ಇಡೀ ಇಂಡಿಯಾದಲ್ಲೇ ಸಂಚಲನ ಮೂಡಿಸಿದ ಕಾಂತಾರ ಇದೇ ಶನಿವಾರ ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಬಿಡುಗಡೆಯಾದ ಎಲ್ ಕೇಂದ್ರಗಳಲ್ಲೂ 50 ದಿನ ಪೂರೈಸುತ್ತಿದೆ. ಈಗ 7ನೇ ವಾರದ ಕೊನೆಯಲ್ಲಿರುವ ಕಾಂತಾರ, ಶನಿವಾರ ಅರ್ಧ ಶತಕದ ಗುರಿ ಮುಟ್ಟಲಿದೆ. ಕಾಂತಾರದ ದಾಖಲೆಗಳು ಒಂದೆರಡಲ್ಲ. ಕಾಂತಾರ ಈಗ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನೂ ಹಿಂದಿಕ್ಕಿ 200 ಕೋಟಿಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ಕೆಜಿಎಫ್ ಮಾದರಿಯಲ್ಲಿ ಯಾವುದೇ ರೀತಿ ಟಿಕೆಟ್ ದರ ಏರಿಕೆಯಿಲ್ಲದಿದ್ದರೂ ಕಾಂತಾರ 200 ಕೋಟಿಗೂ ಹೆಚ್ಚು ಗಳಿಸಿರುವುದು ದಾಖಲೆಯೇ ಸರಿ. ಅಷ್ಟೇ ಅಲ್ಲ, 1 ಕೋಟಿಗೂ ಹೆಚ್ಚು ಜನ ಸಿನಿಮಾ ನೋಡಿರುವುದು ಇನ್ನೊಂದು ದಾಖಲೆ.
ಈಗ ಬಿಡುಗಡೆಯಾದ ಎಲ್ಲ 300+ ಕೇಂದ್ರಗಳಲ್ಲಿ 50 ದಿನ ಪೂರೈಸಲಿದೆ ಕಾಂತಾರ. ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇರುವ ಕಾಂತಾರ ಹಲವು ದಾಖಲೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇದು ವಿಶೇಷವೂ ಹೌದು. ಏಕೆಂದರೆ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಅರ್ಧಶತಕ ಪೂರೈಸುತ್ತಿರುವುದು ವಿಶೇಷ ದಾಖಲೆ. 300ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿದೆ. ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್ ಬಿಟ್ಟು 30ಕ್ಕೂ ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿದೆ. ಆದರೆ.. ಆದರೆ.. ಮೇನ್ ಥಿಯೇಟರ್ ನರ್ತಕಿಯಲ್ಲಿ ಮಾತ್ರ ಹಾಗಾಗುತ್ತಿಲ್ಲ. ನರ್ತಕಿ ಕಾಂತಾರ ಚಿತ್ರದ ಮೇನ್ ಥಿಯೇಟರ್. ಆದರೆ ನರ್ತಕಿಯಲ್ಲಿ ನಾಳೆ ಅಂದ್ರೆ ಶುಕ್ರವಾರ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ರಿಲೀಸ್ ಆಗಲಿದೆ. ಹೀಗಾಗಿ ಮೇನ್ ಥಿಯೇಟರಿನಲ್ಲಿಯೇ 50 ದಿನದ ದಾಖಲೆ ಬರೆಯಲಾಗುತ್ತಿಲ್ಲ ಕಾಂತಾರ. ಆದರೆ ಉಳಿದಂತೆ ಎಲ್ಲೆಡೆ ಕಾಂತಾರವೇ..
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರಿನಲ್ಲಿ ಈಗಲೂ ಜನ ಬರುತ್ತಿದ್ದಾರೆ. ಕೆಜಿಎಫ್ ಮೂಲಕ ಸುನಾಮಿ ಹಿಟ್ ಕಂಡಿದ್ದ ಹೊಂಬಾಳೆ, ಕಾಂತಾರ ಮೂಲಕ ಡಿವೈನ್ ಹಿಟ್ ಸಾಧಿಸಿದೆ. ಇನ್ನೂ ಒಂದು ದಾಖಲೆ. ವಿದೇಶದಲ್ಲಿ 50 ದಿನ ಪೂರೈಸುತ್ತಿರುವ 2ನೇ ಕನ್ನಡ ಚಿತ್ರ ಕಾಂತಾರ.

