ಭಾರತ ತಂಡದಲ್ಲಿ ದಶಕಗಳ ಕಾಲ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ವಿರೇಂದ್ರ ಸೆಹ್ವಾಗ್ರ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ಎಲ್ಲೆಡೆ ಹಬ್ಬಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಅಫೇರ್ ಹೊಂದಿದ್ದಾರೆ ಎಂಬ ವದಂತಿ ಹರಡುತ್ತಿದೆ. ದಶಕಗಳ ಕಾಲ ಕ್ರಿಕೆಟ್ ಅಂಗಳದಲ್ಲಿ, ಸ್ಫೋಟಕ ಬ್ಯಾಟಿಂಗ್ನಿಂದ ರಂಜಿಸಿದ್ದ ಸೆಹ್ವಾಗ್ ಬಾಳಲ್ಲಿ ಬಿರುಕು ಮೂಡಿಸಿರುವುದು ಅಭಿಮಾನಿಗಳಿಗೆ ಆಘಾತವಾಗಿದೆ. ಇವೆಲ್ಲಾ ವದಂತಿಗಳು ಸುಳ್ಳಾಗಿರಲಿ ಎಂಬುದು ಕೂಡಾ ಅಭಿಮಾನಿಗಳ ಆರೈಕೆಯಾಗಿದೆ.
ಭಾರತೀಯ ಕ್ರಿಕೆಟ್ ಟೀಂಗೆ ಸಿಡಿಲಬ್ಬರದ ಆರಂಭ ಕೊಡ್ತಿದ್ದ ವೀರೇಂದ್ರ ಸೆಹ್ವಾಗ್ ಕುಟುಂಬದಲ್ಲಿಯೇ ಸಿಡಿಲು ಹೊಡೆದಿದೆ. ಸೆಹ್ವಾಗ್ ಪತ್ನಿ, ಸೆಹ್ವಾಗ್ ಗೆಳೆಯನ ಜೊತೆಯಲ್ಲಿಯೇ ಅಫೇರ್ ಇಟ್ಕೊಂಡಿದ್ದಾರಂತೆ. ಸೆಹ್ವಾಗ್ ಅವರ ಪತ್ನಿ ಆರತಿ ಅಹ್ಲಾವತ್. ಸೆಹ್ವಾಗ್ ಮತ್ತು ಆರತಿ ಅವರದ್ದು ಚೈಲ್ಡ್ ಹುಡ್ ಲವ್ ಸ್ಟೋರಿ.
ಇವರಿಬ್ರೂ ಒಬ್ಬರನ್ನೊಬ್ರು ಮೊದಲ ಬಾರಿಗೆ ನೋಡಿದಾಗ ಸೆಹ್ವಾಗ್‌ಗೆ 7 ವರ್ಷ. ಆರತಿಗೆ 5 ವರ್ಷ ಆಗಿತ್ತಂತೆ. ಅದಾದ ಮೇಲೆ ಸೆಹ್ವಾಗ್ ಪ್ರಪೋಸ ಮಾಡಿದ್ದು, ಅವರಿಗೆ 21 ವರ್ಷ ಇದ್ದಾಗ. 2002ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆ ಆಗಿ 23 ವರ್ಷ ಆದ್ಮೇಲೆ ಅಫೇರ್ ಶುರುವಾಯ್ತಾ..? ಏನೋಪ್ಪಾ..
ಡೌಟ್ ಶುರು ಆಗಿರೋದ್ ಯಾಕೆ ಅಂದ್ರೆ.. ಇಬ್ಬರೂ ಈಗ ಇನ್ಸ್‌ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಇತ್ತೀಚಗಷ್ಟೇ ಆರತಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡ್ಕೊಂಡ್ರು. ವೀರೂ.. ಒಂದು ಪೋಸ್ಟ್ ಕೂಡಾ ಹಾಕಲಿಲ್ಲ. ಪ್ರತೀ ವರ್ಷ ಹೆಂಡತಿಯ ಹುಟ್ಟುಹಬ್ಬಕ್ಕೆ ಚೆಂದದ ಶಾಯರಿಯನ್ನೋ, ಕವಿತೆಯನ್ನೋ ಬರೆದು ಪೋಸ್ಟ್ ಮಾಡ್ತಿದ್ದ ವೀರೂ, ಈ ವರ್ಷ ಹೆಂಡತಿ ಹುಟ್ಟುಹಬ್ಬ ಗೊತ್ತೇ ಇಲ್ಲದಂತೆ ಇದ್ ಬಿಟ್ರು. ದೀಪಾವಳಿ ಟೈಂನಲ್ಲಿ ಒಂದು ಪೋಟೋ ಪೋಸ್ಟ್ ಮಾಡಿದ್ರು. ಆದರೆ.. ಆ ಫೋಟೋದಲ್ಲಿ ವೀರೂ ತಾಯಿ, ಮಕ್ಕಳು ಮಾತ್ರ ಇದ್ರು. ಹೆಂಡತಿ ಇರಲಿಲ್ಲ.
