ಸಿಎಂ ಸಿದ್ದರಾಮಯ್ಯ (Siddramaiah) ತಮ್ಮ 14ನೇ ಬಜೆಟ್ (Budget) ಮಂಡಿಸಿದ್ದಾರೆ. ಇದೊಂದು ದಾಖಲೆ. ಇಷ್ಟೊಂದು ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಸಿಎಂ ಸಿದ್ದರಾಮಯ್ಯ. ಸಿಎಂ ಆಗಿದ್ದುಕೊಂಡು ಸಿದ್ದರಾಮಯ್ಯ ಮಂಡನೆ ಮಾಡಿದ 7ನೇ ಬಜೆಟ್ ಇದು. 2ನೇ ಬಾರಿ ಸಿಎಂ ಆದ ಮೇಲೆ ಮಂಡನೆ ಮಾಡಿದ ಮೊದಲ ಬಜೆಟ್. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಸರ್ಕಾರದಲ್ಲಿ (Finance Minister) ಹಣಕಾಸು ಸಚಿವರಾಗಿದ್ದ ಏಕೈಕ ನಾಯಕರೂ ಸಿದ್ದರಾಮಯ್ಯನವರೇ. ಇಷ್ಟೆಲ್ಲ ದಾಖಲೆ ಬರೆದ ಸಿದ್ದರಾಮಯ್ಯ, ಈ ಬಾರಿ ಕೆಟ್ಟ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದರಾ ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ಬಜೆಟ್ ಭಾಷಣದುದ್ದಕ್ಕೂ ಸಿದ್ದರಾಮಯ್ಯ (Narendra Modi) ಕೇಂದ್ರದ ಮೋದಿ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರವನ್ನು ಅಧಿಕೃತ ಬಜೆಟ್ ಭಾಷಣದಲ್ಲಿ ಟೀಕೆ ಮಾಡುತ್ತಲೇ ಹೋದರು.
ಬಜೆಟ್ ಅಧಿಕೃತ ಭಾಷಣದ ಪ್ರತಿಯಲ್ಲೂ ಟೀಕೆ, ತೆಗಳಿಕೆ, ಅವಹೇಳನ, ಭ್ರಷ್ಟಾಚಾರದ ಆರೋಪ, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಮಾತುಗಳನ್ನು ಅಧಿಕೃತವಾಗಿ ಉಲ್ಲೇಖಿಸುತ್ತ ಹೋದರು. ಬಹುಶಃ ಈ ಹಿಂದೆ ಯಾವ ಸರ್ಕಾರವೂ ಈ ರೀತಿ ಅಧಿಕೃತ ಬಜೆಟ್ ಭಾಷಣದಲ್ಲಿ ಹಿಂದಿನ ಸರ್ಕಾರ ಮತ್ತು ಕೇಂದ್ರವನ್ನು ಟೀಕಿಸಿರಲಿಲ್ಲ. ಈ ಮೂಲಕ ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರಾ ಸಿದ್ದರಾಮಯ್ಯ ಎಂಬುದು ಜನರ ಪ್ರಶ್ನೆ.
ರಾಜ್ಯ ಬಿಜೆಪಿ ನಾಯಕರ ವಿಷಯಕ್ಕೆ ಬಂದರೆ, ಅವರಿಗೆ ಈ ಆರೋಪಗಳ ಗಂಭೀರತೆ ಅರ್ಥವಾದಂತಿಲ್ಲ. ಹೀಗಾಗಿಯೇ ಇದು ಕೇವಲ ಮೋದಿ ಮತ್ತು ಬಿಜೆಪಿಯನ್ನು ಟೀಕೆ ಮಾಡಿದ ಬಜೆಟ್ ಎಂದಷ್ಟೇ ಟೀಕೆ ಮಾಡುತ್ತಿದ್ದಾರೆ. ಬಹುಶಃ ಇದೂ ಕೂಡಾ ಒಂದು ರಾಜಕೀಯ ಟೀಕೆ ಎಂದುಕೊಂಡರೋ ಏನೋ.. ಆದರೆ, ಅಧಿಕೃತವಾಗಿ ಆರೋಪಗಳನ್ನು ಅಕ್ಷರ ರೂಪಕ್ಕಿಳಿಸಿದೆ ಎಂಬುದು ಆರ್ಥವಾದಂತಿಲ್ಲ. ಟೀಕೆ ಮಾಡಿದ ಬಸವರಾಜ ಬೊಮ್ಮಾಯಿ ಸೇರಿದಂತೆ ಯಾರೊಬ್ಬರೂ ಗಂಭೀರತೆ ಅರ್ಥ ಮಾಡಿಕೊಳ್ಳಲಿಲ್ಲ.
