ವೈಭವ್ ಸೂರ್ಯವಂಶಿ. ಈತನ ಆಟಕ್ಕೆ ಕ್ರಿಸ್ ಗೇಲ್ ಅವರ 14 ವರ್ಷಗಳ ದಾಖಲೆ ದೂಳೀಪಟವಾಗಿದೆ. ಒಂದೇ ಸೀಸನ್ನಿನಲ್ಲಿ ಗೇಲ್ 59 ಸಿಕ್ಸರ್ ಸಿಡಿಸಿ ಈ ದಾಖಲೆ ಬರೆದಾಗ ವೈಭವ್ ಇನ್ನೂ ಜಸ್ಟ್ ಒಂದು ವರ್ಷದ ಮಗು. ಈಗ ನೋಡಿದರೆ ಅದೇ ಮಗು ಒಂದೇ ಸೀಸನ್ನಿನಲ್ಲಿ 65 ಸಿಕ್ಸರ್ ಚಚ್ಚಿದೆ. ಅದೃಷ್ಟ ಇದ್ದರೆ ಗೇಲ್ ಅವರ ಅತಿವೇಗದ ಶತಕದ ದಾಖಲೆಯನ್ನೂ ಈ ಮಗು ಹೊಡೆಯುತ್ತಿತ್ತೇನೋ.. ರಾಜಸ್ತಾನ ಟೀಂನ್ನೂ ಗೆಲ್ಲಿಸಿರೋ ವೈಭವ್ ಆಟಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶರಣಾಗಿದ್ದಾರೆ. ಅವರಷ್ಟೇ ಅಲ್ಲ, ವಿಶ್ವ ಕ್ರಿಕೆಟ್‌ನ ದಿಗ್ಗಜರೆಲ್ಲ ವೈಭವ್ ಆಟಕ್ಕೆ ಬೆರಗಾಗಿದ್ದಾರೆ. ಆ ಆಟಗಾರರು ಯಾರೆಂದರೆ..
ಸಚಿನ್ ತೆಂಡೂಲ್ಕರ್ : ವೈಭವ್ ಬ್ಯಾಟ್ ಸ್ವಿಂಗ್ ಆಗುವುದನ್ನು ನೋಡುವುದೇ ಒಂದು ವೈಭವ. ಅವನು ಒಂದು ಹೆಜ್ಜೆ ಮುಂದೆ ಇಟ್ಟು, ಬಾಲ್ ಹೊಡೆಯುವುದಕ್ಕೆ ಜಾಗ ಮಾಡಿಕೊಳ್ಳೋದೇ ಒಂದು ಅದ್ಭುತ. ಹಾಗೆ ಆತ ಬಾಲ್ ಹೊಡೆಯುವುದಕ್ಕೆ ಜಾಗ ಮಾಡಿಕೊಳ್ಳುವುದೇ ಆತನ ಯಶಸ್ಸಿನ ಗುಟ್ಟು. ಅದ್ಭುತ ಆಟ.
ಕ್ರಿಸ್ ಗೇಲ್ : ಇಂತಹ ಬಾಲಕನನ್ನು ಕ್ರಿಕೆಟ್ ಹಿಂದೆ ನೋಡಿಲ್ಲ. ಮುಂದೆ ನೋಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ.
ಯುವರಾಜ್ ಸಿಂಗ್ : ಜಗತ್ತಿನ ಶ್ರೇಷ್ಟ ಬೌಲರುಗಳನ್ನು ಈತ ಎದುರಿಸುವ ರೀತಿ ನೋಡಿ ಬೆರಗಾಗಿದ್ದೇನೆ. ಭಯವಿಲ್ಲದ ಆಟ, ಕಣ್ಮುಚ್ಚಿ ತೆರೆಯೋದ್ರೊಳಗೆ ಬೆಸ್ಟ್ ಬೌಲರುಗಳಿಗೆ ಹೊಡೆಯುವ ರೀತಿ ವ್ಹಾವ್. ಈತ ಜನರೇಷನ್ ಆಟಗಾರ.
