ಅಭಿಮಾನಿಗಳ ನಿರೀಕ್ಷೆ ದೊಡ್ಡದಾಗಿದೆ. ಯುವ, ಕನ್ನಡ ಚಿತ್ರರಂಗದ ದೊಡ್ಡ ಸಿನಿಮಾ ಎಂಬ ಹೈಪ್ ಸಿಕ್ಕಿದೆ. ಮಾರ್ಚ್ 29ಕ್ಕೆ ಯುವ ಚಿತ್ರ ರಿಲೀಸ್ ಆಗುತ್ತಿದೆ. ದೊಡ್ಮನೆಯ ಹುಡುಗನಾದ್ದರಿಂದ ಮೊದಲ ಸಿನಿಮಾ ಆದರೂ.. ದೊಡ್ಡ ಹೈಪ್ ಅಂತೂ ಇದೆ. ಆದರೆ.. ಯುವ ಚಿತ್ರಕ್ಕೆ ಫ್ಯಾನ್ಸ್ ಶೋ, ಮಿಡ್ ನೈಟ್ ಶೋ ಇರೋದಿಲ್ಲವಂತೆ. ಅಭಿಮಾನಿಗಳ ಡಿಮ್ಯಾಂಡ್ಸ್ ಇದ್ದರೂ.. ಹೊಂಬಾಳೆಯವರು ನೋ ಎನ್ನುತ್ತಿದ್ದಾರೆ ಎನ್ನುವ ಮಾಹಿತಿ ಇದೆ.
ಸಿನಿಮಾ ರಿಲೀಸ್ ಆಗುವ ದಿನ ಮಾರ್ಚ್ 29, ಗುಡ್ ಫ್ರೈಡೇ. ರಜಾ ದಿನ. . ಶುಕ್ರವಾರ ಬೆಳಗ್ಗೆ 8 ಗಂಟೆಯ ಬಳಿಕವೇ ‘ಯುವ’ ಸಿನಿಮಾ ಪ್ರದರ್ಶನಗಳು ಶುರುವಾಗಲಿದೆ. 3 ದಿನಗಳ ರಜೆಯೂ ಇರಲಿದೆ. ಹೀಗಾಗಿ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆ ಇದೆ. ಈಗಾಗಲೇ ಥಿಯೇಟರ್‌ಗಳ ಮುಂದೆ ‘ಯುವ’ ಕಟೌಟ್‌ಗಳು ಎದ್ದು ನಿಂತಿವೆ. ಅದ್ಧೂರಿಯಾಗಿ ಅಣ್ಣಾವ್ರ ಮೊಮ್ಮಗನನ್ನು ಸ್ವಾಗತಿಗಳು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಯುವ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, 153 ನಿಮಿಷಗಳ ರನ್ನಿಂಗ್ ಟೈಂ ಇದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಹಾಗೂ ಡೆಲಿವರಿ ಬಾಯ್ ಹೀಗೆ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಸಿನಿಮಾ ಮೂಡಿಬಂದಿರುವಂತೆ ಕಾಣುತ್ತಿದೆ.
ಮೊದಲ ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಯುವ ರಾಜ್‌ಕುಮಾರ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಸಾಥ್ ಕೊಟ್ಟಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.
ಯುವ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ನಾಳೆ ಅಂದರೆ ಮಾರ್ಚ್ 27ರಂದು ಓಪನ್ ಆಗಲಿದೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ.
ಡಾ.ರಾಜ್ ಕುಟುಂಬದ ಚಿತ್ರಗಳೆಂದರೆ.. ಅಭಿಮಾನಿಗಳ ನಿರೀಕ್ಷೆಯೇ ಬೇರೆ. ಹೀಗಾಗಿ ಯುವ ಚಿತ್ರಕ್ಕೆ ದೊಡ್ಡ ಬಿಲ್ಡಪ್ ಹಾಗೂ ಹೈಪ್ ಸಿಕ್ಕಿದೆ. ಶಿವಣ್ಣ ಹ್ಯಾಟ್ರಿಕ್ ಹೀರೋ ಆಗಿದ್ದರು. ರಾಘವೇಂದ್ರ ರಾಜ್ ಕುಮಾರ್ ಮೊದಲ ಚಿತ್ರ ಫ್ಲಾಪ್ ಆದರ.. ಎರಡು ಮತ್ತು ಮೂರನೇ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಅಪ್ಪು ಅವರದ್ದೂ ಅಷ್ಟೆ, ಮೊದಲ ಎರಡು ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್. ಆದರೆ ವಿನಯ್ ಅವರದ್ದೇ ಪ್ರಾಬ್ಲಂ. ವಿನಯ್ ಅವರ ಚಿತ್ರಗಳು ಹೈಪ್ ಪಡೆದುಕೊಂಡವಾದರೂ.. ಮೆಚ್ಚುಗೆ ಗಳಿಸಿದವಾದರೂ.. ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಈಗ ಗುರು ಅರ್ಥಾತ್ ಯುವ ಟೈಂ.