Friday, June 5, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ನಾಗಮಂಗಲದ ಬದರಿಕೊಪ್ಪಲಿನಲ್ಲೀಗ ಗಂಡಸರೇ ಇಲ್ಲ : ಹೆದರಬೇಡಿ ತಾಯೀ.. ಎಂದು ಧೈರ್ಯ ತುಂಬಿದ ಕುಮಾರಸ್ವಾಮಿ..!

SpeciallU by SpeciallU
September 20, 2024
in News, Politics
Reading Time: 1 min read
0 0
0
ನಾಗಮಂಗಲದ ಬದರಿಕೊಪ್ಪಲಿನಲ್ಲೀಗ ಗಂಡಸರೇ ಇಲ್ಲ : ಹೆದರಬೇಡಿ ತಾಯೀ.. ಎಂದು ಧೈರ್ಯ ತುಂಬಿದ ಕುಮಾರಸ್ವಾಮಿ..!

ಮಂಡ್ಯ ಜಿಲ್ಲೆಯ ಬದರಿಕೊಪ್ಪಲು ಗ್ರಾಮ ಈಗ ಇಡೀ ರಾಜ್ಯದ ಜನರಿಗೆ ಗೊತ್ತಾಗಿದೆ. ಆ ಊರಿನಲ್ಲಿ ಎಲ್ಲಿಂದ ಎಲ್ಲಿಗೇ ಹೋದರೂ.. ಒಬ್ಬರೂ ಗಂಡಸರೂ ಕಾಣೋದಿಲ್ಲ. ವಯಸ್ಸಾಗಿರುವ ಅಜ್ಜಂದಿರು, ಬಾಲಕರಷ್ಟೇ ಇದ್ಧಾರೆ. ೧೫ ದಾಟಿದ ಹುಡುಗರೂ ಸೇರಿದಂತೆ ಎಲ್ಲ ಗಂಡು ಮಕ್ಕಳೂ ಊರು ಬಿಟ್ಟಿದ್ದಾರೆ. ಹೆಣ್ಣು ಮಕ್ಕಳೇ ಇಡೀ ಮನೆಯನ್ನು ನೋಡಿಕೊಳ್ಳುತ್ತಿದ್ಧಾರೆ. ಎಲ್ಲವೂ ಕೋಮು ಗಲಭೆಯ ಪರಿಣಾಮ. ಯಾಕಾದರೂ ಗಣೇಶನನ್ನು ಇಟ್ಟು ಹಬ್ಬ ಮಾಡಿದೆವೋ.. ಎಂದು ಪರಿತಪಿಸುವ ಸ್ಥಿತಿ ಎದುರಾಗಿದೆ. ಗಣೇಶನನ್ನು ಇಟ್ಟವರು, ಮನೆಯಲ್ಲಿ ಮಲಗಿದ್ದವರನ್ನೂ ಹುಡುಕಿಕೊಂಡು ಬಂದು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ. ಏನು ಮಾಡಲಿ ಎಂಬ ಗ್ರಾಮಸ್ಥರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಆತಂಕಕ್ಕೆ ಪರಿಹಾರ ಸಿಕ್ಕಿಲ್ಲ.

ಯಾರೂ ಹೆದರಬೇಡಿ, ನಿಮ್ಮ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಾನು ಭರವಸೆ ಕೊಡುತ್ತೇನೆ. ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುತ್ತೇನೆ. ವಕೀಲರನ್ನು ನಾನೇ ನೇಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ.

Related posts

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಗಣೇಶ ವಿಸರ್ಜನೆ ಸಂದರ್ಭ ಗಲಭೆ ನಡೆದ ನಾಗಮಂಗಲದ ಬದರಿಕೊಪ್ಪಲಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಮ್ಮವರಲ್ಲಿ ಹಲವರು ಜೈಲು ಸೇರಿದ್ದಾರೆ. ಗಂಡಸರು ಊರು ಬಿಟ್ಟಿದ್ದಾರೆ. ಬಂಧನಕ್ಕೆ ಹೆದರಿ ಯುವಕರು ಊರನ್ನೇ ತೊರೆದಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವೇ ಇಲ್ಲ. ವಯಸ್ಸಾದವರನ್ನು ಆರೈಕೆ ಮಾಡುವವರಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯನ್ನು ನಾವೆಂದೂ ಎದುರಿಸಿರಲಿಲ್ಲ ಎಂದು ಸಚಿವರ ಎದುರು ಗ್ರಾಮದ ನಿವಾಸಿಗಳು ಕಣ್ಣೀರಿಟ್ಟಾಗ ಮರುಗಿದ ಕುಮಾರಸ್ವಾಮಿ ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನ ಜೈಲಿನಿಂದ ಬಿಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ಕುಟುಂಬ ನಿರ್ವಹಣೆಯ ಖರ್ಚನ್ನು ಭರಿಸುವುದೂ ಕಷ್ಟವಾಗಿದೆ. ಗಂಡಸರಿಲ್ಲದ ಕಾರಣ ಒಂದು ವಾರಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ತಂದಿಟ್ಟುಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳು ಯಾವ ತಪ್ಪನ್ನೂ ಮಾಡಿಲ್ಲ. ಅವರನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಏನು ಕಷ್ಟ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುವ ದಾರಿಯೇ ಕಾಣುತ್ತಿಲ್ಲ. ಹೇಗಾದರೂ ನಮಗೆ ಸಹಾಯ ಮಾಡಿ. ಇಂತಹ ಸ್ಥಿತಿಯಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲಲು ಯಾರೂ ಇಲ್ಲ ಎಂದು ಕುಮಾರಸ್ವಾಮಿ ಅವರ ಎದುರು ಮಹಿಳೆಯರು ಕಣ್ಣೀರು ಹಾಕಿದ್ದಾರೆ.
ಇತ್ತ ಬಿಜೆಪಿ ಮುಖಂಡ ಅಶ್ವತ್ಥ್‌ ನಾರಾಯಣ ಈ ಘಟನೆಯಿಂದ ಕಾಂಗ್ರೆಸ್‌ ಸರ್ಕಾರದ ಮನಸ್ಥಿತಿ, ಧೋರಣೆಗಳು ಹಾಗೂ ಹಿಂದು ವಿರೋಧಿ ನಿಲುವು ಸ್ಪಷ್ಟವಾಗಿ ಬಯಲಾಗಿದೆ. ಗಣೇಶೋತ್ಸವವನ್ನು ಒಂದು ಧರ್ಮದವರು ವಿರೋಧಿಸುತ್ತಾರೆ, ಆಡಚಣೆ ಮಾಡುತ್ತಾರೆ ಎಂದರೆ ಏನರ್ಥ? ಗಲಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರನ್ನು ಬಿಟ್ಟು ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿಜವಾದ ಆರೋಪಿಗಳನ್ನು ಬಿಟ್ಟು ಕೇರಳ ಮೂಲದವರನ್ನು ಆರೋಪಿಗಳನ್ನಾಗಿಸಲಾಗಿದೆ ಎಂದು ಆರೋಪಿಸಿದ್ಧಾರೆ.

