Sunday, July 26, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಯಶ್‌ ʻರಾಮಾಯಣʼವನ್ನು ಆಸ್ಟ್ರೇಲಿಯ ಮಕ್ಕಳು ನೋಡುವಂತಿಲ್ಲ..!!!

SpeciallU by SpeciallU
July 26, 2026
in Cinema, News
Reading Time: 1 min read
0 0
0
ಯಶ್‌ ʻರಾಮಾಯಣʼವನ್ನು ಆಸ್ಟ್ರೇಲಿಯ ಮಕ್ಕಳು ನೋಡುವಂತಿಲ್ಲ..!!!

ರಾಮಾಯಣವನ್ನು ಮಕ್ಕಳು ನೋಡುವಂತಿಲ್ಲ ಎಂದರೆ.. ಅಚ್ಚರಿಯಾಗುವುದು ನಿಜ. ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ರಾಮಾಯಣವನ್ನು ಮಕ್ಕಳಿಂದಲೇ ಹೇಳುವ ಪರಿಪಾಠವಿದೆ. ಅಂತಹ ರಾಮಾಯಣವನ್ನು ಆಸ್ಟ್ರೇಲಿಯಲ್ಲಿ ಮಕ್ಕಳೇ ನೋಡುವಂತಿಲ್ಲ ಎಂದರೆ.. ಏನಾಗಿದೆ ಆಸ್ಟ್ರೇಲಿಯಾಗೆ ಅಂತೀರೇನೋ.. ಆದರೆ ವಾಸ್ತವ ಹೌದು. ಆಸ್ಟ್ರೇಲಿಯಾದಲ್ಲಿ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ 34 ನಿಮಿಷಗಳ ವಿಶೇಷ ಫುಟೇಜ್‌ಗೆ ಅಲ್ಲಿನ ಸೆನ್ಸಾರ್ ಮಂಡಳಿ ‘M’ (ಮ್ಯಾಚ್ಯೂರ್) ರೇಟಿಂಗ್ ನೀಡಿದೆ. ಭಾರತದಲ್ಲಿ U/A ಸರ್ಟಿಫಿಕೇಟ್‌ ಅಂತಾರಲ್ಲ.. ಹೆಚ್ಚೂ ಕಡಿಮೆ ಹಾಗೆಯೇ ಇದೆ. ಇಷ್ಟಕ್ಕೂ ಈ ಸಿನಿಮಾದಲ್ಲಿ ಮಕ್ಕಳು ನೋಡಬಾರದ ದೃಶ್ಯ, ಸಂಭಾಷಣೆಗಳಾದರೂ ಏನಿದೆ..?

ರಾಮಾಯಣದಲಿ ರಾಮ-ರಾವಣ, ಕುಂಭಕರ್ಣ, ಇಂದ್ರಜಿತ್‌ ನಡುವೆ ಯುದ್ಧ ನಡೆಯುವ ಸನ್ನಿವೇಶಗಳಿವೆ. ಇನ್ನೂ ಕೆಲವು ವಾರ್‌ ಸೀನ್ಸ್‌ ಇದಾವೆ. ಇದು ಆಸ್ಟ್ರೇಲಿಯಾ ಸೆನ್ಸಾರ್‌ ಬೋರ್ಡ್‌ ಪ್ರಕಾರ ಕ್ರೌರ್ಯ. ಚಿತ್ರದಲ್ಲಿರುವ ಕ್ರೂರತ್ವ ಹಾಗೂ ಯುದ್ಧದ ಹಿಂಸಾಚಾರದ (Moderate Violence) ದೃಶ್ಯಗಳ ಕಾರಣದಿಂದಾಗಿ, 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಇದನ್ನು ನೋಡದಂತೆ ಅಲ್ಲಿನ ಮಂಡಳಿ ಸಲಹೆ ನೀಡಿದೆ. ಭಾರತದಲ್ಲಿ ಚಿತ್ರದ ಟ್ರೈಲರ್‌ಗೆ ‘U’ (ಯುನಿವರ್ಸಲ್) ಸರ್ಟಿಫಿಕೇಟ್ ಸಿಕ್ಕಿದ್ದರೂ, ಆಸ್ಟ್ರೇಲಿಯಾದಲ್ಲಿ ಈ ‘M’ ರೇಟಿಂಗ್ ಸಿಕ್ಕಿದೆ.

Related posts

ಪ್ರಜ್ವಲ್‌ ರೇವಣ್ಣಗೆ ಜಾಮೀನು ಸಿಕ್ಕರೂ ಬಿಡುಗಡೆ ಸಿಕ್ಕಲ್ಲ. ಏಕೆ..?

