ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಬಗ್ಗೆ ಜನರಿಗೆ ಗೊತ್ತು. ಪತ್ನಿಯಾಗಿದ್ದರೂ ದೂರ ಇರುವ ಬಗ್ಗೆಯೂ ಗೊತ್ತು. ಸೋದರ, ಸೋದರಿಯರ ಬಗ್ಗೆಯೂ ಗೊತ್ತು. ಆದರೆ ಮೋದಿಯವರ ಅತ್ಯಾಪ್ತ ಸ್ನೇಹಿತರು ಯಾರು..? ಆ ಪ್ರಶ್ನೆ ಕೇಳಿದರೆ ಬಹುಶಃ ಪ್ರತಿಯೊಬ್ಬರೂ ಕೊಡುವ ಉತ್ತರ ಅಮಿತ್ ಶಾ ಹೆಸರು. ಆದರೆ ಅಮಿತ್ ಶಾ ಅಲ್ಲದೆ ಇನ್ನೂ ಕೆಲವರು ಪ್ರಧಾನಿಯವರ ಅಧಿಕೃತ ನಿವಾಸದಲ್ಲೇ ವಾಸ ಮಾಡ್ತಿದ್ಧಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ದೆಹಲಿಯ ಅಧಿಕೃತ ನಿವಾಸದಲ್ಲಿ (7, ಲೋಕ ಕಲ್ಯಾಣ ಮಾರ್ಗ) ಪ್ರಕೃತಿ ಮತ್ತು ಮೂಕ ಪ್ರಾಣಿಗಳೊಂದಿಗೆ ಹೊಂದಿರುವ ವೈಯಕ್ತಿಕ ಒಡನಾಟ ಇಡೀ ದೇಶಕ್ಕೆ ಗೊತ್ತು. ಮ್ಮ ನಿವಾಸದಲ್ಲಿರುವ ನವಿಲುಗಳು ಮತ್ತು ಹಸುಗಳನ್ನು ತಮ್ಮ ವೈಯಕ್ತಿಕ “ಸ್ನೇಹಿತರು” ಎಂದೇ ಕರೆಯುತ್ತಾರೆ ಮೋದಿ.
ನವಿಲುಗಳೊಂದಿಗೆ ಆತ್ಮೀಯತೆ
ಮೋದಿ ಅವರು ಪ್ರತಿದಿನ ಮುಂಜಾನೆ ಯೋಗ ಮತ್ತು ನಡಿಗೆ ಮಾಡುವಾಗ ಅಲ್ಲಿನ ನವಿಲುಗಳಿಗೆ ತಮ್ಮ ಕೈಯಾರೆ ಧಾನ್ಯಗಳನ್ನು ತಿನ್ನಿಸುವುದು ಅವರ ದಿನಚರಿಯಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ.. ಒಮ್ಮೆ ಕಚೇರಿಯಲ್ಲಿ ಗಂಭೀರವಾದ ರಾಜಕೀಯ ಸಭೆ ನಡೆಯುತ್ತಿದ್ದಾಗ, ಹಸಿದ ನವಿಲೊಂದು ಕಿಟಕಿಯ ಗಾಜನ್ನು ಕುಟ್ಟುತ್ತಿರುವುದನ್ನು ಕಂಡು, ಮೋದಿ ಸಭೆಯನ್ನೇ ಮಧ್ಯದಲ್ಲಿ ನಿಲ್ಲಿಸಿ ಅದಕ್ಕೆ ಆಹಾರ ನೀಡಲು ಸಿಬ್ಬಂದಿಗೆ ಸೂಚಿಸಿದ್ದರು ಎಂದು ಅಮಿತ್ ಶಾ ನೆನಪಿಸಿಕೊಂಡಿದ್ದರು.
ಮೋದಿಯ ಇನ್ನೊಬ್ಬ ಬೆಸ್ಟ್ ಫ್ರೆಂಡ್ ಪುಂಗನೂರು ಹಸು
ಮೋದಿಯವರ ನಿವಾಸದಲ್ಲಿ ಆಂಧ್ರಪ್ರದೇಶ ಮೂಲದ, ಜಗತ್ತಿನ ಅತಿ ಚಿಕ್ಕ ಹಸುವಿನ ತಳಿಗಳಲ್ಲೊಂದಾದ ಅಪರೂಪದ ‘ಪುಂಗನೂರು’ ಗಿಡ್ಡ ತಳಿಯ ಹಸುಗಳನ್ನು ಸಾಕಲಾಗಿದೆ. ಇತ್ತೀಚೆಗಷ್ಟೇ ಅವರ ನಿವಾಸದ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ಮೋದಿ ಅದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟು, ಹಣೆಗೆ ತಿಲಕವಿಟ್ಟು ಆಶೀರ್ವದಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಪುಂಗನೂರು ತಳಿ ಜಗತ್ತಿನ ಅತ್ಯಂತ ಸಣ್ಣ ಗಾತ್ರದ ಹಸುಗಳಾಗಿದ್ದು, ಕೇವಲ 70 ರಿಂದ 90 ಸೆಂಟಿಮೀಟರ್ (ಸುಮಾರು 2.5 ರಿಂದ 3 ಅಡಿ) ಎತ್ತರವಿರುತ್ತವೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶಕ್ಕೆ ಸೇರಿದ ಅಪರೂಪದ ಸ್ವದೇಶಿ ತಳಿ ಇದು. ಈ ಹಸುಗಳು ನೀಡುವ ಹಾಲು ಅತ್ಯಂತ ಪೌಷ್ಟಿಕಾಂಶಯುಕ್ತವಾಗಿದ್ದು, ಹೆಚ್ಚಿನ ಕೊಬ್ಬಿನಾಂಶ (Fat) ಮತ್ತು ಔಷಧೀಯ ಗುಣಗಳನ್ನು ಹೊಂದಿರುತ್ತದೆ. ತಿರುಪತಿ ತಿಮ್ಮಪ್ಪನ ಜೇನುತುಪ್ಪ ಮತ್ತು ಪ್ರಸಾದದ ಸಿದ್ಧತೆಗೂ ಈ ಹಸುವಿನ ಹಾಲನ್ನು ಬಳಸಲಾಗುತ್ತದೆ
ಲಂಗೂರ್ (ಕೋತಿಗಳು): ಪ್ರಧಾನಿ ನಿವಾಸದ ಸುತ್ತಮುತ್ತ ವಾಸಿಸುವ ಲಂಗೂರ್‌ಗಳಿಗೂ ಮೋದಿ ತಮ್ಮ ಕೈಯಾರೆ ಹಣ್ಣುಗಳನ್ನು ನೀಡುವ ಮೂಲಕ ಮರುಭೂಮಿಯ ಕಡೆಯ ಪ್ರಕೃತಿ ಪ್ರೇಮವನ್ನು ನೆನಪಿಸುತ್ತಾರೆ.
ನಾಯಿಗಳ ಮೇಲಿನ ಪ್ರೀತಿ: ಅವರು ಭಾರತೀಯ ಮುಧೋಳ ತಳಿಯ ನಾಯಿಗಳ (Mudhol Hound) ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದು, ದೇಶದ ಭದ್ರತಾ ಪಡೆಗಳಲ್ಲಿ ಸ್ವದೇಶಿ ತಳಿಯ ನಾಯಿಗಳನ್ನು ಬಳಸಲು ಪ್ರೇರೇಪಿಸಿದ್ದಾರೆ.



