ಒಬ್ಬರಲ್ಲ..ಇಬ್ಬರಲ್ಲ..ಬರೋಬ್ಬರಿ 12 ಸುಂದರಿಯರು. ಆ ಚಿತ್ರಕ್ಕೆ ಸಾಥ್ ಕೊಟ್ಟಿರುವುದು ರಾಘವೇಂದ್ರ ರಾಜ್`ಕುಮಾರ್ (Raghavendra Rajkumar). ಏಕೆಂದರೆ ಅದು ತೇಜ್ ಸಿನಿಮಾ. ಬಾಲ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ತೇಜ್, ಆ ನಂತರ ಕನ್ನಡ ತಮಿಳು ಚಿತ್ರರಂಗದಲ್ಲಿ ಕೆಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಿವೈಂಡ್ (Rewind) ಎನ್ನುವ ಸಿನಿಮಾವನ್ನು ನಿರ್ದೇಶಿಸಿ ತಾವೇ ನಟಿಸಿದ್ದರು. ನಂತರ ರಾಮಾಚಾರಿ 2.0 (Ramachari) ಎಂಬ ಸಿನಿಮಾದ ಮುಖಾಂತರ ಖ್ಯಾತಿ ಪಡೆದಿದ್ದರು. ಇದೀಗ ಡ್ಯೂಡ್ (Dude) ಎನ್ನುವ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಈ (Dude) ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ಬರೋಬ್ಬರಿ 12 ಜನ ಬ್ಯೂಟಿಫುಲ್ ಹೀರೋಯಿನ್ಗಳು ಸಿನಿಮಾದಲ್ಲಿ ಇರಲಿದ್ದಾರೆ. ಪೂಜಾರಾಜು, ಚಿತ್ರಲ್ ರಂಗಸ್ವಾಮಿ ರೋಹಿಣಿ, ಪ್ರಣವಿ ಗೌಡ, ಸಹನಗೌಡ, ಸಾನಿಯಾ, ಜೀವತಾ, ದೃತಿ, ಸೌಮ್ಯ, ರೊಸ್ಲಿಂಗ್, ಮಿಶೇಲ್ ನೊರೋನ, ಹೀಗೆ 12 ಜನ ನಾಯಕಿಯರು ಈ (Dude) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಫುಟ್ಬಾಲ್ ಕ್ರೀಡೆಯ ಸುತ್ತ ತಿರುಗುವ ಈ ಸಿನಿಮಾದಲ್ಲಿ ರಂಗಾಯಣ ರಘು, ಸ್ಪರ್ಶ ರೇಖಾ, ಇನ್ನುಳಿದ ಅನುಭವಿ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಭಾನುವಾರ ನಡೆದ ಮುಹೂರ್ತದಲ್ಲಿ ರಾಘವೇಂದ್ರ ರಾಜ್`ಕುಮಾರ್ (Raghavendra Rajkumar) ಹಾಜರಾಗಿ ಶುಭ ಕೋರಿದರು. ನಟ ರಾಘವೇಂದ್ರ ರಾಜ್`ಕುಮಾರ್ (Raghavendra Rajkumar) ಈ ಚಿತ್ರದಲ್ಲಿ ನಟಿಸುತ್ತಿಲ್ಲ. ರಾಘಣ್ಣ-ಶೃತಿ (Raghavendra Rajkumar and Shruthi) ಅಭಿನಯಿಸಿರುವ 13 ಸಿನಿಮಾ ಇದೇ ಸೆಪ್ಟೆಂಬರಲ್ಲಿ ರಿಲೀಸ್ ಆಗಲಿದೆ. ’13’ ಸಿನಿಮಾದಲ್ಲಿ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಎಂಬ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸಿದ್ದು, ಟೀ ಅಂಗಡಿ ನಡೆಸುವ ಸಾಯಿರಾ ಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ.



