ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರಿಗೆ ಹಣ ಸಂದಾಯ, ಖಾತೆಯೇ ಇಲ್ಲದವರಿಗೆ ಕೋಟಿಗಟ್ಟಲೆ ಜಮೆ.. ಇದು ಗೃಹಲಕ್ಷ್ಮಿ ದೋಖಾ. ಸಿಎಜಿಯ ಡೇಟಾ ಅನಾಲಿಟಿಕ್ಸ್ ವಿಭಾಗವು ನಡೆಸಿದ ವಿಶೇಷ ಆಡಿಟ್ ವರದಿ ಪ್ರಕಾರ ಬರೋಬ್ಬರಿ 19,020 ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹಂಚಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಆಯ್ತು.. ಇಷ್ಟಕ್ಕೂ ಆ ಅಕೌಂಟ್ ಯಾರಿಗೆ ಸೇರಿದ್ದು.. ಯಾರಿಗೆ ಹಣ ಹೋಯ್ತು.. ಈಗಾಗಲೇ 2025ರಲ್ಲಿ 2 ತಿಂಗಳ 5 ಸಾವಿರ ಕೋಟಿ ಹಣವನ್ನು ಲೆಕ್ಕದಲ್ಲಿ ಮಾತ್ರ ತೋರಿಸಿದ್ದ ಸರ್ಕಾರ, ಫಲಾನುಭವಿಗಳಿಗೆ ಕೊಟ್ಟಿರಲಿಲ್ಲ. ಈಗ ಈ ಹಗರಣ ಆಚೆ ಬಂದಿದೆ. 19 ಸಾವಿರ ಫಲಾನುಭವಿಗಳ ಸುಳ್ಳು ಲೆಕ್ಕ ಎಂದರೆ ಪ್ರತಿ ತಿಂಗಳೂ ಹೋಗುವ ಹಣ 19*2 = 38 ಕೋಟಿ. ಅರ್ಥವಾಯಿತೇ. ಇವರಿಗೆ ಯಾವ ಶಿಕ್ಷೆ ಕೊಡ್ತೀರಾ.. ಉತ್ತರ ಕೊಡಬೇಕಿರುವುದು ಲಕ್ಷ್ಮೀ ಹೆಬ್ಭಾಳ್ಕರ್, ಅವರು ಸಚಿವರಾಗಿದ್ದಾಗ ಇದ್ದ ಅಧಿಕಾರಿಗಳು ಹಾಗೂ ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ.
19,020 ಫಲಾನುಭವಿಗಳಿಗೆ ಒಂದೇ ಖಾತೆಯಿಂದ ಹಣ ಜಮೆಯಾಗುವುದು ಹೇಗೆ ಸಾಧ್ಯ..? ಆ ಹಣ ನಿಜವಾಗಿಯೂ ಫಲಾನುಭವಿಗಳ ಕೈ ಸೇರಿದೆಯೋ, ಅಥವಾ ಅವರ ಹೆಸರಿನಲ್ಲಿ ಬೇರೆಯವರ ಪಾಲಾಗಿದೆಯೋ..? 19,020 ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆ ಜೋಡಿಸಿ, ಜಂಟಿಯಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್ ಖಾತೆಯ ಕನಿಷ್ಠ ವಿವರಗಳೇ ಇಲ್ಲದ 23,262 ಖಾತೆಗಳಿಗೆ ಬರೋಬ್ಬರಿ ₹46.52 ಕೋಟಿ ಪಾವತಿ ಆಗಿದೆ. ಇದೆಲ್ಲ ರಾಜ್ಯ ಸರ್ಕಾರವೇ ನಡೆಸಿರುವ ಅಡಿಟ್ ವರದಿಯಲ್ಲಿ ಬಯಲಾದ ದ್ರೋಹ.
