Tuesday, July 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Politics

ಸುದ್ದಿ ಮಾಡಿದ ಪತ್ರಕರ್ತನಿಗೆ ಬೆದರಿಸಿದರಾ ವಾಲ್ಮೀಕಿ ಹಗರಣದ ನಾಗೇಂದ್ರ..?

SpeciallU by SpeciallU
July 6, 2026
in Politics
Reading Time: 1 min read
0 0
0
ಸುದ್ದಿ ಮಾಡಿದ ಪತ್ರಕರ್ತನಿಗೆ ಬೆದರಿಸಿದರಾ ವಾಲ್ಮೀಕಿ ಹಗರಣದ ನಾಗೇಂದ್ರ..?

ವಾಲ್ಮೀಕಿ ಅಭವೃದ್ಧಿ ನಿಗಮ ಹಗರಣದಲ್ಲಿ ಅರೆಸ್ಟ್‌ ಆಗಿ, ಜೈಲಿಗೂ ಹೋಗಿ ಬಂದಿರುವ ಮಾಜಿ ಸಚಿವ ಬಿ ನಾಗೇಂದ್ರ, ಈಗ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸುದ್ದಿಯಾಗಿದ್ದಾರೆ. ಬೆದರಿಕೆ ಎದುರಿಸುತ್ತಿರುವ ಪತ್ರಕರ್ತನ ಹೆಸರು ಮಲ್ಲಯ್ಯ ಮೋಕಾ.

ಮಲ್ಲಯ್ಯ ಮೋಕಾ ಅವರು ಬಳ್ಳಾರಿ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದು, ಪ್ರಸ್ತುತ ಬಳ್ಳಾರಿ ಪತ್ರಕರ್ತರ ಸಂಘದ ಅಡಾಕ್ ಸಮಿತಿಯ (Ad-hoc Committee) ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆ ವಾಣಿ ಮಲ್ಲಯ್ಯ ಎಂದೇ ಫೇಮಸ್‌ ಆಗಿರುವ ಇವರು ತಮ್ಮ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟ ಮಾಡುತ್ತಾರೆ. ಆದರೆ ಆ ಸುದ್ದಿ ನಾಗೇಂದ್ರಗೆ ಇಷ್ಟ ಆಗುವುದಿಲ್ಲ. ನೇರವಾಗಿ ಮಲ್ಲಯ್ಯ ಮೋಕಾ ಅವರಿಗೆ ಫೋನ್‌ ಮಾಡಿ ಪ್ರಶ್ನೆ ಮಾಡಿದ್ಧಾರೆ.

Related posts

ʻಆಪರೇಷನ್‌ ವಿಜಯೇಂದ್ರʼ ಪೋಸ್ಟ್‌ ಪೋನ್‌ : RSS ಹೇಳಿದ ಪಾಠವೇನು..?

ಮತ್ತೊಮ್ಮೆ ನಿಷ್ಕ್ರಿಯವಾದ ಹೈಕಮಾಂಡ್‌ : ಬಿಜೆಪಿಗೆ ಬಿಜೆಪಿಯೇ ವಿಲನ್

ವಾಲ್ಮೀಕಿ ಹಗರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ ಈ ಹೊಸ ಬೆದರಿಕೆ ಆರೋಪ ಕೇಳಿಬಂದಿದ್ದರೂ, ಘಟನೆ ಯಾವ ಸಂದರ್ಭದಲ್ಲಿ ನಡೆಯಿತು, ಫೋನ್ ಮೂಲಕ ಅಥವಾ ನೇರವಾಗಿ ಬೆದರಿಕೆ ಹಾಕಲಾಗಿದೆಯೇ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆಯೇ ಎಂಬ ಅಧಿಕೃತ ವಿವರಗಳು ಇನ್ನೂ ಸಾರ್ವಜನಿಕವಾಗಿ ವರದಿಯಾಗಿಲ್ಲ.

