ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ಸ್ವದೇಶೀ ನಿರ್ಮಾಣದ ಅಗ್ನಿ-5 ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಮಿಷನ್ ದಿವ್ಯಾಸ್ತ್ರ ಸಕ್ಸಸ್ ಆಗಿದೆ. ಧಾನ ಮಂತ್ರಿ ನರೇಂದ್ರ ಮೋದಿಯವರೇ ಇದನ್ನು ಘೋಷಿಸಿದ್ದು ಸ್ವದೇಶೀ ನಿರ್ಮಾಣದ ಅಗ್ನಿ-5 ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಮಿಷನ್ ದಿವ್ಯಾಸ್ತ್ರ ಯೋಜನೆಯಡಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಘೋಷಿಸಿದ್ದಾರೆ. ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದ ಪರೀಕ್ಷೆಯಲ್ಲಿ ದಿವ್ಯಾಸ್ತ್ರ ಯಶಸ್ವಿಯಾಗಿದೆ.
ಹೇಗಿರುತ್ತೆ ಈ ದಿವ್ಯಾಸ್ತ್ರ..?
ಅಗ್ನಿ-5 ಕ್ಷಿಪಣಿಯ ಸಾಮರ್ಥ್ಯಗಳು ಭಾರತಕ್ಕೆ ಏಷ್ಯಾದಾದ್ಯಂತ ಮತ್ತು ಬಹುಶಃ ಯುರೋಪಿನ ಭಾಗಗಳ ಮೇಲೂ ದಾಳಿ ನಡೆಸಬಲ್ಲ ಸಾಮರ್ಥ್ಯ ಇರುವ ಕ್ಷಿಪಣಿಗಳು. ಹಾರುವುದು ಒಂದೇ ಕ್ಷಿಪಣಿ. ಆದರೆ.. ಗುರಿಗಳು ಮಾತ್ರ ಒಂದೇ ಆಗಿರಲ್ಲ. ಒಂದೇ ಕ್ಷಿಪಣಿ, ಹಲವು ಸಿಡಿತಲೆಗಳಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿದ್ದು, ಭಿನ್ನ ಸ್ಥಳಗಳಲ್ಲಿರುವ ಗುರಿಯನ್ನು ಟಾರ್ಗೆಟ್ ಮಾಡುತ್ತದೆ. ಇದು ಹಿಂದಿನ ಎಲ್ಲಾ ಕ್ಷಿಪಣಿಗಳಿಗಿಂತ ಬಹಳ ಭಿನ್ನ. ಅಂದಾಜು 7 ಸಾವಿರ ಕಿಲೋಮೀಟರ್‌ವರೆಗಿನ ಟಾರ್ಗೆಟ್‌ಅನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.
ಚೀನಾದಲ್ಲಿರುವ ಡಾಂಗ್ ಫೆಂಗ್ 4 ಕ್ಷಿಪಣಿಗಳಿಗೆ ಸರಿಸಮನಾಗಿರುವ ಈ ಕ್ಷಿಪಣಿ, ಚೀನಾ ವಿರುದ್ಧ ಭಾರತದ ಶಕ್ತಿಯನ್ನು ಎತ್ತರಕ್ಕೇರಿಸಿದೆ.
ಈ ಕ್ಷಿಪಣಿಗಳ ಮೂಲಕ ಚೀನಾದ ಉತ್ತರ ಭಾಗವನ್ನೇ ಏಕೆ, ಯೂರೋಪಿನ ಪ್ರದೇಶಗಳಿಗೂ ಟಾರ್ಗೆಟ್ ಮಾಡಬಹುದು. ಇಡೀ ಏಷ್ಯಾ ಖಂಡದಲ್ಲಿ ಎಲ್ಲಿಯೇ ಬೇಕಾದರೂ ಈ ಕ್ಷಿಪಣಿ ರೀಚ್ ಆಗಬಲ್ಲದು.
ಅಂದಹಾಗೆ ಈ ರೀತಿಯ ಕ್ಷಿಪಣಿಗಳಿರುವುದು ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ. ಪ್ರಸ್ತುತ ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಮಾತ್ರ ಈ ಎಂಆರ್ʻವಿ ಕ್ಷಿಪಣಿ ವ್ಯವಸ್ಥೆ ಹೊಂದಿವೆ. ಇಸ್ರೇಲ್ ಕೂಡಾ ಹೊಂದಿದೆ ಎನ್ನಲಾಗಿದೆ.



