ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ವಿಜಯೇಂದ್ರ ಲಾಯಕ್ ಅಲ್ಲ ಎಂಬ ಹಿಂದಿನ ತೀರ್ಮಾನಕ್ಕೆ ಅಂಟಿಕೊಂಡಿರುವ ಬಿಜೆಪಿ ಹೈಕಮಾಂಡ್, ಈ ಹುದ್ದೆಗೆ ಬೇರೊಬ್ಬರನ್ನು ತರಲು ಮುಂದಾಗಿರುವುದು ಹೊಸ ಸುದ್ದಿಯೇನೂ ಅಲ್ಲ. ಆದರೆ ಈ ಹುದ್ದಗೆ ಯಾರನ್ನು ತರಬೇಕು ಎಂಬ ಚರ್ಚೆ ನಡೆದಾಗ ಮೂವರನ್ನು ಕಾಂಟ್ಯಾಕ್ಟ್ ಮಾಡಿದೆ. ಆದರೆ ಆ ಮೂವರೂ ಇಟ್ಟಿರುವ ಬೇಡಿಕೆ ಕೇಳಿ ಹೈಕಮಾಂಡ್ ಕೂಡಾ ಶಾಕ್ ಆಗಿದೆ. ಹೀಗೆ ಮಾಡುವುದಾದರೆ ವಿಜಯೇಂದ್ರ ಅವರಿಗೇ ಫ್ರೀಡಂ ಕೊಟ್ಟು ನೋಡಬಹುದಲ್ವಾ.. ಎಂಬ ಯೋಚನೆಗೆ ಬಿದ್ದಿದೆ. ಆದರೆ ವಿಜಯೇಂದ್ರ ಅವರನ್ನು ಆ ಹುದ್ದೆಯಿಂದ ತೆಗೆಯಬೇಕು ಎಂಬ ತೀರ್ಮಾನ ಮಾಡಿಯೇ ಅಧ್ಯಕ್ಷ ಹುದ್ದೆ ಕೊಟ್ಟಿದ್ದ ಬಿಜೆಪಿ ಹೈಕಮಾಂಡ್, ಈ ಬಾರಿ ಚೇಂಜ್ ಮಾಡುವುದು ಶತಃ ಸಿದ್ಧ. ಇದರ ಮಧ್ಯೆ ಯಡಿಯೂರಪ್ಪ ಆಪ್ತರ ಎದುರು ನೀಡಿರುವ ಹೇಳಿಕೆಗಳೂ ಕುತೂಹಲ ಹುಟ್ಟಿಸಿವೆ. ಒಬ್ಬರಿಗೆ
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜಾಗಕ್ಕೆ ಯಾರನ್ನು ತರಬಹುದು ಎಂದು ಯೋಚಿಸುತ್ತಿರುವ ಬಿಜೆಪಿ ವರಿಷ್ಟರ ಕಣ್ಣ ಮುಂದೆ ಸುಳಿದಾಡಿರುವುದು ಒಟ್ಟು ನಾಲ್ಕು ಹೆಸರುಗಳು. ಈ ಪೈಕಿ ಕೇಂದ್ರ ಸಚಿವರಾದ ವಿ.ಸೋಮಣ್ಣ ಒಬ್ಬರಾದರೆ ಎರಡನೇ ಹೆಸರು ಪ್ರಲ್ಹಾದ ಜೋಷಿ ಅವರದು. ಮೂರನೇ ಹೆಸರು ಮುರುಗೇಶ್ ನಿರಾಣಿ ಅವರದ್ದು ಹಾಗೂ 4ನೇ ಹೆಸರು ಶೋಭಾ ಕರಂದ್ಲಾಜೆ ಅವರದ್ದು.
