ಕನಸಿನಲ್ಲಿ ಏನೇನೋ ಬರುತ್ತದೆ. ವಾಸ್ತವದಲ್ಲಿ ಭಿಕ್ಷುಕ, ಕನಸಿನಲ್ಲಿ ಚಕ್ರವರ್ತಿಯಾಗಬಹುದು. ಇನ್ನೂ ಏನೇನೋ ಮಾಡಬಹುದು. ಆದರೆ.. ಕನಸುಗಳು ಸುಮ್ಮನೆ ಬೀಳೋದಿಲ್ಲ. ಕನಸುಗಳ ಹಿಂದೊಂದು ಸೈಕಾಲಜಿಯೂ ಇದೆ. ಜ್ಯೋತಿಷ್ಯವೂ ಇದೆ. ಇಂತಹ ಕನಸುಗಳಲ್ಲಿ ರಕ್ತ ಕಂಡರೆ.. ಅದು ಒಳ್ಳೆಯದಾ.. ಕೆಟ್ಟದ್ದಾ.. ಯಾವುದರ ಮುನ್ಸೂಚನೆ ಇರಬಹುದು.. ಹೀಗೆಲ್ಲ ಪ್ರಶ್ನೆಗಳು ಬರುತ್ತವೆ. ಕನಸಿನಲ್ಲಿ ರಕ್ತ ಕಾಣುವುದರ ಸೂಚನೆಗಳು ಒಂದೆರಡಲ್ಲ.. ಕೆಲವೊಮ್ಮೆ ಅದು ಶಕ್ತಿಯ ಸಂಕೇತ. ಹಲವು ಬಾರಿ ದುರಂತದ ಸಂಕೇತ. ಬದಲಾವಣೆಯ ಸಂಕೇತ, ಎಚ್ಚರಿಕೆ ಅಥವಾ ಹೊಸ ಅವಕಾಶಗಳ ಸಂಕೇತ.
ರಕ್ತ ಕಾಣಿಸುವ ಮಾದರಿ ಮತ್ತು ಸೂಚನೆಗಳು :
ಕನಸಿನಲ್ಲಿ ನೀವು ನಿಮ್ಮದೇ ಸ್ವಂತ ರಕ್ತವನ್ನು ನೋಡಿದರೆ ಅದು ನಿಮ್ಮ ಶಕ್ತಿ, ಚೈತನ್ಯ ಕುಸಿದಿರುವ ಮತ್ತು ಮಾನಸಿಕವಾಗಿ ಆಯಾಸಗೊಂಡಿರುವುದರ ಸೂಚನೆ.
ಕನಸಿನಲ್ಲಿ ಬೇರೆಯವರ ರಕ್ತ ನೋಡಿದರೆ ನಿಮ್ಮ ಸುತ್ತಮುತ್ತಲಿರುವ ಜನರಿಂದಲೇ ತೊಂದರೆ ಎದುರಿಸುವ, ಸಂಬಂಧಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ಸೂಚನೆ. ಅದು ಆತಂಕವೂ ಹೌದು.
ರಕ್ತ ಹರಿಯುತ್ತಿರುವುದನ್ನು ನೋಡಿದರೆ.. ನೀವು ನಷ್ಟದಲ್ಲಿದ್ದೀರಿ ಅಥವಾ ನಷ್ಟದ ಭಯದಲ್ಲಿದ್ದೀರಿ, ಯಾವುದೋ ನೋವು ಬಾಧಿಸುತ್ತಿದೆ ಎಂದರ್ಥ.
ಗಾಯದಿಂದ ರಕ್ತ ಬರುತ್ತಿರುವಂತೆ ಕನಸನ್ನು ನೋಡಿದರೆ ಅದು ಮುಂದಿನ ದಿನಗಳಲ್ಲಿನ ಸವಾಲುಗಳನ್ನು, ಹೋರಾಟದ ಸೂಚನೆ.
ಇಲ್ಲಿ ಕನಸಿನಲ್ಲಿ ರಕ್ತ ಕಾಣಿಸುವುದಕ್ಕೂ ಕಾರಣಗಳಿವೆ. ಸೈಕಾಲಜಿಕಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡಿದರೆ..ನಮ್ಮ ಭಾವನೆಗೆ, ಮನಸ್ಸಿಗೆ ಅಥವಾ ದೈಹಿಕ ಸ್ಥಿತಿ ಗತಿಗೆ ಸಂಬಂಧಿಸಿರುತ್ತದೆ.ಅತಿಯಾದ ಒತ್ತಡದಲ್ಲಿದ್ದರೆ, ಭಯ ಇದ್ದರೆ, ಯಾವಾಗೂ ಅದೇ ಚಿಂತೆ ಮಾಡುತ್ತಿದ್ದರೆ ರಕ್ತ ಕಾಣಿಸಬಹುದು. ಆರೋಗ್ಯ ಕೈತಪ್ಪುತ್ತಿದ್ದರೂ ರಕ್ತ ಕಾಣಿಸಬಹುದು.ನಿಮ್ಮ ಸಂಬಂಧ ಅಥವಾ ಜೀವನದ ಘಟನೆಯಿಂದ ನಿಮಗೆ ಅತಿಯಾಗಿ ನೋವಾಗಿದ್ದರೆ ಅಥವಾ ದುಃಖಿತರಾಗಿದ್ದರೆ ಈ ಕನಸು ಬೀಳುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಾಗಬಹುದಾದ ಬದಲಾವಣೆಯನ್ನು, ಹೋರಾಟವನ್ನು ಮತ್ತು ಪ್ರಮುಖ ನಿರ್ಧಾರಗಳ ಸಂಕೇತವಾಗಿದೆ.
ವೈಜ್ಞಾನಿಕ ದೃಷ್ಟಿಕೋನದ ಪ್ರಕಾರ..ನಮ್ಮ ಗುಪ್ತ ಭಾವನೆಗಳ ಮೇಲೆ ಪರಿಣಾಮ ಬೀರುವುದರ ಸಂಕೇತ. ನೀವು ರಕ್ತದ ಕನಸುಗಳನ್ನು ನೋಡಿದರೆ ಅದು ನೀವು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಧ್ಯಾನವನ್ನು, ಯೋಗವನ್ನು ಮತ್ತು ಸ್ನೇಹಿತರೊಂದಿಗೆ ಸಂಭಾಷಣೆಯನ್ನು ಮಾಡಿಕೊಳ್ಳಬೇಕು.ನಿಮ್ಮ ಜೀವನದಲ್ಲಿ ಇತ್ತೀಚೆಗಷ್ಟೇ ನಡೆದಂತಹ ಘಟನೆಗಳ ಬಗ್ಗೆ ಯೋಚಿಸಬೇಕೆಂಬುದನ್ನು ಒತ್ತಿ ಹೇಳುತ್ತದೆ. ಮಾನಸಿಕವಾಗಿ ನೊಂದಿದ್ದರೆ ಕನಸಿನಲ್ಲಿ ರಕ್ತ ಸುರಿಯುತ್ತಿರುವುದು ಸಹಜ. ಅದು ಮಾನಸಿಕ ಸ್ಥಿತಿಗತಿಯ ವಿಷಯ.



