Friday, June 5, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಮಾರಿಯಮ್ಮನ ಗುಡಿ ಜಾಗದಲ್ಲಿ ಶಿವ ದೇವಸ್ಥಾನ ಕಟ್ಟಿದ್ದೇ ಕೇರಳ ದುರಂತಕ್ಕೆ ಕಾರಣವಾಯ್ತಾ..? ಏನಿದು ತಾಂಬೂಲ ಪ್ರಶ್ನೆ ರಹಸ್ಯ..?

SpeciallU by SpeciallU
August 3, 2024
in News
Reading Time: 1 min read
0 0
0
ಮಾರಿಯಮ್ಮನ ಗುಡಿ ಜಾಗದಲ್ಲಿ ಶಿವ ದೇವಸ್ಥಾನ ಕಟ್ಟಿದ್ದೇ ಕೇರಳ ದುರಂತಕ್ಕೆ ಕಾರಣವಾಯ್ತಾ..? ಏನಿದು ತಾಂಬೂಲ ಪ್ರಶ್ನೆ ರಹಸ್ಯ..?

ಕೇರಳದಲ್ಲಿ ಕಂಡು ಕೇಳರಿಯದ ದುರಂತದ ಹಿಂದೆ ಮಾರಿಯಮ್ಮನ ಶಾಪ ಅಥವಾ ಮುನಿಸು ಕಾರಣವಾಗಿದೆಯೇ.. ನೂರಾರು ಜನರನ್ನು ಬಲಿ ಪಡೆದ  ಪ್ರಕರಣದ ಹಿಂದೆ ಕೇವಲ ಪ್ರಾಕೃತಿಕ ವಿಕೋಪ ಅಷ್ಟೇ ಅಲ್ಲ, ಮನುಷ್ಯನ ದುರಾಸೆ, ಅತಿಯಾದ ಲಾಭಕೋರತನದ ಜೊತೆಗೆ ದೈವದ್ರೋಹವೂ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದು ತಾಂಬೂಲ ಪ್ರಶ್ನೆಯಲ್ಲೂ ಬಯಲಾಗಿದೆ. ಇಷ್ಟಕ್ಕೂ ಮೊದಲಿಗೆ ತಾಂಬೂಲ ಪ್ರಶ್ನೆ ಎಂದರೆ ಏನು ಅನ್ನೋದನ್ನ ನೋಡೋಣ.

ತಾಂಬೂಲ ಪ್ರಶ್ನೆ ಎಂದರೆ..

Related posts

ಸಿದ್ದು-ಸತೀಶ ಜಾರಕಿಹೊಳಿ ಪೋಸ್ಟ್‌ : ಕರುನಾಡ ಕುರುಬ ಗೌಡ್ರು’ ಪೇಜ್ ಮೇಲೆ FIR

ಡಿಕೆಯ ಪರ ಇದ್ದ ಶಾಸಕರ ಬಲ :  ಪ್ರಿಯಾಂಕಾ ಗಾಂಧಿ ಕೊಟ್ಟ ಪತ್ರ ನೋಡಿ ರಾಹುಲ್‌ ಅಚ್ಚರಿ..!

ತಾಂಬೂಲ ಪ್ರಶ್ನೆಶಾಸ್ತ್ರವು ಫಲ ಜ್ಯೋತಿಷ್ಯದ ಒಂದು ಮಹತ್ವಪೂರ್ಣ ಅಂಗ. ಇದರಲ್ಲಿ ಜನ್ಮ ಪತ್ರಿಕೆಯಂಥ ಯಾವುದೇ ಪ್ರಯೋಗವಿಲ್ಲದೆಯೇ, ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಂಗಚೇಷ್ಟೆ ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ. ಪ್ರಶ್ನೆಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸುವ ವಿಧಾನಗಳೂ ಪ್ರಚಲಿತದಲ್ಲಿರುತ್ತವೆ. ಅವುಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ. ಪ್ರಶ್ನೆಕರ್ತನು ಕೊಡುವ ತಾಂಬೂಲದ (ವೀಳ್ಯದೆಲೆ) ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ.

ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತ ಕೊಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸುವ ಮೂಲಕ ಲಗ್ನಾದಿ ಹನ್ನೆರಡು ಭಾವಗಳ ಕಲ್ಪಿಸಲಾಗುತ್ತದೆ.  ಎಣಿಕೆ ಮಾಡುವಾಗ ಮೊದಲನೆಯ ಎಲೆ ಲಗ್ನವಾದರೆ, ಎರಡನೆಯದು ಧನ ಭಾವ, ಮೂರನೆಯದು ಸಹಜ ಭಾವ.. ಹೀಗೆ ಹನ್ನೆರಡನೆಯ ಎಲೆಯ ವ್ಯಯ ಭಾವವಾಗುತ್ತದೆ. ಯಾವ ಭಾವದ ಸೂಚಕವಾದ ಎಲೆಯು ಬಾಡಿರುವುದೋ, ಹರಿದಿರುವುದೋ, ಛಿದ್ರವಾಗಿರುವುದೋ ಆ ಭಾವದ ಫಲಗಳು ಅನಿಷ್ಟವಾಗಿರುತ್ತವೆ. ಯಾವ ಭಾವ ಸಂಬಂಧಿ ಎಲೆಯು ವಿಶಾಲವಾಗಿದ್ದು, ನಿರ್ಮಲವಾಗಿದ್ದು ನಳನಳಿಸುವ ಕಾಂತಿಯುತವಾಗಿರುವುದೋ ಆ ಭಾವದ ಫಲವು ಶುಭ ಮತ್ತು ವೃದ್ಧಿಯಾಗುತ್ತದೆ ಎಂದು ತಿಳಿಯಬೇಕು.

ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡು ಪಟ್ಟು ಮಾಡಿ ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು. ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂದು ತಿಳಿಯಬೇಕು. ಈ ಪ್ರಕಾರ ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಬೇಕು.

ಸೂರ್ಯನು ಉದಯವಾದರೆ ದುಃಖದಾಯಕ, ಚಂದ್ರ ಉದಯವಾದರೆ ಸುಖದಾಯಕ, ಮಂಗಲ ಉದಯವಾದರೆ ಕಲಹಕಾರಕ. ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥಸಿದ್ಧಿದಾಯಕ ಮತ್ತು ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕವಾಗಿರುತ್ತದೆ. ಇದು ಸಹಜವಾಗಿ ನಡೆಯುವ ತಾಂಬೂಲ ಪ್ರಶ್ನೆ. ಪ್ರಶ್ನೆಗಳ ಆಧಾರದಲ್ಲಿ ಲೆಕ್ಕಾಚಾರವೂ ಬದಲಾಗುತ್ತದೆ. ಈಗ ಮತ್ತೆ ಕೇರಳದ ವಿಷಯಕ್ಕೆ ಬರೋಣ.

ಏನಿದು ಮಾರಿಯಮ್ಮನ ಮುನಿಸಿನ ಕಥೆ..?

ಚೋರಲ್ ಮಲೈ ಅನ್ನೋದು ಭೂಕುಸಿತ ಸಂಭವಿಸಿದ ೨ನೇ ಅತಿದೊಡ್ಡ ಗ್ರಾಮ. ಮುಂಡಕೈ ಅನ್ನೋ ಊರಿನಿಂದ ಆರಂಭವಾದ ಭೂಕುಸಿತದಲ್ಲಿ ಮುಕ್ಕಾಲು ಪಾಲು ಊರೇ ಕೊಚ್ಚಿ ಹೋಗಿದೆ. ಆ ಗ್ರಾಮಗಳ ಸರಣಿಯಲ್ಲಿ ಮುಂಡಕೈ ನಂತರ ಬರುವ ಗ್ರಾಮವೇ ಚೋರಲ್ ಮಲೈ. ಅಲ್ಲಿನ ಸ್ಥಳೀಯರ ಪ್ರಕಾರ ಇದಕ್ಕೆಲ್ಲ ಕಾರಣ ಮಾರಿಯಮ್ಮನ ಮುನಿಸು.

