ತೆಲುಗಿನ ಪೆದ್ದಿ ಸಿನಿಮಾ ರಿಲೀಸ್ ಆಗಿದೆ. ನಮ್ಮ ಶಿವಣ್ಣ ಕೂಡಾ ಪ್ರಮುಖ ಪಾತ್ರದಲ್ಲಿರೋ ಸಿನಿಮಾ, ಕನ್ನಡದಲ್ಲೂ ಬಂದಿದೆ. ರಾಮ್ ಚರಣ್ ಹೀರೋ. ಚಿತ್ರದ ಕಥೆ ಬಗ್ಗೆ ಒಳ್ಳೇ ಒಪೀನಿಯನ್ ಇದ್ರೂ, ಚಿತ್ರದಲ್ಲಿ ಅಗತ್ಯವಿಲ್ಲದ ಅಂಶಗಳನ್ನೆಲ್ಲ ತುರುಕಿ ಚಿತ್ರವನ್ನು ಕೆಡಿಸಿದ್ದಾರೆ ಎಂಬ ಆರೋಪವೂ ಇದೆ. ಆದರೆ ಇದೇ ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರ ಹೊಕ್ಕಳು ಭಾರೀ ಚರ್ಚೆಯಾಗುತ್ತಿದೆ. ನಾಯಕಿಯ ಹೊಕ್ಕಳು ತೋರಿಸುವುದು ಅಪರಾಧ ಎಂಬಂತೆ ಒಂದು ಕಡೆ ಬಿಂಬಿತವಾಗಿದ್ದರೆ, ಮತ್ತೊಂದು ಕಡೆ ಬೇರೆಯದೇ ಚರ್ಚೆ ನಡೆಯುತ್ತಿದೆ.
ಆಗಿರುವುದು ಏನೆಂದರೆ ಜಾಹ್ನವಿ ಕಪೂರ್ ಅವರಿಗೆ ಇದು 2ನೇ ತೆಲುಗು ಸಿನಿಮಾ. ಈ ಮೊದಲು ದೇವರ ಚಿತ್ರದಲಿಲ ನಟಿಸಿದ್ದರು. ಚಿತ್ರ ಹೊಗೆ ಹಾಕಿಸ್ಕೊಂಡ ಪರಿಣಾಮ ಪಾರ್ಟ್ 2 ತರುವ ಧೈರ್ಯ ಮಾಡಲಿಲ್ಲ.. ಈಗ ಪೆದ್ದಿ ಚಿತ್ರ ಬಂದಿದೆ. ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರನ್ನು ಎಕ್ಸ್‌ಪೋಸಿಂಗ್‌ಗಾಗಿಯೇ ಮೀಸಲಿಟ್ಟಂತೆ ತೋರಿಸಲಾಗಿದೆ. ಜಾಹ್ನವಿ ಅವರನ್ನ, ಅವರ ಪಾತ್ರವನ್ನ ಅತಿಯಾಗಿ ಲೈಂಗಿಕ ವಸ್ತುವಿನಂತೆ (Objectification) ಬಿಂಬಿಸಲಾಗಿದೆ ಎನ್ನುವುದು ಪ್ರೇಕ್ಷಕರ, ಅಭಿಮಾನಿಗಳ ಆಕ್ರೋಶ. ಚಿತ್ರದಲ್ಲಿ ಅವರ ಸೊಂಟ, ಎದೆಯ ಭಾಗಗಳನ್ನು ಪದೇ ಪದೇ ಕ್ಲೋಸ್-ಅಪ್ ಶಾಟ್‌ಗಳಲ್ಲಿ ತೋರಿಸಿರುವುದು ಮತ್ತು ನಾಯಕ ನಟ ನಾಯಕಿಯ ಸಮ್ಮತಿ ಇಲ್ಲದೆ ಚುಂಬಿಸುವ ದೃಶ್ಯಗಳಿವೆ.