ಸಂಥಿಂಗ್ ಈಸ್ ರಾಂಗ್ ಅಂದ್ಕೊಂಡು ಬೆನ್ನು ಹತ್ತಿದ ಪತ್ರಕರ್ತರ ಎದುರು ಬಂದ ಹೆಸರು ಮಿಥುನ್ ಮನ್ಹಾಸ್ ಅನ್ನೋವ್ನದ್ದು. ಈ ಮಿಥುನ್ ಮನ್ಹಾಸ್.. ಈಗ ಬಿಸಿಸಿಐ ಅಧ್ಯಕ್ಷ. ಸೆಹ್ವಾಗ್ ಅವರಿಗೆ ಕ್ಲೋಸ್ ಫ್ರೆಂಡ್. ಮಿಥುನ್ ಮತ್ತು ಸೆಹ್ವಾಗ್ ಇಬ್ರೂ ಒಟ್ಟಿಗೇ ಕ್ರಿಕೆಟ್ ಆಡ್ತಿದ್ದವ್ರು. ಸೆಹ್ವಾಗ್.. ಸ್ಟಾರ್ ಪ್ಲೇಯರ್ ಆದರೆ, ಮಿಥುನ್.. ರಣಜಿ ಕ್ರಿಕೆಟ್ಟನ್ನಷ್ಟೇ ಆಡಿದ್ರು. ಈಗ ಬಾಲ್ಯ ಸ್ನೇಹಿತನಿಗೇ ಮೋಸ ಮಾಡಿದ್ದಾನಂತೆ.
ವೀರೇಂದ್ರ ಸೆಹ್ವಾಗ್, ಕ್ರಿಕೆಟ್ ಜಗತ್ತಿನ ಇತರೆ ಆಟಗಾರರ ಹಾಗಲ್ಲ. ವೀರೂಗೆ ಶತ್ರುಗಳೇ ಇಲ್ಲ. ವೀರೂ ಯಾರನ್ನ ಬೈದ್ರು.. ಹೊಗಳಿದ್ರೂ.. ಅದು 100% ಪ್ಯೂರ್ ಆಗಿರ್ತಾ ಇತ್ತು. ದ್ವೇಷಕ್ಕೆ ನೋ ಚಾನ್ಸ್. ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿದ್ದ ವೀರೂ, ತಮ್ಮ ಕ್ರಿಕೆಟ್ ಜಗತ್ತಿನಲ್ಲಿ ಕಾಂಟ್ರವರ್ಸಿ ಮಾಡ್ಕೊಂಡವರೇ ಅಲ್ಲ. ಈಗ ನೋಡಿದ್ರೆ.. ಅವರ ಲೈಫೇ ಬರ್ಬಾದ್ ಆಗ್ತಾ ಇದೆ.
ಅಂದಹಾಗೆ ಇಂಥಾದ್ದೊಂದು ಮೋಸ ಈ ಹಿಂದೆ ಈಗ ಆರ್‌ಸಿಬಿ ಕೋಚ್ ಆಗಿರೋ ದಿನೇಶ್ ಕಾರ್ತಿಕ್ ಅವರಿಗೆ ಆಗಿತ್ತು. ದಿನೇಶ್ ಕಾರ್ತಿಕ್ ಅವರ ಕ್ಲೋಸ್ ಫ್ರೆಂಡ್ ಆಗಿದ್ದ ಮುರಳಿ ವಿಜಯ್, ದಿನೇಶ್ ಕಾರ್ತಿಕ್ ಪತ್ನಿಯ ಜೊತೆ ಅಫೇರ್ ಇಟ್ಕೊಂಡಿದ್ದ. ಕೊನೆಗೆ ದಿನೇಶ್ ಕಾರ್ತಿಕ್ ಅವರಿಗೆ ಡಿವೋರ್ಸ್ ಕೊಟ್ಟಿದ್ದ ಆಕೆ, ಮುರಳಿ ವಿಜಯ್‌ನೇ ಮದುವೆ ಆಗಿದ್ರು. ದಿನೇಶ್ ಕಾರ್ತಿಕ್ ವೃತ್ತಿ ಜೀವನ ಉತ್ತುಂಗಕ್ಕೇರುವ ಹಾದಿಯಲ್ಲಿದ್ದಾಗಲೇ.. ಇದು ಸಂಭವಿಸಿತ್ತು. ಆಟ, ಕೆರಿಯರ್ ಎಲ್ಲದಕ್ಕೂ ಹೊಡೆತ ಬಿದ್ದಿತ್ತು. ಆದರೆ.. ವೀರೂ ವಿಷಯದಲ್ಲಿ ಹಾಗಲ್ಲ. ಮಕ್ಕಳನ್ನು ಕ್ರಿಕೆಟರ್ ಆಗಿ ಬೆಳೆಸುವ ಹಂತದಲ್ಲಿ ಹೀಗಾಗಿದೆ. ಇದೆಲ್ಲ ನಿಜಾನೇ ಇರಬಹುದು ಅಂತ ಅನ್ನಿಸ್ತಿರೋದು ಯಾಕೆ ಅಂದ್ರೆ.. ಇದು ಸುಳ್ಳೇ ಆಗಿದ್ದರೆ. ಇಷ್ಟೊತ್ತಿಗೆ ಸೆಹ್ವಾಗ್.. ರಿಯಾಕ್ಷನ್ ಕೊಟ್ಟಿರ್ತಾ ಇದ್ರು. ಅವರು ಕೊಟ್ಟಿಲ್ಲ ಅಂದ್ರೆ.. ಇದು ನಿಜಾ ಅಂತಾನೇ ಅರ್ಥ.



