Thursday, June 11, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ದೇವೇಗೌಡರು ಉ.ಪ್ರದೇಶದಿಂದಲೂ ರಾಜ್ಯಸಭೆಗೆ ಹೋಗುತ್ತಿಲ್ಲ..!

SpeciallU by SpeciallU
June 11, 2026
in Politics
0 0
0
ದೇವೇಗೌಡರು ಉ.ಪ್ರದೇಶದಿಂದಲೂ ರಾಜ್ಯಸಭೆಗೆ ಹೋಗುತ್ತಿಲ್ಲ..!

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ  ರಾಜ್ಯಸಭಾ ಅವಧಿ ಇದೇ ಜೂನ್‌ 25ಕ್ಕೆ ಮುಗಿಯಲಿದೆ. ಆನಂತರ ದೇವೇಗೌಡ ಅವರು ಸಂಸತ್‌ ಅಥವಾ ವಿಧಾನಮಂಡಲ ಯಾವುದರಲ್ಲೂ ಸದಸ್ಯರಾಗಿ ಇರುವುದಿಲ್ಲ. ಕರ್ನಾಟಕದಿಂದ ದೇವೇಗೌಡರನ್ನು ಆಯ್ಕೆ ಮಾಡುವುದಕ್ಕೆ ಜೆಡಿಎಸ್‌ ಬಳಿ ಅಗತ್ಯ ಶಾಸಕರ ಬಲ ಇಲ್ಲ. ಮಿತ್ರ ಪಕ್ಷ ಬಿಜೆಪಿಯೂ ದೇವೇಗೌಡರನ್ನು ಪರಿಗಣಿಸಿಲ್ಲ. ಈ ನಡುವೆ ದೇವೇಗೌಡರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದೂ ಇಲ್ಲ, ಸಾಧ್ಯವಿಲ್ಲ ಎಂಬ ವರದಿಗಳು ಬರುತ್ತಿವೆ.

ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದರಿಂದ, ಹಿರಿಯ ರಾಜಕಾರಣಿಯಾದ ದೇವೇಗೌಡರನ್ನು ಸಂಸತ್ತಿನಲ್ಲಿ ಉಳಿಸಿಕೊಳ್ಳಲು ಬಿಜೆಪಿ ನಾಯಕತ್ವವು ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ ಎಂಬ ವದಂತಿ ಹರಡಿತು. ಮುಂಬರುವ ನವೆಂಬರ್ 2026 ರಲ್ಲಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ 11 ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. ಹಾಗಾಗಿ ಇವುಗಳಲ್ಲಿ ಒಂದು ಸ್ಥಾನವನ್ನು ದೇವೇಗೌಡರಿಗೆ ನೀಡಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೇಲಿಬಂದವು.

Related posts

ಕಸ ವಿಲೇವಾರಿ ಹಗರಣ : Ramky ಸಂಸ್ಥೆ ಯಾರದ್ದು ಗೊತ್ತಾ..?

ಸಿದ್ದರಾಮಯ್ಯ ಹೇಳಿದ ಮಾತು ಕೇಳ್ತಿಲ್ಲ ಹೈಕಮಾಂಡ್‌ : ಆಪ್ತರಿಗೆ ಸಿಕ್ಕಲ್ಲ ಮಂತ್ರಿಗಿರಿ..!

ಭಾರತದ ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ದೇಶದ ಯಾವುದೇ ರಾಜ್ಯದಿಂದಲಾದರೂ ರಾಜ್ಯಸಭೆಗೆ ಸ್ಪರ್ಧಿಸಬಹುದು. ಅವರು ಭಾರತದ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರಬೇಕು. ಅಷ್ಟೇ.  ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವುದರಿಂದ, ಹೈಕಮಾಂಡ್ ತೀರ್ಮಾನಿಸಿದರೆ ದೇವೇಗೌಡರನ್ನು ಅಲ್ಲಿಂದ ಸುಲಭವಾಗಿ ಗೆಲ್ಲಿಸಿಕೊಂಡು ಬರಲು ಸಾಧ್ಯವಿದೆ.