ಬುಚ್ಚಿ ಬಾಬು ನಿರ್ದೇಶನದ ಚಿತ್ರದಲ್ಲಿ ಜಾಹ್ನವಿ ಅವರದ್ದು ‘ಅಚ್ಚಿಯಮ್ಮ’ (Achiyamma) ಎಂಬ ಗ್ರಾಮೀಣ ಭಾಗದ ಯುವತಿಯ ಪಾತ್ರ. ನಾಯಕ ನಟ ‘ಪೆದ್ದಿ’ ರಾಮ್ ಚರಣ್ ಅವರ ಪ್ರೇಯಸಿ. ನಿಮಾ ಬಿಡುಗಡೆಗೂ ಮುನ್ನ ಇದನ್ನು ಒಂದು ಹಳ್ಳಿಯ ಹಿನ್ನೆಲೆಯ, ತೀವ್ರತೆಯುಳ್ಳ ಹಾಗೂ ವಿಭಿನ್ನವಾದ ಡೀ-ಗ್ಲಾಮ್ (De-glam) ಪಾತ್ರ ಎಂದು ಬಿಂಬಿಸಲಾಗಿತ್ತು. ಆದರೆ ಸಿನಿಮಾ ರಿಲೀಸ್ ಆದ ಮೇಲೆ ಆಗಿದ್ದೇ ಬೇರೆ. ಕಥೆಯಲ್ಲಿ ಪಾತ್ರಕ್ಕೆ ಯಾವುದೇ ಪ್ರಮುಖ ಪ್ರಾಮುಖ್ಯತೆ ಇಲ್ಲ. Hyper-sexualisation, ಕೇವಲ ಗ್ಲಾಮರ್ ಮತ್ತು ದೈಹಿಕ ಸೌಂದರ್ಯವನ್ನು ಪ್ರದರ್ಶಿಸಲು ಮಾತ್ರ ಬಳಸಿಕೊಳ್ಳಲಾಗಿದೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಕಥೆಯ ಸಂದರ್ಭಕ್ಕೆ ಅಗತ್ಯವಿಲ್ಲದಿದ್ದರೂ ಜಾಹ್ನವಿ ಕಪೂರ್ ಅವರ ನಡು (Waist), ಎದೆ (Midriff/Chest) ಮತ್ತು ಹಿಂಭಾಗವನ್ನು ಪದೇ ಪದೇ ಕ್ಲೋಸ್-ಅಪ್ ಶಾಟ್‌ಗಳಲ್ಲಿ ತೋರಿಸಲಾಗಿದೆ. “ನಾಯಕ ಅವರ ಮುಖದ ಸೌಂದರ್ಯವನ್ನು ವರ್ಣಿಸುವಾಗಲೂ ಕ್ಯಾಮೆರಾ ಮಾತ್ರ ಅವರ ಸೊಂಟ ಮತ್ತು ಎದೆಯನ್ನು ಜೂಮ್ ಮಾಡಿ ತೋರಿಸುತ್ತಿತ್ತು” ಎಂದು ಪ್ರೇಕ್ಷಕರು ಕಿಡಿಕಾರಿದ್ದಾರೆ. “ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿ ನಟಿಯೊಬ್ಬಳಿಗೆ ನೀಡಲಾದ ಅತ್ಯಂತ ದುಬಾರಿ ಅಪಮಾನ” (The most expensive disrespect to a leading woman) ಎಂದು ಕರೆಯಲಾಗಿದೆ. ನಾಯಕನಿಗೆ ಸಾಮಾಜಿಕ ಹೋರಾಟದ ದೊಡ್ಡ ಕಥೆ ಸಿಕ್ಕರೆ, ನಾಯಕಿಗೆ ಕೇವಲ ಗ್ಲಾಮರ್ ಶಾಟ್‌ಗಳನ್ನು ಮಾತ್ರ ಇಡಲಾಗಿದೆ ಎಂಬುದು ಪ್ರೇಕ್ಷಕರ ಬೇಸರ. ಜೊತೆಗೆ ಜಾಹ್ನವಿ ಕಪೂರ್ ಅವರು ಕೂಡಾ ನಾನು ಮೊದಲೇ ನಿರ್ದೇಶಕರಿಗೆ ಎದೆ ಮತ್ತು ಸೊಂಟದ ಶಾಟ್‌ಗಳನ್ನು ತೆಗೆಯಬೇಡಿ ಎಂದು ಹೇಳಿದ್ದೆ, ಕ್ಯಾಮೆರಾವನ್ನು ಕ್ಲೀವ್ಜ್ ಮೇಲೆ ಇಡುತ್ತಿದ್ದರು” ಎಂದು ಅಭಿಮಾನಿಯೊಬ್ಬರ ಬಳಿ ಅಳಲು ತೋಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅಂದಹಾಗೆ ಇಂತಹ ಆಕ್ರೋಶ ಈ ಹಿಂದೆಯೂ ಇತ್ತು. ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ರಾಘವೇಂದ್ರ ರಾವ್ ಸೇರಿದಂತೆ ಹಲವು ನಿರ್ದೇಶಕರು ಇಂತಹ ಸೀನ್‌ಗಳ ಮೂಲಕವೇ ಫೇಮಸ್ ಆಗಿದ್ದರು.