ಹೀಗಿದ್ದರೂ ಬಿಜೆಪಿ ಘಟಕ ನಾಗೇಂದ್ರ ವಿರುದ್ಧ ಆರೋಪ ಮಾಡಿದ್ದಷ್ಟೇ ಅಲ್ಲದೆ, ಆಡಿಯೋವನ್ನೂ ಕೂಡಾ ಬಿಡುಗಡೆ ಮಾಡಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ದರ್ಪ ಮಿತಿ ಮೀರಿದ್ದು, ಪತ್ರಕರ್ತರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಇವರು ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೆಯ ವಾಲ್ಮೀಕಿ ಸಮುದಾಯದ ಹಿರಿಯ ಪತ್ರಕರ್ತರೊಬ್ಬರಿಗೆ ಕಾಂಗ್ರೆಸ್‌ನ ಭ್ರಷ್ಟಾಚಾರಿ ಆರೋಪಿ ಶಾಸಕ ನಾಗೇಂದ್ರ ಏಕವಚನದಲ್ಲಿ ಮಾತನಾಡಿರುವುದಲ್ಲದೆ, ಬೆದರಿಸಿ ದರ್ಪ ಮೆರೆದಿರುವುದು ಕಳವಳಕಾರಿ ಸಂಗತಿ. ಪತ್ರಕರ್ತರಿಗೂ ಸುರಕ್ಷತೆ ಇಲ್ಲದ ರಾಜ್ಯದಲ್ಲಿ ಜನಸಾಮಾನ್ಯರ ಪರಿಸ್ಥಿತಿಯೇನು ? #CongressFailsKarnataka ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡಿದೆ.

ವಿಶೇಷ ಎಂದರೆ ನಾಗೇಂದ್ರ ಅವರು ಬೆದರಿಸಿರುವ ಪತ್ರಕರ್ತ ಮಲ್ಲಯ್ಯ ಮೋಕಾ ಕೂಡಾ ವಾಲ್ಮೀಕಿ ಸಮುದಾಯದವರೇ. ಮಲ್ಲಯ್ಯ ಅವರ ಜಾತಿ ಕೇಳಿ ಬಯ್ಯುವ ನಾಗೇಂದ್ರ, ಮುಂದೆ ನೋಡಿಕೊಳ್ಳುತ್ತೇನೆ ಎಂಬ ಅರ್ಥದ ಮಾತುಗಳನ್ನಾಡುತ್ತಾರೆ. ಆಡಿಯೋದಲ್ಲಿ ಮಲ್ಲಯ್ಯ ಮೋಕಾ ಕ್ಷಮೆ ಕೂಡಾ ಕೇಳ್ತಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಮಾಸ್ಟರ್‌ಮೈಂಡ್ ಬಿ. ನಾಗೇಂದ್ರ ಎಂದು ಈಗಾಗಲೇ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿವೆ.  ಈ ಭ್ರಷ್ಟಾಚಾರದ ಪ್ರಕರಣದ ತನಿಖೆ ಮತ್ತು ದಾಳಿಗಳು ಚುರುಕಾಗಿರುವ ಸಂದರ್ಭದಲ್ಲೇ, ಹಗರಣದ ವರದಿಗಾರಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಮೇಲೆ ಶಾಸಕರು ಈ ರೀತಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಗರಣದ ತನಿಖೆಯು ಪ್ರಸ್ತುತ ಅಂತಿಮ ಹಂತ ತಲುಪಿದ್ದು, ಸಿಬಿಐ (CBI) ನ್ಯಾಯಾಲಯಕ್ಕೆ ಅಧಿಕೃತ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದೆ. ಇದರಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿ (A1) ಮತ್ತು ಮುಖ್ಯ ಸಂಚುಕೋರ ಎಂದು ಹೆಸರಿಸಲಾಗಿದೆ. ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಅವರ ಆಪ್ತ ಸಹಚರ ನೆಕ್ಕಂಟಿ ನಾಗರಾಜ್, ನಿಗಮದ ಮಾಜಿ ಎಂಡಿ ಪದ್ಮನಾಭ ಜೆ.ಜಿ, ಹೈದರಾಬಾದ್ ಉದ್ಯಮಿ ಸತ್ಯನಾರಾಯಣ ವರ್ಮಾ ಹಾಗೂ ಯೂನಿಯನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು 30 ಆರೋಪಿಗಳ ವಿರುದ್ಧ ಸಾಕ್ಷ್ಯಧಾರ ಸಮೇತ ಚಾರ್ಜ್‌ಶೀಟ್ ಹಾಕಲಾಗಿದೆ.