ಇನ್ನು ರಾಜ್ಯ ಬಜೆಟ್ಟಿನಲ್ಲಿ ಬಿಜೆಪಿ ಸರ್ಕಾರದ ಹಲವು ಯೋಜನೆಗಳು ಮುಚ್ಚಿ ಹೋದವು. ಒಟ್ಟು 17 ಯೋಜನೆಗಳನ್ನು ಸಿದ್ದರಾಮಯ್ಯ ಮೂಟೆ ಕಟ್ಟಿದರು.
- ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಯ್ತು (NEP)
- ಬಿಜೆಪಿ ಕಾಲದಲ್ಲಿ ಆದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ರದ್ದಾಯ್ತು (cyloboss)
- ರೈತರು ಮತ್ತು ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದ ವಿದ್ಯಾನಿಧಿ ಯೋಜನೆ ರದ್ದಾಯ್ತು (Farmer, Auto & taxi drivers)
- ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಿಸುವ ಯೋಜನೆಯನ್ನೂ ವಾಪಸ್ ತೆಗೆದುಕೊಂಡಾಯ್ತು (Go shale)
- ಆರೋಗ್ಯ ಸೇವೆಗೆ ಆರಂಭವಾಗಿದ್ದ `ನಮ್ಮ ಕ್ಲಿನಿಕ್’ (ದೆಹಲಿ ಮಾದರಿ ಆರೋಗ್ಯ ಸೇವೆ) ರದ್ದಾಯ್ತು (namma clinic)
- ಎಲ್ಲ ಸರ್ಕಾರಿ ಶಾಲೆಗಳಿಗೂ ಒಂದೇ ರೀತಿಯ ಬಣ್ಣ ಬಳಿಯುವ ವಿವೇಕ ಶಾಲೆ ಎಂಬ ಯೋಜನೆ ರದ್ದು
- ಒಂದು ವರ್ಗದ ರೈತರು ವಿರೋಧ ವ್ಯಕ್ತಪಡಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದಾಯ್ತು (APMC Act)
- ರೈತರಲ್ಲದವರಿಗೂ ಭೂಮಿ ಖರೀದಿ ಮಾಡುವ ಅವಕಾಶ ಕಲ್ಪಿಸುವ ಕಾಯ್ದೆ ವಾಪಸ್ ತೆಗೆದುಕೊಳ್ಳಲಾಯ್ತು
- ಸ್ತ್ರೀ ಸಾಮಥ್ರ್ಯ ಸಂಘಕ್ಕೆ 5 ಲಕ್ಷ ನೀಡುವ ಸ್ವಹಾಯ ಸಂಘಗಳಿಗೆ ಬಲ ತುಂಬುವ ಯೋಜನೆ ರದ್ದಾಯ್ತು
- ಭೂಸಿರಿ : ರೈತರಿಗೆ ವಾರ್ಷಿಕ 10 ಸಾವಿರ ರೂ. ನೆರವು ನೀಡುವ ಯೋಜನೆ ರದ್ದು
- ಶ್ರಮಶಕ್ತಿ : ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ. ನೀಡುವ ಯೋಜನೆ ರದ್ದು
- ಅಗ್ನಿವೀರ್ ತರಬೇತಿ : ಎಸ್ಸಿ/ಎಸ್ಟಿ ಯುವಕರು ಸೈನ್ಯಕ್ಕೆ ಸೇರಲು ನೆರವಾಗುವ ಯೋಜನೆ ರದ್ದು
- ಜಲನಿಧಿ : ರೈತರ ಜಮೀನಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ರದ್ದು
- ಕ್ಷೀರ ಸಮೃದ್ಧಿ ಬ್ಯಾಂಕ್ : ಹಾಲು ಉತ್ಪಾದಕರಿಗೆ ನೆರವಾಗಲು ಯೋಜಿಸಿದ್ದ ಬ್ಯಾಂಕ್ ಯೋಜನೆ ರದ್ದು
- ವಿನಯ ಸಾಮರಸ್ಯ : ಅಸ್ಪøಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸಲು ನೆರವಾಗಿದ್ದ ಯೋಜನೆ ರದ್ದು
- ಜ್ಯುವೆಲ್ಲರಿ ಪಾರ್ಕ್ : ಚಿನ್ನಾಭರಣ ಕುಶಲಕರ್ಮಿಗಳಿಗೆ ತರಬೇತಿ ಹಾಗೂ ಚಿನ್ನಾಭರಣ ಮಳಿಗೆಗಳಿಗೆ ನೆರವಾಗುವ ಯೋಜನೆ ರದ್ದು
- ಯುವಶಕ್ತಿ : ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯುವಕರನ್ನು ಒಗ್ಗೂಡಿಸಿ ಸಂಘ ತೆರೆಯುವ ಯೋಜನೆ ರದ್ದು
ಹೀಗೆ ಅಧಿಕೃತವಾಗಿ ಬಿಜೆಪಿ ಸರ್ಕಾರದ 17 ಯೋಜನೆಗಳನ್ನು ಮುಚ್ಚಿದ್ದಾರೆ ಸಿದ್ದರಾಮಯ್ಯ.



