ತಮಿಳುನಾಡು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ ಅಣ್ಣಾಮಲೈ ರಾಜೀನಾಮೆಯನ್ನು ಮುಲಾಜಿಲ್ಲದೆ ಅಂಗೀಕಾರ ಮಾಡಿದೆ ಬಿಜೆಪಿ. ರಾಜೀನಾಮೆ ಅಂಗೀಕಾರವಾದ ಬಳಿಕ ಅಣ್ಣಾಮಲೈ ಹೊಸ ರಾಜಕೀಯ ಚಳುವಳಿ ಆರಂಭ ಮತ್ತು ರಾಜಕೀಯ ಪಯಣದ ಮುಂದಿನ ಹಂತ ಘೋಷಣೆ ಮಾಡಿದ್ಧಾರೆ. ರಾಜೀನಾಮೆಗೂ ಮೊದಲು ದೆಹಲಿಗೆ ಹೋಗಿದ್ದ ಅಣ್ಣಾಮಲೈ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದರು. ಮೋದಿಯವರ ಭೇಟಿ ಸಾಧ್ಯವಾಗಲೇ ಇಲ್ಲ. ಚೆನ್ನೈಗೆ ವಾಪಸ್ ಬಂದು ಅಣ್ಣಾಮಲೈ ರಾಜೀನಾಮೆ ಘೋಷಣೆ ಮಾಡಿದ್ದಷ್ಟೇ ಅಲ್ಲ, ತಮ್ಮ ಹೊಸ ಗುರಿಯನ್ನೂ ಮುಂದಿಟ್ಟಿದ್ಧಾರೆ. ಅಣ್ಣಾಮಲೈ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವೇ ನಡೆದಿಲ್ಲ ಎನ್ನಲಾಗುತ್ತಿದೆ.
: 2020 ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ ಇವರು, ಜುಲೈ 2021 ರಲ್ಲಿ ತಮಿಳುನಾಡು ಬಿಜೆಪಿ ಘಟಕದ ಅತ್ಯಂತ ಕಿರಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ತಮಿಳುನಾಡಿನಲ್ಲಿ ಬಿಜೆಪಿಯ ಪ್ರಚಾರ ಮತ್ತು ಅಸ್ತಿತ್ವವನ್ನು ಬಲಪಡಿಸಲು ಶ್ರಮಿಸಿದವರು. ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ಮುಖವಾಗಿದ್ದರಿಂದ, ಅವರು ರಾಜೀನಾಮೆ ನೀಡದಂತೆ ತಡೆಯಲು ಪಕ್ಷದ ರಾಷ್ಟ್ರೀಯ ನಾಯಕತ್ವವು ಸಾಕಷ್ಟು ಪ್ರಯತ್ನ ನಡೆಸಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ಪ್ರಮುಖರಾದ ನಿತಿನ್ ನಬಿನ್ ಅವರೊಂದಿಗೆ ಸರಣಿ ಸಭೆಗಳು ನಡೆದಿದ್ದವು. ಈ ಸಭೆಗಳಲ್ಲಿ ಅಣ್ಣಾಮಲೈ ಅವರ ಅಸಮಾಧಾನ ಮತ್ತು ಬೇಡಿಕೆಗಳನ್ನು ಆಲಿಸಿದ ಹೈಕಮಾಂಡ್ ನಾಯಕರು, ಪಕ್ಷದಲ್ಲೇ ಮುಂದುವರಿಯುವಂತೆ ಮನವೊಲಿಸಲು ಯತ್ನಿಸಿದರು. ಅವರಿಗೆ ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಲು ಮತ್ತು ಸಂಸತ್ತ ಪ್ರವೇಶಿಸಲು ರಾಜ್ಯಸಭಾ (Rajya Sabha) ಸ್ಥಾನದ ಆಫರ್ ನೀಡಲಾಗಿತ್ತು. ತಮಿಳುನಾಡು ರಾಜಕಾರಣದಿಂದ ಸ್ವಲ್ಪ ದೂರವಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಪ್ರಮುಖ ಹುದ್ದೆ ಅಥವಾ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕೋರಲಾಗಿತ್ತು. ಆದರೆ ಅಣ್ಣಾಮಲೈ ಒಪ್ಪಲೇ ಇಲ್ಲ.
ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ನಾಯಕರ ನಿರ್ಧಾರ ಅಣ್ಣಾಮಲೈ ಅವರಿಗೆ ತೀವ್ರ ಅಸಮಾಧಾನ ತಂದಿತ್ತು. ಬಿಜೆಪಿ ಸ್ವತಂತ್ರವಾಗಿ ಬೆಳೆಯಬೇಕೆಂಬುದು ಅವರ ಹಠವಾಗಿತ್ತು. ರಾಜೀನಾಮೆ ಬಳಿಕ ಮಾತನಾಡಿದ ಅವರು, “ನಾನು ಬಿಜೆಪಿ ವ್ಯಕ್ತಿಯೋ ಅಥವಾ ತಮಿಳಿಗನೋ ಎಂಬ ದೊಡ್ಡ ಆಂತರಿಕ ಸಂಘರ್ಷ ನನ್ನಲ್ಲಿತ್ತು” ಎಂದು ಹೇಳುವ ಮೂಲಕ ಪ್ರಾದೇಶಿಕ ಆಸ್ಮಿತೆಗೆ ಆದ್ಯತೆ ನೀಡಿದರು. : ತಮಿಳುನಾಡಿನಲ್ಲಿ ಪರ್ಯಾಯ ಮತ್ತು ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಲು ಸ್ವತಂತ್ರ ವೇದಿಕೆಯೊಂದರ ಅಗತ್ಯವಿದೆ ಎಂದು ಮನಗಂಡಿದ್ದರಿಂದ ಅವರು ಎಲ್ಲಾ ಆಫರ್‌ಗಳನ್ನು ತಿರಸ್ಕರಿಸಿದರು.
ತಮಿಳುನಾಡು ಬಿಜೆಪಿಯ ಪ್ರಸ್ತುತ ಅಧ್ಯಕ್ಷರಾದ ನೈನಾರ್ ನಾಗೇಂದ್ರನ್ ಅವರು ಅಣ್ಣಾಮಲೈ ನಿರ್ಗಮನವನ್ನು ತೀರಾ ಸಾಧಾರಣವಾಗಿ ಪರಿಗಣಿಸಿದ್ದಾರೆ.
“ಯಾವುದೇ ನಷ್ಟವಿಲ್ಲ”: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಭಾರತೀಯ ಜನತಾ ಪಕ್ಷವು ವಿಶ್ವದ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಯಾವುದೇ ವ್ಯಕ್ತಿಯಿಂದ ಪಕ್ಷ ನಿಲ್ಲುವುದಿಲ್ಲ ಎಂದು ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ ಆದರೆ ಕೇಂದ್ರದಲ್ಲಿ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಉತ್ತಮ ಹಾಗೂ ಗೌರವಯುತ ಸಂಬಂಧವನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಕೇಂದ್ರ ನಾಯಕತ್ವವೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆ. ಬಿಜೆಪಿಯ ಒಳ ವಲಯದಲ್ಲಿ ಮತ್ತು ಆರ್‌ಎಸ್‌ಎಸ್ (RSS) ಮಟ್ಟದಲ್ಲಿ ಅಣ್ಣಾಮಲೈ ಅವರ ನಿರ್ಗಮನದ ಕುರಿತು ತೀವ್ರ ಆತಂಕಗಳಿರುವುದು ನಿಜ.
ಅಣ್ಣಾಮಲೈ ಅವರಂತಹ ತಳಮಟ್ಟದ, ಪ್ರಭಾವಿ ಹಿಂದುತ್ವ ಮತ್ತು ರಾಷ್ಟ್ರೀಯತಾವಾದಿ ನಾಯಕನನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗದಿದ್ದಕ್ಕೆ ಆರ್‌ಎಸ್‌ಎಸ್‌ನ ಕೆಲವು ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಬಿಜೆಪಿ ಮೇಲ್ನೋಟಕ್ಕೆ “ವ್ಯಕ್ತಿಗಿಂತ ಪಕ್ಷ ದೊಡ್ಡದು” ಎಂಬ ಸಾಂಪ್ರದಾಯಿಕ ನಿಲುವನ್ನು ಪ್ರದರ್ಶಿಸುತ್ತಿದ್ದರೂ, ತಮಿಳುನಾಡಿನಲ್ಲಿ ಪಕ್ಷವನ್ನು ಜನಪ್ರಿಯಗೊಳಿಸಿದ್ದ “ಸಿಂಗಂ” ನಾಯಕನನ್ನು ಕಳೆದುಕೊಂಡಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ.



