ತಮ್ಮ ಸರ್ಕಾರ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಎಲ್ಲ ಪಕ್ಷಗಳೂ ಹೇಳುತ್ತಲೇ ಇರುತ್ತವೆ. ಆದರೆ ನಡೆಯವುದು ಮಾತ್ರ ಬೇರೆ. ಪಕ್ಷಗಳು ಬದಲಾಗಬಹುದು. ಅಧಿಕಾರಿಗಳು ಬದಲಾಗಲ್ಲ. ವಿಶೇಷ ಎಂದರೆ ಅವರ ವಿರುದ್ಧ ಕ್ರಮವೂ ಇರಲ್ಲ. ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ₹2,357.92 ಕೋಟಿ ಮೊತ್ತದ ಭ್ರಷ್ಟಾಚಾರವನ್ನು ಪತ್ತೆಹಚ್ಚಿದ್ದಾರೆ. ಇದೇನೂ ಇಂದು ನಿನ್ನೆಯದಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವಧಿಯ ಒಟ್ಟು ಭ್ರಷ್ಟಾಚಾರದ ವಿಷಯ. ಆದರೆ ಸರ್ಕಾರ ಅನುಮತಿಯನ್ನೇ ಕೊಡ್ತಿಲ್ಲ. ಅನುಮತಿಯನ್ನೇ ಕೊಡದೇ ಹೋದರೆ ತನಿಖೆ ಆಗುವುದು ಹೇಗೆ..? ಶಿಕ್ಷೆ ಆಗುವುದು ಹೇಗೆ..?
ಭ್ರಷ್ಟಾಚಾರ ತಡೆ ಕಾಯ್ದೆಯ (PC Act) ಸೆಕ್ಷನ್ 17A ಪ್ರಕಾರ, ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ತೆಗೆದುಕೊಂಡ ನಿರ್ಧಾರಗಳು ಅಥವಾ ಶಿಫಾರಸುಗಳ ಕುರಿತು ತನಿಖೆ ನಡೆಸಲು ಸಂಬಂಧಪಟ್ಟ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ. ಆದರೆ, ಲಂಚ ಪಡೆಯುವಾಗ ಸಿಕ್ಕಿಬಿದ್ದಾಗ (Trap) ಅಥವಾ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಈ ನಿಯಮ ಅನ್ವಯಿಸುವುದಿಲ್ಲ.
ಸರ್ಕಾರದ ಅನುಮತಿ ಬೇಕು ಎನ್ನುವ ನಿಯಮದ ಉದ್ದೇಶ ಏನೆಂದರೆ ದ್ವೇಷ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಅಧಿಕಾರಿಗಳ ಮೇಲೆ ದಾಖಲಾಗುವ ಸುಳ್ಳು ದೂರುಗಳು ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳನ್ನು ತಡೆಯುವುದು. ಆದರೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅಥವಾ ಸಿಬಿಐ ಪ್ರಸ್ತಾವನೆ ಸಲ್ಲಿಸಿದರೂ, ಸರ್ಕಾರಗಳು ಅನುಮತಿ ನೀಡಲು ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ವಿಳಂಬ ಮಾಡುತ್ತವೆ. ಈಗ ಆಗಿರುವುದೂ ಅದೇ.
ಕಳೆದ ಆರು ವರ್ಷಗಳಲ್ಲಿ ಕರುನಾಡಿನ ‘ಸರ್ಕಾರಿ ಬಾಬು’ಗಳ ಭ್ರಷ್ಟಾಚಾರದ ಗಣಿ ಶೋಧಿಸಿ 2,357.92 ಕೋಟಿ ರುಪಾಯಿ ಮೊತ್ತದ ಹಗರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದು, ಕಂದಾಯ ಇಲಾಖೆಯೊಂದರಲ್ಲೇ ಪ್ರತ್ಯೇಕವಾಗಿ ಸುಮಾರು 1,500 ಕೋಟಿ ಮೊತ್ತದ ಅಕ್ರಮಗಳು ನಡೆದಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಕಳಂಕ ಹೊತ್ತಿರುವ ನಾಲ್ವರು ಐಎಎಸ್ ಅಧಿಕಾರಿಗಳು ಸೇರಿ ಇತರ ಅಧಿಕಾರಿಗಳ ವಿರುದ್ಧ ತನಿಖೆಗೆ ಸರ್ಕಾರದ ಪೂರ್ವಾನುಮತಿ ಕೋರಿದ್ದಾರೆ. ಆದರೆ ಲೋಕಾಯುಕ್ತದವರು ಅದೆಷ್ಟೇ ʻನೆನಪಿನ ಪತ್ರʼ ಕಳುಹಿಸಿ ಅನುಮತಿ ಕೇಳಿದರೂ, ಸರ್ಕಾರ ಗ್ರೀನ್ ಸಿಗ್ನಲ್ ಕೊಡ್ತಿಲ್ಲ.