ಹೇಗಿದೆ ಬದರಿಕೊಪ್ಪಲು ಪರಿಸ್ಥಿತಿ..?
ಗಣಪತಿ ಉತ್ಸವದ ಮೆರವಣಿಗೆಯಲ್ಲಿದ್ದ ಬದರಿ ಕೊಪ್ಪಲು ಯುವಕರು ಗ್ರಾಮ ತೊರೆದಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಯುವಕರು ಕಾಣುತ್ತಿಲ್ಲ, ವಯಸ್ಸಾದ ತಂದೆ – ತಾಯಿಗಳು ಮಾತ್ರ ಇದ್ದಾರೆ. ‘ಪೊಲೀಸರ ಭಯದಿಂದ ನಮ್ಮ ಮಕ್ಕಳು ಊರು ಬಿಟ್ಟಿದ್ದಾರೆ’ ಎಂದು ಗ್ರಾಮದ ಹಿರಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ದರಿ ಕೊಪ್ಪಲು ಮತ್ತು ಎಲ್ಲಮ್ಮನ ಗುಡಿ ದೇವಾಲಯದ ಬಳಿ ಗಣಪತಿ ಪ್ರತಿಷ್ಠಾಪಿಸಿದ್ದ ಯುವಕರನ್ನೇ ಘಟನೆಯಲ್ಲಿ ‘ಎ1’ ನಿಂದ ‘ಎ22’ರವರೆಗೆ ಆರೋಪಿಗಳು. ಇದು ಹಿಂದೂಗಳ ಆಕ್ರೋಶಕ್ಕೂ ಕಾರಣವಾಗಿದೆ. ಗಲಭೆ ಸೃಷ್ಟಿಸಿದವರನ್ನು ಬಿಟ್ಟು ಅಮಾಯಕರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ.. ಒಂದಂತೂ ಸತ್ಯ. ಬದರಿಕೊಪ್ಪಲು ಈಗ ವಯಸ್ಸಾದ ವೃದ್ಧರ, ಅಶಕ್ತರ ಹಾಗೂ ಹೆಣ್ಣು ಮಕ್ಕಳು ಮಾತ್ರವೇ ಇರುವ ಗ್ರಾಮವಾಗಿದೆ.

Tags: #ನಾಗಮಂಗಲ #ಕುಮಾರಸ್ವಾಮಿ #ಗಲಭೆ #ಗಣೇಶವಿಸರ್ಜನೆ #ಬದರಿಕೊಪ್ಪಲು #Nagamangala #Kumaraswamy #riot #GaneshaVisarjane #Badarikoppalu
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!
  • ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ
  • ಕರಡಿಗೆಯಲ್ಲಿನ ಶಿವಲಿಂಗ ʻಭಿನ್ನʼವಾಗಿದ್ದರೆ ಪೂಜೆ ಮಾಡಬೇಕಾ.. ಬೇಡವಾ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

ಪಡೆದಿದ್ದ ಲಂಚ ವಾಪಸ್‌ ಕೊಟ್ಟ ನಾಯಕರು : ಪ.ಬಂಗಾಳದಲ್ಲಿ ವಿಚಿತ್ರ ರಾಜಕೀಯ..!

June 4, 2026
ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

ಮಂತ್ರಿಯಾದ ಯತೀಂದ್ರ.. ಆಪ್ತರಿಗೆ ಮಿಸ್‌ : ಸಿದ್ದು ಆಪ್ತರಲ್ಲಿ ಅತೃಪ್ತಿ

June 4, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.