಟಿ ಸಿಂಹಪಾಲು ಸಿಕ್ಕಿದೆ. ಆದರೆ, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ₹40 ರಿಂದ ₹60 ಕೋಟಿ ಮಾತ್ರ ಹಂಚಿಕೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹೆಚ್ಚು ತೆರಿಗೆ ಪಾವತಿಸುವ ಐಟಿ ಕಾರಿಡಾರ್‌ಗಳ ಒಳರಸ್ತೆಗಳು ಗುಂಡಿಬಿದ್ದಿವೆ, ಆದರೂ ನಮ್ಮ ತೆರಿಗೆ ಹಣವನ್ನು ಬೇರೆ ಕ್ಷೇತ್ರಗಳ ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ” ಎಂದು ಬೆಂಗಳೂರು ನವನಿರ್ಮಾಣ ಪಾರ್ಟಿ (BNP) ಮತ್ತು ಸ್ಥಳೀಯ ನಿವಾಸಿಗಳ ಒಕ್ಕೂಟಗಳು ಸರ್ಕಾರನ್ನು ಪ್ರಶ್ನೆ ಮಾಡಿವೆ.



