Friday, July 3, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

SIRನ ಡೇಂಜರಸ್‌ ಮುಖ ಬಯಲಿಗೆಳೆದ ಕುಮಾರಸ್ವಾಮಿ

SpeciallU by SpeciallU
July 3, 2026
in Politics
Reading Time: 1 min read
0 0
0
SIRನ ಡೇಂಜರಸ್‌ ಮುಖ ಬಯಲಿಗೆಳೆದ ಕುಮಾರಸ್ವಾಮಿ

SIR. ಇದು ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ. ಮೃತಪಟ್ಟವರನ್ನು ತೆಗೆಯುವ, ಎರಡು ಕಡೆ ವೋಟ್‌ ಹಾಕ್ತಿರೋವ್ರನ್ನು ಒಂದು ಕಡೆ ಡಿಲೀಟ್‌ ಮಾಡುವ, ಅಕ್ರಮ ವಲಸಿಗರನ್ನು ತೆಗೆದುಹಾಕುವ ಪ್ರಕ್ರಿಯೆ. ಆದರೆ ಇದೇ SIR ಮೂಲಕ ಅಕ್ರಮ ವಲಸಿಗರನ್ನು ರಕ್ಷಿಸುವ, ಅವರಿಗೆ ಮತದಾರರ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ನಡೆಯುತ್ತಿದೆಯೇ.. ಅಂತಾದ್ದೊಂದು ಅನುಮಾನಕ್ಕೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ. ಅದೂ ವಿಡಿಯೋ ಸಾಕ್ಷಿ ಸಮೇತ. ಕುಮಾರಸ್ವಾಮಿ ಬಯಲಿಗೆಳೆದ ವಿಡಿಯೋವನ್ನು ರೀ-ಟ್ವೀಟ್‌ ಮಾಡುವ ಮೂಲಕ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಉಗ್ರ ಅತ್ಯುಗ್ರ ಹೋರಾಟ ನಡೆಸಿದರು.
ರಾಮನಗರ ಟೌನ್ ನಗರಸಭೆಯ ವಾರ್ಡ್ ನಂಬರ್-23ರ ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಬಿಎಲ್‌ಒ (BLO) ಅಧಿಕಾರಿಗಳು ಸಾರ್ವಜನಿಕರನ್ನು ಒಟ್ಟುಗೂಡಿಸಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ಧಾರೆ. ಮನೆ-ಮನೆಗೆ ಹೋಗಿ ಅರ್ಜಿ ಹಂಚಬೇಕಾದ ಅಧಿಕಾರಿಗಳು ಕಲ್ಯಾಣ ಮಂಟಪದಲ್ಲಿ “ಎಸ್‌ಐಆರ್ ಜಾತ್ರೆ” ಮಾಡುತ್ತಿದ್ದಾರೆ. ಹೀಗೇಕೆ.. ಇದು ಕುಮಾರಸ್ವಾಮಿ ಪ್ರಶ್ನೆ.

ನಿಯಮಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸಬೇಕು. ಆದರೆ, ರಾಮನಗರದ ಟಿಪ್ಪುನಗರದ ಕಲ್ಯಾಣ ಮಂಟಪವೊಂದರಲ್ಲಿ ನಿಯಮ ಉಲ್ಲಂಘಿಸಿ ನೂರಾರು ಜನರನ್ನು ಒಟ್ಟಿಗೆ ಸೇರಿಸಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.

Related posts

ಮತ್ತೊಮ್ಮೆ ನಿಷ್ಕ್ರಿಯವಾದ ಹೈಕಮಾಂಡ್‌ : ಬಿಜೆಪಿಗೆ ಬಿಜೆಪಿಯೇ ವಿಲನ್

ಗೃಹಜ್ಯೋತಿ ರೀವ್ಯೂ ಶುರು : ಅಧಿಕಾರಿಗಳು ಬಂದಾಗ ಈ ದಾಖಲೆ ಮರೆಯಬೇಡಿ

24 ವರ್ಷಗಳ ಬಳಿಕ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ವಲಸಿಗರನ್ನು, ವಿಶೇಷವಾಗಿ ಬಾಂಗ್ಲಾದೇಶದ ನಾಗರಿಕರಿಗೆ ʻಭಾರತೀಯ ಮತದಾರರ ಗುರುತಿನ ಚೀಟಿʼ ನೀಡುವ ಸಂಚು ಎನ್ನುವ ಅನುಮಾನ ಮೂಡುತ್ತಿದೆ.

