Friday, June 5, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

SpeciallU by SpeciallU
June 4, 2026
in Politics
Reading Time: 1 min read
0 0
0
ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಸ್ಮಶಾನಕ್ಕೆ ಹೋದ ಹೆಣ.. ಸರ್ಕಾರದವರಿಗೆ ಕೊಟ್ಟ ಹಣ ವಾಪಸ್‌ ಬರೋದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಗಾದೆ. ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ. ಅಲ್ವಾ.. ಆದರೆ.. ಆ ಗಾದೆಯೂ ಸುಳ್ಳಾಗಿರುವುದು ಪ.ಬಂಗಾಳದಲ್ಲಿ. ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ದುಡ್ಡು ಪಡೆದುಕೊಂಡಿದ್ದ ಟಿಎಂಸಿ ನಾಯಕರು ಈಗ ಆ ಹಣವನ್ನ ವಾಪಸ್‌ ಮಾಡ್ತಿದ್ದಾರೆ. ಇದು ಅಚ್ಚರಿ.. ವಿಸ್ಮಯ.. ಕುತೂಹಲ.. ಪ್ರಳಯ ಕಾಲ ಎಂದರೂ ತಪ್ಪಿಲ್ಲ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ಬಾಂಗ್ಲಾ ವಲಸಿಗರು ದೇಶ ತೊರೆಯುತ್ತಿದ್ದಾರೆ. ಟಿಎಂಸಿ ಸಂಸದರ ಮೇಲೇ ಅಟ್ಯಾಕ್‌ ಆಗುತ್ತಿವೆ. ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್‌ ಬ್ಯಾನರ್ಜಿಯನ್ನೇ ಜನರೇ ಕಲ್ಲು, ಮೊಟ್ಟೆ ಹೊಡೆದು ಓಡಿಸಿದ್ದಾರೆ.  ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ  ವಾಪಸ್‌ ಕೊಡ್ತಿದ್ಧಾರೆ.

Related posts

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕ : ಪ.ಬಂಗಾಳದಲ್ಲಿ ಬಿಜೆಪಿ ಭಯ

ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಜನರಿಂದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಸಾಕಷ್ಟು ಹಣ ವಸೂಲಿ ಮಾಡಿದ್ದರು.  ಇದಕ್ಕೆ ‘ಕಟ್‌ ಮನಿ’ ಅಥವಾ ‘ಕಮಿಷನ್‌ ಹಣ’ ಅಥವಾ ‘ಸುಲಿಗೆ ಹಣ’ ಎಂದೂ ಕರೀತಾ ಇದ್ರು. ಆದರೆ ಹಾಗೆ ಹಣ ಪಡೆದಿದ್ದವರು ಈಗ ಭಯ ಬಿದ್ದಿದ್ದಾರೆ.

ಸರ್ಕಾರದ ಕಾನೂನು ಕ್ರಮ ಮತ್ತು ಜನರಿಂದ ದಾಳಿಯ ಭೀತಿ ಎರಡೂ ಕಾರಣ. ಟಿಎಂಸಿ ನಾಯಕರು ಹೀಗೆ ಲಂಚದ ಹಣ ಮರಳಿಸುತ್ತಿರುವ ಅತ್ಯರೂಪದ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ಬಂಗಾಳದ ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಕೆಲ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಜತೆಗೆ ಈ ಹಿಂದೆ ಹಣಕ್ಕೆ ಗೂಂಡಾಗಿರಿ ಮಾಡಿದ್ದ ಹಲವು ಟಿಎಂಸಿ ನಾಯಕರ ಮೇಲೆ ಜನರೇ ದಾಳಿ ನಡೆಸಿದ ಹಲವು ಘಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ ‘ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ’ ಎಂದು ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ವಸೂಲಿ ಮಾಡಿದ ಕಮಿಷನ್‌ ಹಣವನ್ನು ತಾವಾಗಿಯೇ ಹಿಂತಿರುಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಂಪ್ಲೇಂಟ್‌ ಕೊಡಬೇಡಿ, ದೂರು ನೀಡಬೇಡಿ ಎಂದು ಜನರ ಕಾಲಿಗೆ ಬೀಳುತ್ತಿದ್ಧಾರೆ.

ದಕ್ಷಿಣ-24 ಪರಗಣ ಜಿಲ್ಲೆ ನಾಮ್‌ಖಾನಾದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, ‘ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ಕೊಡಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ 45 ಮಂದಿಯಿಂದ ಕಮಿಷನ್‌ ರೂಪದಲ್ಲಿ ತಲಾ 5000 ರು. ಸುಲಿಗೆ ಮಾಡಿದ್ದರು. ಇದೀಗ ಆ ನಾಯಕ, ತಾನು ಪೀಕಿದ್ದ ತಲಾ 5000 ರು. ಹಣವನ್ನು, ಎಲ್ಲ 45 ಫಲಾನುಭವಿಗಳಿಗೂ ಸೋಮವಾರ ಬಹಿರಂಗವಾಗಿಯೇ ವಾಪಸ್‌ ನೀಡಿದ್ದಾನೆ. ಇನ್ನು ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಎಂಬಲ್ಲಿ ಪಂಚಾಯತ್‌ ಸದಸ್ಯನೊಬ್ಬ ಶಾಲಾ ಮೈದಾನದಲ್ಲಿ ಜನರನ್ನು ಒಟ್ಟು ಸೇರಿಸಿ ಹಣ ಮರಳಿಸಿದ್ದಾನೆ. ಇನ್ನೂ ಕೆಲವು ಕಡೆ ಸುಲಿಗೆ ಹಣ ಪಡೆದಿದ್ದ ಟಿಎಂಸಿ ನಾಯಕರು ನಾಪತ್ತೆಯಾಗಿದ್ದಾರೆ. ಆದರೆ ಬಂಧನ ಮತ್ತು ಜನರ ಭಯಕ್ಕೆ ಬಿದ್ದ ಅವರ ಪೋಷಕರು ಫಲಾನುಭವಿಗೆ ಹಣ ಮರಳಿಸಿದ್ದಾರಂತೆ. ಹೀಗಾಗಿಯೇ ಗೆದ್ದಿರುವ ಬಹುತೇಕ ಶಾಸಕರು ಮಮತಾ ಬ್ಯಾನರ್ಜಿ ಅವರ ಜೊತೆ ಗುರುತಿಸಿಕೊಳ್ಳೋಕೆ ಹೆದರುತ್ತಿದ್ದಾರೆ.

Tags: #ಮಮತಾ ಬ್ಯಾನರ್ಜಿ #ಭ್ರಷ್ಟಾಚಾರ #ಪಶ್ಚಿಮ ಬಂಗಾಳ #Mamata Banerjee #Corruption #West Bengal
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!
  • ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ
  • ಕರಡಿಗೆಯಲ್ಲಿನ ಶಿವಲಿಂಗ ʻಭಿನ್ನʼವಾಗಿದ್ದರೆ ಪೂಜೆ ಮಾಡಬೇಕಾ.. ಬೇಡವಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

June 4, 2026
ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

June 4, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.