ಕಾಂತಾರ ಚಿತ್ರವನ್ನು ನೋಡಿದವರೆಲ್ಲ ಮೆಚ್ಚುತ್ತಿದ್ದಾರೆ. ರಿಷಬ್ ಶೆಟ್ಟಿಗೆ ಬಹುಪರಾಕ್ ಹೇಳುತ್ತಿದ್ದಾರೆ. 4 ವಾರದ ನಂತರವೂ ಅದೇ ಕ್ರೇಜ್ ಉಳಿಸಿಕೊಂಡಿರುವ ಚಿತ್ರ ಇನ್ನೊಂದು ಬಂದಿರಲಿಲ್ಲ. ಈಗ ಚಿತ್ರ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ರೋಮಾಂಚನಗೊಂಡಿದ್ದಾರೆ.
ಎಲ್ಲ ತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವುದು ಹೆಚ್ಚಿರುತ್ತದೆ. ಬಹುಶಃ ಇದಕ್ಕಿಂತ ಒಳ್ಳೆಯ ಸಿನಿಮಾ ಮತ್ತೊಂದಿಲ್ಲ. ಇದಕ್ಕಾಗಿ ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿಯವರಿಗೆ ಧನ್ಯವಾದಗಳು. ಈ ಚಿತ್ರ ಮೈ ನವಿರೇಳಿಸುವಂತೆ ಮಾಡಿದೆ. ರಿಷಬ್ ಅವರೇ, ಒಬ್ಬ ನಟನಾಗಿ, ಚಿತ್ರ ಸಾಹಿತಿಯಾಗಿ ಹಾಗೂ 

ಇಂಡಿಯಾದ ಸೂಪರ್ ಸ್ಟಾರ್ ನಟನ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಕೂಡಾ ರೋಮಾಂಚನಗೊಂಡಿದ್ದಾರೆ. ರಜನಿ ಸರ್, ನೀವು ಭಾರತದ ಅತಿದೊಡ್ಡ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಅಭಿಮಾನಿ. ನಿಮ್ಮ ಈ ಮೆಚ್ಚುಗೆ ನನ್ನ ಬಹುದಿನದ ಕನಸೊಂದನ್ನು ನನಸು ಮಾಡಿಸಿದೆ. ಇನ್ನು ಮುಂದೆ ನಾನು ಮತ್ತಷ್ಟು ಸ್ಥಳೀಯ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ಮಾಡಲು, ಆ ಮೂಲಕ ನಮ್ಮ ಪ್ರೇಕ್ಷಕರನ್ನು ಸ್ಫೂರ್ತಿಗೊಳಿಸುವ ಚಿತ್ರಗಳನ್ನು ಮಾಡುವಂತೆ ಸ್ಫೂರ್ತಿ ನೀಡಿದೆ ಎಂದಿದ್ದಾರೆ. ತಮಿಳಿನಲ್ಲಿ ಈ ಸಿನಿಮಾ ನೋಡಿ ಮೆಚ್ಚಿದ ತಮಿಳು ನಟರು ಒಬ್ಬಿಬ್ಬರಲ್ಲ. ಧನುಷ್, ಕಾರ್ತಿ, ಕಾರ್ತಿ ಸುಬ್ಬರಾಜ್ ಸೇರಿದಂತೆ ತಮಿಳು ಚಿತ್ರರಂಗದ ಕಲಾವಿದರು, ನಿರ್ದೇಶಕರು ರಿಷಬ್ ಶೆಟ್ಟಿಗೆ ಶಹಬ್ಬಾಸ್ ಎಂದಿದ್ದಾರೆ.
ದೇಶದ ಅತಿದೊಡ್ಡ ಸೂಪರ್ ಸ್ಟಾರ್ ಮೆಚ್ಚುಗೆ ಸಿಕ್ಕಿದ್ದು ಎನರ್ಜಿ ಬೂಸ್ಟ್ ಕೊಟ್ಟಂತಾಗಿದೆ. ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವಳು. ಥ್ಯಾಂಕ್ಯೂ ಸರ್ ಎಂದಿದ್ದಾರೆ ಸಪ್ತಮಿ ಗೌಡ. ನಿಮ್ಮ ಈ ಮೆಚ್ಚುಗೆ ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದವು ಎಂದು ಟ್ವೀಟ್ ಮಾಡಿದೆ ಹೊಂಬಾಳೆ ಸಂಸ್ಥೆ. ರಜನಿಕಾಂತ್ ಮೆಚ್ಚುಗೆ ಪಡೆಯಲು ನಾವು ಪುಣ್ಯ ಮಾಡಿದ್ದೆವು ಎನ್ನುವುದು ವಿಜಯ್ ಕಿರಗಂದೂರು ಮಾತು. ದಂತಕಥೆಗೆ ದಂತಕಥೆಯ ಮೆಚ್ಚುಗೆ ಸಿಕ್ಕಿದೆ ಎಂದಿದ್ದಾರೆ ಚೆಲುವೇಗೌಡ. ಥ್ರಿಲ್ಲಾಗಿದ್ದೇನೆ ಎಂದಿದ್ದಾರೆ ಕಾರ್ತಿಕ್ ಗೌಡ.