ಸನತ್ ಜಯಸೂರ್ಯ : ವೈಭವ್ ಸೂರ್ಯವಂಶಿಗೆ ಸ್ಪೆಷಲ್ ಟ್ಯಾಲೆಂಟ್ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಕಾನ್ಫಿಡೆನ್ಸ್ ನೋಡಿಲ್ಲ. ಕ್ರಿಕೆಟ್‌ಗೆ ಇಂಥದ್ದೊಂದು ಸ್ಪೆಷಲ್ ಆಟಗಾರ ಬೇಕಿತ್ತು.
ಕೆವಿನ್ ಪೀಟರ್ಸನ್ : ವೈಭವ್ ನನ್ನ ಬಳಿ ಟಿ-20ಯಲ್ಲಿ 200 ಹೊಡೆಯುವ ಕನಸು ಹೇಳಿಕೊಂಡಿದ್ಧಾನೆ. ನಾನು ಅದನ್ನು ನಂಬುತ್ತೇನೆ.
ಸುನಿಲ್ ಗವಾಸ್ಕರ್ : ಇವನನ್ನು ತಡೆಯುವುದು ಕಷ್ಟ. ಆದರೆ ಈತನನ್ನು ಹೊಗಳಬೇಡಿ. ಈತನನ್ನು ಸಂಬಾಳಿಸಿ. ಚಿಕ್ಕ ಹುಡುಗ. ಗೆಲುವು ಮತ್ತು ಯಶಸ್ಸು ತಲೆಗೆ ಹತ್ತಬಾರದು. ಈತನಿಂದ ಭಾರತೀಯ ಕ್ರಿಕೆಟ್ ಇನ್ನೂ ಹೆಚ್ಚು ಬೆಳೆಯಬೇಕಿದೆ.
ಸೂರ್ಯ ಕುಮಾರ್ ಯಾದವ್ : ಎಲ್ಲರೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದ ವೈಭವ್. ಹೊಸ ಸ್ಟಾರ್ ಉಗಮವಾಗುತ್ತಿದ್ಧಾನೆ.
ಆರ್ ಅಶ್ವಿನ್ : ವೈಭವ್ 97ಕ್ಕೆ ಔಟ್ ಆದಾಗ ಬೇಸರಿಂದ ಭಾವುಕರಾಗಿದ್ಧಾರೆ. ಅತ್ತಿಲ್ಲ. ಕಣ್ಣುಗಳು ತುಂಬಿ ಬಂದಿರುವುದು ಕಾಣುತ್ತದೆ
ಜೋಫ್ರಾ ಅರ್ಚರ್ : ವೈಭವ್ ಬಗ್ಗೆ ಈಗ ಏನೂ ಹೇಳಲ್ಲ. ಐಪಿಎಲ್ ಮುಗಿದ ಮೇಲೆ ಮಾತನಾಡುತ್ತೇನೆ
ಇನ್ನು ವೈಭವ್ ಆಟವನ್ನು ಮೊದಲು ಗುರುತಿಸಿದ್ದು ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿವಿಎಸ್ ಲಕ್ಷ್ಮಣ್. ಆನಂತರ ವೈಭವ್ ಕುರಿತಂತೆ ಆಗ ರಾಜಸ್ತಾನ ರಾಯಲ್ಸ್ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ ಹೇಳಿದರು. ಲಕ್ಷ್ಮಣ್ ಹೇಳಿದರು ಎಂಬ ಒಂದೇ ಕಾರಣಕ್ಕೆ ವೈಭವ್ ಆಟ ನೋಡಿದ ದ್ರಾವಿಡ್, ನಂತರದ ಬಿಡ್ಡಿಂಗ್‌ನಲ್ಲಿ ಆರ್.ಆರ್. ತಂಡಕ್ಕೆ ಆಯ್ಕೆ ಮಾಡಿದರು. ಆಗ ಅದು ದೊಡ್ಡ ಸುದ್ದಿಯಾಗಿದ್ದರೂ, ಆಯ್ಕೆ ಮಾಡಿದ್ದು ದ್ರಾವಿಡ್ ಎಂಬ ಕಾರಣಕ್ಕೆ ಎಲ್ಲರೂ ಸೈಲೆಂಟ್ ಆಗಿದ್ದರು. ಈಗ ಅದ ಹುಡುಗ ದಿಗ್ಗಜರನ್ನು ಸೈಲೆಂಟ್ ಮಾಡುತ್ತಿದ್ದಾನೆ.



