ರೈತರು ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ದಿನಕ್ಕೆ ಕನಿಷ್ಠ 5 ಗಂಟೆ ವಿದ್ಯುತ್ ಕೊಡುವುದಕ್ಕೆ ಹೇಳಿದ್ದೇನೆ ಎಂದು ಖುದ್ದು ಸಿಎಂ ಆದೇಶ ನೀಡಿದ್ದರಾದರೂ, ವಾಸ್ತವದಲ್ಲಿ ಅದು ಜಾರಿಯಾಗಿಲ್ಲ. ಮೊದಲೇ ಮಳೆ ಇಲ್ಲ. ಬರಗಾಲ. ಹೀಗಿರುವಾಗ ಕರೆಂಟ್ ಕೂಡಾ ಕೈಕೊಟ್ಟರೆ ಏನು ಮಾಡೋದು ಅನ್ನೋ ರೈತರ ಪ್ರಶ್ನೆಗೆ ಸರ್ಕಾರ ನಿಧಾನವಾಗಿ ಉತ್ತರ ಕೊಡುತ್ತಿದೆ. ಹೀಗಿರುವಾಗಲೇ ಕೇಳಿ ಕೇಳಿ ಕೇಳಿ ನೋಡಿ ನೋಡಿ ನೋಡಿ ಬೇಸತ್ತ ರೈತರು ವಿದ್ಯುತ್ ಕಚೇರಿಗೆ ಮೊಸಳೆಯನ್ನೇ ತಂದು ಬಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಬರಗಾಲದ ಹೊಡೆತಕ್ಕೆ ರೈತರು ನಲುಗಿ ಹೋಗಿದ್ದಾರೆ. ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಈ ನಡುವೆ ನೀರಿಲ್ಲದೆ ಬೆಳೆ ಒಣಗಿ ಹೋಗ್ತಿದ್ದು, ಬೆಳೆಗೆ ಪಂಪ್ಸೆಟ್ ಮೂಲಕ ನೀರು ಹಾಯಿಸಬೇಕು ಅಂದ್ರು ರೈತರಿಗೆ ಸರಿಯಾಗಿ ಕರೆಂಟ್ ಸಿಗ್ತಿಲ್ಲ. ಇದರಿಂದ ರೊಚ್ಚಿಗೆದ್ದ ರೈತನೊಬ್ಬ ರಾತ್ರಿ ನೀರು ಹಾಯಿಸೋಕೆ ಜಮೀನಿಗೆ ಹೋದಾಗ ಸಿಕ್ಕ ಮೊಸಳೆಯನ್ನೆ ಕೆಇಬಿ ಕಚೇರಿ ತಂದು ಬಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಕರೆಂಟ್ ಪಡಿಪಾಟಲು ಎಲ್ಲಿಗೆ ಬಂದು ತಲುಪಿದೆ ಎಂದ್ರೆ ಯಾವಾಗ ಕರೆಂಟ್ ಸಿಗುತ್ತೆ ಎಂದು ರೈತರು ಜಮೀನುಗಳಲ್ಲಿ ಕಾಯ್ದೊಕೊಂಡು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಕರೆಂಟ್ ಕಾಟಕ್ಕೆ ಬೇಸತ್ತ ರೈತನೊಬ್ಬ ಜಮೀನಿಗೆ ಬಂದಿದ್ದ ಮೊಸಳೆಯನ್ನೆ ವಿದ್ಯುತ್ ವಿತರಣಾ ಘಟಕಕ್ಕೆ ತಂದು ಬಿಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ. ರಾತ್ರಿ ಜಮೀನಿಗೆ ಲಗ್ಗೆ ಇಟ್ಟಿದ್ದ ಮೊಸಳೆಯನ್ನ ಕಂಡ ರೈತರು ಹಿಡಿದು ನೇರವಾಗಿ ರೋಣಿಗಾಳ ವಿದ್ಯುತ್ ವಿವರಣಾ ಘಟಕಕ್ಕೆ ತಂದು ಬಿಟ್ಟು ಆಕ್ರೋಶ ವ್ಯಕ್ತ ಪಡೆಸಿದ್ದಾರೆ.
ಪ್ರತಿದಿನ ತಡರಾತ್ರಿ ಕರೆಂಟ್ ನೀಡುತ್ತಾರೆ. ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಇದೆ ಎಂದರು ಸಹ ಅಧಿಕಾರಿಗಳು ಕೇಳುತ್ತಿಲ್ಲ. ರಾತ್ರಿ ವೇಳೆ ಕರೆಂಟ್ ನೀಡಿದರೆ ನಾವೇನು ಮಾಡೋದು, ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಎಂದು ಮೊಸಳೆಯನ್ನ ತಂದಿದ್ದೇವೆ ಎಂದ ರೈತರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡ ಹೋಗಿದ್ದಾರೆ.
ದಿನಕ್ಕೆ ರೈತರಿಗೆ ಇಂತಿಷ್ಟು ಸಮಯ ಕರೆಂಟ್ ನೀಡಬೇಕು ನಿಯಮವಿದೆ. ಆದ್ರೆ ವಿದ್ಯುತ್ ಕೊರತೆಯಿಂದಾಗಿ ರೈತರ ಜಮೀನುಗಳಲ್ಲಿ ಪಂಪಸೆಟ್ಗಳಿಗೆ ಕರೆಂಟ್ ಪುರೈಕೆ ಸಾಧ್ಯವಾಗ್ತಿದೆ. 7 ಗಂಟೆ ರೈತರಿಗೆ ಸಿಗಬೇಕಿದ್ದ ವಿದ್ಯುತ್ ಸಿಗ್ತಿಲ್ಲ. ಮತ್ತೊಂದು ಕಡೆಗೆ ಹಗಲು ನಾಲ್ಕು ತಾಸು, ರಾತ್ರಿ ಮೂರು ತಾಸು ನೀಡಬೇಕಾದ ವಿದ್ಯುತ್ ಸರಿಯಾದ ಸಮಯಕ್ಕೆ ನೀಡ್ತಿಲ್ಲ. ರೈತರು ಮಧ್ಯರಾತ್ರಿ, ನಸುಕಿನ ಜಾವದ ವರೆಗು ಕರೆಂಟ್ ಕಾದು ಕೂತು ಹಲವು ಅಪಾಯಗಳ ನಡುವೆ ಬೆಳೆಗಳಿಗೆ ನೀರು ಹಾಯಿಸಬೇಕಿದೆ. ಮೊಸಳೆ-ಹಾವು-ಚೇಳು-ಹುಳ ಹುಪ್ಪಡಿಗಳಿಗೆ ಅಂಜಿ ಕೆಲಸ ಮಾಡಬೇಕಾಗಿದೆ. ಹಗಲು ಹೊತ್ತು ಸರಿಯಾಗಿ ಕರೆಂಟ್ ಸಿಕ್ಕರೆ ರೈತರಿಗೆ ಈ ತಾಪತ್ರಯವೇ ಇರೋದಿಲ್ಲ.



