

ಪಿಎಫ್‍ಐ ಬ್ಯಾನ್ ಆಯ್ತು. ಅದೂ ಸುಮಾರು 6 ತಿಂಗಳು ಪಕ್ಕಾ ಪ್ಲಾನ್ ಮಾಡಿಕೊಂಡೇ ದಾಳಿ ಮಾಡಿ ದಾಖಲೆಗಳನ್ನು ಸಂಗ್ರಹಿಸಿ ಪಿಎಫ್‍ಐ ಹಾಗೂ ಅದರ ಜೊತೆ ನಂಟು ಹೊಂದಿದ್ದ 8 ಸಂಘಟನೆಗಳನ್ನು ನಿಷೇಧ ಮಾಡಲಾಯ್ತು. ಈ ಮಧ್ಯೆ ಕೆಲವರನ್ನು ಅರೆಸ್ಟ್ ಮಾಡಲಾಯಿತಲ್ಲ.. ಅವರ ವಿದ್ಯಾಭ್ಯಾಸ, ಹಿನ್ನೆಲೆ ಬೆರಗು ಹುಟ್ಟಿಸುತ್ತದೆ. ಕಾಂಗ್ರೆಸ್ ಯುವ ಮುಖಂಡ ನಲಪ್ಪಾಡ್ ಹೇಳಿದಂತೆ ಅವರ್ ಯಾರೂ ನಿರುದ್ಯೋಗಿಗಳಾಗಿರಲಿಲ್ಲ. ಅನಕ್ಷರಸ್ತರಾಗಿರಲಿಲ್ಲ. ಬಡವರಾಗಿರಲಿಲ್ಲ. ಅರೆಸ್ಟ್ ಆಗಿರುವ ಕೆಲವರ ಹಿನ್ನೆಲೆ ನೋಡಿ.. ದೇಶಾದ್ಯಂತ ಅರೆಸ್ಟ್ ಆಗಿರುವವರಲ್ಲಿ ಕೆಲವರ ಹಿನ್ನೆಲೆ ಮಾತ್ರ ಸಿಕ್ಕಿದೆ. ಇನ್ನೂ ಪರಿಶೀಲನೆ ನಡೆಯುತ್ತಿದೆ.
ಒಮಾ ಸಲಾಮ್ : ಪಿಎಫ್‍ಐ ಚೇರ್ಮನ್. ಕೇರಳ ಸರ್ಕಾರದಲ್ಲಿ ನೌಕರನಾಗಿದ್ದ. 2020ರಲ್ಲಿ ಸಸ್ಪೆಂಡ್ ಆಗಿದ್ದ
ಇ.ಎಂ. ಅಬ್ದುರ್ ರೆಹಮಾನ್ : ಪಿಎಫ್‍ಐ ರಾಷ್ಟ್ರೀಯ ಉಪಾಧ್ಯಕ್ಷ. ಕೊಚ್ಚಿನ್ ಯುನಿವರ್ಸಿಟ್ ಆಫ್ ಸೈನ್ಸ್ & ಟೆಕ್ನಾಲಜಿಯಲ್ಲಿ ಲೈಬ್ರರಿಯನ್ ಆಗಿದ್ದವನು. ಈಗ ನಿವೃತ್ತನಾಗಿದ್ದಾನೆ.
ವಿ.ಪಿ. ನಜರುದ್ದೀನ್ : ಪಿಎಫ್‍ಐ ನ್ಯಾಷನಲ್ ಸೆಕ್ರೆಟರಿ. ಜಮಾತ್ ಇ ಇಸ್ಲಾಮಿ ಹಿಂದ್ ಮುಖವಾಣಿ ಮಾಧ್ಯಮ್ ಡೈಲಿ ಪತ್ರಿಕೆಯಲ್ಲಿ ಕ್ಲರ್ಕ್ ಆಗಿದ್ದವನು.
ಪಿ.ಖೊಯಾ : ಪಿಎಫ್‍ಐ ರಾಷ್ಟ್ರೀಯ ಕೌನ್ಸಿಲ್ ಸದಸ್ಯ. ಕೊಳಿಕ್ಕೋಡ್‍ನ ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ. ನಂತರ ಕತಾರ್‍ಯ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ.