2020-2026 ವರೆಗೆ ಕಂದಾಯ, ನಗರಾಭಿವೃದ್ಧಿ, ಮುದ್ರಾಂಕ ಮತ್ತು ನೋಂದಣಿ, ಲೋಕೋಪಯೋಗಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿ 5 ಇಲಾಖೆಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಪತ್ತೆ ಹಚ್ಚಿದ್ದಾರೆ. ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ಪುರಾವೆ ಸಂಗ್ರಹಿಸಿರುವ ಪೊಲೀಸರು, ಭ್ರಷ್ಟಾಚಾರದ ಕುರಿತು ಅಧಿಕೃತವಾಗಿ ಆರೋಪಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಆಯಾ ಇಲಾಖೆಗಳಿಗೆ ಅನುಮತಿ ಕೋರಿದ್ದಾರೆ.
ಅಂದಹಾಗೆ ಒಂದೊಂದು ಇಲಾಖೆಯ ಹಗರಣಗಳ ಲೆಕ್ಕ ಇಲ್ಲಿದೆ
- 2020 ನಗರಾಭಿವೃದ್ಧಿ 23-04-2021 ಮತ್ತು 26-09-25 300 ಕೋಟಿ ರು
- 2021 ಕಂದಾಯ 09-02022 ಮತ್ತು 26-08-25, 2801-26 115 ಕೋಟಿ ರು
- 2021 ಕಂದಾಯ 18-09-21 ಮತ್ತು 21-4-22 800-900 ಕೋಟಿ
- 2022 ನಗರಾಭಿವೃದ್ಧಿ 12-04-22 ಮತ್ತು 17-10-25 —
- 2023 ಡಿಪಿಎಆರ್ (5 ಇಲಾಖೆ) 7-09-23, 11-09-24, 30-10-25, 28-011-25 15 ಕೋಟಿ ರು
- 2023 ಡಿಪಿಎಆರ್, ಕಂದಾಯ 28-04-23, 24ರಲ್ಲಿ 3 ಬಾರಿ 600 ಕೋಟಿ ರು
- 2025 ಐಜಿ ಮುಂದ್ರಾಕ ಮತ್ತು ನೋಂದಣಿ 15-11025 9 ಕೋಟಿ ರು
- 2025 ನಗರಾಭಿವೃದ್ಧಿ 11-09-25 7 ಕೋಟಿ ರು
- 2025 ಐಜಿ ಮುಂದ್ರಾಕ ಮತ್ತು ನೋಂದಣಿ 29-11-25 1.56 ಕೋಟಿ
- 2025 ಮುಖ್ಯಕಾರ್ಯದರ್ಶಿ ಸರ್ಕಾರ 28-011-25 300 ಕೋಟಿ ರು
- 2025 ಐಜಿ ಸ್ಟಾಂಪ್ ಮತ್ತು ನೋಂದಣಿ 28-11-25 20 ಕೋಟಿ ರು
- 2025 ಸರ್ಕಾರದ ಮುಖ್ಯಕಾರ್ಯದರ್ಶಿ 28-08-25 12.91 ಕೋಟಿ ರು
- 2025 ಮುಖ್ಯ ಅಭಿಯಂತರ ಕಚೇರಿ 22-12-25 111 ಕೋಟಿ ರು
- 2025 ಐಜಿ ಮುದ್ರಾಂಕ ಹಾಗೂ ನೋಂದಣಿ 10-12-25 5.07 ಕೋಟಿ ರು
- 2025 ಬಿಬಿಎಂಪಿ 7-08-25 1.22 ಕೋಟಿ ರು
- 2025 ಪ್ರಧಾನ ಕಾರ್ಯದರ್ಶಿ ಕಂದಾಯ 28-0125 44 ಕೋಟಿ
- 2025 ಮುಖ್ಯಕಾರ್ಯದರ್ಶಿ ಸರ್ಕಾರ 28-8-25 1.31 ಕೋಟಿ ರು
- 2025 ಮುಖ್ಯ ಕಾರ್ಯದರ್ಶಿ ಸರ್ಕಾರ 28-08-25 5.89 ಕೋಟಿ ರು
- 2026 ನಗರಾಭಿವೃದ್ಧಿ 25-02-26 10 ಕೋಟಿ ರು.
- ಕಂದಾಯ 1,559 ಕೋಟಿ ರು
- ನಗರಾಭಿವೃದ್ಧಿ 332 ಕೋಟಿ ರು
- ಪಿಡಬ್ಲ್ಯುಡಿ 111 ಕೋಟಿ ರು
- ಮುಂದ್ರಾಕ ಮತ್ತು ನೋಂದಣಿ 35.5



