ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ. ಐಪಿಎಲ್ 2026ರಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಭಾರೀ ಗಾಳಿಸುದ್ದಿಗಳ ಮಧ್ಯೆ ಸಿಲುಕಿದ್ದಾರೆ. ಮುಂಬೈ ಇಂಡಿಯನ್ಸ್ ಪ್ಲೇಆಫ್‌ನಿಂದ ಹೊರಬಿದ್ದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಹಾರ್ದಿಕ್ ಪಾಂಡ್ಯ ಸುದ್ದಿ ನಂ.1
ಇನ್‌ಸ್ಟಾಗ್ರಾಮ್ ಅನ್‌ಫಾಲೋ ಡ್ರಾಮಾ
ಮುಂಬೈ ಇಂಡಿಯನ್ಸ್ ಅಧಿಕೃತ ಖಾತೆಯನ್ನು ಹಾರ್ದಿಕ್ ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಕೆಲವು ವರದಿಗಳ ಪ್ರಕಾರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ತಂಡದೊಂದಿಗಿನ ವ್ಯತ್ಯಾಸ ಅಥವಾ MI ನಿಂದ ನಿರ್ಗಮನದ ಸೂಚನೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ರೋಹಿತ್ ಶರ್ಮಾ, ಬೂಮ್ರಾ ಅವರನ್ನು ಫಾಲೋ ಮಾಡ್ತಿಲ್ಲ. ಆದರೆ ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವರನ್ನು ಈಗಲೂ ಫಾಲೋ ಮಾಡ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಸುದ್ದಿ ನಂ.2
CSKಗೆ ಟ್ರೇಡ್ ಆಗುವ ಸಾಧ್ಯತೆ – ಶಿವಮ್ ದುಬೆ ಜೊತೆ ಸ್ವಾಪ್ ಮಾಡಲಾಗುತ್ತಿದೆ ಎಂಬ ಸುದ್ದಿಗಳಿವೆ. ಚೆನ್ನೈ ತಂಡದಲ್ಲಿ ಶಿವಂ ದುಬೆ ಈ ಬಾರಿ ಉತ್ತಮ ಫಾರ್ಮ್‌ನಲ್ಲೇನೂ ಇಲ್ಲ. ಸಂಜು ಸ್ಯಾಮ್ಸನ್ ಮತ್ತು ಕಾಂಬೋಜ್ ಆಟದಿಂದಾಗಿ ಅತ್ಯುತ್ತಮವಾಗಿ ಆಡುತ್ತಿದೆ ಎಂಬಂತೆ ಕಾಣುತ್ತಿದೆ. 2027 ಐಪಿಎಲ್‌ಗೆ ಮುಂಬೈ ಬಿಟ್ಟು ಬೇರೆ ತಂಡ ಸೇರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಹಾರ್ದಿಕ್ ಪಾಂಡ್ಯ ಸುದ್ದಿ ನಂ.3
ಮುಂಬೈ ನಾಯಕತ್ವದಿಂದ ಔಟ್
ಐಪಿಎಲ್ 2026ರಲ್ಲಿ MI ಕಳಪೆ ಪ್ರದರ್ಶನ ಕಂಟಿನ್ಯೂ ಆಗಿದೆ. ಹಾರ್ದಿಕ್ ಪಾಂಡ್ಯ ಅವರು ಸೋಲಿನ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳುತ್ತಿಲ್ಲ. ಪ್ರತಿಬಾರಿ ಸೋತಾಗಲೂ ಹಿರಿಯ ಆಟಗಾರರು ನನಗೆ ಸಹಾಯ ಮಾಡ್ತಿಲ್ಲ, ಸಹಕಾರ ಕೊಡುತ್ತಿಲ್ಲ ಎನ್ನುತ್ತಲೇ ಇದ್ದಾರೆ. ಇದು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ಇಷ್ಟವಾಗುತ್ತಿಲ್ಲ. ಅದಕ್ಕೆ ತಕ್ಕಂತೆ ಸ್ವತಃ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮ್ಯಾಜಿಕ್ ಕಳೆದುಕೊಂಡಿದ್ದಾರೆ. ಹಾರ್ದಿಕ್ ಅವರ ನಾಯಕತ್ವ ಮತ್ತು ವೈಯಕ್ತಿಕ ಪ್ರದರ್ಶನ ಟೀಕೆಗೆ ಗುರಿಯಾಗಿದೆ. MI ಮ್ಯಾನೇಜ್‌ಮೆಂಟ್ ಅವರನ್ನು ಬದಲಿಸಲು ಯೋಚಿಸುತ್ತಿದೆ ಎಂಬ ಮಾತುಗಳಿವೆ.
ಹಾರ್ದಿಕ್ ಪಾಂಡ್ಯ ಸುದ್ದಿ ನಂ.4
ಇನ್ನು ಐಪಿಎಲ್‌ನಲ್ಲಿ ಕ್ರಿಕೆಟಿಗರ ಗೆಳತಿಯರಿಂದ ಬುಕ್ಕಿಗಳಿಗೆ ಮೆಸೇಜ್ ಹೋಗುತ್ತಿದೆ ಎಂಬ ವರದಿಗಳಿವೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ದೂರು ನೀಡಿದೆಯಂತೆ. ಅದನ್ನು ಬಿಸಿಸಿಐ ಸೀರಿಯಸ್ ಆಗಿ ಪರಿಗಣಿಸಿದೆಯಂತೆ. ಇದರ ಎಫೆಕ್ಟ್ ಹಾರ್ದಿಕ್ ಹಾಗೂ ಗೆಳತಿ ಮಾಡೆಲ್ ಮಹಿಕಾ ಶರ್ಮಾ ಅವರಿಗೆ ತಟ್ಟಿದೆ. ಇದರಿಂದ ರೊಚ್ಚಿಗೆದ್ದಿರುವ ಹಾರ್ದಿಕ್, ತಂಡದ ವಿರುದ್ಧ ಮುನಿಸಿಕೊಂಡಿದ್ಧಾರಂತೆ.
ಇದೆಲ್ಲದರ ಮಧ್ಯೆ ಹಾರ್ದಿಕ್ ಅವರ ಬೆನ್ನಿನ ಗಾಯದ ಸಮಸ್ಯೆ ಮತ್ತೆ ಮರುಕಳಿಸಿದ್ದು, ಇದರಿಂದಾಗಿ ಅವರು ಕೆಲವು ನಿರ್ಣಾಯಕ ಪಂದ್ಯಗಳಿಂದ ಹೊರಗುಳಿಯಬೇಕಾಯಿತು ಎಂದು ವರದಿಯಾಗಿದೆ.