ಅಫ್ಜಲ್ ಪಾಷಾ : ಬಿಸಿನೆಸ್ ಮ್ಯಾನ್. 2006ರಿಂದ ಸಕ್ರಿಯ.


ಅಬ್ದುಲ್ ವಹೀದ್ ಸೇಠ್ : ಪಿಎಫ್‍ಐ ಕಾರ್ಯಕಾರಿ ಸದಸ್ಯ. ಕರ್ನಾಟಕದ ಶಿವಾಜಿನಗರದಲ್ಲಿದ್ದ. ಟೆಕ್ಕಿ. ಸ್ವಂತ ಟ್ಯಾಲಿ, ಇಆರ್‍ಪಿ ಹಾಗೂ ಸಾಫ್ಟ್‍ವೇರ್ ಸಲ್ಯೂಷನ್ಸ್ ಕಂಪೆನಿಯಿದೆ. ಶ್ರೀಮಂತ ಕುಟುಂಬ.
ಅನೀಸ್ ಅಹ್ಮದ್ : ಪಿಎಫ್‍ಐ ನ್ಯಾಷನಲ್ ಜನರಲ್ ಸೆಕ್ರೆಟರಿ. ಬೆಂಗಳೂರಿನವನೇ. ಎರಿಕ್ಸನ್ ಕಂಪೆನಿಯಲ್ಲಿ ಗ್ಲೋಬಲ್ ಟೆಕ್ನಿಕಲ್ ಮ್ಯಾನೇಜರ್ ಆಗಿದ್ದ.
ಮಿನಾರುಲ್ ಶೇಖ್ : ಪ.ಬಂಗಾಳ ಪಿಎಫ್‍ಐ ಅಧ್ಯಕ್ಷ. ಅಲಿಘರ್ ಮುಸ್ಲಿಂ ವಿವಿಯಲ್ಲಿ ಎಂಎ ಪಿಹೆಚ್‍ಡಿ ಪಡೆದಿದ್ದ. ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ.
ಮಹಮ್ಮದ್ ಆಸೀಫ್ : ರಾಜಸ್ತಾನ ಘಟಕದ ಅಧ್ಯಕ್ಷ. ಈತ ಕೂಡಾ ಪದವೀಧರ
ಮಹಮ್ಮದ್ ಶಕೀಬ್ ಅಲಿಯಾಸ್ ಶಕೀಫ್ : ರಾಷ್ಟ್ರೀಯ ಕಾರ್ಯದರ್ಶಿ : ರಿಯಲ್ ಎಸ್ಟೇಟ್ ಬಿಸಿನೆಸ್‍ಮ್ಯಾನ್
ಹೀಗೆ.. ಪ್ರತಿಯೊಬ್ಬ ಬಂಧಿತನೂ ಪದವೀಧರನಾಗಿದ್ದಾನೆ. ಉತ್ತಮ ಶಿಕ್ಷಣ ಪಡೆದಿದ್ದಾನೆ. ಆರ್ಥಿಕವಾಗಿಯೂ ಚೆನ್ನಾಗಿದ್ದಾನೆ. ಕೌಟುಂಬಿಕ ಹಿನ್ನೆಲೆಯೂ ಸುಸ್ಥಿತಿಯಲ್ಲಿದೆ. ಉದ್ಯೋಗವಿದೆ. ಆದರೂ ಇವರು ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಾರೆ ಹಾಗೂ ಕುಮ್ಮಕ್ಕು ನೀಡಿದ್ದಾರೆ ಎಂದರೆ ಇವರು ಕೇವಲ ಧರ್ಮದ ಅಮಲಿಗೆ ತುತ್ತಾಗಿದ್ದಾರೆ ಎನ್ನದೆ ವಿಧಿಯಿಲ್ಲ. ಈ ಕುರಿತು ಎನ್‍ಐಎ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು ವಿಚಾರಣೆ ವೇಳೆ ಸಾಬೀತು ಮಾಡಬೇಕಿದೆ.