ಭೂ ಕುಸಿತ ದುರಂತದಲ್ಲಿ ಶಿವನ ದೇವಾಲಯ ನಾಶವಾದ ಸ್ಥಳದಲ್ಲೇ ಇದ್ದ ಮಾರಿಯಮ್ಮ ದೇವಾಲಯವನ್ನು ಕೆಡವಿ  ಶಿವನ ದೇವಾಲಯ ನಿರ್ಮಾಣ ಮಾಡಿದ್ದರಂತೆ ಗ್ರಾಮಸ್ಥರು. ಇದು ಅಳಿದುಳಿದಿರುವ ಸ್ಥಳೀಯರು ಹೇಳುತ್ತಿರುವ ಮಾತು. ಮಾರಿಯಮ್ಮ ದೇವಾಲಯ ಇದ್ದ ಸ್ಥಳದಲ್ಲೇ ಎರಡು ವರ್ಷಗಳ ಹಿಂದೆ  ಶಿವನ ದೇವಾಲಯ ನವೀಕರಣ ಕಾರ್ಯ ಮಾಡಿದ್ರು. ಒಂದೂವರೆಗೆ ಕೋಟಿ ರೂ. ವೆಚ್ಚದಲ್ಲಿ ಶಿವನ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಶಿವನ ದೇವಾಲಯ ನಿರ್ಮಾಣ ಮಾಡಿದ ನಂತರ ಹಲವು ಸಮಸ್ಯೆಗಳು ಉದ್ಬವಿಸಲಾರಂಭಿಸಿದವು. ಹಲವು ಸಮಸ್ಯೆಗಳು ಬರಲಾರಂಭಿಸಿದ್ದರಿಂದ ಅಷ್ಟ ಮಂಗಲ‌ ಪ್ರಶ್ನೆ ಕೇಳಿದ್ದ ಚೋರಲ್ ಮಲೈ ಗ್ರಾಮಸ್ಥರು. ಈ ವೇಳೆ ನದಿ ತಿರುವು ಬದಲಾಗುತ್ತೆ, ದೇವಸ್ಥಾನಕ್ಕೆ ಧಕ್ಕೆಯಾಗುತ್ತೆ ಎಂಬ ಉತ್ತರ ನೀಡಿತ್ತು ದೇವರು. ಆದರೂ ದೈವದ ಉತ್ತರವನ್ನು ನಿರ್ಲಕ್ಷ್ಯ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದ ಜನರು. ಈಗ ದುರ್ಘಟನೆ ನಂತರ ತಾಂಬೂಲ ಪ್ರಶ್ನೆಗಳ ವಿಚಾರಗಳನ್ನ ನಂಬಬೇಕಿತ್ತು. ತಪ್ಪು ಮಾಡಿದೆವು ಎನ್ನುತ್ತಿರುವ ಗ್ರಾಮಸ್ಥರು. ತಾಂಬೂಲ ಪ್ರಶ್ನೆಯಲ್ಲೂ ಇದೇ ಉತ್ತರ ಬಂದಿತ್ತಂತೆ.

ಆದರೆ.. ಯಾವ ಅಷ್ಟಮಂಗಲ, ತಾಂಬೂಲ ಪ್ರಶ್ನೆಗಳೂ ದುರಂತ ತಪ್ಪಿಸಲು ಆಗಲಿಲ್ಲ ಎನ್ನುವುದೇ ದುರಂತ.

Tags: #ಭೂಕುಸಿತ #ಕೇರಳ #ದುರಂತ #ತಾಂಬೂಲಪ್ರಶ್ನೆ #earthquake #kerala #disaster #tamboolaprasne
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!
  • ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ
  • ಕರಡಿಗೆಯಲ್ಲಿನ ಶಿವಲಿಂಗ ʻಭಿನ್ನʼವಾಗಿದ್ದರೆ ಪೂಜೆ ಮಾಡಬೇಕಾ.. ಬೇಡವಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

June 4, 2026
ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

June 4, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.