ಮಾಜಿ ಸಚಿವ ಜಮೀರ್ ಅಹ್ಮದ್ ಅವರ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ವಿಶೇಷ ಎಂದರೆ ಮುಸ್ಲಿಂ ಸಂಘಟನೆಗಳಷ್ಟೇ ಅಲ್ಲ, ಲಿಂಗಾಯತ ಮಠಾಧೀಶರು ಜಮೀರ್ ಅಹ್ಮದ್ ಪರ ಹೋರಾಟಕ್ಕಿಳಿದಿರುವುದು. ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವುದು ಅಂಜುಮನ್-ಎ-ಇಸ್ಲಾಂ ಸಂಸ್ಥೆ, ಮುಸ್ಲಿಂ ಧಾರ್ಮಿಕ ಮುಖಂಡರು (ಮೌಲ್ವಿಗಳು) ಹಾಗೂ ಸ್ಥಳೀಯ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು. ಇವರ ಜೊತೆ ಕೈಜೋಡಿಸಿರುವುದು ಕೆಲವು ಲಿಂಗಾಯತ ಮಠಗಳೂ ಸೇರಿದಂತೆ ಹಿಂದ ಮಠಾಧೀಶರು. ಅಂದಹಾಗೆ ಡಿಸಿಎಂ ಕೇಳಿದರೆ ಮಿನಿಸ್ಟರ್ ಪೋಸ್ಟ್ ಆದರೂ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಕೆಲವು ಲಿಂಗಾಯತ ಸ್ವಾಮೀಜಿಗಳು ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸಂಪುಟದಿಂದ ಸ್ಥಾನ ಕೈತಪ್ಪಿದ್ದನ್ನು ವಿರೋಧಿಸಿದ್ದಾರೆ. ಜೊತೆಗೆ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡಬೇಕು ಎಂದು ಆಗ್ರಹ ಮಾಡುತ್ತಿದ್ಧಾರೆ. ಮುಸ್ಲಿಮೇತರ ಸಮುದಾಯಗಳ ಪ್ರಮುಖ ಧರ್ಮಗುರುಗಳು ಮತ್ತು ಸ್ವಾಮೀಜಿಗಳು ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಜಮೀರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಅವರು ಎಲ್ಲ ಧರ್ಮಗಳ ಮಠ-ಮಾನ್ಯಗಳಿಗೆ ಸಹಾಯ ಮಾಡುವ ಜಾತ್ಯತೀತ ನಾಯಕ ಎಂದು ಇವರು ಬೆಂಬಲ ಸೂಚಿಸಿದ್ದಾರೆ.
ಜಮೀರ್ ಪರ ಧ್ವನಿ ಎತ್ತಿದ್ದ ಲಿಂಗಾಯತ ಸ್ವಾಮೀಜಿಗಳು
ಮಹೇಶ್ವರಾನಂದ ಸ್ವಾಮೀಜಿ, ಕೊಪ್ಪಳದ ಬಂಜಾರ ಗುರುಪೀಠ
ಜಮೀರ್ ಅಹ್ಮದ್ ಅವರು ಕೇವಲ ಮುಸ್ಲಿಂ ನಾಯಕ ಮಾತ್ರವಲ್ಲ, ಅವರೊಂದು ದೊಡ್ಡ ಶಕ್ತಿ. ಅವರಿಗೆ ಕೇವಲ ಸಚಿವ ಸ್ಥಾನ ಮಾತ್ರವಲ್ಲ, ಮುಖ್ಯಮಂತ್ರಿ (CM) ಹುದ್ದೆಗೇರುವ ಎಲ್ಲಾ ಅರ್ಹತೆಗಳಿವೆ. ರಾಜ್ಯದಲ್ಲಿ ಒಂದು ಕೋಟಿ 40 ಲಕ್ಷ ಮುಸ್ಲಿಮರು, 2 ಕೋಟಿ ದಲಿತರು ಇದ್ದಾರೆ, ಅವರು ಮುಸ್ಲಿಮರ ನಾಯಕ ಮಾತ್ರ ಅಲ್ಲ, ಅಹಿಂದ ವರ್ಗದ ನಾಯಕ”
ವಿರಕ್ತ ಮಠದ ಶ್ರೀ ಕುಮಾರೇಶ್ವರ ಸ್ವಾಮೀಜಿ (ಯಕ್ಕುಂದಿ, ಬೆಳಗಾವಿ)
ಮೀರ್ ಅವರು ಎಲ್ಲಾ ಧರ್ಮದ ಸಂಸ್ಥೆಗಳನ್ನು ಸಮಾನವಾಗಿ ಕಾಣುವ ನಾಯಕನಾಗಿದ್ದು, ಭವಿಷ್ಯದಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳಿವೆ
ಇವರಷ್ಟೇ ಅಲ್ಲದೆ ಇನ್ನೂ ಕೆಲವು ಲಿಂಗಾಯತ ಮಠಾಧೀಶರು ಸ್ವಾಮೀಜಿಗಳು ಜಮೀರ್ ಪರ ಧ್ವನಿ ಎತ್ತಿದ್ಧಾರೆ. ಬೆಂಗಳೂರಿನ ಚಾಮರಾಜಪೇಟೆ ಮತ್ತು ಫ್ರೀಡಂ ಪಾರ್ಕ್ ಪ್ರತಿಭಟನೆಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೂಡಾ ಪಾಲ್ಗೊಂಡು ಧ್ವನಿ ಎತ್ತಿದ್ಧಾರೆ.
ಅಂಜುಮನ್‌ನ ಬಶೀರ್ ಅಹಮದ್ ಜಹಾಗೀರದಾರ್, ಮೌಲಾನಾ ಶೇಖ್ ಫರೀದ್ ಮತ್ತು ಮೌಲಾನಾ ರಫೀಕ್ ಸಾಬ್, ಮೌಲಾನಾ ಆರಿಫ್ ಸಾಬ್ ಮತ್ತು ಆತಿಫ್ ಸಾಬ್, ಇಮ್ರಾನ್ ಬಡೇಸಾಬ್ ಮತ್ತು ಮೊಹಮ್ಮದ್ ರಫೀಕ್, ಚಂದ್ ಪಾಷಾ ಮತ್ತು ಹಬೀಬ್ ಗೋನಾಳ್, ಫಾರೂಕ್ ಯರಗೇರಾ ಮೊದಲಾದ ನಾಯಕರು ಸ್ಥಳೀಯವಾಗಿ ಪ್ರತಿಭಟನೆ ನಡೆಸ್ತಿದ್ಧಾರೆ. ಜಮೀರ್ ಪರ ಧ್ವನಿ ಎತ್ತಿರುವ ನಾಯರ ಸತೀಶ್ ಜಾರಕಿಹೊಳಿ ಮಾತ್ರ.
ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಜಮೀರ್ ಅಹ್ಮದ್ ಅವರೀಗ ಡಿಕೆ ಶಿವಕುಮಾರ್ ಕ್ಯಾಬಿನೆಟ್ಟಿನಲ್ಲಿ ಏನೇನೂ ಅಲ್ಲವಾಗಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ. ಡಿಸಿಎಂ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿದರೆ ಸಚಿವ ಸ್ಥಾನವಾದರೂ ಸಿಗಬಹುದು ಎಂಬ ನಿರೀಕ್ಷೆ ಜಮೀರ್ ಬೆಂಬಲಿಗರಿಗೆ ಇದ್ದಂತಿದೆ.



