‘ಸ್ಮಾರ್ಟ್ ವೈಸ್ ಕ್ವಾಂಟ್’ (Smart Wise Quant) ಎನ್ನುವುದು ಬೆಂಗಳೂರಿನಲ್ಲಿದ್ದ ಸಂಸ್ಥೆ. ಇದು ತನ್ನ ಹೂಡಿಕೆದಾರರಿಗೆ ಶೇಕಡಾ 10 ರಿಂದ 20.. 20-30% ರಷ್ಟು ಅಧಿಕ ಲಾಭದ ಆಸೆ ತೋರಿಸಿ, ನೂರಾರು ಜನರಿಗೆ ಉಂಡೆ ನಾಮ ಇಟ್ಟಿದೆ. ಈಗ ಆಫೀಸ್ ಇದ್ದ ಜಾಗ ಅಷ್ಟೇ ಇದೆ. ಮ್ಯಾನೇಜರೂ ಇಲ್ಲ. ಮಾಲೀಕನೂ ಇಲ್ಲ.
ಸೈಲೆಂಟಾಗಿ ಲಾಭದ ಆಸೆ ತೋರಿಸಿ ಹಣ ಲೂಟಿಗೆ ಇಳಿದಿದ್ದ ಬ್ಲೇಡ್ ಕಂಪನಿಯ ವಿರುದ್ಧ ಕೊನೆಗೂ ಕೇಸ್ ದಾಖಲಾಗಿದೆ. ಸ್ಮಾರ್ಟ್ ವೈಸ್ ಕ್ವಾಂಟ್ ಕಂಪನಿ ಬ್ರಾಂಚ್ ಮ್ಯಾನೇಜರ್ ಸೇರಿದಂತೆ 14 ಮಂದಿ ವಿರುದ್ಧ ಬರೋಬ್ಬರಿ 55 ಮಂದಿ ನೀಡಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ರಿಜಿಸ್ಟರ್ ಆಗಿದೆ.
ಸ್ಮಾರ್ಟ್ ವೈಸ್ ಕ್ವಾಂಟ್ ಎಂಬ ಹೆಸ್ರಲ್ಲಿ ಬಿಟ್ ಕಾಯಿನ್ ಹಾಗೂ ಕ್ರೂಡ್ ಆಯಿಲ್ ಬ್ಯುಸಿನೆಸ್ ಮೇಲೆ ಇನ್ವೆಸ್ಟ್ ಮೆಂಟ್ ಮಾಡಿ ನಿಮಗೆ 20 ರಿಂದ 30 ಪರ್ಸೆಂಟ್ ಲಾಭ ಬರುತ್ತೆ ಅಂತೇಳಿ ಕೋಟಿ ಕೋಟಿ ಲೂಟಿ ಮಾಡಿದ್ದರು. ಈಗ ಸ್ಮಾರ್ಟ್ ವೈಸ್ ಕ್ವಾಂಟ್ ಕಚೇರಿಯ ಬ್ರಾಂಚ್ ಮ್ಯಾನೇಜರ್ ಅರುಣಾಚಲಂ ಅಂಡ್ ಗ್ಯಾಂಗ್ ಮೆಂಬರ್ಸ್ ಯಾರೂ ಇಲ್ಲ. ಕೇಸ್ ಅಂತೂ ಆಗಿದೆ.
ಜಾಹೀರಾತುಗಳನ್ನು ನೋಡುತ್ತಿದ್ದ ಕೆಲವರಿಗೆ ಇದರ ಬಗ್ಗೆ ಅನುಮಾನ ಬಂದಿದೆ. ಹಾಗೆ ಅನುಮಾನ ಬಂದಾಗ ಪರಿಚಯದವರ ಬಳಿ ಹೇಳಿಕೊಂಡಿದ್ದಾರೆ. ಆದರೆ.. ಅಷ್ಟು ಹೊತ್ತಿಗೆ ಆತನ ವಂಚನೆಯ ಜಾಲಕ್ಕೆ ಬಿದ್ದವರು ಕೋಟಿ ಕೋಟಿ ಕಳೆದುಕೊಂಡಿದ್ದರು. ಯಾವಾಗ ಹೂಡಿಕೆದಾರರು ಪ್ರಶ್ನೆ ಮೇಲೆ ಪ್ರಶ್ನೆ ಮಾಡೋಕೆ ಶುರು ಮಾಡಿದರೋ.. ಬ್ರ್ಯಾಂಚ್ ಮ್ಯಾನೇಜರ್ ಆಗ್ಲಿ, ಟೀಂ ಹೆಡ್ ಗಳಾಗಲಿ ರಿಪ್ಲೇ ಮಾಡದೇ ಯಾಮಾರಿಸೋಕೆ ಟ್ರೈ ಮಾಡಿದ್ದಾರೆ. ಕೊನೆಗೆ ಮಿಸ್ಸಿಂಗ್ ಆಗಿದ್ಧಾರೆ.
ವಂಚನೆ ನಡೆದಿದ್ದು ಹೇಗೆ..?
ಹೂಡಿಕೆ ಮಾಡಿದ ಹಣಕ್ಕೆ ದೊಡ್ಡ ಮೊತ್ತದ ಲಾಭಾಂಶ ಮತ್ತು ಬೋನಸ್ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಸಣ್ಣ ಮೊತ್ತದ ಲಾಭವನ್ನು ಕೊಟ್ಟು ನಂಬಿಕೆ ಗಳಿಸಿ, ನಂತರ ದೊಡ್ಡ ಮೊತ್ತದ ಹೂಡಿಕೆ ಮಾಡಿಸಿಕೊಂಡು ಕಚೇರಿಯನ್ನು ಮುಚ್ಚಿ ಪರಾರಿಯಾಗಿದ್ದಾರೆ. ಯಾವುದೇ ಹೊಸ ಅಥವಾ ಅಪರಿಚಿತ ಕಂಪನಿಗಳು ಅತಿಯಾದ ಲಾಭ (ಉದಾಹರಣೆಗೆ 10-20% ರಿಟರ್ನ್ಸ್) ನೀಡುವುದಾಗಿ ಹೇಳಿದರೆ ಎಚ್ಚರಿಕೆಯಿಂದ ಇರಿ. ಅಧಿಕೃತ ಮತ್ತು ನೋಂದಾಯಿತ ಮ್ಯೂಚುಯಲ್ ಫಂಡ್‌ಗಳು ಅಥವಾ ಸೆಬಿ (SEBI) ಅನುಮೋದಿತ ಹೂಡಿಕೆ ಯೋಜನೆಗಳ ಬಗ್ಗೆ ಮಾತ್ರ ಪರಿಣಿತರಿಂದ ಮಾಹಿತಿ ಪಡೆದುಕೊಳ್ಳಿ.