ಸಮರ್ಪಕ ಪರಿಶೀಲನೆ ನಡೆಸದೆ, ಕಟ್ಟುನಿಟ್ಟಿನ ನಿಯಮಗಳನ್ನೂ ಪಾಲಿಸದೆ ಹಣ ಜಮೆ ಮಾಡಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಸಲಿಗೆ ಬ್ಯಾಂಕ್ ಖಾತೆಯೇ ಇಲ್ಲದಿದ್ದಾಗ ಡಿಬಿಟಿ ಮೂಲಕ ಹಣ ವರ್ಗಾವಣೆ ಸಾಧ್ಯವೇ ಇಲ್ಲ. ಹೀಗಿದ್ದರೂ ಹಣ ಪಾವತಿಯಾಗಿರುವುದು ತಾಂತ್ರಿಕ ವಂಚನೆ ಅಲ್ಲ, ಅದೊಂದು ವ್ಯವಸ್ಥಿತ ಭ್ರಷ್ಟಾಚಾರ. 8,995 ಖಾತೆಗಳಿಗೆ ಸುಮಾರು 1.80 ಕೋಟಿ ರೂಪಾಯಿಗಳನ್ನು ಪದೇ ಪದೇ ಜಮಾ ಮಾಡಿರುವುದು ಅನುಮಾನ ಹುಟ್ಟಿಸಿದೆ.
ವಿಚಿತ್ರ ಎಂದರೆ ಆ ಖಾತೆಗಳ ವಿವರ ಕೊಡಿ ಎಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಎಜಿಗೂ ಮಾಹಿತಿ ಕೊಡುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಗಳ ಸಭೆಯಲ್ಲೂ ಈ ಸಿಎಜಿ ವರದಿಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಗ್ಯಾರಂಟಿಯಲ್ಲಿ ನಿಜವಾದ ಫಲಾನುಭವಿಗಳು ಅಧಿಕಾರಿಗಳೇ ಹೊರತು, ಸಾಮಾನ್ಯ ಜನ ಅಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ.
ಉತ್ತರ ಕೊಡಬೇಕಿದೆ ಲಕ್ಷ್ಮೀ ಹೆಬ್ಬಾಳ್ಕರ್ : ಈಗ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿ ಅಲ್ಲ. ಮಂತ್ರಿ ಆಗುವುದೇ ಇಲ್ಲ ಎಂದೂ ಅಲ್ಲ. ಡಿಕೆ ಸರ್ಕಾರದಲ್ಲೂ ಮಂತ್ರಿಯಾಗಬಹುದು. ಅವಕಾಶ ಇನ್ನೂ ಓಪನ್ ಅಗಿಯೇ ಇದೆ. ಗೃಹಲಕ್ಷ್ಮಿ ಯೋಜನೆ ವಿಶೇಷತೆ ಏನೆಂದರೆ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳಲ್ಲೇ ಇದು ಅತ್ಯಂತ ದುಬಾರಿ ಗ್ಯಾರಂಟಿ. ಇಂತಹ ಯೋಜನೆಯಲ್ಲಿ ಕಣ್ಣಿಗೆ ಕಾಣುವಂತೆ ಆಗಿದ್ದು ಎಡವಟ್ಟು ಅಲ್ಲ, ನಂಬಿಕೆ ದ್ರೋಹ. 19 ಸಾವಿರ ಫಲಾನುಭವಿಗಳ ಸುಳ್ಳು ಲೆಕ್ಕ ಎಂದರೆ ಪ್ರತಿ ತಿಂಗಳೂ ಹೋಗುವ ಹಣ 19*2 = 38 ಕೋಟಿ. ಅರ್ಥವಾಯಿತೇ. ಇವರಿಗೆ ಯಾವ ಶಿಕ್ಷೆ ಕೊಡ್ತೀರಾ.. ಉತ್ತರ ಕೊಡಬೇಕಿರುವುದು ಲಕ್ಷ್ಮೀ ಹೆಬ್ಭಾಳ್ಕರ್, ಅವರು ಸಚಿವರಾಗಿದ್ದಾಗ ಇದ್ದ ಅಧಿಕಾರಿಗಳು ಹಾಗೂ ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ.