ನಿಗಮದ ಒಟ್ಟು ಹಣದಲ್ಲಿ ₹89.63 ಕೋಟಿ ರೂಪಾಯಿಗಳನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ (RTGS) ಮೂಲಕ ಸುಮಾರು 600 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ನಂತರ ನಗದು, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಸಚಿವ ನಾಗೇಂದ್ರ ಅವರು ಟೆಂಡರ್ ಮಂಜೂರಾತಿಗಾಗಿ ₹1.20 ಕೋಟಿ ರೂಪಾಯಿ ಲಂಚ (ಕಿಕ್‌ಬ್ಯಾಕ್) ಪಡೆದಿದ್ದು, ಆ ಹಣವನ್ನು ಅವರ ಕುಟುಂಬದವರ ಖಾತೆಗೆ ವರ್ಗಾಯಿಸಲಾಗಿತ್ತು ಹಾಗೂ ಇದೇ ಹಣದಲ್ಲಿ ಬೆನಾಮಿ ವಾಹನ ಖರೀದಿಸಲಾಗಿತ್ತು ಎಂದು ಸಿಬಿಐ ದಾಖಲೆ ಒದಗಿಸಿದೆ. ನಾಗೇಂದ್ರ ಅವರ ಖಾತೆಯಿಂದ ಮುಂಬೈನ ಮಹಿಳೆಯೊಬ್ಬರ ಖಾತೆಗೆ ₹2.50 ಕೋಟಿ ಹಣ ವರ್ಗಾವಣೆಯಾಗಿದೆ. ಆಕೆ ತನ್ನ ದಾಖಲೆಗಳಲ್ಲಿ ತಾನು ನಾಗೇಂದ್ರ ಅವರ ಪತ್ನಿ ಎಂದು ಉಲ್ಲೇಖಿಸಿದ್ದಾಳೆ ಎಂದು ಸಿಬಿಐ ಇತ್ತೀಚೆಗೆ ಹೈಕೋರ್ಟ್‌ಗೆ ತಿಳಿಸಿದೆ.

Tags: #ವಾಲ್ಮೀಕಿ ಹಗರಣ #ನಾಗೇಂದ್ರ #ಮಲ್ಲಯ್ಯ ಮೋಕಾ #ValmikiScam #Nagendra #MallayyaMoka
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ʻಆಪರೇಷನ್‌ ವಿಜಯೇಂದ್ರʼ ಪೋಸ್ಟ್‌ ಪೋನ್‌ : RSS ಹೇಳಿದ ಪಾಠವೇನು..?
  • ಸುದ್ದಿ ಮಾಡಿದ ಪತ್ರಕರ್ತನಿಗೆ ಬೆದರಿಸಿದರಾ ವಾಲ್ಮೀಕಿ ಹಗರಣದ ನಾಗೇಂದ್ರ..?
  • ಇವರು ಸತ್ತು ವರ್ಷಗಳಾಗಿದ್ದರೂ ಮೃತದೇಹಕ್ಕೆ ಅಂತ್ಯಕ್ರಿಯೆ ಆಗಿಲ್ಲ : ಈಗಲೂ ಇದ್ದಾರೆ..!

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ʻಆಪರೇಷನ್‌ ವಿಜಯೇಂದ್ರʼ ಪೋಸ್ಟ್‌ ಪೋನ್‌ : RSS ಹೇಳಿದ ಪಾಠವೇನು..?

ʻಆಪರೇಷನ್‌ ವಿಜಯೇಂದ್ರʼ ಪೋಸ್ಟ್‌ ಪೋನ್‌ : RSS ಹೇಳಿದ ಪಾಠವೇನು..?

July 6, 2026
ಸುದ್ದಿ ಮಾಡಿದ ಪತ್ರಕರ್ತನಿಗೆ ಬೆದರಿಸಿದರಾ ವಾಲ್ಮೀಕಿ ಹಗರಣದ ನಾಗೇಂದ್ರ..?

ಸುದ್ದಿ ಮಾಡಿದ ಪತ್ರಕರ್ತನಿಗೆ ಬೆದರಿಸಿದರಾ ವಾಲ್ಮೀಕಿ ಹಗರಣದ ನಾಗೇಂದ್ರ..?

July 6, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.