ಒಬ್ಬೊಬ್ಬರಿಗೂ ಒಂದೊಂದು ಭಯ ಇದೆ. ಪ್ರಲ್ಹಾದ್ ಜೋಷಿ ಅವರಿಗೆ ಈಗ ತಮ್ಮ ಎನ್‌ಡಿಎ ಕೂಟದಲ್ಲೇ ಇರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹಳೆಯ ಹೇಳಿಕೆಗಳದ್ದೇ ಭಯ. ಲಿಂಗಾಯತ ನಾಯಕರನ್ನು ತುಳಿದು ಬ್ರಾಹ್ಮಣರು ಸಿಎಂ ಆಗುವ ಪ್ಲಾನ್ ಎಂಬ ಹೇಳಿಕೆ ರಾಜ್ಯದಲ್ಲಿ ಯಾವ ಮಟ್ಟಿಗೆ ಪ್ರಭಾವ ಬೀರಿತ್ತು ಎಂದರೆ ಅದೇನೇ ಮ್ಯಾನೇಜ್ ಮಾಡಿದರೂ ಡ್ಯಾಮೇಜ್ ಕಂಟ್ರೋಲ್ ಮಾಡಲು ಆಗಲೇ ಇಲ್ಲ. ಈ ಭಯದ ನಡುವೆಯೇ ‘ಈ ಸನ್ನಿವೇಶದಲ್ಲಿ ತಾವು ಪಕ್ಷದ ಅಧ್ಯಕ್ಷ ರಾದರೆ ಯಾರು ತಮ್ಮ ವಿರುದ್ಧ ಕತ್ತಿ ಝಳಪಿಸುತ್ತಾರೆ? ಹೇಗೆ ಡ್ಯಾಮೇಜ್ ಮಾಡುತ್ತಾರೆ?’ ಅಂತ ಪ್ರಲ್ಹಾದ ಜೋಷಿ ನೇರವಾಗಿ ಅಮಿತ್ ಶಾ ಅವರಿಗೆ ವಿವರಿಸಿದ್ದಾರಂತೆ
ಇನ್ನು ವಿ ಸೋಮಣ್ಣ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆಯ ಜೊತೆಗೆ ಕೇಂದ್ರ ಸಚಿವ ಸ್ಥಾನವೂ ಬೇಕು. ‘ತಮಗೆ ಕೇಂದ್ರ ಮಂತ್ರಿ ಪಟ್ಟದ ಜತೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟರೆ ಒಳ್ಳೆಯದು. ಕೆಲಸ ಮಾಡಲು ಅನುಕೂಲ’ ಅಂತ ವಿ.ಸೋಮಣ್ಣ ವರಿಷ್ಟರಿಗೆ ವಿವರಿಸಿ ದ್ದಾರೆ. ಈ ಮಧ್ಯೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರೂ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿದೆ. ಅಂದ ಹಾಗೆ ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾದ್ದ ರಿಂದ ಅವರಿಗೆ ಪಟ್ಟ ಕಟ್ಟಿದರೆ ಪಕ್ಷದ ಹಲವು ಬಣಗಳನ್ನು ತೂಗಿಸಬಹುದು ಎಂಬುದು ಈ ಲೆಕ್ಕಾಚಾರದ ಭಾಗ. ಆದರೆ ಸದ್ಯದ ಮಟ್ಟಿಗೆ ನಿರಾಣಿ ಅವರನ್ನು ಹೈಕಮಾಂಡ್ ಇನ್ನೂ ಸಂಪರ್ಕ ಮಾಡಿಲ್ಲ.
ನಾಲ್ಕನೇ ಹೆಸರು ಶೋಭಾ ಕರಂದ್ಲಾಜೆ ಅವರದ್ದು. ವಿಜಯೇಂದ್ರ ಅವರನ್ನು ಕೆಳಗಿಳಿಸಿದ ಮೇಲೆ ಅಗುವ ಅಲ್ಲೋಲ ಕಲ್ಲೋಲವನ್ನು ಬ್ಯಾಲೆ ಮಾಡಲು ಶೋಭಾ ಕರಂದ್ಲಾಜೆ ಅವರಿಗೆ ಸಾಧ್ಯವಿದೆ. ಇದೇ ರೀತಿ ಬಿಜೆಪಿ ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡುತ್ತಿರುವುದರಿಂದ ಈ ನೇಮಕಾತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ದಿಲ್ಲಿ ನಾಯಕರಲ್ಲಿರುವ ಲೆಕ್ಕಾಚಾರ. ಆದರೆ ಶೋಭಾ ಕರಂದ್ಲಾಜೆ ಅವರ ಪರ ನಿಲ್ಲುವವರು ಯಾರು..? ಜೊತೆಯಾಗಿ ಹೆಗಲು ಕೊಡುವವರು ಯಾರು..?
ಏಕೆಂದರೆ ಯಡಿಯೂರಪ್ಪ ಟೀಂನವರಿಗೂ ಶೋಭಾ ಅವರಿಗೂ ಈಗ ಅಷ್ಟಕ್ಕಷ್ಟೇ. ಆರ್‌ಎಸ್‌ಎಸ್‌ನವರ ಜೊತೆಯಲ್ಲೂ ಶೋಭಾ ಅತ್ಯುತ್ತಮ ಸಂಬಂಧವನ್ನೇನೂ ಇಟ್ಟುಕೊಂಡಿಲ್ಲ. ಒಕ್ಕಲಿಗ ಹೆಣ್ಣು ಮಗಳು ಎಂಬುದು ಬಿಟ್ಟರೆ ಸಂಘಟನೆಯಿಂದಲೇ ದೂರ ಇರುವ ಅವರಿಗೆ ಯಾಕೆ ಅಧಿಕಾರ ಕೊಡಬೇಕು ಎಂಬ ಪ್ರಶ್ನೆಯೂ ಇದೆ.
ಇದೆಲ್ಲದರ ನಡುವೆ ಯಡಿಯೂರಪ್ಪ ಅವರು ‘ನವೆಂಬರ್ ತನಕ ಏನೂ ಆಗಲ್ಲ ಸುಮ್ಮನಿರಿ’ ಅಂತ ಹೇಳಿದ್ದಾರಂತೆ.



