Saturday, July 25, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

BPL ಕಾರ್ಡ್‌ ಆದಾಯಮಿತಿ 3 ಲಕ್ಷಕ್ಕೆ ಏರಿಕೆ : APL ಕಾರ್ಡ್‌ದಾರರಿಗೂ ಶುಭ ಸುದ್ದಿ

SpeciallU by SpeciallU
July 25, 2026
in News, Politics
Reading Time: 1 min read
0 0
0
BPL ಕಾರ್ಡ್‌ ಆದಾಯಮಿತಿ 3 ಲಕ್ಷಕ್ಕೆ ಏರಿಕೆ : APL ಕಾರ್ಡ್‌ದಾರರಿಗೂ ಶುಭ ಸುದ್ದಿ

ಬಿಪಿಎಲ್ ಕಾರ್ಡ್ (BPL Card) ಬಳಕೆದಾರರಿಗೆ ಅಥವಾ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ನಿರ್ಧರಿಸಿರುವವರಿಗೆ ರಾಜ್ಯ ಸರ್ಕಾರ ಬಂಪರ್ ಗುಡ್‌ನ್ಯೂಸ್ ಕೊಟ್ಟಿದೆ. ಗ್ಯಾರಂಟಿ ಯೋಜನೆಗಳ (Guaranty Scheme) ಪ್ರಗತಿ ಪರಿಶೀಲನೆ ಸಭೆಯ ಬಳಿಕ ಆಹಾರ ಸಚಿವ ಕೆಎಚ್‌ ಮುನಿಯಪ್ಪ (KH Muniyappa) ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಬಿಪಿಎಲ್‌ ಕಾರ್ಡ್‌ ಪಡೆಯಲು ಇದ್ದ ಆದಾಯ ಮಿತಿಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ವಾರ್ಷಿಕ 3 ಲಕ್ಷ ರೂ. ಮಿತಿ ಎಂದರೆ ತಿಂಗಳಿಗೆ 25 ಸಾವಿರ ರೂ. ಸಂಬಳ ಅಥವಾ ದುಡಿಮೆ ಮಾಡುವವರೂ ಬಿಪಿಎಲ್‌ ಕಾರ್ಡ್‌ ಪಡೆಯಬಹುದಾಗಿದೆ.

ಆಡಳಿತ ಸುಧಾರಣೆ ಆಯೋಗದ ಶಿಫಾರಸಿನಂತೆ ಬಿಪಿಎಲ್ ಕಾರ್ಡ್ ಪಡೆಯಲು ರಾಜ್ಯ ಸರ್ಕಾರ ನಿಗದಿಪಡಿಸಿದ್ದ ₹1.20 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡನೇ ಆಡಳಿತ ಸುಧಾರಣಾ ಆಯೋಗವು (Administrative Reforms Commission) ನೀಡಿದ ವರದಿಯನ್ವಯ ಈ ಮಿತಿಯನ್ನು ಬದಲಾಯಿಸಲಾಗುತ್ತಿದೆ. 2017 ರಲ್ಲಿ ₹1.20 ಲಕ್ಷದ ಮಿತಿಯನ್ನು ವಿಧಿಸಲಾಗಿತ್ತು. ಪ್ರಸ್ತುತ ಜೀವನ ವೆಚ್ಚ ಹಾಗೂ ದಿನಗೂಲಿ ಆದಾಯ ಹೆಚ್ಚಿರುವುದರಿಂದ, ಇದನ್ನು ₹3 ಲಕ್ಷಕ್ಕೆ ಏರಿಸಲಾಗುತ್ತಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ.

Related posts

91ರಿಂದ 65 ಕೆಜಿಗೆ ಇಳಿದ ನಟಿ ನಮಿತಾ : ಆಪರೇಷನ್‌ ಅಲ್ಲ..!

ಯುವ ಜನತೆಯಲ್ಲಿ ʻಕಿಡ್ನಿ ಸ್ಟೋನ್‌ʼ ಸಮಸ್ಯೆ ಹೆಚ್ಚುತ್ತಿರೋದಕ್ಕೆ ಇದೇ ಕಾರಣ..!

ಅಲ್ಲದೆ ಇದೇ ವೇಳೆ ಅನರ್ಹವೆಂದು ಕಂಡುಬಂದ ಕಾರ್ಡ್‌ಗಳನ್ನು ನೇರವಾಗಿ ರದ್ದುಗೊಳಿಸದೆ, ಅವುಗಳನ್ನು ಎಪಿಎಲ್ (APL) ಕಾರ್ಡ್‌ಗಳಾಗಿ ವರ್ಗಾಯಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. “ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಪಡಿರ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು, ಯಾವೊಂದು ಕಾರ್ಡ್ಗಳನ್ನೂ ರದ್ದು ಪಡಿಸುವುದಿಲ್ಲ. ಅನರ್ಹ ಕಾರ್ಡ್ಗಳನ್ನು ನಾವು ಎಪಿಎಲ್ಗೆ ವರ್ಗಾಯಿಸುತ್ತೇವೆ. ಕಾಳಸಂತೆಗೆ ಮಾರಾಟವಾಗುವ ಪಡಿತರ ಅಕ್ರಮ ತಡೆಯಲು ಸುಮಾರು 1497 FIRಗಳನ್ನು ದಾಖಲಿಸಿದ್ದು, 50 ಕೋಟಿ ರೂ ಪಡಿತರ ವಶಪಡಿಸಿಕೊಂಡಿದ್ದೇವೆ” ಎಂದು ಸಚಿವರು ವಿವರಿಸಿದ್ದಾರೆ.

ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದೇ..?
ಕರ್ನಾಟಕದಲ್ಲಿ ಹೊಸ ಎಪಿಎಲ್ (APL – Non-PHH) ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ. ಬಡತನ ರೇಖೆಗಿಂತ ಮೇಲಿರುವ (Above Poverty Line) ಯಾವುದೇ ಕುಟುಂಬದವರು ಈ ಕಾರ್ಡ್‌ಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ವಾರ್ಷಿಕ ಆದಾಯ ಹೆಚ್ಚಿರುವವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಮತ್ತು 4 ಚಕ್ರದ ವಾಹನ ಹೊಂದಿರುವವರು ಕೂಡಾ ಎಪಿಎಲ್‌ ಕಾರ್ಡ್‌ ಪಡೆಯಬಹುದು.

ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ..?
ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ Ahara Karnataka Portal ಗೆ ಭೇಟಿ ನೀಡಿ “e-Services” ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ “New Ration Card (APL)” ಆಯ್ದುಕೊಂಡು, “New Ration Card Request” ಮೇಲೆ ಕ್ಲಿಕ್ ಮಾಡಿ. ಕುಟುಂಬದ ಮುಖ್ಯಸ್ಥರು ಮತ್ತು ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ಪರಿಶೀಲನೆ (Verification) ಪೂರ್ಣಗೊಳಿಸಿ. ಅರ್ಜಿ ಯಶಸ್ವಿಯಾದ ನಂತರ ಸ್ವೀಕೃತಿ ಸಂಖ್ಯೆ (Acknowledgement Number) ದೊರೆಯುತ್ತದೆ. ನಂತರ ಇಲಾಖೆಯ ಪರಿಶೀಲನೆ ಮುಗಿದು ಸ್ಪೀಡ್ ಪೋಸ್ಟ್ ಮೂಲಕ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ.

ಈ ದಾಖಲೆ ಕೈಲಿರಲಿ : ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು) ಹಾಗೂ ಇತ್ತೀಚಿನ ವಿದ್ಯುತ್ ಬಿಲ್ (Electricity Bill) ಜೊತೆಗೆ ಕಾರ್ಡ್‌ನಲ್ಲಿರುವ ಸದಸ್ಯರೆಲ್ಲರ ಇತ್ತೀಚಿನ ಭಾವಚಿತ್ರಗಳು ಇರಬೇಕು.

Tags: #ಬಿಪಿಎಲ್ ಕಾರ್ಡ್ #ಆದಾಯ ತೆರಿಗೆ #ಆದಾಯಮಿತಿ #BPLCard #IncomeTax #IncomeLimit
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • 91ರಿಂದ 65 ಕೆಜಿಗೆ ಇಳಿದ ನಟಿ ನಮಿತಾ : ಆಪರೇಷನ್‌ ಅಲ್ಲ..!
  • ಯುವ ಜನತೆಯಲ್ಲಿ ʻಕಿಡ್ನಿ ಸ್ಟೋನ್‌ʼ ಸಮಸ್ಯೆ ಹೆಚ್ಚುತ್ತಿರೋದಕ್ಕೆ ಇದೇ ಕಾರಣ..!
  • BPL ಕಾರ್ಡ್‌ ಆದಾಯಮಿತಿ 3 ಲಕ್ಷಕ್ಕೆ ಏರಿಕೆ : APL ಕಾರ್ಡ್‌ದಾರರಿಗೂ ಶುಭ ಸುದ್ದಿ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

91ರಿಂದ 65 ಕೆಜಿಗೆ ಇಳಿದ ನಟಿ ನಮಿತಾ : ಆಪರೇಷನ್‌ ಅಲ್ಲ..!

91ರಿಂದ 65 ಕೆಜಿಗೆ ಇಳಿದ ನಟಿ ನಮಿತಾ : ಆಪರೇಷನ್‌ ಅಲ್ಲ..!

July 25, 2026
ಯುವ ಜನತೆಯಲ್ಲಿ ʻಕಿಡ್ನಿ ಸ್ಟೋನ್‌ʼ ಸಮಸ್ಯೆ ಹೆಚ್ಚುತ್ತಿರೋದಕ್ಕೆ ಇದೇ ಕಾರಣ..!

ಯುವ ಜನತೆಯಲ್ಲಿ ʻಕಿಡ್ನಿ ಸ್ಟೋನ್‌ʼ ಸಮಸ್ಯೆ ಹೆಚ್ಚುತ್ತಿರೋದಕ್ಕೆ ಇದೇ ಕಾರಣ..!

July 25, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.