ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ಜುಲೈ 12ಕ್ಕೆ 62 ವರ್ಷ. ಇಲ್ಲ ಕಣ್ರಿ.. ಇನ್ನೂ 26 ಅಷ್ಟೇ ಎನ್ನುವವರು ಖಂಡಿತಾ ಶಿವಣ್ಣನ ಕಟ್ಟರ್ ಫ್ಯಾನ್ಸ್ ಆಗಿರ್ತಾರೆ. 20+ ಯುವಕರಿಗಿಂತಲೂ ಹೆಚ್ಚು ಆಕ್ಟಿವ್ ಆಗಿರುವ ಶಿವಣ್ಣಂಗೆ ವಯಸ್ಸಾಗಿಲ್ಲ ಅನ್ನೋದು ಚಿತ್ರರಂಗದ ಹಲವರು ಮತ್ತು ಅಭಿಮಾನಿ ದೇವರುಗಳ ಮಾತು. ಈ ಮೊದಲು ಪುನೀತ್ ರಾಜ್ ಕುಮಾರ್ ಕೂಡಾ ಇದೇ ಮಾತು ಹೇಳ್ತಾ ಇದ್ರು. ಅಣ್ಣಂಗೆ ವಯಸ್ಸಾಗಲ್ಲ ಅಂತಿದ್ರು. ಅಂತಹ ಶಿವಣ್ಣ ಈ 62ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡ್ತೇನೆ ಎಂದು ಹೇಳಿದ್ದಾರೆ. ಬರೀ 45 ಅಲ್ಲ, ಇನ್ನೂ ಹಲವು ಉಡುಗೊರೆಗಳಿವೆ.
ಶಿವಣ್ಣ ಅಭಿನಯದ 45 ಸಿನಿಮಾ ಟೀಂ ಗಿಫ್ಟ್ :
ಹುಟ್ಟುಹಬ್ಬ ಎನ್ನುವುದು ತಂದೆ-ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರಋಣಿ ಆಗಿರಬೇಕು. ಇದೇ ಜುಲೈ 12, ನನ್ನ 62ನೇ ಜನ್ಮದಿನ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಬರ್ತ್ಡೇ ಸಂಭ್ರಮಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದಗಳು. ಈ ಬಾರಿ ಹುಟ್ಟುಹಬ್ಬಕ್ಕೆ ನಾನು ನಿಮಗೆ ಒಂದು ವಿಶೇಷವಾದ ಗಿಫ್ಟ್ ಕೊಡಲಿದ್ದೇನೆ ಎಂದಿರುವ ಶಿವ ರಾಜ್ ಕುಮಾರ್ ಆ ಗಿಫ್ಟ್ ಏನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹುನಿರೀಕ್ಷಿತ ‘45’ ಸಿನಿಮಾದಿಂದ ನನ್ನ ಫಸ್ಟ್ ಲುಕ್ ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಹಾಗೂ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ. ಈ ಸಿನಿಮಾ ಇಂಡಿಯನ್ ಸ್ಕ್ರೀನ್ನಲ್ಲೇ ಉತ್ತಮ ಚಿತ್ರವಾಗಲಿದೆ. ಅದಕ್ಕೆ ದೇವರ ಆಶೀರ್ವಾದ ಬೇಕು. ಆ ದೇವರು ಎಂದರೆ ಅಪ್ಪಾಜಿ ಹೇಳಿದ ಹಾಗೆ ಅಭಿಮಾನಿಗಳು. ಅಭಿಮಾನಿ ದೇವರುಗಳು ಈ ಸಿನಿಮಾವನ್ನು ನೋಡಿ ಹಾರೈಸಿ’ ಎಂದಿದ್ದಾರೆ.
‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘45’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಚಿತ್ರದ ಕ್ಲೈಮಾಕ್ಸ್ʻಗಾಗಿಯೇ 30 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದೆ.
ಇತ್ತೀಚೆಗೆ ತಾನೇ ತಮ್ಮ ಭೈರವನ ಕೊನೆಯ ಪಾಠದ ಮೂಲಕ ಸಂಚಲನಾತ್ಮಕ ಥ್ರಿಲ್ ಕೊಟ್ಟಿದ್ದ ಶಿವಣ್ಣ ಈ ಬಾರಿ ೪೫ ಚಿತ್ರದ ಸೆನ್ಸೇಷನ್ʻಗೆ ಅಭಿಮಾನಿಗಳನ್ನು ರೆಡಿ ಮಾಡ್ತಿದ್ದಾರೆ.
ಉತ್ತರಕಾಂಡ ಚಿತ್ರದ ಮಾಲೀಕನ ಉಡುಗೊರೆ : ಶಿವಣ್ಣ ಇದೀಗ ನಟಿಸುತ್ತಿರುವ ಇನ್ನೊಂದು ಸಿನಿಮಾ ಉತ್ತರಕಾಂಡ. ಈ ಚಿತ್ರದಲ್ಲಿ ಮಾಲೀಕನಾಗಿ ನಟಿಸ್ತಿರೋ ಶಿವಣ್ಣನ ಪೋಸ್ಟರ್ʻನ ಝಲಕ್ ಬಂದಿದೆ. ರಕ್ತ ಸಿಕ್ತ ಕೈಗಳ ಚಿತ್ರ. ಫೈನಲ್ ಥ್ರಿಲ್ ಸಿಗೋದು ಹುಟ್ಟುಹಬ್ಬದ ದಿನ. ಉತ್ತರಕಾಂಡದಲ್ಲಿ ಡಾಲಿ ಧನಂಜಯ, ದಿಗಂತ್, ಭಾವನಾ, ಚೈತ್ರಾ ಆಚಾರ್, ಐಶ್ವರ್ಯಾ ರಾಜೇಶ್, ಉಮಾಶ್ರೀ, ರಂಗಾಯಣ ರಘು ಎಲ್ಲರೂ ಇದ್ದಾರೆ.
ಭೈರವ ಮತ್ತು ಭೈರತಿಯ ಕಥೆ ಏನು?
ಭೈರವನ ಕೊನೆಯ ಪಾಠ ಚಿತ್ರದ ಫಸ್ಟ್ ಲುಕ್ ಹೊರಬಂದಾಗಿದೆ. ಥ್ರಿಲ್ ಕೊಟ್ಟಿದೆ. ಇನ್ನು ಭೈರತಿ ರಣಗಲ್ ಚಿತ್ರದ ಅಪ್ʻಡೇಟ್ ಏನಾದರೂ ಸಿಗಬಹುದು ಎಂಬ ಆಸೆ ಅಭಿಮಾನಿಗಳಿಗೆ ಇದೆ.