ಮುಸ್ಲಿಂ ವ್ಯಕ್ತಿಗೂ ಅಷ್ಟೇ.. 2ನೇ ಮದುವೆಗೆ ಮುನ್ನ ಮೊದಲ ಮದುವೆ ರದ್ದಾಗಲೇಬೇಕು : ಹೈಕೋರ್ಟ್‌

ಹಾಗಾದರೆ ಆಸ್ಟ್ರೇಲಿಯದಲ್ಲಿ ಮಕ್ಕಳು ರಾಮಾಯಣವನ್ನು ನೋಡುವುದೇ ಇಲ್ವಾ..?
ರಾಮಾಯಣವು ಮಹಾಯುದ್ಧದ ಕಥೆಯಾಗಿದ್ದರಿಂದ, ಅದರಲ್ಲಿರುವ ಅಸ್ತ್ರಗಳ ಸಂಘರ್ಷ ಮತ್ತು ತೀವ್ರ ಆಕ್ಷನ್ ದೃಶ್ಯಗಳು ಅಲ್ಲಿನ ಮಂಡಳಿಗೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸೂಕ್ತವಲ್ಲ ಎಂದು ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಗೆ ಅನಿಸಿದೆ. ಅದಕ್ಕೇ ಎಂ ಸರ್ಟಿಫಿಕೇಟ್‌ ಕೊಟ್ಟಿದೆ.

ಆಸ್ಟ್ರೇಲಿಯಾದ ಸೆನ್ಸಾರ್ ವ್ಯವಸ್ಥೆಯಲ್ಲಿ ಸಲಹಾತ್ಮಕ ರೇಟಿಂಗ್‌ಗಳು (Advisory Ratings)ನ್ನಷ್ಟೇ ನೀಡಲಾಗುತ್ತದೆ. G (ಎಲ್ಲರಿಗೂ), PG (ಪೋಷಕರ ಮಾರ್ಗದರ್ಶನ), ಮತ್ತು M (ಮ್ಯಾಚ್ಯೂರ್). ರಾಮಾಯಣ ಚಿತ್ರಕ್ಕೆ ಸಿಕ್ಕಿರುವುದು ಇದೇ ‘M’ ರೇಟಿಂಗ್. ಇದು ಕೇವಲ ಒಂದು ಸಲಹೆ (Not Recommended). ಅಂದರೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳು ಸಹ ಪೋಷಕರೊಂದಿಗೆ ಈ ಚಿತ್ರವನ್ನು ಕಾನೂನುಬದ್ಧವಾಗಿ ಚಿತ್ರಮಂದಿರದಲ್ಲಿ ನೋಡಬಹುದು. ನಿರ್ಬಂಧ ಇಲ್ಲ.

ಅಕಸ್ಮಾತ್‌ ಕಾನೂನುಬದ್ಧ ನಿರ್ಬಂಧಿತ ರೇಟಿಂಗ್‌ (Legally Restricted) ಕೊಟ್ಟಿದ್ದರೆ ಅಂದರೆ, MA 15+ (15 ವರ್ಷದೊಳಗಿನವರಿಗೆ ಪೋಷಕರಿಲ್ಲದೆ ಪ್ರವೇಶವಿಲ್ಲ) ಮತ್ತು R 18+ (ಹಿರಿಯರಿಗೆ ಮಾತ್ರ). ಇವುಗಳನ್ನು ಮೀರಿ ಅತಿಯಾದ ಹಿಂಸೆ ಇದ್ದರೆ ಚಿತ್ರವನ್ನು ನಿಷೇಧಿಸಲಾಗುತ್ತದೆ (Refused Classification – RC) ಕೊಟ್ಟಿದ್ದರೆ ಆಗ ರಾಮಾಯಣವನ್ನು ಮಕ್ಕಳು ನೋಡುವಂತೆಯೇ ಇರಲಿಲ್ಲ. ಆಸ್ಟ್ರೇಲಿಯಾ ಸೆನ್ಸಾರ್ ಮಂಡಳಿಯು ಕೇವಲ ಭಾರತದಂತೆ ಕತ್ತರಿ (Cuts) ಹಾಕುವ ಬದಲು, ಪ್ರೇಕ್ಷಕರು ತಮಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳಲು ಇಂತಹ ರೇಟಿಂಗ್ ಮತ್ತು ಗ್ರಾಹಕ ಸಲಹೆಗಳನ್ನು (Consumer Advice) ನೀಡುತ್ತದೆ.

