Monday, June 8, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ದೇವೇಗೌಡರ ಪಾರ್ಲಿಮೆಂಟ್‌ ಜರ್ನಿ ದಿ ಎಂಡ್‌ : ರಾಜ್ಯಸಭೆ ಟಿಕೆಟ್‌ ಇಲ್ಲ

SpeciallU by SpeciallU
June 8, 2026
in Politics
Reading Time: 1 min read
0 0
0
ದೇವೇಗೌಡರ ಪಾರ್ಲಿಮೆಂಟ್‌ ಜರ್ನಿ ದಿ ಎಂಡ್‌ : ರಾಜ್ಯಸಭೆ ಟಿಕೆಟ್‌ ಇಲ್ಲ

ಮಾಜಿ ಪ್ರಧಾನಿ ದೇವೇಗೌಡರ ಪಾರ್ಲಿಮೆಂಟ್‌ ಜರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿಯೂ ಅಭ್ಯರ್ಥಿಗಳನ್ನು ಘೋಷಿಸಿದೆ. ಆ ಪಟ್ಟಿಯಲ್ಲಿ ದೇವೇಗೌಡರ ಹೆಸರಿಲ್ಲ. ರಾಜ್ಯ ಬಿಜೆಪಿಯ ಮಾಜಿ ಉಪಾಧ್ಯಕ್ಷ ಪ್ರೊ.ಎಂ ನಾಗರಾಜ್‌ ಎಂಬುವವರನ್ನು ರಾಜ್ಯಸಭೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅಲ್ಲಿಗೆ ದೇವೇಗೌಡರು ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ದೇವೇಗೌಡರು ತಮ್ಮ ಜೀವಿತ ಅವಧಿಯಲ್ಲಿ ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಸದಸ್ಯರಾಗಿದ್ದ ದೇವೇಗೌಡರು, ಅಧಿಕಾರ ಕೇಂದ್ರದಿಂದ ಹೊರ ಹೋಗುತ್ತಿದ್ದಾರೆ. ಜೂನ್‌ 25, ಸಂಸತ್‌ನಲ್ಲಿ ದೇವೇಗೌಡರ ಕೊನೆಯ ದಿನ ಎನ್ನಬಹುದು.

ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ದೇವೇಗೌಡರಿಗೆ ಮತ್ತೊಂದು ಅವಕಾಶ ನೀಡಲು ಒಲವು ತೋರಿರಲಿಲ್ಲ. ಬದಲಾಗಿ, ಜೆಡಿಎಸ್‌ ಬಳಿ ಕಡಿಮೆ ಶಾಸಕರಿದ್ದುಕೊಂಡು ರಾಜ್ಯಸಭಾ ಸ್ಥಾನಕ್ಕೆ ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕೂಡ ಅಭಿಪ್ರಾಯಪಟ್ಟಿದ್ದರು. ರಾಜ್ಯಸಭೆ ಅಭ್ಯರ್ಥಿ ಗೆಲ್ಲಬೇಕು ಎಂದರೆ ಕನಿಷ್ಠ 43-44 ಮತಗಳು ಬೇಕು. ಆದರೆ : ಜೆಡಿಎಸ್ ಪಕ್ಷವು ಕೇವಲ 18 ಶಾಸಕರನ್ನು ಹೊಂದಿದ್ದು, ಸ್ವಂತ ಬಲದ ಮೇಲೆ ರಾಜ್ಯಸಭಾ ಸ್ಥಾನ ಗೆಲ್ಲಲು ಸಾಧ್ಯವಿರಲಿಲ್ಲ. ಮರು ಆಯ್ಕೆಯಾಗಲು ಅವರು ಸಂಪೂರ್ಣವಾಗಿ ಬಿಜೆಪಿಯ ಬೆಂಬಲವನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಬಿಜೆಪಿ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರಿಂದ ದೊಡ್ಡಗೌಡರಿಗೆ ಎನ್‌ಡಿಎ ಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯಾಗುವ ಅವಕಾಶ ಸಿಗಲಿಲ್ಲ.

Related posts

ಡಿಕೆ ಕ್ಯಾಬಿನೆಟ್‌ನಲ್ಲಿ ಜಮೀರ್‌ ಎಂಟ್ರಿ ಖಚಿತ : ಕೋಡಿಶ್ರೀ

ವೋಟರ್‌ ಐಡಿ ರದ್ದಾದ್ರೆ ಗ್ಯಾರಂಟಿ ಇಲ್ಲ : ಸಿಎಂ ಡಿಕೆ ಶಿವಕುಮಾರ್‌

ಜೂನ್ 25ಕ್ಕೆ ಎಚ್.ಡಿ. ದೇವೇಗೌಡ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಳ್ಳಲಿದೆ. ಕರ್ನಾಟಕದ ಒಟ್ಟು 4 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ 3 ಸ್ಥಾನಗಳನ್ನು ಹಾಗೂ ಬಿಜೆಪಿ 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿವೆ.

