ನಮಿತಾ ಗೊತ್ತಿರಬೇಕಲ್ಲವೇ..? ನಮಿತಾ ಮುಖೇಶ್ ವಂಕವಾಲಾ (ನಮಿತಾ ಕಪೂರ್). ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ನೀಲಕಂಠ’ ಮತ್ತು ‘ಹೂ’ ಹಾಗೂ ದರ್ಶನ್ ಅವರ ‘ಇಂದ್ರ’ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾಗಿದ್ದ ನಟಿ. ಒಂದಾನೊಂದು ಕಾಲಕ್ಕೆ ಸೆನ್ಸೇಷನ್ ಸೃಷ್ಟಿಸಿದ್ದ ಈ ನಟಿ.. ಮದುವೆಯ ನಂತರ ಅದ್ಯಾವ ಪರಿ ಊದಿಕೊಂಡಿದ್ದರು ಎಂದರೆ.. ಅಚ್ಚರಿಯಾಗುವಂತಿತ್ತು. ದೇಹದ ತೂಕ 90ರಿಂದ 100 ಕೆಜಿಗೆ ಹೋಗಿತ್ತು. ಆದರೆ ಅದು ಈಗಿಲ್ಲ. ನಮಿತಾ ಅವರ ದೇಹ ತೂಕ ಈಗ 60-65ಕ್ಕೆ ಇಳಿದಿದೆ. ಹಾಗಂತ ಅವರೇನು ಆಪರೇಷನ್ ಮಾಡಿಸಿಕೊಂಡಿಲ್ಲ.
2017ರಲ್ಲಿ ಮದುವೆ ಆಗುವ ಟೈಮ್‌ನಲ್ಲಿ ಅವರು ದಪ್ಪ ಆಗಿದ್ದ ನಮಿತಾ, ಆ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮತ್ತೆ ಸಣ್ಣಗಾಗಿ ದಪ್ಪಗಾಗಿದ್ದರು. ದೇಹ ತೂಕ ಹೆಚ್ಚಾಗಲು ಹಾರ್ಮೋನ್ ಅಸಮತೋಲನ, ಗರ್ಭಧಾರಣೆ ಮತ್ತು Emotional Eating ಪ್ರಮುಖ ಕಾರಣಗಳಾಗಿದ್ದವು. ಜೊತೆಗೆ ಅವರು ದೀರ್ಘಕಾಲದವರೆಗೆ ಪಿಸಿಓಡಿ (PCOD) ಮತ್ತು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಸಿನಿಮಾಗಳ ಅವಕಾಶಗಳು ಕಡಿಮೆಯಾದಾಗ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದ ನಮಿತಾ ಝಂಕ್ ಫುಡ್ ಆದ ಪಿಜ್ಜಾ, ಐಸ್‌ಕ್ರೀಮ್, ನಾನ್ ವೆಜ್, ಡ್ರಿಂಕ್ಸ್ ಹೆಚ್ಚು ಮಾಡಿಕೊಂಡಿದ್ದರು. ಇದಕ್ಕಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿಯೂ ಆಗಿದ್ದರು. ಆದರೆ ಇದೆಲ್ಲವೂ ಈಗ ಇತಿಹಾಸ. ಅವರೀಗ ಜಸ್ಟ್ 65 ಕೆಜಿ. ಹಾಗಂತ ಅವರೇನೂ ಆಪರೇಷನ್ ಮಾಡಿಸಿಕೊಂಡಿಲ್ಲ.