ಕುಮಾರಸ್ವಾಮಿ ಇದನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದರೆ ಗುರುವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಆರೋಪಕ್ಕೆ ಸಂಬಂಧಿಸಿ ವಿಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಿಯಮದಂತೆ ಬಿಎಲ್‌ಒಗಳು ಮನೆ-ಮನೆಗೆ ಹೋಗಬೇಕು. ಆದರೆ, ರಾಮನಗರದಲ್ಲಿ ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಕೂರಿಸಿ ಎಸ್‌ಐಆರ್‌ ಜಾತ್ರೆ ನಡೆಸುತ್ತಿದ್ದಾರೆ. ಈ ಮುಖಾಂತರ ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ನುಸುಳುಕೋರರನ್ನು ಪೋಷಿಸಿ ಅವರಿಗೆ ಮತದಾನದ ಹಕ್ಕು ಕೊಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ದೂರಿದರು.

ರಾಮನಗರ ಸೇರಿ ರಾಜ್ಯದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಳುಮಾಡಲು ಹೊರಟಿದೆ. ಅದಕ್ಕೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವೇ ಸಾಕ್ಷಿ. ಒಂದು ಕೈಯಲ್ಲಿ ಸಂವಿಧಾನ ಹಿಡಿದು ಶೋ ಮಾಡುವ ಪಕ್ಷದ ಹೀನ ಕೆಲಸ ಇದಾಗಿದೆ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇದಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿರುವ ಎಲ್ಲಾ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ ಆರೋಪ ಮಾಡಿದರು. ಸುದ್ದಿಗೋಷ್ಟಿ ಮಾಡಿದರು. ಇದಕ್ಕೆ ಬಿಜೆಪಿ ನಾಯಕರೂ ದನಿ ಗೂಡಿಸಿದರು. ತಮ್ಮ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕುಮಾರಸ್ವಾಮಿ ರಿಲೀಸ್‌ ಮಾಡಿದ್ದ ವಿಡಿಯೋವನ್ನು ರೀ-ಟ್ವೀಟ್‌, ಶೇರ್‌ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಿದರು.

Tags: #SIR #ಚುನಾವಣಾಆಯೋಗ #ಕುಮಾರಸ್ವಾಮಿ #ರಾಮನಗರ #ಡಿಕೆಶಿವಕುಮಾರ್ #SIR #Election Commission #Kumaraswamy #Ramanagar #DKShivakumar
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಮತ್ತೊಮ್ಮೆ ನಿಷ್ಕ್ರಿಯವಾದ ಹೈಕಮಾಂಡ್‌ : ಬಿಜೆಪಿಗೆ ಬಿಜೆಪಿಯೇ ವಿಲನ್
  • ಹಾವು ಕಚ್ಚಿದಾಗ ಬಾಯಲ್ಲಿ ವಿಷ ಹೀರುವ ದುಸ್ಸಾಹಸ ಬೇಡ : ಏನಾಗುತ್ತೆ..?
  • SIRನ ಡೇಂಜರಸ್‌ ಮುಖ ಬಯಲಿಗೆಳೆದ ಕುಮಾರಸ್ವಾಮಿ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಮತ್ತೊಮ್ಮೆ ನಿಷ್ಕ್ರಿಯವಾದ ಹೈಕಮಾಂಡ್‌ : ಬಿಜೆಪಿಗೆ ಬಿಜೆಪಿಯೇ ವಿಲನ್

ಮತ್ತೊಮ್ಮೆ ನಿಷ್ಕ್ರಿಯವಾದ ಹೈಕಮಾಂಡ್‌ : ಬಿಜೆಪಿಗೆ ಬಿಜೆಪಿಯೇ ವಿಲನ್

July 3, 2026
ಹಾವು ಕಚ್ಚಿದಾಗ ಬಾಯಲ್ಲಿ ವಿಷ ಹೀರುವ ದುಸ್ಸಾಹಸ ಬೇಡ : ಏನಾಗುತ್ತೆ..?

ಹಾವು ಕಚ್ಚಿದಾಗ ಬಾಯಲ್ಲಿ ವಿಷ ಹೀರುವ ದುಸ್ಸಾಹಸ ಬೇಡ : ಏನಾಗುತ್ತೆ..?

July 3, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.