ದೇವೇಗೌಡರಿಗೆ ಪ್ರಸ್ತುತ 93 ವರ್ಷ ವಯಸ್ಸಾಗಿದೆ.  ವಯಸ್ಸು ಮತ್ತು ಆರೋಗ್ಯದ ಕಾರಣಗಳಿಂದಾಗಿ ಅವರೇ ದೂರ ಉಳಿಯಲು ಬಯಸಿದ್ದಾರೆ. ಇದು ಒಂದು ವಾದವಾದರೆ ಪಕ್ಕದ ರಾಜ್ಯಗಳಿಂದಲೂ ಆಫರ್‌ ಇತ್ತು. ಮಹಾರಾಷ್ಟ್ರದಿಂದ ಆಯ್ಕೆಯಾಗಬಹುದಿತ್ತು. ಆದರೆ  ಕರ್ನಾಟಕದ ಗಡಿ ಮತ್ತು ನೀರಾವರಿ ವಿಷಯಗಳಲ್ಲಿ ಮಹಾರಾಷ್ಟ್ರದೊಂದಿದೆ ವಿವಾದಗಳಿವೆ. ಇದು ಮುಂದೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ದೇವೇಗೌಡರು ನಿರಾಕರಿಸಿದರು.

ಈ ಮಧ್ಯೆ ಸ್ವತಃ ದೇವೇಗೌಡರೇ “ನನಗೆ ರಾಜ್ಯಸಭೆಗೆ ಹೋಗುವ ಯಾವುದೇ ಆಸೆ ಇಲ್ಲ. ಮಾಧ್ಯಮಗಳು ಬೇಕಾದ ಕಥೆಗಳನ್ನು ಸೃಷ್ಟಿಸಿಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನನ್ನ ಬಾಂಧವ್ಯ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ. ಅದು ನಾನು ಸಾಯುವವರೆಗೂ ಇರುತ್ತದೆʼʼ ಎಂದು ಹೇಳಿದ್ಧಾರೆ.

ತಾಂತ್ರಿಕವಾಗಿ ಉತ್ತರ ಪ್ರದೇಶದಿಂದ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಅವಕಾಶ ಮತ್ತು ಸಾಧ್ಯತೆಗಳಿದ್ದರೂ, ಸ್ವತಃ ದೇವೇಗೌಡರೇ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಮತ್ತು ತಮಗೆ ಆಸಕ್ತಿ ಇಲ್ಲ ಎಂದು ಅಧಿಕೃತವಾಗಿ ಹೇಳಿರುವುದರಿಂದ ಈ ಸುದ್ದಿ ಕೇವಲ ರಾಜಕೀಯ ಚರ್ಚೆಯಾಗಿಯೇ ಉಳಿಯುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಇದೆ. ಆದರೆ ಸ್ವತಃ ದೇವೇಗೌಡರೇ ಈ ಸುದ್ದಿಯನ್ನು ನಿರಾಕರಿಸಿದ್ದು, ತಮಗೆ ಮತ್ತೆ ರಾಜ್ಯಸಭೆ ಪ್ರವೇಶಿಸುವ ಯಾವುದೇ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Tags: #ಹೆಚ್‌ಡಿದೇವೇಗೌಡ #ರಾಜ್ಯಸಭೆ #ಜೆಡಿಎಸ್ #ಬಿಜೆಪಿ #HDDeveGowda #RajyaSabha #JDS #BJP
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ತಿರುಪತಿ ತಿಮ್ಮಪ್ಪನಿಗೆ ತಲೆ ಕೂದಲನ್ನೇ ಮುಡಿ ಕೊಡೋದ್ಯಾಕೆ..?
  • ದೇವೇಗೌಡರು ಉ.ಪ್ರದೇಶದಿಂದಲೂ ರಾಜ್ಯಸಭೆಗೆ ಹೋಗುತ್ತಿಲ್ಲ..!
  • ಕಸ ವಿಲೇವಾರಿ ಹಗರಣ : Ramky ಸಂಸ್ಥೆ ಯಾರದ್ದು ಗೊತ್ತಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ತಿರುಪತಿ ತಿಮ್ಮಪ್ಪನಿಗೆ ತಲೆ ಕೂದಲನ್ನೇ ಮುಡಿ ಕೊಡೋದ್ಯಾಕೆ..?

ತಿರುಪತಿ ತಿಮ್ಮಪ್ಪನಿಗೆ ತಲೆ ಕೂದಲನ್ನೇ ಮುಡಿ ಕೊಡೋದ್ಯಾಕೆ..?

June 11, 2026
ದೇವೇಗೌಡರು ಉ.ಪ್ರದೇಶದಿಂದಲೂ ರಾಜ್ಯಸಭೆಗೆ ಹೋಗುತ್ತಿಲ್ಲ..!

ದೇವೇಗೌಡರು ಉ.ಪ್ರದೇಶದಿಂದಲೂ ರಾಜ್ಯಸಭೆಗೆ ಹೋಗುತ್ತಿಲ್ಲ..!

June 11, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.