ರಾಮಾಯಣ ಇದೇ ವರ್ಷ ದೀಪಾವಳಿಗೆ ರಿಲೀಸ್‌ ಆಗುವ ಸಾಧ್ಯತೆ ಇದೆ. ಇನ್ನೂ ಟ್ರೇಲರ್‌ ರಿಲೀಸ್‌ ಆಗಿಲ್ಲ. ರಾವಣನಾಗಿ ಯಶ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಈ ವರ್ಷ ಬಿಡುಗಡೆ ಆಗುವ ಮೊದಲ ಭಾಗದಲ್ಲಿ ಅವರಿಗೆ ಹೆಚ್ಚು ಸ್ಕ್ರೀನ್‌ಸ್ಪೇಸ್ ಸಿಕ್ಕಿಲ್ಲ. ಕಾರಣ ಸೀತಾಪಹರಣದವರಗೆ ಮಾತ್ರ ಕಥೆ ಹೇಳಲಾಗ್ತಿದೆ. ರಾವಣನ ಹಿನ್ನೆಲೆಯನ್ನು ಕಟ್ಟಿಕೊಡುವ ಒಂದಷ್ಟು ದೃಶ್ಯಗಳು , ವಿದ್ಯುಜ್ಜಿಹ್ವನ ಜೊತೆಗಿನ ಹೋರಾಟದ ಸನ್ನಿವೇಶ ಇರುತ್ತದೆ. ರಾಮನಾಗಿ ರಣಬೀರ್‌ ಕಪೂರ್‌, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ಧಾರೆ. 2ನೇ ಭಾಗದಲ್ಲಿ ರಾವಣನಾಗಿ ಯಶ್ ಬಹಳ ತೆರೆಮೇಲೆ ಅಬ್ಬರಿಸಲಿದ್ದಾರೆ. ಎ. ಆರ್ ರಹಮಾನ್ ಹಾಗೂ ಹನ್ಸ್ ಜಿಮ್ಮರ್ ಸಂಗೀತ  ನೀಡಿದ್ದಾರೆ.

Tags: #ರಾಮಾಯಣ #ಆಸ್ಟ್ರೇಲಿಯಾ #ನಿತೇಶ್ ತಿವಾರಿ #ಯಶ್ #ರಣಬೀರ್‌ಕಪೂರ್‌ #ಸಾಯಿಪಲ್ಲವಿ #Ramayana #Australia #NiteshTiwari #Yash #RanbirKapoor #SaiPallavi
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಯಶ್‌ ʻರಾಮಾಯಣʼವನ್ನು ಆಸ್ಟ್ರೇಲಿಯ ಮಕ್ಕಳು ನೋಡುವಂತಿಲ್ಲ..!!!
  • ಪ್ರಜ್ವಲ್‌ ರೇವಣ್ಣಗೆ ಜಾಮೀನು ಸಿಕ್ಕರೂ ಬಿಡುಗಡೆ ಸಿಕ್ಕಲ್ಲ. ಏಕೆ..?
  • ಮುಸ್ಲಿಂ ವ್ಯಕ್ತಿಗೂ ಅಷ್ಟೇ.. 2ನೇ ಮದುವೆಗೆ ಮುನ್ನ ಮೊದಲ ಮದುವೆ ರದ್ದಾಗಲೇಬೇಕು : ಹೈಕೋರ್ಟ್‌

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಯಶ್‌ ʻರಾಮಾಯಣʼವನ್ನು ಆಸ್ಟ್ರೇಲಿಯ ಮಕ್ಕಳು ನೋಡುವಂತಿಲ್ಲ..!!!

ಯಶ್‌ ʻರಾಮಾಯಣʼವನ್ನು ಆಸ್ಟ್ರೇಲಿಯ ಮಕ್ಕಳು ನೋಡುವಂತಿಲ್ಲ..!!!

July 26, 2026
ಪ್ರಜ್ವಲ್‌ ರೇವಣ್ಣಗೆ ಜಾಮೀನು ಸಿಕ್ಕರೂ ಬಿಡುಗಡೆ ಸಿಕ್ಕಲ್ಲ. ಏಕೆ..?

ಪ್ರಜ್ವಲ್‌ ರೇವಣ್ಣಗೆ ಜಾಮೀನು ಸಿಕ್ಕರೂ ಬಿಡುಗಡೆ ಸಿಕ್ಕಲ್ಲ. ಏಕೆ..?

July 26, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.