1962 ರಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ಅವರು ಬಹುತೇಕ ಸಮಯ ಯಾವುದಾದರೊಂದು ಸದನದ ಸದಸ್ಯರಾಗಿಯೇ ಮುಂದುವರಿದಿದ್ದರು. ಆದರೆ 1989 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಸೋತಿದ್ದರು. ಈ ವೇಳೆ ಲೋಕಸಭೆಯಲ್ಲೂ ಸೋತಿದ್ದರು. 1989 ರ ನವೆಂಬರ್‌ನಿಂದ 1991 ರ ಜೂನ್‌ನಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವವರೆಗಿನ ಸುಮಾರು ಒಂದೂವರೆ ವರ್ಷಗಳ ಕಾಲ ಅವರು ಶಾಸಕರೂ ಆಗಿರಲಿಲ್ಲ, ಸಂಸದರೂ ಆಗಿರಲಿಲ್ಲ. ಅದನ್ನು ಹೊರತುಪಡಿಸಿದರೆ ಈಗ ಮುಕ್ತಾಯವಾಗುತ್ತಿರುವ ರಾಜ್ಯಸಭಾ ಅವಧಿಗೆ ಮುನ್ನ 2019 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆ ಸೋಲಿನ ನಂತರ ಮೇ 2019 ರಿಂದ ಜೂನ್ 2020 ರಲ್ಲಿ ರಾಜ್ಯಸಭೆಗೆ ಮರು ಆಯ್ಕೆಯಾಗುವವರೆಗಿನ ಸುಮಾರು 1 ವರ್ಷದ ಅವಧಿಯಲ್ಲಿ ಅವರು ಯಾವುದೇ ಸದನದ ಸದಸ್ಯರಾಗಿರಲಿಲ್ಲ. ಇದೀಗ ರಾಜ್ಯಸಭಾ ಅವಧಿಯೂ ಮುಗಿಯುತ್ತಿದೆ.

ಆಂಜನೇಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆರಂಭವಾದ ರಾಜಕೀಯ ಜೀವನ ಪ್ರಧಾನಿ ಹುದ್ದೆಯವರೆಗೂ ಕೊಂಡೊಯ್ದಿತ್ತು. ಹೊಳೆನರಸೀಪುರ ಕ್ಷೇತ್ರದಿಂದ 1962 ರಿಂದ ಸತತವಾಗಿ 6 ಬಾರಿ ಹಾಗೂ 1994 ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಹೊಳೆನರಸೀಪುರ ಹಾಗೂ ಹಾಸನ ಕ್ಷೇತ್ರಗಳಿಂದ ಒಟ್ಟು 6 ಬಾರಿ ಲೋಕಸಭೆಗೆ ಮತ್ತು 2 ಬಾರಿ ರಾಜ್ಯಸಭೆಗೆ (1996 ಮತ್ತು 2020) ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಕರ್ನಾಟಕ ವಿಧಾನಪರಿಷತ್ (MLC) ಸದಸ್ಯರಾಗಿರಲಿಲ್ಲ. ಈ ಎಲ್ಲ ಇತಿಹಾಸಕ್ಕೆ ಈಗ ಫುಲ್‌ ಸ್ಟಾಪ್‌ ಇಡುವ ಸಮಯ.

Tags: #ದೇವೇಗೌಡ #ರಾಜ್ಯಸಭೆ ಟಿಕೆಟ್‌ #Deve Gowda #Rajya Sabha ticket
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಡಿಕೆ ಕ್ಯಾಬಿನೆಟ್‌ನಲ್ಲಿ ಜಮೀರ್‌ ಎಂಟ್ರಿ ಖಚಿತ : ಕೋಡಿಶ್ರೀ
  • ವೋಟರ್‌ ಐಡಿ ರದ್ದಾದ್ರೆ ಗ್ಯಾರಂಟಿ ಇಲ್ಲ : ಸಿಎಂ ಡಿಕೆ ಶಿವಕುಮಾರ್‌
  • ದೇವೇಗೌಡರ ಪಾರ್ಲಿಮೆಂಟ್‌ ಜರ್ನಿ ದಿ ಎಂಡ್‌ : ರಾಜ್ಯಸಭೆ ಟಿಕೆಟ್‌ ಇಲ್ಲ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಡಿಕೆ ಕ್ಯಾಬಿನೆಟ್‌ನಲ್ಲಿ ಜಮೀರ್‌ ಎಂಟ್ರಿ ಖಚಿತ : ಕೋಡಿಶ್ರೀ

ಡಿಕೆ ಕ್ಯಾಬಿನೆಟ್‌ನಲ್ಲಿ ಜಮೀರ್‌ ಎಂಟ್ರಿ ಖಚಿತ : ಕೋಡಿಶ್ರೀ

June 8, 2026
ವೋಟರ್‌ ಐಡಿ ರದ್ದಾದ್ರೆ ಗ್ಯಾರಂಟಿ ಇಲ್ಲ : ಸಿಎಂ ಡಿಕೆ ಶಿವಕುಮಾರ್‌

ವೋಟರ್‌ ಐಡಿ ರದ್ದಾದ್ರೆ ಗ್ಯಾರಂಟಿ ಇಲ್ಲ : ಸಿಎಂ ಡಿಕೆ ಶಿವಕುಮಾರ್‌

June 8, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.