ಕಾಂತಾರ ದಾಖಲೆ 1 : ಮೇನ್ ಥಿಯೇಟರ್ ಬಿಟ್ಟು 300+ ಥಿಯೇಟರ್‍ಗಳಲ್ಲಿ 50 ದಿನ ಪೂರೈಸುತ್ತಿರುವ ಸಿನಿಮಾ
ಕಾಂತಾರ ದಾಖಲೆ 2 : ವಿದೇಶದಲ್ಲಿ 50 ದಿನ ಪೂರೈಸುತ್ತಿರುವ 2ನೇ ಕನ್ನಡ ಸಿನಿಮಾ ಕಾಂತಾರ
ಕಾಂತಾರ ದಾಖಲೆ 3 : ಬಾಕ್ಸಾಫೀಸ್‍ನಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ನಂ.1 ಕನ್ನಡ ಸಿನಿಮಾ. ಕೆಜಿಎಫ್ ಚಾಪ್ಟರ್ 2 ಈಗ ನಂ.2 ಸ್ಥಾನ.
ಕಾಂತಾರ ದಾಖಲೆ 4 : ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಕಾಂತಾರ. 1 ಕೋಟಿಗೂ ಹೆಚ್ಚು ಜನ ನೋಡಿದ್ದಾರೆ.
ಕಾಂತಾರ ದಾಖಲೆ 5 : ಟಿಕೆಟ್ ದರ ಏರಿಕೆ ಮಾಡದೆಯೇ ಬಾಕ್ಸಾಫೀಸ್ ಮತ್ತು ಫುಟ್ ಫಾಲ್ಸ್ ಎರಡರಲ್ಲೂ ದಾಖಲೆ ಬರೆದ ಚಿತ್ರ ಕಾತಾರ
ಕಾಂತಾರ ದಾಖಲೆ 6 : ಹಿಂದಿಯಲ್ಲಿ ಈಗಾಗಲೇ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ, ಹಿಂದಿಗೆ ಡಬ್ ಆಗಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಲಿಸ್ಟ್‍ನಲ್ಲಿ ನಂ.2. ಮೊದಲ ಸ್ಥಾನದಲ್ಲಿ ಕೆಜಿಎಪ್ ಚಾಪ್ಟರ್ 2 ಇದೆ.
ಕಾಂತಾರ ದಾಖಲೆ 7 : ತೆಲುಗು, ತಮಿಳು ಹಾಗೂ ಮಲಯಾಳಂಗಳಲ್ಲೂ ಭರ್ಜರಿ ಕಲೆಕ್ಷನ್. ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದರೆ ತಮಿಳಿನಲ್ಲಿ 25 ಕೋಟಿಗೂ ಹೆಚ್ಚು ಹಾಗೂ ಮಲಯಾಳಂನಲ್ಲಿ 20 ಕೋಟಿ ಸಮೀಪದಲ್ಲಿದೆ ಬಾಕ್ಸಾಫೀಸ್ ಕಲೆಕ್ಷನ್.
ಕಾಂತಾರ ದಾಖಲೆ 8 : ಒಟ್ಟಾರೆ ಕಲೆಕ್ಷನ್ ಈಗಾಗಲೇ 380 ಕೋಟಿ ದಾಟಿದ್ದು 400 ಕೋಟಿ ದಾಟುವ ಎಲ್ಲ ಸೂಚನೆಗಳೂ ಇವೆ.
ಕಾಂತಾರ ದಾಖಲೆ 9 : ಚಿತ್ರದ ಒಟ್ಟಾರೆ ಕಲೆಕ್ಷನ್ ಲಿಸ್ಟ್‍ನಲ್ಲಿ ಇರುವುದು ಕೇವಲ ಥಿಯೇಟರ್ ಲೆಕ್ಕ. ಸ್ಯಾಟಲೈಟ್, ಒಟಿಟಿ, ಆಡಿಯೋ ಸೇರಿದಂತೆ ಬೇರಾವ ಲೆಕ್ಕವೂ ಇಲ್ಲ. ಆ ಎಲ್ಲ ಲೆಕ್ಕ ಸೇರಿದರೆ.. 500-600 ಕೋಟಿಗೂ ಹೆಚ್ಚು ದಾಟುವ ಸಾಧ್ಯತೆಗಳಿವೆ.



