ಒಂದು ಕಡೆ ಕಿಚ್ಚ ಸುದೀಪ್. ಮತ್ತೊಂದು ಕಡೆ ಡಾಲಿ ಧನಂಜಯ. ಏಕೆಂದರೆ ಗುರುದೇವ್ ಹೊಯ್ಸಳ ಟ್ರೇಲರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಎಂದಿನಂತೆ ನಗು ನಗುತ್ತಾ..ಕಾಲೆಳೆಯುತ್ತಾ.. ಟೇಲರ್ ರಿಲೀಸ್ ಮಾಡಿದ ಸುದೀಪ್, ಚಿತ್ರತಂಡಕ್ಕೆ ಶುಭ ಕೋರಿದರು. ಸುದೀಪ್ ತಮಗೆ ನೀಡುತ್ತಿರುವ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಮತ್ತೆ ಮತ್ತೆ ಹೇಳಿದ ಡಾಲಿ, ಸುದೀಪ್ ತಮಗೆ ಅಣ್ಣನಿದ್ದಂತೆ ಎಂದು ಹೇಳಿಕೊಂಡರು.


ಎಂಬಂತಹ ಬೆಂಕಿ ಡೈಲಾಗುಗಳಿರೋ ಹೊಯ್ಸಳ ಚಿತ್ರದ ಟ್ರೇಲರ್ ಸಖತ್ತಾಗಿದೆ.
ಗುರುದೇವ್ ಹೊಯ್ಸಳ. ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ. ಇದೇ 30ರಂದು ರಿಲೀಸ್ ಆಗಲಿರೋ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಡಾಲಿ ಪೊಲೀಸ್ ಆಫೀಸರ್ ಗುರುದೇವ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಲ್ಲೊಂದು ಪೊಲಿಟಿಕಲ್ ಗೇಮ್ ಇದೆ. ಪೊಲೀಸ್ ಆಫೀಸರ್ ಒಬ್ಬನ ಆಕ್ರೋಶವಿದೆ. ಮಧ್ಯದಲ್ಲೊಂದು ಲವ್ ಸ್ಟೋರಿಯೂ ಇರುವ ಸೂಚನೆಯಿದೆ. ನಾಯಕಿಯಾಗಿರುವುದು ಅಮೃತಾ ಅಯ್ಯಂಗಾರ್. ಬೆಳಗಾವಿ ಕಡೆಯ ಭಾಷೆಯ ಸೊಗಡು ಅಚ್ಚೊತ್ತಿದಂತಿದೆ. ಖಡಕ್ ಧ್ವನಿ.. ಖಡಕ್ ಸಂಭಾಷಣೆ.. ಡಾಲಿ ಹೇಳುವ ಖಡಕ್ ಸಂಭಾಷಣೆಗಳು ಅವರ ಅವರ ಪಾತ್ರ ಎಷ್ಟು ರಗಡ್ ಆಗಿರಬಹುದೆಂಬ ಅಂದಾಜು ನೀಡುತ್ತಿದೆ. ಡಾಲಿಗೆ ಎದುರಾಗಿ ಅಷ್ಟೆ ಒರಾಟದ ಆದರೆ ಮೃಗೀಯ ವಿಲನ್ ಸಹ ಇದ್ದಾನೆ. ಇವರಿಬ್ಬರ ಸೆಣೆಸಾಟ ಹೇಗಿರಬಹುದೆಂಬ ಕುತೂಹಲ ಹುಟ್ಟಿಸುವಂತಿದೆ.


ಸಿನಿಮಾ ನಿರ್ಮಾಣ ಮಾಡಿರುವುದು ಕಾರ್ತಿಕ್ ಗೌಡ ಹಾಗೂ ಯೋಗಿ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಸಿನಿಮಾ ನಿರ್ಮಾಣವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ. ಸಿನಿಮಾ ಇದೇ ತಿಂಗಳು 30ರಂದು ತೆರೆಗೆ ಬರಲಿದೆ.



