ಹೃದಯಾಘಾತ ಅಲ್ಲಿ ಜಾಸ್ತಿ ಆಗಿದ್ಯಂತೆ. ಇಲ್ಲಿ ಜಾಸ್ತಿ ಆಗಿದ್ಯಂತೆ. ಎಂಬೆಲ್ಲ ಸುದ್ದಿ ನೋಡಿ ನೋಡಿ.. ಪ್ರತಿ ದಿನ ಹಾರ್ಟ್ ಚೆಕಪ್ ಮಾಡಿಸಿಕೊಳ್ಳೋವ್ರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಪ್ರತಿದಿನ ಟಿವಿ ಚಾನೆಲ್ಲುಗಳು ಮತ್ತೊಂದು ಹೃದಯಾಘಾತ.. ಮತ್ತೊಂದು ಸಾವು.. ಎಂದು ಗಂಟೆಗೊಮ್ಮೆ ಸುದ್ದಿ ಮಾಡುತ್ತಲೇ ಇದ್ದಾರೆ. ಪ್ರತಿದಿನ.. ಪ್ರತಿನಿಮಿಷ.. ಸಾವು ಸಂಭವಿಸುತ್ತಲೇ ಇರುತ್ತದೆ. ಕರ್ನಾಟಕದ್ದು 7 ಕೋಟಿಗೂ ಹೆಚ್ಚಿರುವ ಜನಸಂಖ್ಯೆ.
ಇನ್ನು ಟಿವಿ ಚಾನೆಲ್ಲಗಳು ಹಾರ್ಟ್ ಅಟ್ಯಾಕ್ ಸುದ್ದಿಯನ್ನೇನೋ ಮಾಡುತ್ತವೆ. ಆದರೆ.. ಕಿರಿಯ ವಯಸ್ಸಿನವರು ಸತ್ತಾಗ ವಯಸ್ಸು ಹೇಳಿ ಹೇಳಿ ಭಯ ಹುಟ್ಟಿಸೋ ಚಾನೆಲ್ಲುಗಳು, 50.. 60.. ದಾಟಿದವರು ಸತ್ತಾಗ.. ಹೃದಯಾಘಾತ ಎಂದಷ್ಟೇ ಹೇಳುತ್ತಿವೆ. ಹೀಗಾಗಿಯೇ ಈಗ ಭಯಭೀತ ಜನರಿಗೆ ತಜ್ಞ ವೈದ್ಯರೇ ಧೈರ್ಯ ಹೇಳ್ತಿದ್ದಾರೆ.
ಹಾಸನದ ಲೆಕ್ಕವನ್ನೇ ನೋಡಿ..
(ಮೇ 28ರಿಂದ ಜು.1ರತನಕ)
20 ವರ್ಷದವರು: 5
20-50 ವರ್ಷದವರು: 3
50+ ವಯಸ್ಸಿನವರು: 16
ಲೆಕ್ಕ, ಅಂಕಿ ಅಂಶ ಅರ್ಥವಾಗಿರಬೇಕಲ್ಲವೇ.. ಹಾಗಾದರೆ ಆತಂಕ ಬೇಡವೇ ಬೇಡವೇ ಎಂದರೆ.. ನೋ.. ಹಾಗೆಲ್ಲ ಮಾಡಬೇಡಿ. ಹೆದರಿಕೆ ಅಗತ್ಯ ಇಲ್ಲ. ಎಚ್ಚರಿಕೆ ಬೇಕೇ ಬೇಕು ಎನ್ನುತ್ತಾರೆ. ಕಳೆದ 20 ವರ್ಷಗಳಿಂದ 35-45 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಸಮಸ್ಯೆ ಕಂಡು ಬರುತ್ತಿದೆ. ಬದಲಾದ ಜೀವನ ಶೈಲಿ, ಧೂಮಪಾನ, ಮದ್ಯಪಾನ, ಆಹಾರ ಕಲಬೆರಕೆ, ಒತ್ತಡ, ಅಸಾಂಕ್ರಾಮಿಕ ರೋಗಗಳು, ವಾಯುಮಾಲಿನ್ಯದಿಂದಾಗಿ ಹೃದಯಾಘಾತ ಸಮಸ್ಯೆ ಹೆಚ್ಚುತ್ತಿದೆ. ಹೃದಯಾಘಾತ ಸಮಸ್ಯೆ ಅಂಟು ರೋಗವಲ್ಲ. ಹಾಗಾಗಿ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕ್ಯೂಗಳಲ್ಲಿನಿಲ್ಲುವ ಅವಶ್ಯಕತೆಯೂ ಇಲ್ಲ. ಆದರೆ, ಅದರ ಬಗ್ಗೆ ಜಾಗೃತಿ ವಹಿಸಬೇಕು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಹಾಗಾದರೆ ಇದು ಇದ್ದಕ್ಕಿದ್ದಂತೆ ಧುತ್ತೆಂದು ಏಳುವುದಕ್ಕೆ ಏನು ಕಾರಣ.. ಮೀಡಿಯಾ. ಮೀಡಿಯಾಗಳಲ್ಲಿ ವಿಪರೀತವಾಗಿ ಹೈಪ್ ಆಗುತ್ತಿರುವುದೇ ಆತಂಕಕ್ಕೆ ಕಾರಣ. ಇದು ಹಾಸನದ ಸಮಸ್ಯೆಯಲ್ಲ, ಎಲ್ಲ ಕಡೆಯೂ ಇದೆ. ವರದಿಯಾಗುತ್ತಿಲ್ಲವಷ್ಟೇ ಎಂದಿದ್ದಾರೆ. ಮೀಡಿಯಾ ಹೈಪ್ ಆದ ತಕ್ಷಣ ಒಂದೆರಡು ದಿನ ಕಳೆದ ನಂತರ.. ಪ್ರತಿ ಜಿಲ್ಲೆಯಲ್ಲೂ ನಂಬರುಗಳನ್ನು ಹುಡುಕಿ ತೆಗೆಯಲಾಗುತ್ತಿದೆ. ಆ ನಂಬರ್ ನೋಡಿದವರು ಟೆನ್ಷನ್ ಮಾಡ್ಕೊಳ್ತಿದ್ದಾರೆ.. ಅಷ್ಟೇ.
ಜನ ಹೆದರಿದ ಕಾರಣದಿಂದ ಹೃದ್ರೋಗ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆಯೇ ಹೊರತು ಮತ್ತೇನೂ ಆಗಿಲ್ಲ. ತಪಾಸಣೆಗೆ ಬರುವವರ ಸಂಖ್ಯೆ ಸಹಜವಾಗಿ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿಸ್ಟೆಮಿ ಸೌಲಭ್ಯವಿದೆ. ಇದೊಂದು ಹಬ್ ಆ್ಯಂಡ್ ಸ್ಟೊ್ರೕಕ್ ಮಾಡೆಲ್. ಹೃದಯಾಘಾತಕ್ಕೊಳಗಾಗಿ ಬರುವ ವ್ಯಕ್ತಿಗಳಿಗೆ ತುರ್ತು ವೈದ್ಯಕೀಯ ನೆರವು ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಬಲ್ಲಚಿಕಿತ್ಸಾ ವಿಧಾನ. ಇದನ್ನು ಎಲ್ಲತಾಲೂಕುಗಳಿಗೆ ವಿಸ್ತರಿಸುವ ತುರ್ತು ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.