ದೇಹದ ತೂಕ ಇಳಿಸಲು ಗ್ಯಾಸ್ಟ್ರಿಕ್ ಸ್ಲೀವ್ ಸರ್ಜರಿ (Sleeve Gastrectomy) (ಈ ಆಪರೇಷನ್‌ನಲ್ಲಿ ಹೊಟ್ಟೆಯ (Stomach) ಸುಮಾರು 80% ಭಾಗವನ್ನು ಕತ್ತರಿಸಿ ಹೊರಗೆ ತೆಗೆಯಲಾಗುತ್ತದೆ.), ಗ್ಯಾಸ್ಟ್ರಿಕ್ ಬೈಪಾಸ್ (Roux-en-Y Gastric Bypass) (ದರಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಒಂದು ಸಣ್ಣ ಚೀಲವನ್ನು (Pouch) ನಿರ್ಮಿಸಿ, ಅದನ್ನು ನೇರವಾಗಿ ಸಣ್ಣ ಕರಳಿಗೆ ಸಂಪರ್ಕಿಸಲಾಗುತ್ತದೆ.) ಹಾಗೂ ಲಿಪೊಸಕ್ಷನ್ (Liposuction) ಅಂದರೆ ದೇಹದ ನಿರ್ದಿಷ್ಟ ಭಾಗಗಳಲ್ಲಿ (ಹೊಟ್ಟೆ, ತೊಡೆ ಇತ್ಯಾದಿ) ಜಮೆಯಾಗಿರುವ ಹಠಮಾರಿ ಕೊಬ್ಬನ್ನು ಪೈಪ್ ಮೂಲಕ ಹೀರಿ ಹೊರತೆಗೆಯುವ ಕಾಸ್ಮೆಟಿಕ್ ಸರ್ಜರಿ. ಇಂತಹದ್ಯಾವುದೋ ಆಪರೇಷನ್ ಮಾಡಿಸಿಕೊಂಡಿರಬೇಕು ಎಂದು ಅಂದುಕೊಂಡಿದ್ದರು. ಆದರೆ ಅಲ್ಲ..
ವಿಶೇಷ ಸ್ವಾಸ್ಥ್ಯ ಪ್ರೋಗ್ರಾಂ (Shakshi Wellness Programme) ಮೂಲಕ ಸಣ್ಣಗಾಗಿದ್ದಾರೆ. ಕೇವಲ ಜಿಮ್ ಮತ್ತು ಯೋಗದಿಂದ ಆರಂಭದಲ್ಲಿ ತೂಕ ಇಳಿಯದಿದ್ದಾಗ, ಅವರು ಪ್ರಸಿದ್ಧ ವೆಲ್ನೆಸ್ ಸಂಸ್ಥೆಯೊಂದರ ವೈಜ್ಞಾನಿಕ ತೂಕ ಇಳಿಕೆ ಕಾರ್ಯಕ್ರಮದ ನೆರವು ಪಡೆದಿದ್ದಾರೆ. ಕವನ್ನು ತಕ್ಷಣವೇ ಇಳಿಸಬೇಕೆಂಬ ಹಠ ಬಿಟ್ಟು, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತಾ ಹೋಗಿದ್ದಾರೆ. ಹಾರ್ಮೋನ್ ಏರುಪೇರಿದ್ದಾಗ ಜಂಕ್ ಫುಡ್ ತಿನ್ನುವ ಕ್ರೇವಿಂಗ್ಸ್ ನಿಯಂತ್ರಿಸಲು, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಪ್ರೋಟೀನ್ ಮತ್ತು ನಾರಿನಂಶ (Fiber) ಹೆಚ್ಚಿರುವ ಸಮತೋಲಿತ ಆಹಾರಕ್ಕೆ ಶಿಫ್ಟ್ ಆಗಿದ್ಧಾರೆ. ಹಾರ್ಮೋನ್ ಸಮಸ್ಯೆ ಇರುವಾಗ ಅತಿಯಾದ ಕಾರ್ಡಿಯೋ ದೇಹದ ಮೇಲೆ ಮತ್ತಷ್ಟು ಒತ್ತಡ ಹೇರುತ್ತದೆ. ಅದಕ್ಕಾಗಿ ಅವರು ತಜ್ಞರ ಮಾರ್ಗದರ್ಶನದಲ್ಲಿ ಹಂತ-ಹಂತವಾಗಿ ತೂಕ ಮತ್ತು ಇಂಚ್ ಲಾಸ್ (Inch Loss) ಮಾಡುವಂತಹ ಕಸ್ಟಮೈಸ್ಡ್ ವ್ಯಾಯಾಮಗಳನ್ನು ಮಾಡಿದ್ದಾರೆ.
ಫಿಟ್‌ನೆಸ್‌ನಲ್ಲಿ 80% ಡಯೆಟ್, 20% ವರ್ಕೌಟ್. ಇದರಲ್ಲಿ ಶಿಸ್ತು ಮುಖ್ಯವಾಗುತ್ತದೆ. ಬಾಡಿ ಆಗೋದು ಜಿಮ್‌ನಲ್ಲಿ ಅಲ್ಲ, ಕಿಚನ್‌ನಲ್ಲಿ ಅಲ್ಲ ಎಂದಿರುವ ನಮಿತಾ ಈಗ ಸ್ಲಿಮ್ & ಸ್ಮಾರ್ಟ್.



