Wednesday, July 1, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಗೃಹಜ್ಯೋತಿ ರೀವ್ಯೂ ಶುರು : ಅಧಿಕಾರಿಗಳು ಬಂದಾಗ ಈ ದಾಖಲೆ ಮರೆಯಬೇಡಿ

SpeciallU by SpeciallU
July 1, 2026
in Politics
Reading Time: 1 min read
0 0
0
ಗೃಹಜ್ಯೋತಿ ರೀವ್ಯೂ ಶುರು : ಅಧಿಕಾರಿಗಳು ಬಂದಾಗ ಈ ದಾಖಲೆ ಮರೆಯಬೇಡಿ

ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಮನೆ-ಮನೆ ಮರು ಪರಿಶೀಲನೆ (Door-to-Door Verification) ಪ್ರಕ್ರಿಯೆ ಸ್ಟಾರ್ಟ್‌ ಆಗಿದೆ. ಅಧಿಕಾರಿಗಳು ಮನೆ ಮನೆಗೆ ಬರ್ತಾರೆ. ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಫಲ ತಲುಪಬೇಕು ಎನ್ನುವುದು ಕಾಂಗ್ರೆಸ್‌ ಸ್ಕೀಂ. ಈ ವೇಳೆ ತಿಂಗಳಿಗೆ 200 ಯೂನಿಟ್‌ ಒಳಗೆ ಉಚಿತ ವಿದ್ಯುತ್‌ ಪಡೆಯುತ್ತಿರುವವರು ತಮ್ಮೊಂದಿಗೆ ಕೆಲವು ದಾಖಲೆಗಳನ್ನು ಇಟ್ಟುಕೊಂಡಿರಲೇಬೇಕು. ಇದು ಅನಿವಾರ್ಯ.

ಕಡ್ಡಾಯವಾಗಿ ಇರಬೇಕಾದ ಮುಖ್ಯ ದಾಖಲೆಗಳು

Related posts

ಬೆಂಗಳೂರಿನ ಹೆಚ್ಚು ತೆರಿಗೆ ಕೊಟ್ಟ ಕ್ಷೇತ್ರಗಳಿಗೆ ಪುಡಿಗಾಸು : ಕ್ಷೇತ್ರಗಳಲ್ಲಿ ಸಮಸ್ಯೆಗಳೇ ಇಲ್ವಾ..?

ವಿಜಯೇಂದ್ರ ವಿರುದ್ಧ ಡಿವಿಎಸ್‌ ಸಂಚು : ಮಾಧ್ಯಮಗಳಲ್ಲೇಕೆ ಬಿಎಲ್‌ಎಸ್‌, ಜೋಶಿ ಹೆಸರು ಬರುತ್ತಿಲ್ಲ..?

ಆಧಾರ್ ಕಾರ್ಡ್ (ಕೇವಲ ಗುರುತಿನ ಪರಿಶೀಲನೆಗಾಗಿ ಮಾತ್ರ)
ಇತ್ತೀಚಿನ ವಿದ್ಯುತ್ ಬಿಲ್ (ಗ್ರಾಹಕರ ಐಡಿ / ಅಕೌಂಟ್ ಐಡಿ ಮತ್ತು RR ಸಂಖ್ಯೆ ಸ್ಪಷ್ಟವಾಗಿರಬೇಕು)
ಫಲಾನುಭವಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಒಂದು ಕಲರ್‌ ಫೋಟೋ)
ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
ಪ್ಯಾನ್ ಕಾರ್ಡ್ (PAN Card)
ಪಡಿತರ ಚೀಟಿ (ರೇಷನ್ ಕಾರ್ಡ್)

ಬಾಡಿಗೆದಾರರಾಗಿದ್ದರೆ..
ಚಾಲ್ತಿಯಲ್ಲಿರುವ ಬಾಡಿಗೆ ಒಪ್ಪಂದ ಪತ್ರ (Rental / Lease Agreement) ಇಟ್ಟುಕೊಳ್ಳಿ.
ಜಾತಿ ಪ್ರಮಾಣ ಪತ್ರವನ್ನೂ ಕೇಳ್ತಾರಂತೆ. ಯಾಕೆ ಎನ್ನುವುದು ಗೊತ್ತಿಲ್ಲ.
ತೆರಿಗೆ ಪಾವತಿದಾರರಾಗಿದ್ದರೆ: ಪ್ಯಾನ್ ಸಂಖ್ಯೆ ಮತ್ತು ವೃತ್ತಿಪರ ವಿವರಗಳ (Professional Details) ಬಗ್ಗೆ ಮಾಹಿತಿ ಕೇಳಿ ಪಡೆಯುತ್ತಾರೆ.

ಪರಿಶೀಲನೆ ಹೇಗೆ ನಡೆಯುತ್ತದೆ..?

BESCOM, MESCOM, HESCOM, GESCOM ಅಥವಾ CESC ಸಂಸ್ಥೆಯ ಅಧಿಕೃತ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿ ನಿಮ್ಮ ಮನೆಗೆ ನೇರವಾಗಿ ಭೇಟಿ ನೀಡಲಿದ್ದಾರೆ. ಸಿಬ್ಬಂದಿಯು ಸ್ಥಳದಲ್ಲೇ ಮೊಬೈಲ್ ಆ್ಯಪ್ ಮೂಲಕ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ನಿಮ್ಮಿಂದ ಸಹಿ ಪಡೆದ ಘೋಷಣಾ ಪತ್ರದ (Declaration Form) ಅಪ್‌ಡೇಟ್‌ ಕೊಡ್ತಾರೆ. ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ.

ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಜತೆಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ.

ಯಾವುದೇ ಆನ್‌ಲೈನ್ ವಂಚನೆಗೆ ಒಳಗಾಗಬೇಡಿ; ಈ ಪ್ರಕ್ರಿಯೆಯು ಕೇವಲ ಭೌತಿಕವಾಗಿ ಮನೆಗೆ ಬರುವ ಸಿಬ್ಬಂದಿ ಮೂಲಕ ಮಾತ್ರ ನಡೆಯುತ್ತದೆ. ಏಕೆಂದರೆ ಇದು ಆನ್‌ ಲೈನ್‌ ಮೂಲಕ ನಡೆಯುವುದೇ ಇಲ್ಲ.

Tags: #ಗೃಹಜ್ಯೋತಿ #ಮರುಪರಿಶೀಲನೆ #ದಾಖಲೆಗಳು #ಉಚಿತ ವಿದ್ಯುತ್ #Gruhajyoti #Review #Documents #Free Electricity
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ
  • KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?
  • ಗೃಹಜ್ಯೋತಿ ರೀವ್ಯೂ ಶುರು : ಅಧಿಕಾರಿಗಳು ಬಂದಾಗ ಈ ದಾಖಲೆ ಮರೆಯಬೇಡಿ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

ಶುರುವಾಯ್ತು ಬೆಲೆ ಇಳಿಕೆ : LPG 19 ಕೆಜಿ ಬೆಲೆ ಇಳಿಸಿದ ಕೇಂದ್ರ

July 1, 2026
KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?

KPSC ನೇಮಕಾತಿ ಅಕ್ರಮ : ಅಧ್ಯಕ್ಷರ ಮಗಳು ಸುಳ್ಳು ದಾಖಲೆ ನೀಡಿದರೆ ಓಕೆನಾ..?

July 1, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.