ಪ್ರಜ್ವಲ್ ರೇವಣ್ಣ (Prajwala Revanna) ಕೇಸ್‌ನಲ್ಲಿ ಪೆನ್‌ಡ್ರೈವ್ ಹಂಚಿದ್ದ 8 ಆರೋಪಿಗಳಿಗೆ ಕೋರ್ಟ್ ಸಮನ್ಸ್ ನೀಡಿದೆ. ಇದರ ಮಧ್ಯೆ ಪ್ರಜ್ವಲ್ ರೇವಣ್ಣ ಅಜ್ಜಿ ಚೆನ್ನಮ್ಮನವರ ಪುಣ್ಯತಿಥಿಗೆ ಕೇಳಿದ್ದ ಪರೋಲ್ ನೀಡುವುದಕ್ಕೆ ಪೊಲೀಸರು ನೋ ಎಂದಿದ್ದಾರೆ. ವಿಚಿತ್ರವೇನು ಗೊತ್ತೇ.. ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆಯೂ ಅಷ್ಟೇ, ಜುಲೈ 30ಕ್ಕೆ ಮುಂದೂಡಲ್ಪಟ್ಟಿದೆ. ಮೂರೂ ಸುದ್ದಿಗಳನ್ನು ನೋಡುವಾಗ ಬರುವ ಒಂದೇ ಒಂದು ಪ್ರಶ್ನೆ.. ಏಕೆ..?
ವಿಡಿಯೋ ಹಂಚಿದ್ದವರಿಗೆ ಸಂಕಷ್ಟ ಸ್ಟಾರ್ಟ್
ಪೆನ್‌ಡ್ರೈವ್ ಮೂಲಕ ಅಶ್ಲೀಲ ಫೋಟೋ, ವಿಡಿಯೋ ಹಂಚಿಕೆ ಪ್ರಕರಣರದ ಎ2 ನವೀನ್ ಗೌಡ, ಎ3 ಲಿಖಿತ್ ಹೆಚ್.ಪಿ., ಎ4 ನಿಶಾಂತ್ ಎಂ.ಜೆ, ಎ5 ಕಿರಣ್ ಎಸ್.ಕೆ, ಎ6 ಶರತ್ ಎಂ.ಜಿ., ಎ7 ತೇಜಸ್ ಡಿ.ಎನ್. ಎ8 ಗಗನ್ ಕುಮಾರ್. ಎ9 ರೇವಂತ್.ಹೆಚ್‌ಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಅವರೂ ವಿಚಾರಣೆಗೆ ಬರಲೇಬೇಕು. ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ, ಐಪಿಸಿ ಸೆ.509ರಡಿ ಕೇಸ್‌ನಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೆ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶ ಸಂದೀಪ್ ಪಾಟೀಲ್ ಆದೇಶಿಸಿದ್ದಾರೆ.
ಏಕೆ..?
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಏಜೆಂಟ್ ಆಗಿದ್ದ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ಹಾಸನ ಸಿಇಎನ್ ಪೊಲೀಸ್ ಠಾಣೆಗೆ 2024ರ ಏ.23ರಂದು ದೂರು ನೀಡಿದ್ದರು. ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ಏ.26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್‌ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ರಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ಒಳಗೊಂಡ ಸಿಡಿ ಹಾಗೂ ಪೆನ್‌ಡ್ರೈವ್ ಸಿದ್ಧಪಡಿಸಿಕೊಂಡಿದ್ದಾರೆ. ಬಳಿಕ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್ಆ್ಯಪ್/ಮೊಬೈಲ್ಗಳಲ್ಲಿ ತೋರಿಸಿ ಜನರಿಗೆ ದಿಕ್ಕು ತಪ್ಪಿಸಿ ಪ್ರಜ್ವಲ್ ರೇವಣ್ಣಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಇದೇ ಕೇಸಿನಲ್ಲಿ ಸಮನ್ಸ್ ಜಾರಿಯಾಗಿದೆ.
ಅಜ್ಜಿಯ ಪುಣ್ಯತಿಥಿಗೂ ಬರಲ್ಲ ಪ್ರಜ್ವಲ್
ಪ್ರಜ್ವಲ್ ರೇವಣ್ಣ ಅವರ ಅಜ್ಜಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಪುಣ್ಯತಿಥಿ ಜುಲೈ 30 ರಂದು ನಡೆಯಲಿದೆ. ಅಂತ್ಯಕ್ರಿಯೆಗಂತೂ ಬರಲಿಲ್ಲ. ತಿಥಿ ಕಾರ್ಯ ಪೂಜೆಯಲ್ಲಾದರೂ ಭಾಗಿಯಾಗಲು ಪ್ರಜ್ವಲ್‌ನನ್ನು ಹೊರಗೆ ಕರೆತರಬೇಕು ಎಂದು ಅವರ ಕುಟುಂಬಸ್ಥರು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ಕಾರಾಗೃಹ ಪೊಲೀಸರು ನೋ ಎಂದಿದ್ದಾರೆ. “ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಪೆರೋಲ್ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಮತ್ತು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳಿದ್ಧಾರೆ. ಕೋರ್ಟ್ ಅನುಮತಿ ಕೊಟ್ಟರೆ ಕೊಡಬಹುದು. ಅಷ್ಟೇ.
ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ
ಜಾಮೀನು ಅರ್ಜಿ ಹಾಗೂ ಜೈಲುವಾಸ: ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 31ಕ್ಕೆ ಮುಂದೂಡಿದೆ. ಈಗಾಗಲೇ ಅತ್ಯಾಚಾರ ಪ್ರಕರಣವೊಂದರಲ್ಲಿ ಅವರು ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವುದರಿಂದ, ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಬಿಡುಗಡೆ ಮಾಡುವಮತಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.



