ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆ. ಅರೆಸ್ಟ್ ಆದ 9 ದಿನಗಳಲ್ಲಿ 5 ದಿನಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆದಿರುವ ರೇವಣ್ಣ, 10ನೇ ದಿನ ರಿಲೀಸ್ ಆಗುತ್ತಿದ್ದಾರೆ. ಇಷ್ಟು ದಿನಗಳಲ್ಲಿ ರೇವಣ್ಣ ಅವರಿಗೆ ಸಿಕ್ಕ ಏಕೈಕ ಗುಡ್ ನ್ಯೂಸ್ ಇದು. ಜೈಲಿನಲ್ಲಿ ರೇವಣ್ಣ ಕಣ್ಣೀರಿಡುತ್ತಿದ್ಧಾರಂತೆ. ಈ ವೇಳೆ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಧೈರ್ಯ ತುಂಬಿದ್ಧಾರೆ.
ಜೈಲಿನಲ್ಲಿರುವ ರೇವಣ್ಣ ಅವರನ್ನು ಭೇಟಿ ಮಾಡಿ ಬಂದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಹೇಳಿಕೆ ನೀಡಿರುವ ಜಿ.ಟಿ.ದೇವೇಗೌಡ, ತಪ್ಪು ಮಾಡದೆ ಇರೋ ವಿಚಾರಕ್ಕೆ ಸಿಲುಕಿಸಿದ್ರು ಅಂತ ರೇವಣ್ಣ ಕಣ್ಣೀರು ಹಾಕಿದ ವಿಷಯ ಹಂಚಿಕೊಂಡಿದ್ಧಾರೆ. ರೇವಣ್ಣ ಜೈಲಿಗೆ ಹೋದ ದಿನದಿಂದ ಬಂದಿರಲಿಲ್ಲ. ಅವರ ಆರೋಗ್ಯ ಉಭಯ ಕುಶಲೋಪರಿ ವಿಚಾರಿಸಲು ಬರಬೇಕೆಂದು ಮೂರು ದಿನದಿಂದ ಮನಸ್ಸಲ್ಲಿತ್ತು ಎಂದ ಜಿಟಿ ದೇವೇಗೌಡ
ಅವರು ಆರಾಮವಾಗಿ ಕುಳಿತಿದ್ದು, ಜೊತೆಯಲ್ಲಿ ಚಹಾ ಕುಡಿದ್ವಿ. ಹಳೆ ವಿಚಾರಗಳನ್ನೆಲ್ಲ ಮೆಲುಕು ಹಾಕಿದ್ರು. ಅವ್ರಿಗೆ ಈಗಲೂ ಕೂಡ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅವ್ರಿಗೆ ಒಂದೇ ಯೋಚನೆ, ನಾನೇನೂ ತಪ್ಪು ಮಾಡಿದ್ದೀನಿ ಎಂದು. ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷವಾಗಿದೆ. ನನ್ನನ್ನ ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ಲಿ ಅನುಭವಿಸಬಹುದಿತ್ತು. ಏನೂ ತಪ್ಪು ಮಾಡದೇ ಜೈಲಿಗೆ ಹಾಕಿದ್ರಲ್ಲಾ ಎಂಬ ಕೊರಗು ರೇವಣ್ಣನಿಗೆ ಕಾಡುತ್ತಿದೆ. ಅದನ್ನು ನೆನಸಿಕೊಂಡಾಗ ದುಃಖ ಪಡ್ತಾರೆ. ಏನೂ ತಪ್ಪು ಮಾಡದೆ ಶಿಕ್ಷೆ ಕೊಟ್ರಲ್ಲಾ ಎಂದು ರೇವಣ್ಣ ಕಣ್ಣೀರು ಹಾಕಿದ್ರು. ಒಂದು ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದ್ರು. ಈಗಲೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ನೆನೆದರು. ರಾಜಕೀಯ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದೆವು. ರಾಜಕೀಯವಾಗಿ ಎಲ್ಲೆಲ್ಲಿ ಎಡವಿದ್ದೇವೆ. ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ. ಶಾರ್ಟ್ ಟೈಮ್ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಯಾರ್ಯಾರು ಮಂತ್ರಿಗಳು ಮಾಡಿದ್ರಿ ಅವರೆಲ್ಲರೂ ಹೋದರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ರಿ ಎಂದು ಹೇಳಿದ್ಧಾರೆ. ಯಾವಾಗಲೂ ದೇವರು, ಭಕ್ತಿ ಅಂತಾ ಇದ್ದವರು, ನನಗೆ ಈ ರೀತಿ ಆಗಿದೆಯಲ್ಲ ಎಂಬ ಚಿಂತೆ ಕಾಡುತ್ತಿದೆ ಎಂದೆಲ್ಲ ಜಿಟಿ ದೇವೇಗೌಡ ಹೇಳಿಕೊಂಡಿದ್ಧಾರೆ.
ಅಂದಹಾಗೆ ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದರೂ.. ಕಾನೂನಿನಿಂದ ಮುಕ್ತಿ ಸಿಕ್ಕಿಲ್ಲ. ರೇವಣ್ಣ ಅವರಿಗೆ ಜಾಮೀನು ಸಿಕ್ಕಿದೆಯಾದರೂ.. ಷರತ್ತುಗಳಿವೆ. ಇನ್ನೊಂದು ಕೇಸಿನಲ್ಲಿ ಅರೆಸ್ಟ್ ಆಗುವಂತಹ ಸೆಕ್ಷನ್ ಹಾಕಿಲ್ಲ. ಕೋರ್ಟಿನಲ್ಲೂ ಆ ಮಾತು ಹೇಳಿರುವುದರಿಂದ ಮತ್ತೆ ಅರೆಸ್ಟ್ ಆಗುವ ಭಯ ಇಲ್ಲ. ಆದರೆ.. ಹೊಸ ಕೇಸ್ ದಾಖಲಾದರೆ.. ಹೇಳುವುದು ಕಷ್ಟ. ಅಲ್ಲದೆ.. ಸಂತ್ರಸ್ತೆ ಕೆ.ಆರ್.ಪುರದವರಾಗಿದ್ದು. ಅಲ್ಲಿಗೆ ರೇವಣ್ಣ ಹೋಗುವಂತಿಲ್ಲ. ಕಾನೂನುಮೀರುವಂತಿಲ್ಲ.